ಬೇಕಾ ಇಂಥಾ ಮಕ್ಕಳು... ಮುಂಗೋಪಿ ಮಗ ಕಿಡಿಗೇಡಿ ಮೊಮ್ಮಗ : ವೃದ್ಧ ತಾಯಿ ಮೇಲೆ ಹಿಗ್ಗಾಮುಗ್ಗಾ ಥಳಿತ
73 ವರ್ಷದ ವೃದ್ಧೆಯೋರ್ವರನ್ನು ಅವರು ಮುದ್ದಾಗಿ ಸಾಕಿದ್ದ ಮಗ ಹಾಗೂ ಆತನ ಪತ್ನಿ ಹಾಗೂ ಕೊನೆಗೆ ಮೊಮ್ಮಗನೂ ಭೀಕರವಾಗಿ ಹಲ್ಲೆ ಮಾಡುತ್ತಿದ್ದ ವೀಡಿಯೋವೊಂದು ವೈರಲ್ ಆಗಿದ್ದು, ಈಗ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಚಂಡೀಗಡ: 73 ವರ್ಷದ ವೃದ್ಧೆಯೋರ್ವರನ್ನು ಅವರು ಮುದ್ದಾಗಿ ಸಾಕಿದ್ದ ಮಗ ಹಾಗೂ ಆತನ ಪತ್ನಿ ಹಾಗೂ ಕೊನೆಗೆ ಮೊಮ್ಮಗನೂ ಭೀಕರವಾಗಿ ಹಲ್ಲೆ ಮಾಡುತ್ತಿದ್ದ ವೀಡಿಯೋವೊಂದು ವೈರಲ್ ಆಗಿದ್ದು, ಈಗ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮಗನನ್ನು ಮುದ್ದಾಗಿ ಸಾಕಿ ಶಿಕ್ಷಣ ಕೊಡಿಸಿ ವಕೀಲನನ್ನಾಗಿ ಮಾಡಿದ್ದ ಆ ತಾಯಿಗೆ ತನ್ನ ಸ್ವಂತ ಮನೆಯಲ್ಲೇ ಈ ಪುತ್ರ ಮಹಾಶಯ ಹಾಗೂ ಆತನ ಪತ್ನಿ ಮಗ (ಮೊಮ್ಮಗ) ರೌರವ ನರಕ ತೋರಿಸಿದ್ದರು. ಆಕೆಗೆ ಹಿಗ್ಗಾಮುಗ್ಗಾ ಬಡಿಯುತ್ತಿದ್ದ ಮಗ ಹಾಗೂ ಸೊಸೆಯ ಕೃತ್ಯಗಳು ತಾಯಿಯ ರೂಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ. ಈ ಸಾಕ್ಷ್ಯವನ್ನು ಆಧರಿಸಿ ಆತನನ್ನು ಬಂಧಿಸಲಾಗಿದೆ. ಬಂಧನಕ್ಕೂ ಮೊದಲು ಈ ವಕೀಲ ತಾನು ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದಾಗಿ ಹೇಳಿದ್ದ.
ಹೀಗೆ ಮಗನಿಂದಲೇ ಹಲ್ಲೆಗೊಳಗಾದ ವೃದ್ಧ ತಾಯಿಯನ್ನು ಅಶಾರಾಣಿ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಮಗ ಸೊಸೆಯೊಂದಿಗೆ ಪಂಜಾಬ್‌ನ (Punjab) ರೂಪನಗರದಲ್ಲಿ (Rupnagar) ನೆಲೆಸಿದ್ದರು. ಇತ್ತೀಚೆಗಷ್ಟೇ ಅವರ ಪತಿ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಪತಿಯ ಮರಣದ ನಂತರ ಮಗ ಅಂಕುರ್ ವರ್ಮಾ, ಆತನ ಹೆಂಡತಿ ಸುಧಾ ಹಾಗೂ ಮೊಮ್ಮಗ ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಈ ವೃದ್ಧೆ ತನ್ನ ಮಗಳ ಬಳಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಗಳು ಸಿಸಿಟಿವಿ ಕ್ಯಾಮರಾ ಕಂಟ್ರೋಲ್ ಪಡೆದುಕೊಂಡಿದ್ದರು, ಇದಾದ ನಂತರ ಸಿಸಿಟಿವಿ (CCTV) ಫೂಟೇಜ್ ನೋಡಿದ ಅವರು ಶಾಕ್‌ಗೆ ಒಳಗಾಗಿದ್ದರು.
ಭಾರತದ ಬೀದಿ ನಾಯಿ ಜೊತೆ ಪ್ರೀತಿಯಲ್ಲಿ ಬಿದ್ದ ವಿದೇಶಿ ಮಹಿಳೆ: ವಿದೇಶಕ್ಕೆ ಹಾರಲಿದ್ದಾಳೆ 'ಜಯಾ'
ವೀಡಿಯೋದಲ್ಲಿ ವೃದ್ಧೆಯ ಮೊಮ್ಮಗ ಆಶಾರಾಣಿ ಅವರ ಬೆಡ್ ಮೇಲೆ ನೀರು ಚೆಲ್ಲಿ ಬಳಿಕ ತನ್ನ ಪೋಷಕರನ್ನು ಕರೆದು ಅಜ್ಜಿ ಹಾಸಿಗೆಯನ್ನು ಒದ್ದೆ ಮಾಡಿದ್ದಾರೆ ಎಂದು ಹೇಳುತ್ತಿರುವ ದೃಶ್ಯವಿದೆ. ಅಲ್ಲದೇ ಮಗನ ಮಾತು ಕೇಳಿ ಅಲ್ಲಿಗೆ ಬಂದ ಅಂಕುರ್ ಹಾಗೂ ಸುಧಾ ಈ ವೃದ್ಧೆ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದರು. ವೃದ್ಧೆಯ ಬೆನ್ನಿಗೆ ಹೊಡೆದಿದ್ದಲ್ಲೇ ಆಕೆಯ ಕೆನ್ನೆಗೂ ಬಾರಿಸಿದ್ದರು. ಇವೆಲ್ಲವೂ ಸುಮಾರು ನಿಮಿಷಗಳವರೆಗೂ ಮುಂದುವರೆದಿತ್ತು.
ಆ ಸ್ಥಳದಿಂದ ಅಂಕುರ್ ಹೋಗುತ್ತಿದ್ದಂತೆ ಅಲ್ಲಿಗೆ ಸೊಸೆ ಸುಧಾ ಹಾಗೂ ಮೊಮ್ಮಗ ಅಲ್ಲಿಗೆ ಬರುತ್ತಾರೆ. ಅಲ್ಲಿ ಮತ್ತೆ ಸೊಸೆ ಸುಧಾ ಏನೋ ಹೇಳುತ್ತಿದ್ದು, ಅಲ್ಲಿಗೆ ಮತ್ತೆ ಬಂದ ಅಂಕುರ್ ತಾಯಿಯ ತಲೆ ಕೂದಲನ್ನು ಹಿಡಿದು ಎಳೆದಾಡುತ್ತಾ ಆಕೆಯ ತಲೆಗೆ ಹೊಡೆಯುತ್ತಾನೆ. ಹೆಂಡತಿ ಮೊಮ್ಮಗ ಹೋದರೂ ಈ ಮಗ ಮಾತ್ರ ತಾಯಿ ಮೇಲೆ ಹಲ್ಲೆ ಮಾಡುವುದನ್ನು ಮುಂದುವರೆಸಿದ.
ಹಾವಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ ಪೊಲೀಸ್ : ಭಯಾನಕ ವೀಡಿಯೋ ವೈರಲ್
ಇನ್ನೊಂದು ವೀಡಿಯೋದಲ್ಲಿ ಸೊಸೆ ಸುಧಾ ಹೊಡೆಯುತ್ತಿದ್ದರೆ ಮೊಮ್ಮಗ ಅಜ್ಜಿಯನ್ನು ಎಳೆದಾಡುತ್ತಿದ್ದ ಸೆಪ್ಟೆಂಬರ್ 19 ಅಕ್ಟೋಬರ್ 21 ಹಾಗೂ 24 ರ ವೀಡಿಯೋದಲ್ಲಿ ಈ ಭಯಾನಕ ದೃಶ್ಯಗಳಿದ್ದವು. ಇದನ್ನು ನೋಡಿದ ನಂತರ ಮಗಳು ದೀಪ್ಷಿಕಾ ನೀಡಿದ ದೂರಿನ ಮೇರೆಗೆ ಪೊಲೀಸ್ ತಂಡ ಹಾಗೂ ಎನ್‌ಜಿಒವೊಂದರ ಸದಸ್ಯರು ಸ್ಥಳಕ್ಕೆ ತೆರಳಿ ವೃದ್ಧೆ ಆಶಾರಾಣಿಯವರನ್ನು ರಕ್ಷಿಸಿದ್ದಾರೆ. ಈ ವೇಳೆ ಅಂಕುರ್ ತನ್ನ ತಾಯಿಗೆ ತಲೆ ಸರಿ ಇಲ್ಲ ಆದರೂ ಆಕೆಯನ್ನು ಚೆನ್ನಾಗೆ ನೋಡಿಕೊಳ್ಳುತ್ತಿದ್ದೇನೆ ಎಂದಿದ್ದ. ಆದರೆ ಸಿಸಿಟಿವಿ ದೃಶ್ಯ ನೋಡಿದ ನಂತರ ಪೊಲೀಸರು ಆತನನ್ನು ಬಂಧಿಸಿದ್ದು, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.