ಸ್ವೀಡಿಷ್ ಮನದನ್ನೆಯನ್ನು ಭೇಟಿಯಾಗಲು ಭಾರತದಿಂದ ಯುರೋಪ್‌ಗೆ ಸೈಕಲ್ ತುಳಿದ ವ್ಯಕ್ತಿ!
ಪ್ರೀತಿ ಎಂದರೆ ಹಾಗೆಯೇ. ಅದು ಬಣ್ಣ, ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ, ರಾಜ್ಯ-ದೇಶ ಎಲ್ಲಾ ಗಡಿಗಳನ್ನೂ ಮೀರಿದ್ದು. ಅದು ಅಕ್ಷರಶಃ ನಿಜ ಎಂಬುದನ್ನು ಇಲ್ಲೊಂದು ಜೋಡಿ ಸಾಬೀತುಪಡಿಸಿದೆ. ವ್ಯಕ್ತಿಯೊಬ್ಬ ತನ್ನ ಸ್ವೀಡಿಷ್ ಪತ್ನಿಯನ್ನು ಭೇಟಿಯಾಗಲು ಭಾರತದಿಂದ ಯುರೋಪ್‌ಗೆ ಸೈಕಲ್ ತುಳಿದಿರುವ ಘಟನೆ ನಡೆದಿದೆ.
ಪ್ರೀತಿಸಿದವರು ಜೊತೆಗಿದ್ದಾಗ ಮನಸ್ಸು ತುಂಬಾ ಖುಷಿಯಾಗಿರುತ್ತದೆ. ಅದೇ ಪ್ರೀತಿಸಿದವರು ದೂರವಾದಾಗ ಮನಸ್ಸು ಭೋರೆಂದು ಅಳುತ್ತದೆ. ಹಾಗೆಯೇ ಪ್ರೀತಿ ಎಂದರೆ ಹಾಗೆಯೇ. ಅದು ಬಣ್ಣ, ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ, ರಾಜ್ಯ-ದೇಶ ಎಲ್ಲಾ ಗಡಿಗಳನ್ನೂ ಮೀರಿದ್ದು. ಅದು ಅಕ್ಷರಶಃ ನಿಜ ಎಂಬುದನ್ನು ಇಲ್ಲೊಂದು ಜೋಡಿ ಸಾಬೀತುಪಡಿಸಿದೆ. ವ್ಯಕ್ತಿಯೊಬ್ಬ ತನ್ನ ಸ್ವೀಡಿಷ್ ಪತ್ನಿಯನ್ನು ಭೇಟಿಯಾಗಲು ಭಾರತದಿಂದ ಯುರೋಪ್‌ಗೆ ಸೈಕಲ್ ತುಳಿದಿರುವ ಘಟನೆ ನಡೆದಿದೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ. ದೆಹಲಿಯ ಮಹಾನಂದಿಯಾ ಎಂಬವರು ಜನವರಿ 22, 1977ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರತಿದಿನ ಅವರು ಸುಮಾರು 70 ಕಿಮೀ ಸೈಕಲ್‌ನಲ್ಲಿ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಷಾರ್ಲೆಟ್ ವಾನ್‌ನ ಶೆಡ್ವಿನ್ 1975ರಲ್ಲಿ ದೆಹಲಿಯಲ್ಲಿ ಭಾರತೀಯ ಕಲಾವಿದ (Indian Artist) ಮಹಾನಂದಿಯಾ ಅವರನ್ನು ಭೇಟಿಯಾದರು. ಸ್ಪೀಡನ್‌ನಲ್ಲಿದ್ದಾಗಲೇ ಮಹಾನಂದಿಯಾ ಬಗ್ಗೆ ಕೇಳಿ ತಿಳಿದಿದ್ದ ಶೆಡ್ವಿನ್ ಅವರನ್ನು ಭೇಟಿ (Meet)ಯಾಗಲೆಂದೇ ದೆಹಲಿಗೆ ಆಗಮಿಸಿದ್ದರು. ಮಹಾನಂದಿಯಾ ಕೈಯಿಂದಲೇ ತಮ್ಮ ಚಿತ್ರವನ್ನು (Portrait) ಬಿಡಿಸಲು ಶೆಡ್ವಿನ್ ಬಯಸಿದ್ದರು. ಡಾ.ಪ್ರದ್ಯುಮ್ನ ಕುಮಾರ್ ಮಹಾನಂದಿಯವರು ಆಗಷ್ಟೇ ಕಲಾವಿದರಾಗಿ ಹೆಸರು ಮಾಡಲಾರಂಭಿಸಿದ್ದರು. ಅವರು ದೆಹಲಿಯ ಕಲಾ ಕಾಲೇಜಿನಲ್ಲಿ ಕಲಾ ವಿದ್ಯಾರ್ಥಿಯಾಗಿದ್ದರು.
ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಬೆಂಗಳೂರು ಮಹಿಳೆ: ಇದ್ಯಾವ ಸೀಮೆ ಪ್ರೀತಿ ಎಂದ ನೆಟ್ಟಿಗರು!
ಪರಸ್ಪರ ಪ್ರೀತಿಸಲು ಆರಂಭಿಸಿದ ಮಹಾನಂದಿಯಾ-ಶೆಡ್ವಿನ್
ಮಹಾನಂದಿಯಾ, ಶೆಡ್ವಿನ್ ಭಾವಚಿತ್ರವನ್ನು ಬಿಡಿಸುವಾಗ ಇಬ್ಬರೂ ಪರಸ್ಪರ ಪ್ರೀತಿ (Love)ಸಲು ಪ್ರಾರಂಭಿಸಿದರು. ಶೆಡ್ವಿನ್, ಸ್ಪೀಡನ್‌ಗೆ ಹೊರಡಬೇಕಾದ ಸಮಯದಲ್ಲಿ, ಇಬ್ಬರೂ ಮದುವೆ (Marriage)ಯಾಗಲು ನಿರ್ಧರಿಸಿದರು. ಬಿಬಿಸಿಗೆ ನೀಡಿದ ಹಳೆಯ ಸಂದರ್ಶನದಲ್ಲಿ, ಮಹಾನಂದಿಯಾ ಅವರು, 'ಮೊದಲ ಬಾರಿಗೆ ಶೆಡ್ವಿನ್ ನನ್ನ ತಂದೆಯನ್ನು ಭೇಟಿಯಾಗಲು ಬಂದಾಗ ಅವರು ಸೀರೆ (Saree)ಯನ್ನು ಧರಿಸಿದ್ದರು. ಅವರು ಸೀರೆಯನ್ನು ಹೇಗೆ ಉಟ್ಟುಕೊಂಡರು. ಹೇಗೆ ಓಡಾಡಿದರು ಎಂದು ನನಗೆ ಇನ್ನೂ ತಿಳಿದಿಲ್ಲ. ನನ್ನ ತಂದೆ ಮತ್ತು ಕುಟುಂಬದ ಆಶೀರ್ವಾದದಿಂದ ನಾವು ಬುಡಕಟ್ಟು ಜನಾಂಗದ ಪ್ರಕಾರ ವಿವಾಹವಾದೆವು' ಎಂದು ಹೇಳಿದ್ದರು.
ಶೆಡ್ವಿನ್, ಸ್ಪೀಡನ್‌ಗೆ ಹೊರಡುವ ಸಮಯ ಹತ್ತಿರವಾಗುತ್ತಿದ್ದಂತೆ, ತನ್ನ ಪತಿಯನ್ನು ತನ್ನೊಂದಿಗೆ ಬರುವಂತೆ ಕೇಳಿಕೊಂಡಳು. ಆದರೆ, ಮಹಾನಂದಿಯಾ ಮೊದಲು ತನ್ನ ಅಧ್ಯಯನವನ್ನು ಮುಗಿಸಬೇಕಾಗಿತ್ತು. ಹೀಗಾಗಿ ತಾನು ನಂತರ ಬರುವುದಾಗಿ ಶೆಡ್ವಿನ್ ಬಳಿ ಹೇಳಿದರು. ಸ್ವೀಡಿಷ್ ಜವಳಿ ಪಟ್ಟಣವಾದ ಬೋರಾಸ್‌ನಲ್ಲಿರುವ ಆಕೆಯ ಮನೆಗೆ ಅವಳನ್ನು ಹಿಂಬಾಲಿಸುವುದಾಗಿ ಭರವಸೆ ನೀಡಿದರು. ಪತ್ರಗಳ ಮೂಲಕ ಇಬ್ಬರು ಸಂಪರ್ಕದಲ್ಲಿದ್ದರು.
18ರ ಯುವತಿಯನ್ನು ಮದುವೆಯಾದ ಅಜ್ಜ, ಬೊಚ್ಚು ಬಾಯಿ ಬಿಟ್ಟು ಹೇಗ್ ನಗ್ತಾರೆ ನೋಡಿ
ವಿಮಾನದ ಟಿಕೆಟ್‌ಗೆ ದುಡ್ಡಿಲ್ಲದೆ ಸ್ವೀಡನ್‌ಗೆ ಸೈಕಲ್‌ನಲ್ಲಿ ಪ್ರಯಾಣ
ಒಂದು ವರ್ಷದ ನಂತರ, ಅವರು ವಾನ್ ಶೆಡ್ವಿನ್ ಅವರನ್ನು ಭೇಟಿ ಮಾಡಲು ಯೋಜಿಸಿದಾಗ ಮಹಾನಂದಿಯಾ, ವಿಮಾನ ಟಿಕೆಟ್ ಖರೀದಿಸಲು ಸಾಕಷ್ಟು ಹಣವನ್ನು ಹೊಂದಿಲ್ಲ ಎಂದು ಅರಿತುಕೊಂಡರು. ಹೀಗಾಗಿ ಇದ್ದದ್ದನ್ನೆಲ್ಲ ಮಾರಿ ಸೈಕಲ್ ಕೊಂಡುಕೊಂಡರು. ಸೈಕಲ್‌ನಲ್ಲೇ ಸ್ವೀಡನ್‌ಗೆ ತಮ್ಮ ಪ್ರಯಾಣವನ್ನು ಆರಂಭಿಸಿದರು. ನಾಲ್ಕು ತಿಂಗಳ ಅವಧಿಯಲ್ಲಿ ಅವರು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಮತ್ತು ಟರ್ಕಿಯನ್ನು ದಾಟಿದರು. ದಾರಿಯಲ್ಲಿ ಅನೇಕ ಬಾರಿ ಸೈಕಲ್ ಕೆಟ್ಟುಹೋಯಿತು. ಅವರು ದಿನಗಟ್ಟಲೆ ಆಹಾರವಿಲ್ಲದೆ ಹೋಗಬೇಕಾಯಿತು. ಆದರೆ ಯಾವುದೂ ಅವರ ಇಚ್ಛೆಯನ್ನು ಮುರಿಯಲು ಸಾಧ್ಯವಾಗಲಿಲ್ಲ.
ಜನವರಿ 22, 1977ರಂದು ಮಹಾನಂದಿಯಾ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರತಿದಿನ ಅವರು ಸುಮಾರು 70 ಕಿಮೀ ಸೈಕಲ್‌ನಲ್ಲಿ ಹೋಗುತ್ತಿದ್ದರು. 'ಪ್ರಯಾಣದ ಮಧ್ಯೆಯೂ ಕಲೆ ನನ್ನ ರಕ್ಷಣೆಗೆ ಬಂದಿತು. ನಾನು ಜನರ ಭಾವಚಿತ್ರಗಳನ್ನು ಮಾಡಿದ್ದೇನೆ ಮತ್ತು ಕೆಲವರು ನನಗೆ ಹಣವನ್ನು ನೀಡಿದರು, ಇತರರು ನನಗೆ ಆಹಾರ ಮತ್ತು ವಸತಿ ನೀಡಿದರು' ಎಂದು ಮಹಾನಂದಿಯಾ ಬಿಬಿಸಿಗೆ ತಿಳಿಸಿದರು. ಮೇ 28 ರಂದು ಯುರೋಪ್ ತಲುಪಿದರು- ಇಸ್ತಾನ್ಬುಲ್ ಮತ್ತು ವಿಯೆಟ್ನಾಂ ಮೂಲಕ, ಮತ್ತು ನಂತರ ರೈಲಿನಲ್ಲಿ ಗೋಥೆನ್ಬರ್ಗ್‌ಗೆ ಪ್ರಯಾಣಿಸಿದರು. ಇಬ್ಬರೂ ಅಧಿಕೃತವಾಗಿ ಸ್ವೀಡನ್‌ನಲ್ಲಿ ವಿವಾಹವಾದರು.
'ನನಗೆ ಯುರೋಪಿಯನ್ ಸಂಸ್ಕೃತಿಯ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಇದು ನನಗೆ ಹೊಸದು, ಆದರೆ ಅವಳು ಪ್ರತಿ ಹಂತದಲ್ಲೂ ನನ್ನನ್ನು ಪ್ರೀತಿಸಿ, ಬೆಂಬಲಿಸಿದಳು. ಅವಳು ನನ್ನ ಜೀವನದಲ್ಲಿ ವಿಶೇಷ ವ್ಯಕ್ತಿ. ನಾನು 1975ರಲ್ಲಿ ಇದ್ದಂತೆಯೇ ಈಗಲೂ ಅವಳನ್ನು ಪ್ರೀತಿಸುತ್ತಿದ್ದೇನೆ' ಎಂದು ಅವರು ಬಿಬಿಸಿಗೆ ತಿಳಿಸಿದರು. ದಂಪತಿಗಳು ಈಗ ತಮ್ಮ ಇಬ್ಬರು ಮಕ್ಕಳೊಂದಿಗೆ ಸ್ವೀಡನ್‌ನಲ್ಲಿ ವಾಸಿಸುತ್ತಿದ್ದಾರೆ. ಮಹಾನಂದಿಯಾ ಕಲಾವಿದರಾಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ.