Asianet Suvarna News Asianet Suvarna News

ಭಾರತದಿಂದ ಇಂಗ್ಲೆಂಡ್‌ಗಿತ್ತು ಲಕ್ಸುರಿ ಬಸ್‌ : 1970ರವರೆಗೂ ಇದ್ದ ಈ ಬಸ್‌ ಸೇವೆ ಬಗ್ಗೆ ಇಲ್ಲಿದೆ ಡಿಟೇಲ್ಸ್‌

ಭಾರತದ ಕೋಲ್ಕತ್ತಾದಿಂದ ಇಂಗ್ಲೆಂಡ್‌ನ ಲಂಡನ್‌ಗೆ ಬಸ್‌ ಸೇವೆ ಲಭ್ಯವಿತ್ತು. ಇದು 1970ರವರೆಗೂ ಇದು ಕಾರ್ಯ ನಿರ್ವಹಿಸಿತ್ತು.   1957ರ ಎಪ್ರಿಲ್‌ 15ರಂದು ಉದ್ಘಾಟನೆಗೊಂಡ ಈ ಬಸ್‌ ಸೇವೆ ಭಾರತದ ಕೋಲ್ಕತ್ತಾದಿಂದ ಲಂಡನ್‌ಗೆ ಸಂಪರ್ಕ ಕಲ್ಪಿಸುತ್ತಿತ್ತು. 

Longest Bus route in the world Bus from Kolkata to England which was running till 1970 Here are the details about this bus journey akb
Author
First Published Oct 29, 2023, 4:29 PM IST

ನವದೆಹಲಿ: ಭಾರತದಿಂದ ನೆರೆಯ  ರಾಷ್ಟ್ರಗಳಾದ ಬಾಂಗ್ಲಾಕ್ಕೆ ನೇಪಾಳಕ್ಕೆ  ಬಸ್‌ ಸೇವೆ ಇರುವುದು ನಿಮಗೆ ಗೊತ್ತಿರಬಹುದು. ಆದರೆ ದೂರಾದ ಇಂಗ್ಲೆಂಡ್‌ಗೂ ಭಾರತದಿಂದ ಹಿಂದೊಮ್ಮೆ ಬಸ್ ಸೇವೆ ಇತ್ತು ಎಂಬ ವಿಚಾರ ನಿಮಗೆ ಗೊತ್ತಾ? ನಂಬಲು ಸ್ವಲ್ಪ ಕಷ್ಟವಾದರೂ ಇದು ನಿಜ, ಭಾರತದ ಕೋಲ್ಕತ್ತಾದಿಂದ ಇಂಗ್ಲೆಂಡ್‌ನ ಲಂಡನ್‌ಗೆ ಬಸ್‌ ಸೇವೆ ಲಭ್ಯವಿತ್ತು. ಇದು 1970ರವರೆಗೂ ಇದು ಕಾರ್ಯ ನಿರ್ವಹಿಸಿತ್ತು.   1957ರ ಎಪ್ರಿಲ್‌ 15ರಂದು ಉದ್ಘಾಟನೆಗೊಂಡ ಈ ಬಸ್‌ ಸೇವೆ ಭಾರತದ ಕೋಲ್ಕತ್ತಾದಿಂದ ಲಂಡನ್‌ಗೆ ಸಂಪರ್ಕ ಕಲ್ಪಿಸುತ್ತಿತ್ತು. ಈ ಬಸ್‌ ಸೇವೆಯನ್ನು ಮೊದಲಿಗೆ ಇಂಡಿಯಮೆನ್‌ ಎಂಬ ಸಂಸ್ಥೆ ನೀಡುತ್ತಿದ್ದರೆ ನಂತರದಲ್ಲಿ 32 ಇತರ ಆಪರೇಟರ್‌ಗಳು ಈ ಬಸ್ ಸೇವೆ ಒದಗಿಸಿದ್ದರು ಇದರಲ್ಲಿ ಪ್ರಮುಖವಾದುದು ಅಲ್ಬರ್ಟ್‌ ಟ್ರಾವೆಲ್ಸ್‌.  ಇದು ಲಂಡನ್‌ನಿಂದ ಭಾರತಕ್ಕೆ 15 ಬಾರಿ ಬಸ್‌ ಸಂಪರ್ಕ ಒದಗಿಸಿತ್ತು. 

ಆದರೆ ಮಧ್ಯಪ್ರಾಚ್ಯ ದೇಶಗಳಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ಅಶಾಂತಿಯ ಕಾರಣದಿಂದ ಆ ದೇಶಗಳ ಮೂಲಕ ಸಾಗಲು ತೊಡಕುಂಟಾಗಿತ್ತು. ನಂತರ ನಡೆದ ಇರಾನ್‌ ಕ್ರಾಂತಿ ಹಾಗೂ ಸೋವಿಯತ್-ಆಫ್ಘಾನ್ ಯುದ್ಧದೊಂದಿಗೆ (Soviet–Afghan War) ಈ ಬಸ್‌ ಮಾರ್ಗ ಸಂಪೂರ್ಣವಾಗಿ ಕೊನೆಗೊಂಡಿತು. ಇದು ಜಗತ್ತಿನಲ್ಲಿಯೇ ಅತ್ಯಂತ ಉದ್ದದ ಬಸ್ ಮಾರ್ಗವಾಗಿತ್ತು.

'ಆಕೆಗಾಗಿ' ಹೈ ಹೀಲ್ಡ್‌ ಶೂ ಧರಿಸಿ ಮೈಲು ದೂರ ನಡೆದ ಪುರುಷರು: ವೀಡಿಯೋ

ತಗುಲಿದ ವೆಚ್ಚವೆಷ್ಟು?
ಲಂಡನ್ ಹಾಗೂ ಕೋಲ್ಕತ್ತಾ ನಡುವಿನ ಈ ಡಬ್ಬಲ್ ಡೆಕ್ಕರ್‌ ಬಸ್‌ ಸೇವೆಗೆ ಆಗಿನ ಕಾಲದಲ್ಲಿ ತಗುಲಿದ ವೆಚ್ಚ  £145 ಡಾಲರ್‌, ಅಂದರೆ ಅಂದಾಜು ಭಾರತದ 13,518 ರೂಪಾಯಿಗಳು.  ಈಗಿನ ಕಾಲಕ್ಕೆ ಇದು ಕಡಿಮೆ ಮೊತ್ತ ಎನಿಸಿದರು. ಅಂದಿನ ಕಾಲಘಟ್ಟಕ್ಕೆ ಇದು ಸಾಮಾನ್ಯ ಮೊತ್ತವೇನೂ ಆಗಿರಲಿಲ್ಲ,  ಈ ಐತಿಹಾಸಿಕ ಬಸ್‌ನ  ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. 

ಬೇಕಾ ಇಂಥಾ ಮಕ್ಕಳು... ಮುಂಗೋಪಿ ಮಗ ಕಿಡಿಗೇಡಿ ಮೊಮ್ಮಗ : ವೃದ್ಧ ತಾಯಿ ಮೇಲೆ ಹಿಗ್ಗಾಮುಗ್ಗಾ ಥಳಿತ

ಸೆಂಟ್ರಲ್ ವೆಸ್ಟರ್ನ್ ಡೈಲಿ ವರದಿಯ ಪ್ರಕಾರ, ಈ ಇತಿಹಾಸ ಪ್ರಸಿದ್ಧ ಬಸ್ ಅನ್ನು  ಓರ್ವ ಬ್ರಿಟಿಷ್ ಪಯಣಿಗ ಆಂಡಿ ಸ್ಟೀವರ್ಟ್  1968ರಲ್ಲಿ ಖರೀದಿಸಿದರಂತೆ, ಭಾರತದ ಮಾರ್ಗವಾಗಿ ಸಿಡ್ನಿಯಿಂದ ಲಂಡನ್‌ಗೆ ಹೋಗುವುದಕ್ಕಾಗಿ ಈ ಬಸ್‌ನ್ನು ಖರೀದಿಸಿದ್ದರಂತೆ. ಆಕ್ಟೋಬರ್ 8 1968ರಂದು ಅವರು ಸಿಡ್ನಿಯ ಮಾರ್ಟಿನ್‌ ಪ್ಲೇಸ್‌ನಿಂದ  13 ಪ್ರಯಾಣಿಕರೊಂದಿಗೆ 16, ಸಾವಿರ ಕಿಲೋ ಮೀಟರ್ ದೂರದ ಪ್ರಯಾಣ ಆರಂಭಿಸಿದ್ದರು. ಇದು 132 ದಿನಗಳ ನಂತರ 1969ರ ಫೆಬ್ರವರಿ 17 ರಂದು  ಲಂಡನ್‌ಗೆ ಆಗಮಿಸಿತ್ತು. 

 

ಐಷಾರಾಮಿ ಬಸ್

ಇಂಗ್ಲೆಂಡ್‌ನಿಂದ ಸಿಡ್ನಿಗೆ ತೆರಳುವ ಮಾರ್ಗದಲ್ಲಿ ಬೆಲ್ಜಿಯಂ, ಪಶ್ಚಿಮ ಜರ್ಮನಿ, ಆಸ್ಟ್ರಿಯಾ, ಯುಗೋಸ್ಲೋವಿಯಾ, ಬಲ್ಗೇರಿಯಾ, ಟರ್ಕಿ, ಅಫ್ಘಾನಿಸ್ತಾನ, ಪಶ್ಚಿಮ ಪಾಕಿಸ್ತಾನ, ಭಾರತ, ಬರ್ಮಾ, ಥೈಲ್ಯಾಂಡ್, ಮಲಯಾ ಹಾಗೂ ಸಿಂಗಾಪುರ ಹೀಗೆ 13 ದೇಶಗಳ ಮೂಲಕ ಸಾಗಿ ಬಂದಿತ್ತು. ಭಾರತದಲ್ಲಿ ಈ ಬಸ್ ದೆಹಲಿ ಆಗ್ರಾ, ಅಲಹಾಬಾದ್‌, ಬನರಾಸ್ ಮೂಲಕ ಸಾಗಿ ಕೋಲ್ಕತ್ತಾ ತಲುಪಿತ್ತು. ಆಗಿನ ಕಾಲದ ಮಟ್ಟಿಗೆ ಈ ಬಸ್‌ ಸೇವೆ ಐಷಾರಾಮಿಯೇ ಆಗಿತ್ತು. ಬಸ್‌ನ ಲೋವರ್ ಡೆಕ್‌ನಲ್ಲಿ ಒದಲು ಜಾಗ ಊಟ ಮಾಡಲು ಸ್ಥಳ ಇತ್ತು.  ಅಲ್ಲದೇ ಬಸ್ ಒಳಗಿದ್ದ ಫ್ಯಾನ್ ಹೀಟರ್ ಬಸ್ ಒಳಗೆ ಇದ್ದವರನ್ನು ಬೆಚ್ಚಗಿರಿಸುತ್ತಿತ್ತು.  ಪ್ರತಿಯೊಬ್ಬರಿಗೂ ಬಸ್‌ನಲ್ಲಿ ಮಲಗಲು ಸೀಟ್‌ಗಳಿದ್ದವು.  ಈ ಎಲ್ಲಾ ಸೌಲಭ್ಯಗಳಿಂದ ಈ ಬಸ್‌ ಮನೆಗಿಂತ ಏನು ಕಡಿಮೆ ಇರಲಿಲ್ಲ. 

ಭಾರತದ ಬೀದಿ ನಾಯಿ ಜೊತೆ ಪ್ರೀತಿಯಲ್ಲಿ ಬಿದ್ದ ವಿದೇಶಿ ಮಹಿಳೆ: ವಿದೇಶಕ್ಕೆ ಹಾರಲಿದ್ದಾಳೆ 'ಜಯಾ'

ಇಂಗ್ಲೆಂಡ್‌ನಿಂದ ಸಿಡ್ನಿಗೆ ತೆರಳುವಾಗ, ಆಲ್ಬರ್ಟ್ ಇಸ್ತಾನ್‌ಬುಲ್‌ನ ಗೋಲ್ಡನ್ ಹಾರ್ನ್, ದೆಹಲಿಯ ನವಿಲು ಸಿಂಹಾಸನ, ಆಗ್ರಾದ ತಾಜ್ ಮಹಲ್, ಗಂಗಾನದಿಯ ಬನಾರಸ್, ಕ್ಯಾಸ್ಪಿಯನ್ ಸಮುದ್ರ ತೀರ, ಬ್ಲೂ ಡ್ಯಾನ್ಯೂಬ್ ಮುಂತಾದ ಉಸಿರು ಪ್ರವಾಸಿ ತಾಣಗಳನ್ನು ಹಾದು ಸಾಗಿತ್ತು.  ಅಲ್ಲದೇ ಪ್ರಯಾಣಿಕರಿಗೆ ಪ್ರವಾಸಿ ತಾಣದಲ್ಲಿ ಶಾಪಿಂಗ್‌ಗೂ ಅವಕಾಶ ನೀಡಲಾಗಿತ್ತು.  ಹೀಗೆ ಕೋಲ್ಕತ್ತಾ ಹಾಗೂ ಇಂಗ್ಲೆಂಡ್ ನಡುವೆ 15 ಬಾರಿ ಈ ಬಸ್‌ ಪ್ರಯಾಣ ಬೆಳೆಸಿತ್ತು.  ಜೊತೆಗೆ 150 ಗಡಿರೇಖೆಗಳನ್ನು ದಾಟುವುದರೊಂದಿಗೆ ಸ್ನೇಹ ರಾಯಭಾರಿ ಎಂಬ ಖ್ಯಾತಿಗೆ ಪಾತ್ರವಾಯಿತು. 

Follow Us:
Download App:
  • android
  • ios