Asianet Suvarna News Asianet Suvarna News

ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿದ ಭಾರತೀಯರು: ಬೆದರಿದ ಮುಯಿಝು ಸರ್ಕಾರದಿಂದ ಟೀಕೆಗೆ ಸ್ಪಷ್ಟನೆ

ಮಾಲ್ಡೀವ್ಸ್‌ನ ಯುವ ಸಬಲೀಕರಣದ ಉಪ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಅಲ್ಲಿನ ಸರ್ಕಾರದಿಂದ ಈ ಪ್ರತಿಕ್ರಿಯೆ ಬಂದಿದೆ. 

personal opinions maldives govt after minister s derogatory remark against pm modi ash
Author
First Published Jan 7, 2024, 5:03 PM IST

ನವದೆಹಲಿ (ಜನವರಿ 7, 2024): ಮಾಲ್ಡೀವ್ಸ್‌ ಸಚಿವರೊಬ್ಬರು ಭಾರತೀಯರ ವಿರುದ್ಧದ ಟೀಕೆಗೆ ಹಾಗೂ ಮೋದಿ ವಿರುದ್ಧದ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಪ್ರವಾಸವನ್ನೇ ರದ್ದುಗೊಳಿಸಿದ್ರೆ, ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿ ಅನೇಕರು ಭಾರತದ ದ್ವೀಪಗಳಲ್ಲೇ ಪ್ರವಾಸ ಮಾಡಿ ಎಂದು ಸಲಹೆ ನೀಡಿದ್ದಾರೆ.

ಈ ಹಿನ್ನೆಲೆ ಬೆದರಿದ ಮಾಲ್ಡೀವ್ಸ್ ಸರ್ಕಾರವು ಭಾನುವಾರ ತನ್ನದೇ ಸಚಿವರ ಹೇಳಿಕೆಯನ್ನು ತಿರಸ್ಕರಿಸಿದೆ. ಅಲ್ಲದೆ, ಅವರ ಹೇಳಿಕೆ ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. 

ಇದನ್ನು ಓದಿ: ಮಾಲ್ಡೀವ್ಸ್‌ ಸಚಿವರ ಜನಾಂಗೀಯ ಟ್ವೀಟ್‌: ಸಾಮಾಜಿಕ ಜಾಲತಾಣದಲ್ಲಿ #BoycottMaldives ಟ್ರೆಂಡ್‌

ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಮಾಲ್ಡೀವ್ಸ್ ಸರ್ಕಾರಕ್ಕೆ ತಿಳಿದಿದೆ. ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಮಾಲ್ಡೀವ್ಸ್‌ ಸರ್ಕಾರ ಅಧಿಕೃತ ಹೇಳಿಕೆ ಪ್ರಕಟಿಸಿದೆ.

ಮಾಲ್ಡೀವ್ಸ್‌ನ ಯುವ ಸಬಲೀಕರಣದ ಉಪ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಈ ಪ್ರತಿಕ್ರಿಯೆ ಬಂದಿದೆ. 

ಇದನ್ನು ಓದಿ: ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್‌ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್‌ ಉತ್ತರ!

ಮರಿಯಮ್ ಶಿಯುನಾ ಅವರ ಪೋಸ್ಟ್‌ ಈಗ ಡಿಲೀಟ್‌ ಆಗಿದ್ದರೂ, ಪ್ರಧಾನಿ ಮೋದಿಯನ್ನು ವಿದೂಷಕ ಮತ್ತು ಸೂತ್ರದ ಕೈಗೊಂಬೆ ಎಂದು ಅವಮಾನಿಸುವ ಟೀಕೆಗಳನ್ನು ಮಾಡಿದ್ದು, ವೈರಲ್‌ ಆಗಿದೆ. ಮೋದಿ ಜನವರಿ 2 ರಂದು ಲಕ್ಷದ್ವೀಪಕ್ಕೆ ಹೋಗಿದ್ದರು ಮತ್ತು ಅಲ್ಲಿನ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ನಿಮ್ಮೊಳಗಿನ ಸಾಹಸವನ್ನು ಅನ್ವೇಷಿಸಲು ಲಕ್ಷದ್ವೀಪ ನಿಮ್ಮ ಪಟ್ಟಿಯಲ್ಲಿರಬೇಕು ಎಂದೂ ಮೋದಿ ಹೇಳಿದ್ದರು. 

ಇನ್ನೊಂದೆಡೆ, ಮಾಲ್ಡೀವ್ಸ್‌ ಸರ್ಕಾರ ಹೇಳಿಕೆ ನೀಡುವ ಮುನ್ನ, ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿದರು ಮತ್ತು ಸರ್ಕಾರ ಇಂತಹ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಒತ್ತಾಯಿಸಿದರು. ಮತ್ತು ಇಂತಹ ಕಾಮೆಂಟ್‌ಗಳು ಸರ್ಕಾರದ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂಬ ಭರವಸೆಯನ್ನು ನವದೆಹಲಿಗೆ ನೀಡುವಂತೆಯೂ ಮುಯಿಝು ಅವರನ್ನು ಕೇಳಿದ್ದಾರೆ. 

Boycott Maldives ಅಭಿಯಾನಕ್ಕೆ ಕೈಜೋಡಿಸಿದ ಸಚಿನ್, ಅಕ್ಷಯ್; ಕಂಗಾಲಾದ ವಿದೇಶಿ ಪ್ರವಾಸೋದ್ಯಮ!

Follow Us:
Download App:
  • android
  • ios