ಇಲ್ಲಿನ ಮನೆಗಳಿಗೆ ಬಾಗಿಲುಗಳೇ ಇಲ್ಲ; ಕಳ್ಳತನಕ್ಕೆ ಯತ್ನಿಸಿದ್ರೇ ಏನ್ ಆಗುತ್ತೆ ಗೊತ್ತಾ?
ಶನಿ ಶಿಂಗ್ನಾಪುರದಲ್ಲಿರುವ ಶನಿದೇವನ ದೇವಸ್ಥಾನವು ಅತ್ಯಂತ ಪವಿತ್ರತೆ ಹಾಗೂ ಪವಾಡಶಕ್ತಿಯಿಂದ ಕೂಡಿದೆ. ಇದು ಅತ್ಯಂತ ಶಕ್ತಿಯುತ ದೇವಾಲಯವಾಗಿದ್ದು, ಇಲ್ಲಿಗೆ ಹೋದರೆ ಶನಿದೋಷ ಹಾಗೂ ಕಷ್ಟಗಳಿಂದ ಬಹುಬೇಗ ಮುಕ್ತಿಯನ್ನು ಪಡೆಯಬಹುದು. ಈ ದೇವಾಲಯದ ವಿಶೇಷತೆ ಹಾಗೂ ಈ ಕ್ಷೇತ್ರದ ನಿಗೂಢತೆಯ ಬಗ್ಗೆ ಇಲ್ಲಿದೆ ಮಾಹಿತಿ
ಶನಿ ಶಿಂಗ್ನಾಪುರದಲ್ಲಿರುವ ಶನಿದೇವನ ದೇವಸ್ಥಾನವು ಅತ್ಯಂತ ಪವಿತ್ರತೆ ಹಾಗೂ ಪವಾಡಶಕ್ತಿಯಿಂದ ಕೂಡಿದೆ. ಇದು ಅತ್ಯಂತ ಶಕ್ತಿಯುತ ದೇವಾಲಯವಾಗಿದ್ದು, ಇಲ್ಲಿಗೆ ಹೋದರೆ ಶನಿದೋಷ ಹಾಗೂ ಕಷ್ಟಗಳಿಂದ ಬಹುಬೇಗ ಮುಕ್ತಿಯನ್ನು ಪಡೆಯಬಹುದು. ಈ ದೇವಾಲಯದ ವಿಶೇಷತೆ ಹಾಗೂ ಈ ಕ್ಷೇತ್ರದ ನಿಗೂಢತೆಯ ಬಗ್ಗೆ ಇಲ್ಲಿದೆ ಮಾಹಿತಿ
ಶನಿ ಶಿಂಗ್ನಾಪುರ ಮಹಾರಾಷ್ಟ್ರದ ಅಹ್ಮದಾನಗರ ಜಿಲ್ಲೆಯ ಒಂದು ಹಳ್ಳಿ. ಇದು ಶನಿ ದೇವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಇದು ಅಹ್ಮದಾನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಶನಿ ದೇವಾಲಯವು ಅತ್ಯಂತ ಪವಿತ್ರ ಹಾಗೂ ಶಕ್ತಿಯುತವಾದ ದೇಗುಲ. ಇಲ್ಲಿ ಪೂಜೆಯನ್ನು ಕೈಗೊಳ್ಳುವುದರಿಂದ ಮನುಷ್ಯನು ಶನಿದೋಷ ಹಾಗೂ ಕಷ್ಟಗಳಿಂದ ಬಹುಬೇಗ ಮುಕ್ತಿಯನ್ನು ಪಡೆಯಬಹುದು.
ಇದು ಬಾಗಿಲುಗಳೇ ಇಲ್ಲದ ಊರು
ಶನಿದೇವರು ಶಿಂಗ್ನಾನಾಪುರದಲ್ಲಿ ನೆಲೆಸಿದ ದಿನದಿಂದ ಆ ಊರಿನಲ್ಲಿ ಕಳ್ಳತನ-ದರೋಡೆ ಇತ್ಯಾದಿ ನಡೆದಿಲ್ಲ. ಅಲ್ಲದೇ ಮನೆಗಳಿಗೆ ಬಾಗಿಲೇ ಇಲ್ಲ. ಕಳ್ಳರು ಕದಿಯಲು ಯತ್ನಿಸಿ ವಿಫಲರಾಗಿ, ಶಿಕ್ಷೆ ಅನುಭವಿಸಿದ್ದಾರೆ. ಶನಿಯೇ ಈ ಸ್ಥಳದ ರಕ್ಷಕನಾಗಿ ನಿಂತಿದ್ದಾನೆ. ಶನಿಯ ರಕ್ಷಣೆ ಮತ್ತು ಕಾವಲು ಇರುವುದರಿಂದ ಇಲ್ಲಿ ಯಾವುದೇ ಕಳ್ಳತನನ ಅಥವಾ ಹಿಂಸಾಚಾರ ನಡೆಯದು ಎನ್ನುವ ನಂಬಿಕೆಯನ್ನು ಜನರು ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದಿಗೂ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಯಾವುದೇ ಕಳ್ಳತನ ಹಾಗೂ ಹಿಂಸಾರ ನಡೆದಿರುವ ದಾಖಲೆಗಳಿಲ್ಲ.
ಇಂದು ಈ 8 ಹಾವುಗಳನ್ನು ಪೂಜಿಸಿದರೆ ಕಾಳಸರ್ಪ ದೋಷದಿಂದ ಮುಕ್ತಿ..!
ಛಾವಣಿ ಇಲ್ಲದ ದೇವಾಲಯ
ಇಲ್ಲಿನ ಶನಿದೇವನ ದೇವಾಲಯಕ್ಕೆ ಬಾಗಿಲು ಮತ್ತು ಛಾವಣಿ ಇಲ್ಲ. ಈ ದೇವಾಲಯದ ವಾಸ್ತುಗಳು ಅತ್ಯಂತ ವಿಭಿನ್ನತೆಯಿಂದ ಕೂಡಿದೆ. ಈ ವಿಶೇಷವಾದ ಶನಿ ದೇವಸ್ಥಾನವು ಐದೂವರೆ ಅಡಿ ಎತ್ತರದ ಕಪ್ಪು ಬಂಡೆಯನ್ನು ಹೊಂದಿರುವ ದೇಗುಲ. ಶನಿ ದೇವರ ಪಕ್ಕದಲ್ಲಿ ತ್ರಿಶೂಲವನ್ನು ಇಡಲಾಗಿದೆ. ಇಲ್ಲಿ ಶನಿ ದೇವನಿಗೆ ಪ್ರತಿ ಶನಿವಾರ ಎಣ್ಣೆಯ ಅಭಿಷೇಕ ಮಾಡಲಾಗುವುದು.
ಇಲ್ಲಿ ಚುನಾವಣೆಗಳು ನಡೆಯಲ್ಲ
ಇಲ್ಲಿ ಯಾವುದೇ ದುಷ್ಟ ಶಕ್ತಿಗಳ ಕಾಟ ಇಲ್ಲ. ಇಲ್ಲಿನ ಜನರು ಮದ್ಯಸೇವನೆ, ಜೂಜು, ಧೂಮಪಾನಗಳಂತಹ ಕೆಟ್ಟ ಚಟ ಮಾಡುವುದಿಲ್ಲ. ಇಲ್ಲಿನ ಗ್ರಾಮ ಪಂಚಾಯಿತಿಯಲ್ಲೂ ಒಂದೇ ಮತ ಹಾಗೂ ನಿರ್ಧಾರಗಳ ಮೂಲಕ ಆಯ್ಕೆ ಮಾಡುತ್ತಾರೆ, ಚುನಾವಣೆ ನಡೆಸಲ್ಲ.