ಭಾರತದ ಬಗ್ಗೆ ಮಾಲ್ಡೀವ್ಸ್ ಸಚಿವರ ಅಸಭ್ಯ ಕಾಮೆಂಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಹಿನ್ನೆಲೆ ಅನೇಕರು ಮಾಲ್ಡೀವ್ಸ್‌ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. 

ದೆಹಲಿ (ಜನವರಿ 7, 2024): ಮಾಲ್ಡೀವ್ಸ್ ಸಚಿವರ ಜನಾಂಗೀಯ ಟ್ವೀಟ್‌ ನಂತರ, ಹೆಚ್ಚಿನ ಸಂಖ್ಯೆಯ ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸ್ತಿದ್ದಾರೆ. ಹಾಗೂ, ಇದು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನೇ ಸೃಷ್ಟಿಸ್ತಿದ್ದು, ಟ್ರೆಂಡ್‌ ಸಹ ಆಗುತ್ತಿದೆ. 

ಭಾರತದ ಬಗ್ಗೆ ಮಾಲ್ಡೀವ್ಸ್ ಸಚಿವರ ಅಸಭ್ಯ ಕಾಮೆಂಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಗಂಭೀರವಾಗಿ ಪರಿಗಣಿಸಲಾಗಿದ್ದು, ಅದರ ಫಲಿತಾಂಶಗಳು ಸಹ ಗೋಚರಿಸುತ್ತಿವೆ. ಮಾಲ್ಡೀವ್ಸ್ ಸಚಿವರ ಕಾಮೆಂಟ್‌ಗಳಿಂದ ಆಕ್ರೋಶಗೊಂಡ ಹೆಚ್ಚಿನ ಸಂಖ್ಯೆಯ ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. 

ಇದನ್ನು ಓದಿ: ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್‌ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್‌ ಉತ್ತರ!

ಜನರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದು ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಕ್ಯಾನ್ಸಲ್‌ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಜನರು ನಾನು ಆತ್ಮ ನಿರ್ಭರ್‌ ಎಂಬ ಹೆಸರಿನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಪೋಸ್ಟ್ ಮಾಡಿದ್ದಾರೆ ಮತ್ತು ಹಲವರು ಮಾಲ್ಡೀವ್ಸ್‌ ಟ್ರಿಪ್‌ ರದ್ದು ಮಾಡಿರುವ ಸ್ಕ್ರೀನ್ ಶಾಟ್‌ಗಳನ್ನು ಸಹ ಹಂಚಿಕೊಂಡಿದ್ದಾರೆ.

ಉದಾಹರಣೆಗೆ, ಸೋಷಿಯಲ್ ಮೀಡಿಯಾ ಬಳಕೆದಾರರಾದ ಡಾ.ಫಲಕ್ ಜೋಶಿಪುರ ಎಂಬುವರು ಹುಟ್ಟುಹಬ್ಬದಂದು ಫೆಬ್ರವರಿ 2 ರಂದು ಮಾಲ್ಡೀವ್ಸ್‌ಗೆ ಹೋಗಲು ಪ್ಲ್ಯಾನ್‌ ಮಾಡಿದ್ದೆವು. ಟ್ರಾವೆಲ್‌ ಏಜೆಂಟರೊಂದಿಗೆ ಬುಕ್ಕಿಂಗ್ ಬಹುತೇಕ ಪೂರ್ಣಗೊಂಡಿತ್ತು. ಆದರೆ, ಮಾಲ್ಡೀವ್ಸ್‌ ಸಚಿವರ ಪ್ರತಿಕ್ರಿಯೆಯ ನಂತರ ನಾವು ಪ್ರವಾಸವನ್ನು ರದ್ದುಗೊಳಿಸಿದ್ದೇವೆ ಎಂದಿದ್ದಾರೆ.

Scroll to load tweet…

ಭಾರತದ ಜೊತೆ ಕ್ಯಾತೆ ನಡುವೆಯೇ ಮಾಲ್ಡೀವ್ಸ್‌ ಅಧ್ಯಕ್ಷರಿಂದ ಚೀನಾ ಭೇಟಿ

ಅದೇ ರೀತಿ, ಅಕ್ಷಿತ್ ಸಿಂಗ್ ಎಂಬುವರು, ಕ್ಷಮಿಸು ಮಾಲ್ಡೀವ್ಸ್, ನಾವು ನಮ್ಮದೇ ಆದ ಲಕ್ಷದ್ವೀಪವನ್ನು ಹೊಂದಿದ್ದೇವೆ ಮತ್ತು ನಾನು ಸ್ವಾವಲಂಬಿಯಾಗಿದ್ದೇನೆ ಎಂದು ಬರೆದಿದ್ದಾರೆ. ಹಾಗೆ, ಅದೇ ರೀತಿ, ಅನೇಕರು ಮಾಲ್ಡೀವ್ಸ್‌ ಪ್ರವಾಸ ರದ್ದುಗೊಳಿಸ್ತಿರೋದಾಗಿ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ.

Scroll to load tweet…

ಮಾಲ್ಡೀವ್ಸ್ ಸಚಿವ ಜಾಹಿದ್ ರಮೀಜ್ ಹೇಳಿದ್ದೇನು?
ಮಾಲ್ಡೀವ್ಸ್‌ನ ಆಡಳಿತ ಪಕ್ಷ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ನಾಯಕ ಜಾಹಿದ್ ರಮೀಜ್ ಎಕ್ಸ್‌ನಲ್ಲಿ ಪೋಸ್ಟ್‌ ಮೂಲಕ ಭಾರತೀಯರನ್ನು ಗೇಲಿ ಮಾಡಿದ್ದಾರೆ. ಇದು ಜನರನ್ನು ಕೆರಳಿಸಿದೆ. 

X (ಈ ಹಿಂದಿನ ಟ್ವಿಟ್ಟರ್‌) ಬಳಕೆದಾರ ಸಿನ್ಹಾ ಪ್ರಧಾನಿ ಮೋದಿ ಲಕ್ಷದ್ವೀಪದ ಸಮುದ್ರತೀರದಲ್ಲಿ ಅಡ್ಡಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಎಂತಹ ಉತ್ತಮ ನಡೆ! ಇದು ಮಾಲ್ಡೀವ್ಸ್‌ನ ಹೊಸ ಚೀನೀ ಕೈಗೊಂಬೆ ಸರ್ಕಾರಕ್ಕೆ ದೊಡ್ಡ ಹೊಡೆತವಾಗಿದೆ. ಇದು ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂಬ ಕ್ಯಾಪ್ಷನ್‌ ಬರೆದಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದ ಜಾಹಿದ್ ರಮೀಜ್, ಈ ನಡೆ ತುಂಬಾ ಒಳ್ಳೆಯದು. ಆದರೆ, ನಮ್ಮೊಂದಿಗೆ ಸ್ಪರ್ಧಿಸುವ ಕಲ್ಪನೆಯು ಭ್ರಮೆಯಾಗಿದೆ. ನಾವು ಒದಗಿಸುವ ಸೇವೆಯನ್ನು ಭಾರತೀಯ ಜನರು ಹೇಗೆ ಒದಗಿಸಬಹುದು? ಅವರು ಎಲ್ಲಿ ಸ್ವಚ್ಛವಾಗಿರುತ್ತಾರೆ? ಅವರ ಕೋಣೆಗಳಲ್ಲಿ ಯಾವಾಗಲೂ ವಾಸನೆ ಬರುತ್ತಿರುತ್ತದೆ ಎಂದು ಗೇಲಿ ಮಾಡಿದ್ದರು.