ಮೂರು ವರ್ಷದ ಹಿಂದೆ ಏರ್‌ಪೋರ್ಟ್‌ನಲ್ಲಿ ಕಳೆದುಕೊಂಡ ಬ್ಯಾಗ್ ಮರಳಿ ಸಿಕ್ಕಿದ್ದೆ ವಿಚಿತ್ರ!
ಪಾಕಿಸ್ತಾನದ ಮಹಿಳೆಯೊಬ್ಬರು ವಿಮಾನ ನಿಲ್ದಾಣದಲ್ಲಿ ಮೂರು ವರ್ಷಗಳ ಹಿಂದೆ ಕಳೆದುಕೊಂಡ ಲಗೇಜೊಂದು ಅಚ್ಚರಿಯ ರೀತಿಯಲ್ಲಿ ಮರಳಿ ಸಿಕ್ಕಿದೆ.
ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ಗಳು ಅದಲು ಬದಲಾಗುವುದು ಸಿಗದೇ ಹೋಗುವುದು ವಿಮಾನದಲ್ಲಿ ಆಗಾಗ ಓಡಾಡುವ ಅನೇಕರಿಗೆ ಆಗಿರುವ ಅನುಭವವಾಗಿದೆ. ಬಸ್, ರೈಲು ಮುಂತಾದ ಸಾರ್ವಜನಿಕ ಸಾರಿಗೆಯನ್ನು ಸಾಮಾನ್ಯವಾಗಿ ಬಳಸುವ ನಾವು ಅವುಗಳಲ್ಲಿ ದೂರದೂರಿಗೆ ಪ್ರಯಾಣಿಸುವಾಗ ಜೊತೆ ಜೊತೆಯೇ ಸಾಗಿಸುತ್ತೇವೆ. ಆದರೆ ವಿಮಾನದಲ್ಲಿ ಆ ಅವಕಾಶವಿಲ್ಲ. ನಾವು ಒಂದೆಡೆ ಇದ್ದರೆ ನಮ್ಮ ಲಗೇಜುಗಳು ಮತ್ತೊಂದೆಡೆ ಇರುವುದು. ಇದರ ಪರಿಣಾಮ ಅನೇಕರು ತಮ್ಮ ಅಮೂಲ್ಯ ಲಗೇಜುಗಳನ್ನು ಏರ್ಪೋರ್ಟ್‌ನಲ್ಲಿ ಕಳೆದುಕೊಂಡ ಘಟನೆಗಳು ನಡೆದಿವೆ.
ಇದೇ ರೀತಿ ಪಾಕಿಸ್ತಾನದ ಮಹಿಳೆಯೊಬ್ಬರು ವಿಮಾನ ನಿಲ್ದಾಣದಲ್ಲಿ ಮೂರು ವರ್ಷಗಳ ಹಿಂದೆ ಕಳೆದುಕೊಂಡ ಲಗೇಜೊಂದು ಅಚ್ಚರಿಯ ರೀತಿಯಲ್ಲಿ ಮರಳಿ ಸಿಕ್ಕಿದೆ. ಸ್ವತಃ ಮಹಿಳೆ ಕೂಡ ಲಗೇಜ್ ಮೇಲಿನ ತಮ್ಮ ಆಸೆಯನ್ನು ಸಂಪೂರ್ಣವಾಗಿ ಬಿಟ್ಟಿದ್ದರು. ಆದರೆ ಅಂಗಡಿ ಮಾಲೀಕನೋರ್ವನ ಪ್ರಾಮಾಣಿಕತೆ ಅವರ ಲಗೇಜ್ ಅನ್ನು ಅವರಿಗೆ ವಾಪಸ್ ಮರಳಿಸಿದೆ.
ಖದೀಜಾ (Khadija M) ಎಂಬ ಪಾಕಿಸ್ತಾನಿ ಮಹಿಳೆ ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಖದೀಜಾ ಅವರು 2018 ರಲ್ಲಿ ಇಸ್ಲಾಮಾಬಾದ್ ಏರ್‌ಪೋರ್ಟ್‌ನಲ್ಲಿ (Islamabad airport) ತಮ್ಮ ಲ್ಯಾಪ್‌ಟಾಪ್ ಬ್ಯಾಗ್ (laptop bag) ಅನ್ನು ಕಳೆದುಕೊಂಡಿದ್ದರು. ಅದರಲ್ಲಿ ಐಪ್ಯಾಡ್ (iPad), ಹಾರ್ಡ್‌ಡಿಸ್ಕ್ (hard disk), ಕಿಂಡ್ಲೆ(ಇ-ರೀಡರ್) ಇತ್ತು. ಹಾರ್ಡ್‌ಡಿಸ್ಕ್‌ನಲ್ಲಿ ಅವರ ಫೋನ್‌ನ ಸಂಪೂರ್ಣ ಬ್ಯಾಕ್ ಅಪ್ ಇತ್ತು. ಅದನ್ನು ಕಳೆದುಕೊಂಡ ಸಂದರ್ಭದಲ್ಲಿ ತೀವ್ರ ಚಿಂತೆಗೊಳಗಾಗಿದ್ದ ಅವರು ನಂತರದಲ್ಲಿ ಅದರಿಂದ ಹೊರ ಬಂದಿದ್ದರು.
ತಾಂತ್ರಿಕ ತೊಂದರೆ: ಬ್ಯಾಗ್ ಇಲ್ಲದೇ ತೆರಳುವಂತಾದ ಸಾವಿರಾರು ಪಯಣಿಗರು: ಏರ್‌ಪೋರ್ಟ್‌ನಲ್ಲಿ ಬ್ಯಾಗ್‌ಗಳ ಜಾತ್ರೆ
ಅಲ್ಲದೇ ನಂತರ ಖದೀಜಾ ಅವರು ಹೊಸ ಗ್ಯಾಜೆಟ್‌ಗಳನ್ನು ಖರೀದಿಸಿದ್ದರು. ಇದಾಗಿ ಮೂರು ವರ್ಷಗಳ ಬಳಿಕ 2021 ರಲ್ಲಿ ಅವರಿಗೆ ಕರೆಯೊಂದು ಬಂದಿತ್ತು. ಆ ಕರೆ ಸ್ವೀಕರಿಸಿದ ನಂತರ ಅವರು ದಿಗ್ಭ್ರಮೆಗೊಂಡರು. ಝೀಲಂ ನಗರದ ಅಂಗಡಿಯವರು ಆ ಕರೆ ಮಾಡಿದ್ದು, ತನ್ನ ಬಳಿ ನಿಮ್ಮ ಬ್ಯಾಗ್ ಇರುವುದಾಗಿ ಖದೀಜಾ ಅವರಿಗೆ ದೂರವಾಣಿ ಮೂಲಕ ತಿಳಿಸಿದರು. ಮೊದಲಿಗೆ ಆತ ಏನು ಹೇಳುತ್ತಿದ್ದಾನೆ ಎಂಬುದೇ ನನಗೆ ಅರ್ಥವಾಗಲಿಲ್ಲ. ನಂತರ ಮೂರು ವರ್ಷಗಳ ಹಿಂದೆ ಬ್ಯಾಗ್ ಕಳೆದುಕೊಂಡಿರುವುದು ನನಗೆ ನೆನಪಾಯಿತು ಎಂದು ಖದೀಜಾ ಹೇಳಿಕೊಂಡಿದ್ದಾರೆ.
ಈ ಏರ್‌ಪೋರ್ಟ್‌ನಲ್ಲಿ ನೀವಿನ್ನು ಸಂಸ್ಕೃತದಲ್ಲೂ ಅನೌನ್ಸ್‌ಮೆಂಟ್ ಕೇಳ್ಬಹುದು
ಅಂಗಡಿಯ ಮಾಲೀಕರು ಬ್ಯಾಗ್‌ನಲ್ಲಿರುವ ಎಲ್ಲಾ ವಸ್ತುಗಳ ಫೋಟೋಗಳನ್ನು ಸಹ ಕಳುಹಿಸಿದ್ದಾರೆ ಎಂದು ಖದೀಜಾ ಹೇಳಿದ್ದಾರೆ. ನಾನು ಹೇಗೆ ಬ್ಯಾಗ್‌ನಲ್ಲಿ ನನ್ನ ವಸ್ತುಗಳನ್ನು ಇಟ್ಟಿದ್ದೆನೋ ಅದೇ ಸ್ಥಿತಿಯಲ್ಲಿ ಅವುಗಳಿದ್ದವು ಎಂದು ಖದೀಜಾ ಬರೆದುಕೊಂಡಿದ್ದಾರೆ. ಯಾರೋ ನನಗೆ ಚೀಲವನ್ನು ಮಾರಾಟ ಮಾಡಲು ಪ್ರಯತ್ನಿಸಿದರು ಈ ವೇಳೆ ನಾನು ಸಂಶಯಗೊಂಡೆ ಅಲ್ಲದೇ ಆ ಬ್ಯಾಗ್‌ನ್ನು ನನ್ನ ಬಳಿ ಇಟ್ಟು ಅದರ ಮಾಲೀಕರ ಪತ್ತೆಗೆ ಬಯಸಿದೆ ಎಂದು ಅಂಗಡಿ ಮಾಲೀಕ ಹೇಳಿದ್ದಾಗಿ ಮಹಿಳೆ ಬರೆದುಕೊಂಡಿದ್ದಾರೆ.
ಅದರಲ್ಲಿದ್ದ ಹಾರ್ಡ್ ಡಿಸ್ಕ್ ಒಪನ್ ಮಾಡಿದ ಅವರು ಖದೀಜಾ ಅವರ ರೂಮ್‌ಮೇಟ್‌ಗಳ ಫೋನ್ ನಂಬರ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡರು. ನಂತರ ಅವರ ರೂಮ್‌ಮೇಟ್‌ನಿಂದ ಖದೀಜಾಳ ಸಂಪರ್ಕವನ್ನು ಪಡೆಯುವಲ್ಲಿ ಯಶಸ್ವಿಯಾದರು ಮತ್ತು ಚೀಲದ ಬಗ್ಗೆ ತಿಳಿಸಲು ಅವರಿಗೆ ಡಯಲ್ ಮಾಡಿದರು. ಶೀಘ್ರದಲ್ಲೇ, ಖದೀಜಾ ಅವರ ಸಹೋದರ ಝೇಲಂಗೆ ತೆರಳಿ ಅಂಗಡಿ ಮಾಲೀಕರಿಂದ ಚೀಲವನ್ನು ಪಡೆದರು ಜೊತೆಗೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಹೀಗೆ ಕಳೆದುಹೋದ ಬ್ಯಾಗ್‌ನ್ನು ಖದೀಜಾ ಅವರಿಗೆ ಹಿಂದಿರುಗಿಸಿದ ವ್ಯಕ್ತಿಯ ಪ್ರಾಮಾಣಿಕತೆಗೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಸಣ್ಣ ಹಳ್ಳಿಯಿಂದ ಬಂದು ಪುಟ್ಟದಾದ ಅಂಗಡಿಯೊಂದನ್ನು ಇಟ್ಟುಕೊಂಡಿರುವ ಈ ವ್ಯಕ್ತಿ ತನ್ನ ಜೀವನೋಪಾಯಕ್ಕೆ ಸಾಕಾಗುವಷ್ಟು ದುಡಿಮೆ ಮಾಡುತ್ತಾರೆ. ಆದರೆ ಕಳೆದುಹೋದ ವಸ್ತುವನ್ನು ಹಿಂದಿರುಗಿಸುವಲ್ಲಿ ಅವರು ತಮಗಾಗುವ ಎಲ್ಲಾ ಪ್ರಯತ್ನಗಳನ್ನು ನಡೆಸಿ ಪ್ರಾಮಾಣಿಕತೆ ಮೆರೆದರು ಎಂದು ಖದೀಜಾ ಹೇಳಿಕೊಂಡಿದ್ದಾರೆ.
ಖದೀಜಾ ಅವರು ಅಂಗಡಿಯ ಮಾಲೀಕರ ಪ್ರಾಮಾಣಿಕತೆಯ ಬಗ್ಗೆ ವಿಸ್ಮಯಗೊಂಡಿದ್ದು, ಈ ಇಡೀ ಘಟನೆ ಅವರನ್ನು ಅಚ್ಚರಿಗೊಳಿಸಿದೆ ಎಂದು ಆಕೆ ಹೇಳಿಕೊಂಡಿದ್ದಾರೆ. ನಾನು ಈ ದೇಶದಲ್ಲಿ ನಾನು ಕಳೆದುಕೊಂಡ ಈ ವಸ್ತುಗಳನ್ನು ಮರಳಿ ಪಡೆಯುತ್ತಿದ್ದೇನೆ ಎಂದು ನಾನು ಎಂದಿಗೂ ಯೋಚಿಸಿಲ್ಲ. ಆದರೆ ಅನಿರೀಕ್ಷಿತ ಸ್ಥಳಗಳಲ್ಲಿ ಒಳ್ಳೆಯ ಘಟನೆಗಳು ಕೂಡ ನಡೆಯುತ್ತವೆ ಎಂದು ಅವರು ಹೇಳಿದರು.