ಅಯೋಧ್ಯೆ ರಾಮ ವಿಗ್ರಹ ಪ್ರತಿಷ್ಠಾಪನೆ ವೀಕ್ಷಣೆಗೆ 6 ತಿಂಗಳ ಮೊದಲೇ ಹೋಟೆಲ್ ಹೌಸ್‌ಫುಲ್!
ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೊಠಡಿ ಮತ್ತು ಬಸ್‌ಗಳು ಸೇರಿದಂತೆ ಹಲವೆಡೆ ಈಗಾಗಲೇ ಜನರು ಭಾರೀ ಪ್ರಮಾಣದಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 2024 ರ ಜನವರಿ 15 ರಿಂದ 24ರೊಳಗೆ ವಿಗ್ರಹ ಪ್ರತಿಷ್ಠಾಪಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆಯಾದರೂ ನಿಖರ ದಿನಾಂಕ ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ.
ಅಯೋಧ್ಯೆ (ಜುಲೈ 21, 2023): ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೆ ಇನ್ನೂ 6 ತಿಂಗಳು ಬಾಕಿ ಇರುವಾಗಲೇ ಸಮಾರಂಭದಲ್ಲಿ ಭಾಗಿಯಾಗಲು ಜನರು ನಗರದ ಹೋಟೆಲ್ ಮತ್ತು ಟ್ರಾವೆಲ್ ಏಜೆನ್ಸಿಗಳಲ್ಲಿ ಮುಂಗಡವಾಗಿ ಬುಕಿಂಗ್ ಶುರು ಮಾಡಿದ್ದಾರೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೊಠಡಿ ಮತ್ತು ಬಸ್‌ಗಳು ಸೇರಿದಂತೆ ಹಲವೆಡೆ ಈಗಾಗಲೇ ಜನರು ಭಾರೀ ಪ್ರಮಾಣದಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
2024 ರ ಜನವರಿ 15 ರಿಂದ 24ರೊಳಗೆ ವಿಗ್ರಹ ಪ್ರತಿಷ್ಠಾಪಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆಯಾದರೂ ನಿಖರ ದಿನಾಂಕ ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಅಯೋಧ್ಯೆ ಜಿಲ್ಲಾಧಿಕಾರಿ ಗೌರವ್ ದಯಾಳ್ ಅತಿಥಿಗಳಿಗೆ ಉತ್ತಮ ಸ್ವಾಗತ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರ ಸಭೆ ಕರೆದಿದ್ದ ವೇಳೆ ಈ ಬಗ್ಗೆ ತಿಳಿಸಿರುವ ಮಾಲೀಕರು ‘ಕೆಲವರು 10 ರಿಂದ 12 ದಿನಗಳ ಕಾಲ ದಿನಗಳವರೆಗೆ ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದಾರೆ. ದೆಹಲಿ, ಬಾಂಬೆ ಮತ್ತು ಇತರ ಪ್ರಮುಖ ನಗರಗಳಿಂದ ಕರೆ ಬರುತ್ತಿವೆ’ ಎಂದಿದ್ದಾರೆ.
ಇದನ್ನು ಓದಿ: ಅಯೋಧ್ಯೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 25 ರಾಮಸ್ತಂಭ ನಿರ್ಮಾಣ
ಅಯೋಧ್ಯೆ ರಾಮ ಮಂದಿರದ ಹಿಂದಿನ ಸೂತ್ರಧಾರರು ಇವರೇ: ಮಂದಿರ ನಿರ್ಮಾಣದ ಹಿಂದಿನ ಕತೆ ಹೀಗಿದೆ..