Asianet Suvarna News Asianet Suvarna News

Viral News: ಮುಖ ಮನುಷ್ಯರಂತೆ.. ಕಾಲು ಆಸ್ಟ್ರಿಚ್ ನಂತೆ.. ಭಿನ್ನವಾಗಿದ್ದಾರೆ ಇಲ್ಲಿನ ಜನ!

ಹುಟ್ಟುವ ಮಗು ಎಲ್ಲ ಅಂಗಗಳನ್ನು ಸರಿಯಾಗಿ ಹೊಂದಿದ್ದು, ಆರೋಗ್ಯವಾಗಿ ಜನಿಸಲಿ ಅಂತ ಪ್ರಾರ್ಥನೆ ಮಾಡ್ತಾರೆ. ಆದ್ರೆ ಇಲ್ಲಿನ  ಜನರಿಗೆ ನಮ್ಮ ಮಕ್ಕಳು ಸರಿಯಾಗಿ ಹುಟ್ಟೋದಿಲ್ಲ ಎಂಬುದು ಖಾತ್ರಿಯಾಗಿದೆ. ಸಮಸ್ಯೆ ಮಧ್ಯೆಯೂ ಜೀವನ ನಡೆಸೋದನ್ನು ಅವರು ಕಲಿತಿದ್ದಾರೆ. 
 

Ostrich Foot Syndrome Zimbabwe Vadoma People Famous For Ectrodactyly Genetic Disorder roo
Author
First Published Aug 22, 2023, 3:42 PM IST

ಪ್ರಪಂಚದ ಎಷ್ಟೋ ಜೀವಿಗಳ ಬಗ್ಗೆ ನಮಗೆ ಸರಿಯಾಗಿ ತಿಳಿದೇ ಇಲ್ಲ. ಯಾಕೆಂದ್ರೆ ಪ್ರಪಂಚದಲ್ಲಿ ಲೆಕ್ಕವಿಲ್ಲದಷ್ಟು ಜೀವ – ಜಂತುಗಳಿವೆ. ಮಂಗನಿಂದ ಮಾನವನಾದ ಮನುಷ್ಯರಲ್ಲೇ ನಾವು ಎಷ್ಟೊಂದು ಭಿನ್ನತೆಯನ್ನು ಕಾಣ್ತೇವೆ. ಜಾತಿ, ಮತ, ಬಣ್ಣ, ಆಕಾರಗಳಲ್ಲಿ ವ್ಯತ್ಯಾಸವಿರುತ್ತದೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯದ ಜನರಲ್ಲಿ ನಾವು ಈ ಬದಲಾವಣೆಯನ್ನು ಕಾಣ್ಬಹುದು. ಅವರ ಬಣ್ಣ, ರೂಪ, ನಡವಳಿಕೆ, ಮಾತುಗಳನ್ನು ನೋಡಿ ಇವರು ಯಾವ ಊರಿನವರು ಎಂಬುದನ್ನು ಹೇಳಬಹುದು. ಇಷ್ಟೆಲ್ಲ ಭಿನ್ನತೆ ಇದ್ರೂ ಮನುಷ್ಯನ ಭೌತಿಕ ರಚನೆ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಅಪರೂಪ ಎನ್ನುವಂತೆ ಕೆಲ ಖಾಯಿಲೆಗೆ ತುತ್ತಾತ ಜನರ ಅಂಗಾಂಗ ರಚನೆಯಲ್ಲಿ ನೀವು ವ್ಯತ್ಯಾಸ ಕಾಣಬಹುದು. ಕೆಲವರ ಕೈಗೆ ಆರು ಬೆರಳಿದ್ದರೆ ಮತ್ತೆ ಕೆಲವರು ಅತಿ ಸಣ್ಣಗಿರ್ತಾರೆ ಇಲ್ಲ ಅತೀ ಉದ್ದವಿರ್ತಾರೆ. ಹಾಗಂತ ಆ ಭೌತಿಕ ಪ್ರದೇಶ ಎಲ್ಲರೂ ಉದ್ದವಿರಬೇಕು, ಕುಳ್ಳಗಿರಬೇಕು, ಆರು ಬೆರಳು ಹೊಂದಿರಬೇಕೆಂದೇನಿಲ್ಲ. ಆದ್ರೆ ಇಲ್ಲೊಂದು ಪ್ರದೇಶದಲ್ಲಿ ಎಲ್ಲರೂ ವಿಚಿತ್ರ ಕಾಲನ್ನು ಹೊಂದಿದ್ದಾರೆ. ಆ ಬುಡಕಟ್ಟು ಜನಾಂಗದ ಎಲ್ಲರಲ್ಲೂ ನೀವು ಈ ಭಿನ್ನತೆಯನ್ನು ನೋಡ್ಬಹುದು. ಅಲ್ಲಿನ ಜನರಿಗೆ ಕಾಲಿನ ಬೆರಳುಗಳು ಸರಿಯಾಗಿಲ್ಲ. ಅದು ಯಾವ ಜನಾಂಗ, ಎಲ್ಲಿದೆ, ಸಮಸ್ಯೆ ಏನು ಎಂಬುದರ ಮಾಹಿತಿ ಇಲ್ಲಿದೆ.

ವಡೋಮಾ ಬುಡಕಟ್ಟು (Vadoma Tribe) ಜನರನ್ನು ಕಾಡ್ತಿದೆ ಈ ಸಮಸ್ಯೆ : ಸಾಮಾನ್ಯವಾಗಿ ಎಲ್ಲರ ಕಾಲು ಹಾಗೂ ಕೈನಲ್ಲಿ ಐದೈದು ಬೆರಳಿ (finger) ರುತ್ತದೆ. ಆದ್ರೆ ಜಿಂಬಾಬ್ವೆಯ ಉತ್ತರ ಭಾಗದಲ್ಲಿರುವ ಕಯೆಂಬಾ ಪ್ರದೇಶದಲ್ಲಿ ವಾಸಿಸುವ ವಡೋಮಾ ಬುಡಕಟ್ಟು ಜನರು ಕೇವಲ ಎರಡು ಕಾಲ್ಬೆರಳುಗಳನ್ನು ಹೊಂದಿದ್ದಾರೆ.  ಅವರ ಎರಡು ಕಾಲ್ಬೆರಳು ಎಷ್ಟು ದೊಡ್ಡದಿದೆ ಅಂದ್ರೆ ನೋಡುಗರಿಗೆ ಅಚ್ಚರಿಯಾಗುತ್ತದೆ. ಬುಡಕಟ್ಟಿನ ಜನರ ಇಡೀ ದೇಹವು ಮನುಷ್ಯರಂತೆ ಇದೆ. ಆದರೆ ಪಾದಗಳ ವಿನ್ಯಾಸ ಆಸ್ಟ್ರಿಚ್‌ (Ostrich) ನಂತಿದೆ. ಕಾಲ್ಬೆರಳುಗಳು ದೊಡ್ಡದಾಗಿರುವ ಕಾರಣ ಅವರಿಗೆ ಶೂ ಹಾಕಿಕೊಳ್ಳಲು ಸಾಧ್ಯವಿಲ್ಲ. ಅವರು ಸಾಮಾನ್ಯ ಜನರಂತೆ ನಡೆಯೋದೂ ಇಲ್ಲ. 

ಇಲ್ಲಿನ ಮನೆಗಳಿಗೆ ಬಾಗಿಲುಗಳೇ ಇಲ್ಲ; ಕಳ್ಳತನಕ್ಕೆ ಯತ್ನಿಸಿದ್ರೇ ಏನ್ ಆಗುತ್ತೆ ಗೊತ್ತಾ?

ಅವರ ಕಾಲ್ಬೆರಳು ಹೀಗಿರಲು ಕಾರಣ ಏನು? : ವಡೋಮಾ ಬುಡಕಟ್ಟಿನ  ಜನರು ಆನುವಂಶಿಕ ಅಸ್ವಸ್ಥತೆಯನ್ನು ಹೊಂದಿದ್ದಾರೆ. ಇದನ್ನು ಎಕ್ರೊಡಾಕ್ಟಿಲಿ  ಅಥವಾ  ಆಸ್ಟ್ರಿಚ್ ಫೂಟ್ ಸಿಂಡ್ರೋಮ್  ಎಂದು ಕರೆಯಲಾಗುತ್ತದೆ. ಇದೊಂದು ಅಪರೂಪದ ಕಾಯಿಲೆ. ತಜ್ಞರ ಪ್ರಕಾರ ದನ್ನು ಎಕ್ರೊಡಾಕ್ಟಿಲಿಯನ್ನು ಸ್ಪ್ಲಿಟ್ ಹ್ಯಾಂಡ್/ಫುಟ್ ಮಲ್ಫಾರ್ಮೇಶನ್ (SHFM) ಎಂದೂ ಕರೆಯಲಾಗುತ್ತದೆ. ಈ ರೋಗವು ಕಾಲ್ಬೆರಳುಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಕಾಲಿನಂತೆ ಕೈ ಬೆರಳಿನಲ್ಲಿ ಕೂಡ ಬದಲಾವಣೆ ಕಾಣಿಸಿಕೊಳ್ಳುತ್ತದೆ. 

ಮರ ಹತ್ತೋದ್ರಲ್ಲಿ ಇವರು ಮುಂದೆ : ವಡೋಮಾ ಬುಡಕಟ್ಟಿನ ಜನರಿಗೆ ಸರಿಯಾಗಿ ನಡೆಯೋದು ಕಷ್ಟ. ಬೂಟನ್ನು ಧರಿಸಲು ಅವರು ತೊಂದರೆ ಅನುಭವಿಸುತ್ತಾರೆ. ಆದ್ರೆ ಮರ ಹತ್ತುವುದು ಇವರಿಗೆ ಬಹಳ ಸುಲಭ. ಎಲ್ಲರನ್ನು ಹಿಂದಿಕ್ಕಿ ಫಟಾಫಟ್ ಇವರು ಮರವನ್ನು ಹತ್ತುತ್ತಾರೆ. ಅವರ ಕಾಲಿನ ಎರಡು ದೊಡ್ಡ ಬೆರಳು ಇದಕ್ಕೆ ಸಹಕರಿಸುತ್ತದೆ. 

ಈ ಗ್ರಾಮದಲ್ಲಿ ಜನರು ಎರಡು ಅಂತಸ್ತಿನ ಮನೆ ನಿರ್ಮಿಸೋಕೆ ಸಿಕ್ಕಾಪಟ್ಟೆ ಹೆದರ್ತಾರೆ

ಜನಾಂಗದಲ್ಲೆ ಆಗ್ಬೇಕು ಮದುವೆ : ವಡೋಮಾ ಬುಡಕಟ್ಟು ಜನರಿಗೆ ಈ ಖಾಯಿಲೆ ಆನುವಂಶಿಕವಾಗಿ ಬಂದಿದೆ. ಹಾಗಾಗಿ ಪೀಳಿಗೆಯಿಂದ ಪೀಳಿಗೆಗೆ ಈ ಕಾಯಿಲೆ ಮುಂದುವರೆಯುತ್ತದೆ. ತಂದೆ, ತಾಯಿ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಇಲ್ಲಿನ ಜನರು ತಮ್ಮ ಬುಡಕಟ್ಟಿನ ಹುಡುಗಿಯನ್ನೇ ಮದುವೆಯಾಗಬೇಕೆಂಬ ನಿಯಮವಿದೆ. ಅವರು ಬೇರೆ ಬುಡಕಟ್ಟಿನ, ಜಾತಿಯ ಹುಡುಗಿಯನ್ನು ಮದುವೆಯಾಗೋದು ಅಕ್ಷಮ್ಯ ಅಪರಾಧವಾಗುತ್ತದೆ. 

Follow Us:
Download App:
  • android
  • ios