ಕೊನೆಗೂ ಬೆಂಗಳೂರಲ್ಲಿ ಮನೆ ಸಿಕ್ತು ಎಂದು ಪೋಸ್ಟ್ ಮಾಡಿದ ವ್ಯಕ್ತಿ, ರೂಮಾ, ಜೈಲಾ ಎಂದ ನೆಟ್ಟಿಗರು!
ಬೆಂಗಳೂರಲ್ಲಿ ಮನೆ ಹುಡುಕೋದು ಸುಲಭದ ಕೆಲಸವಲ್ಲ. ಅದರಲ್ಲೂ ಬ್ಯಾಚುಲರ್ಸ್‌ಗೆ ಮನೆ ಹುಡುಕೋದು ಅಂದ್ರೆ ಜೀವಾನೇ ಬಾಯಿಗೆ ಬರುತ್ತೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಸಿಲಿಕಾನ್ ಸಿಟಿಯಲ್ಲಿ ನಂಗೆ ಅಂತೂ ಇಂತೂ ಫುಲ್ ಫರ್ನಿಶಡ್ ಮನೆ ಸಿಕ್ತು ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಆದ್ರೆ ಜನ್ರು ಇದನ್ನು ನೋಡಿ ಖುಷಿಯಾಗುವ ಬದಲು ಶಾಕ್ ಆಗಿದ್ದಾರೆ. ಯಾಕೆ?
ಬೆಂಗಳೂರಿಗೆ ಹಲವು ರಾಜ್ಯಗಳಿಂದ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಜನರು ಬಂದು ಸೇರುತ್ತಾರೆ. ಆದರೆ ಈ ಮಹಾನಗರದಲ್ಲಿ ಮನೆ ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಜನರು ಎಲ್ಲೆಲ್ಲಿಂದಲೋ ಬರುವ ಕಾರಣ ಮನೆ ಮಾಲೀಕರು ಸಹ ಕಣ್ಣುಮುಚ್ಚಿ ಮನೆ ಬಾಡಿಗೆಗೆ ಕೊಡಲಾಗುವುದಿಲ್ಲ. ಅವರ ಕುರಿತಾಗಿ ವಿಚಾರಿಸಬೇಕಾಗುತ್ತದೆ. ಇಲ್ಲದಿದ್ದರೆ ಯಾವುದಾದರೂ ದುಷ್ಕೃತ್ಯ ಎಸಗಿದರೆ ಅದಕ್ಕೆ ಮನೆ ಮಾಲೀಕರೇ ಹೊಣೆಯಾಗಬೇಕಾಗುತ್ತದೆ. ಅದರಲ್ಲೂ ಬ್ಯಾಚುಲರ್ಸ್ ಅಂದ್ರೆ ಮನೆ ಕೊಡೋಕೆ ಮಾಲೀಕರು ಹಿಂದೇಟು ಹಾಕ್ತಾರೆ. ಬಾಡಿಗೆದಾರರ ಧರ್ಮ, ಲಿಂಗ, ವೈವಾಹಿಕ ಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ತಾರೆ. ಮಾತ್ರವಲ್ಲ ಇದರ ಮೇಲೂ ಮತ್ತು ಹಲವು ನಿಯಮಗಳನ್ನು (Rules) ಹೇರುತ್ತಾರೆ. ನಾನ್‌ವೆಜ್ ಮಾಡೋ ಹಾಗಿಲ್ಲ, ಮನೆಯಲ್ಲಿ ತುಂಬಾ ಮಂದಿ ಸ್ಟೇ ಮಾಡೋ ಹಾಗಿಲ್ಲ ಎಂಬೆಲ್ಲಾ ರೂಲ್ಸ್‌ಗಳ ಬಗ್ಗೆ ಹೇಳುತ್ತಾರೆ. ಹೀಗಾಗಿ ಬೆಂಗಳೂರಲ್ಲಿ ಜನ್ರು ಮನೆ (House) ಹುಡುಕೋಕೆ ಹರಸಾಹಸ ಪಡ್ತಾರೆ.
ವಿಶೇಷವಾಗಿ ಬೆಂಗಳೂರಿನಂತಹ ಜನನಿಬಿಡ ನಗರದಲ್ಲಿ ಬಜೆಟ್‌ಗೆ ತಕ್ಕಂತೆ ಪುಟ್ಟದಾದ, ತಕ್ಕಮಟ್ಟಿಗೆ ವ್ಯವಸ್ಥೆಯೂ ಇರುವ ಮನೆ (Rent room) ಸುಲಭವಾಗಿ ಸಿಗುವುದಿಲ್ಲ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿಗೆ ತಾನು ಹುಡುಕಿದ ರೀತಿಯೇ ಪರಿಪೂರ್ಣವಾದ ವೆಲ್ ಫರ್ನಿಶಡ್ ಮನೆ ಸಿಕ್ಕಿದ್ದು ಈ ಬಗ್ಗೆ ಟ್ವೀಟ್ ಮಾಡಿದ್ದಾನೆ. ಆದ್ರೆ ಈ ಮನೆ ನೀವಂದುಕೊಂಡಂತೆ ಇಲ್ಲ. ಅತಿ ಚಿಕ್ಕದಾಗಿದ್ದು (small), ಜೈಲನ್ನು ನೆನಪಿಸುವಂತಿದೆ. ನೆಟ್ಟಿಗರು ವ್ಯಕ್ತಿ ಶೇರ್ ಮಾಡಿದ ಫೋಟೋ ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರಲ್ಲಿ ಬಾಡಿಗೆಗೆ ಮನೆ ಕೊಡೋಕೆ ಲಿಂಕ್ಡ್ಇನ್ ಪ್ರೊಫೈಲ್ ಕೇಳಿದ ಓನರ್, ಪೋಸ್ಟ್ ವೈರಲ್
ಹಾಸಿಗೆ, ಬೀರು ಮತ್ತು ಟೇಬಲ್ ಹೊಂದಿರುವ ಇಕ್ಕಟ್ಟಾದ ರೂಮಿನ ಫೋಟೋ ವೈರಲ್
ಟ್ವಿಟ್ಟರ್ ಬಳಕೆದಾರರಾದ ಮಂಥನ್ ಗುಪ್ತಾ ಅವರು ಹಾಸಿಗೆ, ಸಣ್ಣ ಬೀರು ಮತ್ತು ಟೇಬಲ್ ಹೊಂದಿರುವ ಪುಟ್ಟ ರೂಮಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.ಬಳಕೆದಾರರು ಇಕ್ಕಟ್ಟಾದ ಫ್ಲಾಟ್‌ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. 'ಅಂತಿಮವಾಗಿ ಬೆಂಗಳೂರಿನಲ್ಲಿ ಸಂಪೂರ್ಣ ಸುಸಜ್ಜಿತ ಮನೆ ಸಿಕ್ಕಿದೆ. ಗೇಟೆಡ್ ಸೊಸೈಟಿ ಮತ್ತು 24x7 ಭದ್ರತೆಯಿದೆ' ಎಂದು ವ್ಯಂಗ್ಯವಾಗಿ ಶೀರ್ಷಿಕೆ ನೀಡಿದ್ದಾರೆ.
ಅತಿ ಕಿರಿದಾಗಿರುವ ರೂಮ್ ನಿಜವಾದ ಜೈಲು ಸೆಲ್‌ನಂತೆ ಕಾಣುತ್ತದೆ, ಕಿಟಿಕಿ, ಅದಕ್ಕೆ ತಾಗಿದಂತೆ ಹಾಸಿಗೆ, ಪಕ್ಕದಲ್ಲಿ ಬೇಸಿನ್ ಇದೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಬಳಕೆದಾರರೊಬ್ಬರು 'ಇಂಥಾ ಫ್ಲಾಟ್ ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ' ಎಂದರು. ಮತ್ತೊಬ್ಬರು 'ಅಪಾರ್ಟ್‌ಮೆಂಟ್ ಮಾಲೀಕರಿಗೆ ರೂಮ್‌ಮೇಟ್ ಅಗತ್ಯವಿದೆಯೇ ' ಎಂದು ಪ್ರಶ್ನಿಸಿದರು. ಮತ್ತೊಬ್ಬ ವ್ಯಕ್ತಿ 'ಇದು ಪರಿಪೂರ್ಣ ಜೈಲಿನಂತಿದೆ' ಎಂದು ಹಾಸ್ಯ ಮಾಡಿದರು.
ರಾತ್ರಿ 10 ಗಂಟೆ ನಂತ್ರ ಬಾಲ್ಕನಿ ಬಳಸಂಗಿಲ್ಲ, ಗೆಸ್ಟ್‌ಗೆ ನೋ ಎಂಟ್ರಿ; ಬೆಂಗಳೂರು ಬ್ಯಾಚುಲರ್ಸ್‌ಗೆ ಹೊಸ ರೂಲ್ಸ್!
ಇನ್ನೊಬ್ಬರು ರೂಮಿನಲ್ಲಿ ಏನಿಲ್ಲದಿದ್ದರೂ ಸೂರ್ಯನ ಬೆಳಕಂತೂ ಚೆನ್ನಾಗಿ ಬರುತ್ತದೆ ಎಂದಿದ್ದಾರೆ. ಮತ್ತೊಬ್ಬರು 'ನನ್ನ ಕೋಣೆ ಇದಕ್ಕಿಂತಲೂ ಚಿಕ್ಕದಾಗಿದೆ ನೀವು ಲಕ್ಕಿ' ಎಂದು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಮುಂಬೈ, ಗುರಂಗಾವ್ ಮೊದಲಾದ ನಗರಗಳಲ್ಲೂ ಜನರು ಇಂಥಹದ್ದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಒಟ್ನಲ್ಲಿ ಸದ್ಯ ಬ್ಯೂಟಿಫುಲ್ ಸಿಟಿ ಬೆಂಗಳೂರು ಸದ್ಯ ಬಾಡಿಗೆ ಮನೆ ವಿಚಾರಕ್ಕಾಗಿ ಸಖತ್ ಸುದ್ದಿಯಾಗ್ತಿರೋದಂತೂ ಸುಳ್ಳಲ್ಲ.