ಲಕ್ಷದ್ವೀಪಕ್ಕೆ ಹೋಗಲು ಪ್ಲ್ಯಾನ್ ಮಾಡ್ತಿದ್ದೀರಾ? PayTMನಲ್ಲಿ ಬುಕ್ ಮಾಡಿ ವಿಮಾನ ಟಿಕೆಟ್‌ಗೆ ಭರ್ಜರಿ ಡಿಸ್ಕೌಂಟ್ ಗಳಿಸಿ!
ಲಕ್ಷದ್ವೀಪಕ್ಕೆ ವಿಮಾನ ಟಿಕೆಟ್‌ಗಳ ಮೇಲೆ 10 ಪ್ರತಿಶತ ರಿಯಾಯಿತಿಯನ್ನು ಪೇಟಿಎಂ ಘೋಷಿಸಿದೆ. ಪೇಟಿಎಂನಲ್ಲಿ ಲಕ್ಷದ್ವೀಪಕ್ಕೆ ಪ್ರಯಾಣಕ್ಕಾಗಿ ಹುಡುಕಾಟಗಳು 50 ಪಟ್ಟು ಹೆಚ್ಚಾದ ನಂತರ ಈ ನಿರ್ಧಾರ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.
ನವದೆಹಲಿ (ಜನವರಿ 9, 2024): ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟ ನೀಡಿದ ಬಳಿಕ ಗೂಗಲ್ ಸರ್ಚ್‌ನಲ್ಲಿ ಹಾಗೂ ಟ್ರಾವೆಲ್ ಪೋರ್ಟಲ್‌ಗಳಲ್ಲಿ ಲಕ್ಷದ್ವೀಪದ್ದೇ ಹೆಚ್ಚು ಸುದ್ದಿ. ಈ ಹಿನ್ನೆಲೆ ಮಾಲ್ಡೀವ್ಸ್ ಬದಲು ಲಕ್ಷದ್ವೀಪ ಹಾಗೂ ಭಾರತದ ಇತರೆ ಬೀಚ್, ದ್ವೀಪಗಳಿಗೆ ಹೋಗಲು ಅನೇಕ ಭಾರತೀಯರು ಮುಂದಾಗ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಲಕ್ಷದ್ವೀಪ ವಿಮಾನ ಟಿಕೆಟ್‌ಗಳಿಗೆ ಪೇಟಿಎಂ ಡಿಸ್ಕೌಂಟ್ ಅನ್ನೂ ಘೋಷಿಸಿದೆ.
Paytm 'FLYLAKSHA' ಎಂಬ ಪ್ರೋಮೋ ಕೋಡ್ ಬಳಸಿದ್ರೆ ಲಕ್ಷದ್ವೀಪಕ್ಕೆ ವಿಮಾನ ಟಿಕೆಟ್‌ಗಳ ಮೇಲೆ 10 ಪ್ರತಿಶತ ರಿಯಾಯಿತಿಯನ್ನು ಪೇಟಿಎಂ ಘೋಷಿಸಿದೆ. ಪೇಟಿಎಂನಲ್ಲಿ ಲಕ್ಷದ್ವೀಪಕ್ಕೆ ಪ್ರಯಾಣಕ್ಕಾಗಿ ಹುಡುಕಾಟಗಳು 50 ಪಟ್ಟು ಹೆಚ್ಚಾದ ನಂತರ ಈ ನಿರ್ಧಾರ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.
ಇದನ್ನು ಓದಿ: ಪಾಕ್ ಹೊಂಚು ಹಾಕಿದ್ದ ಲಕ್ಷದ್ವೀಪ ಭಾರತದಲ್ಲೇ ಉಳಿದುಕೊಂಡಿದ್ದೇಗೆ? ಗುಟ್ಟು ರಟ್ಟು ಮಾಡಿದ ಮೋದಿ!
ಅಗತ್ತಿ ದ್ವೀಪದಲ್ಲಿರುವ ಲಕ್ಷದ್ವೀಪದ ಏಕೈಕ ವಿಮಾನ ನಿಲ್ದಾಣಕ್ಕೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರವೇಶಿಸಬಹುದು. ಏರ್ ಇಂಡಿಯಾ ಈ ಈ ಪ್ರದೇಶಕ್ಕೆ ವಿಮಾನಗಳನ್ನು ನಿರ್ವಹಿಸುತ್ತದೆ. ಇನ್ನು, ಡಿಸ್ಕೌಂಟ್ ಮಾತ್ರವಲ್ಲದೆ, ಕ್ಯಾನ್ಸಲ್ (ರದ್ದತಿ) ಶುಲ್ಕವನ್ನು ಭರಿಸದೆಯೇ ತಮ್ಮ ಪ್ರಯಾಣದ ಯೋಜನೆಗಳನ್ನು ಮಾರ್ಪಡಿಸಲು ಬಳಕೆದಾರರಿಗೆ ಅವಕಾಶ ನೀಡುವ ಮೂಲಕ ಕಂಪನಿಯು "ಉಚಿತ ರದ್ದತಿ" (“free cancellation”) ವೈಶಿಷ್ಟ್ಯವನ್ನು ಒದಗಿಸುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಪೇಟಿಎಂ ವಕ್ತಾರರು, ಮೊಬೈಲ್ ಪಾವತಿಗಳಲ್ಲಿ ಮುಂಚೂಣಿಯಲ್ಲಿರುವ ಮತ್ತು ಪ್ರಯಾಣ ಬುಕಿಂಗ್‌ಗೆ ಹೆಚ್ಚು ಆದ್ಯತೆಯ ವೇದಿಕೆಯಾಗಿ, ಉಷ್ಣವಲಯದ ಸ್ವರ್ಗವಾದ ಲಕ್ಷದ್ವೀಪಕ್ಕೆ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ನಾವು ಪ್ರಮುಖ ಪಾತ್ರವನ್ನು ವಹಿಸಲು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.
ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!
ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಟ್ರಾವೆಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಟೂರ್ ಆಪರೇಟರ್‌ಗಳು ಲಕ್ಷದ್ವೀಪಕ್ಕಾಗಿ ಹುಡುಕಾಟ, ಹಾಗೂ ಹೆಚ್ಚು ವಿಚಾರಣೆ ಮಾಡ್ತಿದ್ದಾರೆ.
ಇತ್ತೀಚಿಗೆ ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ನಂತರ ಮಾಲ್ಡೀವ್ಸ್ ಸಚಿವರು ಭಾರತ ಹಾಗೂ ಪ್ರಧಾನಿ ಮೋದಿ ವಿರುದ್ದ ಮಾಡಿದ ಟೀಕೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಮಾಲ್ಡೀವ್ಸ್‌ಗೆ ಪ್ರತಿಸ್ಪರ್ಧಿಯಾಗಿ ಲಕ್ಷದ್ವೀಪವನ್ನು ಉತ್ತಮ ಪ್ರವಾಸಿ ತಾಣಗಳನ್ನು ಮಾಡಲು ಪ್ರಯತ್ನ ಪಡ್ತಿದ್ದಾರೆ. ಆದರೆ, ಇದು ಸಾಧ್ಯವಿಲ್ಲ ಎನ್ನುವಂತೆಯೂ ಕೆಲವರು ಟೀಕೆ ಮಾಡಿದ್ದರು.
ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ ಭಾರತೀಯರು: ಬೆದರಿದ ಮುಯಿಝು ಸರ್ಕಾರದಿಂದ ಟೀಕೆಗೆ ಸ್ಪಷ್ಟನೆ
ಈ ಘಟನೆಯ ನಂತರ, ಇಂಡಿಯನ್ ಚೇಂಬರ್ ಆಫ್ ಕಾಮರ್ಸ್‌ನ ಏವಿಯೇಷನ್ ಮತ್ತು ಟೂರಿಸಂ ಕಮಿಟಿ, ಟ್ರಾವೆಲ್ ಏಜೆನ್ಸಿ EaseMyTrip, ಇಸ್ರೇಲಿ ರಾಯಭಾರ ಕಚೇರಿ ಮತ್ತು ಹಲವಾರು ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಘಟಕಗಳು 'ಲಕ್ಷದ್ವೀಪಕ್ಕೆ ಭೇಟಿ ನೀಡಿ' ಅಭಿಯಾನದೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ಭಾರತದಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯು ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪಿಚ್ ಮಾಡಿತು.
ಮಾಲ್ಡೀವ್ಸ್ ಸಚಿವರ ಜನಾಂಗೀಯ ಟ್ವೀಟ್: ಸಾಮಾಜಿಕ ಜಾಲತಾಣದಲ್ಲಿ #BoycottMaldives ಟ್ರೆಂಡ್