Asianet Suvarna News Asianet Suvarna News

Travel Tips : ಪಾಸ್ಪೋರ್ಟ್ ಚಿಂತೆ ಬಿಡಿ.. ಈ ಸುಂದರ ದ್ವೀಪಕ್ಕೊಮ್ಮೆ ಭೇಟಿ ನೀಡಿ

ರಜೆಯಲ್ಲಿ ಊರು ಸುತ್ತುವ ಅಭ್ಯಾಸ ಅನೇಕರಿಗಿರುತ್ತದೆ. ಪ್ರತಿ ವರ್ಷ ಒಂದೊಂದು ಪ್ರವಾಸಿ ತಾಣ ವೀಕ್ಷಿಸಲು ಬಯಸ್ತಾರೆ. ಬಹುತೇಕರ ಕನಸು ಮಾಲ್ಡೀವ್ಸ್ ಕೂಡ ಹೌದು. ಅಲ್ಲಿಗೆ ಹೋಗಲು ಸಾಧ್ಯವಿಲ್ಲವೆಂದ್ರೆ ಟೆನ್ಷನ್ ಬೇಡ. ಮಾಲ್ಡೀವ್ಸ್ ಅನುಭವ ನೀಡುವ ಭಾರತದ ಈ ದ್ವೀಪಕ್ಕೆ ಹೋಗಿ ಬನ್ನಿ. 
 

Lakshadweep Minicoy Is The Best To Travel
Author
Bangalore, First Published Apr 22, 2022, 2:44 PM IST

ರೋಮ್ಯಾಂಟಿಕ್ (Romantic) ಸ್ಥಳದ ಪಟ್ಟಿಯಲ್ಲಿ ಮಾಲ್ಡೀವ್ಸ್ (Maldives) ಹೆಸರು ಮೊದಲು ಬರುತ್ತದೆ. ಸೆಲೆಬ್ರಿಟಿ (Celebrity) ಗಳ ಮೊದಲ ಆಯ್ಕೆ ಯಾವಾಗಲೂ ಮಾಲ್ಡೀವ್ಸ್. ವಿಕ್ಕಿ ಕೌಶಲ್-ಕತ್ರೀನಾ ಕೈಫ್‌ರಿಂದ ಹಿಡಿದು ಪ್ರಸಿದ್ಧ ಸೆಲೆಬ್ರಿಟಿಗಳು ರಜೆಯ ಮಜಾ ಪಡೆಯಲು ಮಾಲ್ಡೀವ್ಸ್ ಗೆ ಭೇಟಿ ನೀಡುತ್ತಾರೆ. ಜನಸಾಮಾನ್ಯರಿಗೂ ಮಾಲ್ಡೀವ್ಸ್ ನೋಡುವ ಆಸೆ ಇದ್ದೇ ಇರುತ್ತದೆ. ಆದರೆ, ಬಜೆಟ್ ಸಾಕಾಗುವುದಿಲ್ಲ. ಪಾಸ್‌ಪೋರ್ಟ್‌ ಕೂಡ ಮಾಲ್ಡೀವ್ಸ್ ಕನಸು ಭಗ್ನವಾಗಲು ಒಂದು ಕಾರಣ. ನೀವೂ ಮಾಲ್ಡೀವ್ಸ್ ನಂತಹ ಐಷಾರಾಮಿ ಮತ್ತು ಶಾಂತ ಜಾಗದಲ್ಲಿ ರಜಾದಿನವನ್ನು ಕಳೆಯಲು ಬಯಸಿದ್ದರೆ ನೀವು ಲಕ್ಷದ್ವೀಪವನ್ನು ಆಯ್ಕೆ ಮಾಡಬಹುದು.

ಪ್ರವಾಸಿಗರನ್ನು ಸೆಳೆಯುತ್ತೆ ಲಕ್ಷದೀಪ : ಲಕ್ಷದ್ವೀಪ ತನ್ನ ಆಕರ್ಷಕ ಮತ್ತು ಅದ್ಭುತ  ಕಡಲತೀರಗಳು ಮತ್ತು ಹಚ್ಚ ಹಸಿರಿನ ಪರಿಸರಕ್ಕೆ ಹೆಸರುವಾಸಿಯಾಗಿದೆ. ರಜೆಯನ್ನು ಸಂಪೂರ್ಣ ಎಂಜಾಯ್ ಮಾಡಲು ಬಯಸುವವರಿಗೆ ಈ ಸ್ಥಳವು ಸೂಕ್ತವಾಗಿದೆ. ಪ್ರವಾಸಿಗರನ್ನು ಸೆಳೆಯುವ ಅನೇಕ ಸ್ಥಳಗಳು ಇಲ್ಲಿವೆ. ದೋಣಿ ವಿಹಾರ, ನೀರಿನ ಮಧ್ಯೆ ಕ್ಯಾಂಡಲ್ ಲೈಡ್ ಡಿನ್ನರ್ ಹೀಗೆ ಅನೇಕ ವಿಶೇಷತೆಗಳು ನಿಮಗೆ ಅದ್ಭುತ ಅನುಭವವನ್ನು ನೀಡುತ್ತವೆ.

ಲಕ್ಷದ್ವೀಪದಲ್ಲೇನಿದೆ? : ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪವು 32 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿರುವ 36 ದ್ವೀಪಗಳನ್ನು ಒಳಗೊಂಡಿರುವ ಒಂದು ದ್ವೀಪಸಮೂಹವಾಗಿದೆ. ಇದು ಏಕ-ಜಿಲ್ಲಾ ಕೇಂದ್ರಾಡಳಿತ ಪ್ರದೇಶವಾಗಿದೆ. 12 ಹವಳಗಳು, ಮೂರು ಬಂಡೆಗಳು, ಐದು ಮುಳುಗಿದ ಕರಾವಳಿಗಳು ಮತ್ತು 10 ಜನವಸತಿ ದ್ವೀಪಗಳನ್ನು ಒಳಗೊಂಡಿದೆ. ಇದರ ರಾಜಧಾನಿ ಕವರಟ್ಟಿ. ಮಿನಿಕಾಯ್ ದ್ವೀಪವು ಲಕ್ಷದ್ವೀಪದ ಎರಡನೇ ದೊಡ್ಡ ದ್ವೀಪವಾಗಿದೆ.

ಮಿನಿಕಾಯ್ ದ್ವೀಪ : ಲಕ್ಷದ್ವೀಪಕ್ಕೆ ಹೋದವರು ಮಿನಿಕಾಯ್ ದ್ವೀಪಕ್ಕೆ ಹೋಗ್ಲೇಬೇಕು.  ಮಾಲ್ಡೀವ್ಸ್ ಗೆ ಸಮೀಪದಲ್ಲಿರುವ ಮಿನಿಕೋಯ್‌ನ ಸಂಸ್ಕೃತಿಯು ಲಕ್ಷದ್ವೀಪದಲ್ಲಿರುವ ಇತರ ದ್ವೀಪಕ್ಕಿಂತ ಬಹಳ ಭಿನ್ನವಾಗಿದೆ. 

ಮಿನಿಕಾಯ್ ದ್ವೀಪದಲ್ಲಿ ಭೇಟಿ ನೀಡಲು ಪ್ರವಾಸಿ ಸ್ಥಳಗಳು : ಮಿನಿಕಾಯ್ ದ್ವೀಪದಲ್ಲಿ ಭೇಟಿ ನೀಡಲು ಅನೇಕ ಸ್ಥಳಗಳಿವೆ. ಜಧೋನಿ ಬೋಟ್ ರೇಸಿಂಗ್, ಜುಮಾ ಮಸೀದಿಗೆ ನೀವು ಭೇಟಿ ನೀಡಬಹುದು. ಇದ್ರ ಜೊತೆ ಲಾವಾ ಸಾಂಪ್ರದಾಯಿಕ ನೃತ್ಯವನ್ನು ಆನಂದಿಸಬಹುದು. 1885 ರಲ್ಲಿ ನಿರ್ಮಿಸಲಾದ ಲೈಟ್ ಹೌಸ್ ನೋಡಲು ಮರೆಯದಿರಿ. ಮರಳಿನ ಕಡಲತೀರಗಳ ಉದ್ದಕ್ಕೂ ಸ್ವಲ್ಪ ದೂರ ಅಡ್ಡಾಡಬಹುದು. ಬೈಸಿಕಲ್ ಅನ್ನು ಬಾಡಿಗೆಗೆ ಪಡೆದು ನೀವು ಕಡಲತೀರವನ್ನು ಸುತ್ತಬಹುದು. ಸ್ಕೂಬಾ ಡೈವಿಂಗ್, ಕಯಾಕಿಂಗ್ ಅಥವಾ ಸ್ನಾರ್ಕ್ಲಿಂಗ್ ಕೂಡ ಇಲ್ಲಿ ವಿಶೇಷ.

ಮಿನಿಕಾಯ್ ದ್ವೀಪವನ್ನು ತಲುಪುವುದು ಹೇಗೆ ? :  
ಹಡಗಿನ ಮೂಲಕ :
ಮಿನಿಕಾಯ್ ತಿರುವನಂತಪುರದಿಂದ 398 ಕಿಮೀ ದೂರದಲ್ಲಿದೆ. ತಿರುವನಂತಪುರದಿಂದ ನೀವು ದ್ವೀಪಕ್ಕೆ ಹಡಗಿನ ಮೂಲಕ  ಹೋಗಬಹುದು.  

PHOTOGRAPHY TIPS : ಪ್ರವಾಸದಲ್ಲಿ ಫೋಟೋ ಚೆನ್ನಾಗಿ ಬರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ

ವಿಮಾನದ ಮೂಲಕ : ಲಕ್ಷದ್ವೀಪದಲ್ಲಿರುವ ಏಕೈಕ ನಾಗರಿಕ ವಿಮಾನ ನಿಲ್ದಾಣವೆಂದರೆ ಅಗತ್ತಿ. ಕೊಚ್ಚಿಯಿಂದ ಅಗತ್ತಿಗೆ ವಿಮಾನದ ಮೂಲಕ ನೀವು ಪ್ರಯಾಣ ಬೆಳೆಸಬಹುದು.  ಸುಮಾರು 1 ಗಂಟೆ 30 ನಿಮಿಷದ ಪ್ರಯಾಣ ಇದಾಗಿದೆ. 

ಮಿನಿಕಾಯ್ ದ್ವೀಪಕ್ಕೆ ಭೇಟಿ ನೀಡಲು ಉತ್ತಮ ಸಮಯ : ಮಿನಿಕಾಯ್ ದ್ವೀಪಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್‌ನಿಂದ ಮಾರ್ಚ್‌. ಈ ಸಮಯದಲ್ಲಿ ಅಲ್ಲಿನ ಹವಾಮಾನವು ತಂಪಾಗಿರುತ್ತದೆ.  ಆದರೆ ಬೇಸಿಗೆಯಲ್ಲಿ ಇಲ್ಲಿಗೆ ಹೋಗಲು ಪ್ಲಾನ್ ಮಾಡ್ಬೇಡಿ. ಯಾಕೆಂದ್ರೆ ಸೆಕೆ ಅಲ್ಲಿ ಹೆಚ್ಚಿರುತ್ತದೆ.

ಹಂಪಿ ಬಳಿ ತಲೆ ಎತ್ತಲಿದೆ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟೆಲ್!

ಮಿನಿಕಾಯ್ ದ್ವೀಪದಲ್ಲಿ ಎಲ್ಲಿ ಉಳಿಯಬೇಕು? : ದ್ವೀಪವು ಸುಂದರವಾದ ಪ್ರವಾಸಿ ತಾಣವಾಗಿದೆ.  ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಬೀಚ್ ಹೌಸ್ ಮತ್ತು ಹೋಟೆಲ್ ಅನ್ನು ಆಯ್ಕೆ ಮಾಡಬಹುದು. ಇಲ್ಲಿ ಸಾಕಷ್ಟು ವಸತಿ ಸೌಲಭ್ಯಗಳಿವೆ. ಮೊದಲೇ ಪ್ಲಾನ್ ಮಾಡಿ ಹೊಟೇಲ್ ಬುಕ್ ಮಾಡಿದ್ರೆ ಪ್ರಯಾಣ ಮತ್ತಷ್ಟು ಸುಖಕರವಾಗಿರುತ್ತದೆ.

 

Follow Us:
Download App:
  • android
  • ios