ಇನ್ಮುಂದೆ ಕೈಲಾಸ ಯಾತ್ರೆ ಬಹಳ ಸುಲಭ: ಚೀನಾ, ನೇಪಾಳಕ್ಕೆ ಹೋಗ್ದೆ ಉತ್ತರಾಖಂಡದಿಂದ್ಲೇ ಪ್ರಯಾಣಿಸಿ!

ಕೈಲಾಸ ಪರ್ವತವನ್ನು ಹಳೆಯ ಲಿಪುಲೇಖ್ ಶಿಖರದ ತುದಿಯಿಂದಲೇ ನೋಡಬಹುದಾಗಿದೆ ಮತ್ತು ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಗಡಿ ತೆಹಸಿಲ್ ಧಾರ್ಚುಲಾದಲ್ಲಿ ಸರ್ಕಾರವು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುತ್ತಿದೆ. ಅಲ್ಲದೆ, ಕೇಂದ್ರ ಸರ್ಕಾರ ದುರ್ಗಮವಾದ ಯಾತ್ರೆಯನ್ನು ಸುಲಭ ಮಾಡ್ತಿದೆ. 

mount kailash to become accessible from india september onwards ash

ನವದೆಹಲಿ (ಜುಲೈ 27, 2023): ಕೋವಿಡ್ - 19 ಸಾಂಕ್ರಾಮಿಕ ರೋಗದಿಂದಾಗಿ ಹಿಂದೂಗಳ ಪವಿತ್ರ ಯಾತ್ರೆ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು ಹಲವಾರು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಆದರೆ, ಯೋಜನೆ ಸ್ಥಗಿತಗೊಂಡಿದ್ರೂ ಕೆಂದ್ರ ಸರ್ಕಾರ ಮಾತ್ರ ಸುಮ್ಮನೆ ಕೂತಿಲ್ಲ. ಚೀನಾ, ನೇಪಾಳದ ಮೂಲಕ ಕೈಲಾಸ ಪರ್ವತ ನೋಡುವ ದುರ್ಗಮ ಪ್ರವಾಸವನ್ನು ಸುಲಭಗೊಳಿಸುವ ಕೆಲಸ ಮಾಡ್ತಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸೂಚನೆ ಮೇರೆಗೆ ಗಡಿ ರಸ್ತೆಗಳ ಸಂಸ್ಥೆ (BRO) ನೂತನ ರಸ್ತೆಯನ್ನು ನಿರ್ಮಿಸುತ್ತಿದೆ. 

ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ನೆರವಿನಿಂದ ಯಾತ್ರಿಕರಿಗೆ ಹಳೆಯ ಲಿಪುಲೇಖ್ ಶಿಖರದಿಂದಲೇ ಶಿವನ ವಾಸಸ್ಥಾನ ಕೈಲಾಸ ಪರ್ವತದ ಒಂದು ನೋಟವನ್ನು ನೀಡಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಇದನ್ನು ನೋಡಲು ನೀವು ಚೀನಾ ಹಾಗೂ ನೇಪಾಳ ಪ್ರವೇಶಿಸುವ ಅಗತ್ಯವೇ ಇಲ್ಲ!

ಇದನ್ನು ಓದಿ: ಆಲಿಕಲ್ಲಿಗೆ ವಿಮಾನದ ಮೂಗು, ರೆಕ್ಕೆ, ಎಂಜಿನ್‌ಗಳಿಗೆ ತೀವ್ರ ಹಾನಿ: ರೋಲರ್‌ ಕೋಸ್ಟರ್‌ನಂತೆ ಅಲುಗಾಡುತ್ತಿದ್ದ ಫ್ಲೈಟ್‌!

ಕೈಲಾಸ - ಮಾನಸ ಸರೋವರ ಯಾತ್ರೆಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ ಮತ್ತು ಭಗವಾನ್ ಶಿವನ ಪವಿತ್ರ ಸ್ಥಳವಾದ ಕೈಲಾಸ ಪರ್ವತದ ದರ್ಶನದಿಂದ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಈ ಹಿಂದೆ ಕೈಲಾಸ - ಮಾನಸ ಸರೋವರ ಯಾತ್ರೆ ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ನೇಪಾಳದಿಂದ ನಡೆಯುತ್ತಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ಸ್ಥಗಿತಗೊಳಿಸಲಾಯಿತು ಮತ್ತು ನಂತರ ಪುನಾರಂಭಿಸಿಲ್ಲ. ಆದರೆ, ಒಳ್ಳೆಯ ಸುದ್ದಿ ಏನೆಂದರೆ, ಈಗ ಉತ್ತರಾಖಂಡದಿಂದಲೇ ನೋಡಬಹುದಾಗಿದೆ.

ಕೈಲಾಸ ಪರ್ವತಕ್ಕೆ ಭೇಟಿ ನೀಡಲು ಉತ್ತರಾಖಂಡದ ಪ್ರವಾಸೋದ್ಯಮ ಕಾರ್ಯದರ್ಶಿ ಜಂಟಿ ತಂಡವನ್ನು ರಚಿಸಿದ್ದು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಸಾಹಸ ಪ್ರವಾಸೋದ್ಯಮ ತಜ್ಞರು ಮತ್ತು ಗಡಿ ರಸ್ತೆಗಳ ಸಂಸ್ಥೆಯ ಅಧಿಕಾರಿಗಳನ್ನು ಒಳಗೊಂಡ ತಂಡವು ಕಳೆದ ತಿಂಗಳು ಹಳೆಯ ಲಿಪುಲೇಖ್ ಶಿಖರಕ್ಕೆ ಭೇಟಿ ನೀಡಿತ್ತು. ಪ್ರವಾಸೋದ್ಯಮ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ ಜಂಟಿ ತಂಡವು ಲಿಪುಲೇಖ್ ಶಿಖರ, ಓಂ ಪರ್ವತ ಮತ್ತು ಆದಿ ಕೈಲಾಶ್ ಅನ್ನು ಪರಿಶೀಲಿಸಿದ್ದು, ಶೀಘ್ರದಲ್ಲೇ ಜಂಟಿ ವರದಿಯನ್ನು ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಲಾಗುವುದು ಎಂದು ಧಾರ್ಚುಲಾದ ಎಸ್‌ಡಿಎಂ ದಿವೇಶ್ ಶಶಾನಿ ಹೇಳಿದ್ದರು.

ಇದನ್ನೂ ಓದಿ: IRCTC ವೆಬ್‌ಸೈಟ್‌ ಡೌನ್‌: ರೈಲ್ವೆ ಟಿಕೆಟ್ ಬುಕ್‌ ಮಾಡಲು ಜನಸಾಮಾನ್ಯರ ಪರದಾಟ; ನೆಟ್ಟಿಗರ ಆಕ್ರೋಶ

ಕೈಲಾಸ ಪರ್ವತವನ್ನು ಹಳೆಯ ಲಿಪುಲೇಖ್ ಶಿಖರದ ತುದಿಯಿಂದಲೇ ನೋಡಬಹುದಾಗಿದೆ ಮತ್ತು ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಗಡಿ ತೆಹಸಿಲ್ ಧಾರ್ಚುಲಾದಲ್ಲಿ ಸರ್ಕಾರವು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಿದೆ ಎಂದು ಎಸ್‌ಡಿಎಂ ತಿಳಿಸಿದ್ದರು. ಈ ಮಾರ್ಗದಲ್ಲಿ ವಸತಿ, ಊಟ ಮತ್ತಿತರ ವ್ಯವಸ್ಥೆ ಕಲ್ಪಿಸಲು ಜಂಟಿ ತಂಡದಿಂದ ಪ್ರಯತ್ನ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. 

ಪಿಥೋರಗಢದ ಧಾರ್ಚುಲಾದಲ್ಲಿರುವ 18,000 ಅಡಿ ಎತ್ತರದ ಹಳೆಯ ಲಿಪುಲೇಖ್ ಶಿಖರದಿಂದ ಕೈಲಾಸ ಪರ್ವತವು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಶಿಖರಗಳಿಂದ ಕೈಲಾಸ ಪರ್ವತದ ವೈಮಾನಿಕ ಅಂತರ ಕೇವಲ 50 ಕಿಲೋಮೀಟರ್‌ಗಳಾಗಿದೆ. 

ಇದನ್ನೂ ಓದಿ: ಅಯೋಧ್ಯೆ ರಾಮ ವಿಗ್ರಹ ಪ್ರತಿಷ್ಠಾಪನೆ ವೀಕ್ಷಣೆಗೆ 6 ತಿಂಗಳ ಮೊದಲೇ ಹೋಟೆಲ್‌ ಹೌಸ್‌ಫುಲ್‌!

ಈ ವ‍ರ್ಷದಲ್ಲೇ ಸಾಧ್ಯ!

ಈ ವರ್ಷದ ಸೆಪ್ಟೆಂಬರ್‌ ವೇಳೆಗೆ, ಭಾರತೀಯ ಪ್ರದೇಶದಿಂದ ಭಗವಾನ್ ಶಿವನ ವಾಸಸ್ಥಾನ ಕೈಲಾಸ ಪರ್ವತಕ್ಕೆ ಭಕ್ತರು ಭೇಟಿ ನೀಡಲು ಸಾಧ್ಯವಾಗುತ್ತದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಪಿಥೋರಗಢ್ ಜಿಲ್ಲೆಯ ನಾಭಿಧಾಂಗ್‌ನಲ್ಲಿರುವ ಕೆಎಂವಿಎನ್ ಹಟ್ಸ್‌ನಿಂದ ಭಾರತ-ಚೀನಾ ಗಡಿಯಲ್ಲಿರುವ ಲಿಪುಲೇಖ್ ಪಾಸ್‌ವರೆಗೆ ರಸ್ತೆ ನಿರ್ಮಿಸುವ ಕೆಲಸ ಪ್ರಾರಂಭಿಸಿದ್ದು, ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಆರ್‌ಒ ಡೈಮಂಡ್ ಪ್ರಾಜೆಕ್ಟ್ ನ ಮುಖ್ಯ ಇಂಜಿನಿಯರ್ ವಿಮಲ್ ಗೋಸ್ವಾಮಿ ಮಾತನಾಡಿ, ‘ನಾಭಿಧಾಂಗ್ ನ ಕೆಎಂವಿಎನ್ ಹಟ್ಸ್‌ನಿಂದ ಲಿಪುಲೇಖ್ ಪಾಸ್ವರೆಗೆ ಸುಮಾರು ಆರೂವರೆ ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಪೂರ್ಣಗೊಂಡ ನಂತರ, ಅಲ್ಲಿ 'ಕೈಲಾಶ್ ವ್ಯೂ ಪಾಯಿಂಟ್' ಸಿದ್ಧವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದ ಕೋಟಾದ ರಸ್ತೆಗಳಲ್ಲಿ ಬೃಹತ್‌ ಮೊಸಳೆಗಳ ತಿರುಗಾಟ: ವಿಡಿಯೋ ವೈರಲ್‌

ಪಿಥೋರಗಢ್ ಯೋಜನೆಯು ಪೂರ್ಣಗೊಂಡ ನಂತರ, ಪ್ರಯಾಸಕರ ಚಾರಣವು ಸುಲಭವಾಗಲಿದೆ. ಸುಮಾರು ಎರಡು ವಾರಗಳೊಳಗೆ ಯಾತ್ರೆ ಮಾಡಬಹುದಾಗಿದೆ. ಆದರೂ, ಮಾನಸ ಸರೋವರ ಯಾತ್ರಿಕರು 84 ಪ್ರತಿಶತ ಭೂಪ್ರಯಾಣಗಳನ್ನು ಭಾರತೀಯ ರಸ್ತೆಗಳಲ್ಲಿ ಪ್ರಯಾಣ ಮಾಡ್ಬೇಕಾಗಿದ್ದು, ಚೀನಾದಲ್ಲಿ ಕೇವಲ 16 ಪ್ರತಿಶತದಷ್ಟು ಭೂಮಿ ಪ್ರಯಾಣ ಮಾಡಬೇಕಾಗಿದೆ. 

ಇದನ್ನೂ ಓದಿ: ಇನ್ಮುಂದೆ ಎಲ್ಲ ಟ್ರೈನ್‌ಗೂ ಸ್ವಯಂಚಾಲಿತ ಬಾಗಿಲು, 2 ಎಂಜಿನ್‌ಗಳು: ಪ್ರಯಾಣ ಸಮಯ ಕಡಿಮೆ ಮಾಡಲು ರೈಲ್ವೆ ಪ್ಲ್ಯಾನ್‌ ಹೀಗಿದೆ..

Latest Videos
Follow Us:
Download App:
  • android
  • ios