ಹಂಪಿ ಬಳಿ ತಲೆ ಎತ್ತಲಿದೆ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟೆಲ್!

* ಹಂಪಿ ಬಳಿ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟಲ್!
* ಪ್ರವಾಸೋದ್ಯಮ ಇಲಾಖೆಯಿಂದ ಹಂಪಿ‌ ಬಳಿ ತ್ರೀಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಚಾಲನೆ
* 100 ಸುಸಜ್ಜಿತ ಕೊಠಡಿಗಳು, ಜಿಮ್, ರೆಸ್ಟೋರೆಂಟ್, ಸ್ಪಾ,ಈಜುಕೋಳ ಸೇರಿ ಸಕಲ ಸೌಲಭ್ಯ  

Anand SIngh Lays Stone foundation To three star hotel Near hampi rbj

ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ, (ಏ.20):
 ಹೊಸಪೇಟೆಯನ್ನು‌ ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ವಿಜಯನಗರ ಜಿಲ್ಲೆ ಸ್ಥಾಪನೆ ಮಾಡಿದ್ದೇ ಬಂತು ಈ ಭಾಗದಲ್ಲಿ ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಅದರಲ್ಲಿ ಹಂಪಿಯ (Hampi) ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅತಿಹೆಚ್ಚು ಕಾಮಗಾರಿ ಮಾಡೋ ಮೂಲಕ ಪ್ರವಾಸಿಗರನ್ನು ಮತ್ತಷ್ಟು ಸೆಳೆಯೋ ಪ್ರಯತ್ನ ಮಾಡಲಾಗ್ತಿದೆ..

ಹಂಪಿ ಬಳಿ ತ್ರೀಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಚಾಲನೆ
Anand SIngh Lays Stone foundation To three star hotel Near hampi rbj

ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಸಮೀಪದ ಕಮಲಾಪುರದಲ್ಲಿ 28.20 ಕೋಟಿ ರೂ.ವೆಚ್ಚದಲ್ಲಿ ವಿಶ್ವದರ್ಜೆಯ ತ್ರೀಸ್ಟಾರ್ ಹೋಟಲ್(Three Star Hotel)  ನಿರ್ಮಾಣಕ್ಕೆ ಇಂದು(ಬುಧವಾರ) ಚಾಲನೆ ನೀಡಲಾಗಿದೆ.‌ ಇನ್ಮುಂದೆ ವಿಶ್ವಪರಂಪರೆಯ ತಾಣ ಹಾಗೂ ಅದರ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಆಗಮಿಸುವ ಜನರಿಗೆ ತಂಗುವ ಸಮಸ್ಯೆಗೆ ಇತಿಶ್ರೀ ಬಿಳಲಿದ್ದು, ಸಕಲ ಸೌಕರ್ಯವುಳ್ಳ ತ್ರಿಸ್ಟಾರ್ ಹೋಟಲ್ ಪ್ರವಾಸಿಗರಿಗೆ ಅವಶ್ಯಕತೆಗಳನ್ನು ಪೂರೈಸಲಿದೆ..

Vijayanagara: ಐತಿಹಾಸಿಕ ಹಂಪಿಯ ಸ್ಮಾರಕದ ಸೌಂದರ್ಯಕ್ಕೆ ಮನಸೋತ ಜೆಪಿ ನಡ್ಡಾ

ತ್ರೀಸ್ಟಾರ್ ಹೋಟೆಲ್ ನ ವಿಶೇಷತೆ
ಇನ್ನೂ ವಿಶ್ವದರ್ಜೆಯ ತ್ರಿಸ್ಟಾರ್ ಹೋಟಲ್‍ನಲ್ಲಿ 100 ಕೊಠಡಿಗಳಿರಲಿದ್ದು, ಅವುಗಳಲ್ಲಿ 96 ಡಿಲಕ್ಸ್ ಕೊಠಡಿಗಳು,4 ಸೂಟ್ ರೂಮ್ಸ್, ಪಾರ್ಕಿಂಗ್,ಜಿಮ್,ಓಪನ್ ರೆಸ್ಟೋರೆಂಟ್,ಸ್ಪಾ, ಈಜುಕೊಳ ಸೇರಿದಂತೆ ಇತರೆ ಸೌಲಭ್ಯಗಳು ಒಳಗೊಂಡಿರಲಿವೆ. ಕಮಲಾಪುರ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಜೂಯಲಾಜಿಕಲ್ ಪಾರ್ಕ್ ಹತ್ತಿರದ 15 ಎಕರೆ ಜಾಗದಲ್ಲಿ ಈ ವಿಶ್ವದರ್ಜೆಯ ತ್ರೀಸ್ಟಾರ್ ಹೋಟಲ್ ತಲೆಎತ್ತಲಿದೆ. ಕಟ್ಟಡ ನಿರ್ಮಾಣಕ್ಕೆ ಪ್ರವಾಸೋದ್ಯಮ,ಪರಿಸರ,ಜೀವಿ ಶಾಸ್ತ್ರ ಸಚಿವ ಆನಂದಸಿಂಗ್  ಶಂಕುಸ್ಥಾಪನೆ ನೆರವೇರಿಸಿದ್ದಾರೆ..

ಇನ್ನೂ ‌ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದಸಿಂಗ್ ಅವರು ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮತ್ತು ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಗೆ ಭೇಟಿ ನೀಡುವ ಪ್ರವಾಸಿಗರು, ತುಂಗಾಭದ್ರಾ ಅಣೆಕಟ್ಟು, ಆನೆಗುಂದಿ, ಅಂಜನಾದ್ರಿ ಬೆಟ್ಟ, ಪಂಪಸರೋವರ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಈ ತ್ರೀಸ್ಟಾರ್ ಹೋಟಲ್ ನಿರ್ಮಿಸಲಾಗ್ತಿದೆ. 12ರಿಂದ 18 ತಿಂಗಳೊಳಗೆ ಈ ತ್ರೀಸ್ಟಾರ್ ಹೋಟಲ್ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ನಾಲ್ಕು ಸ್ಥಳದಲ್ಲಿ ತ್ರಿಸ್ಟಾರ್ ಹೋಟೆಲ್‌ ನಿರ್ಮಾಣ
ರಾಜ್ಯದಲ್ಲಿ 4 ಸ್ಥಳಗಳಲ್ಲಿ ಒಟ್ಟಾರೆ ರೂ. 83.97 ಕೋಟಿಗಳ ಅಂದಾಜು ವೆಚ್ಚದಲ್ಲಿ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟೆಲ್ ನಿರ್ಮಾಣ ಮಾಡಲು ಸರ್ಕಾರವು ಅನುಮೋದನೆ ನೀಡಿದೆ. ಅದರಂತೆ 20.71 ಕೋಟಿ ರೂ. ವೆಚ್ಚದಲ್ಲಿ ಬೇಲೂರುನಲ್ಲಿ 75 ಕೊಠಡಿಗಳ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟೆಲ್ ನಿರ್ಮಾಣ, 18.32 ಕೋಟಿ ರೂ.ವೆಚ್ಚದಲ್ಲಿ ಬಾದಾಮಿಯಲ್ಲಿ 75 ಕೊಠಡಿಗಳ ತ್ರೀಸ್ಟಾರ್ ಹೋಟೆಲ್ ನಿರ್ಮಾಣ, 16.74 ಕೋಟಿ ವೆಚ್ಚದಲ್ಲಿ ವಿಜಯಪುರದಲ್ಲಿ 75 ಕೊಠಡಿಗಳ ತ್ರೀಸ್ಟಾರ್ ಹೋಟೆಲ್ ನಿರ್ಮಾಣ ಮತ್ತು ಹಂಪಿಯಲ್ಲಿ ರೂ.28.20 ಕೋಟಿ ವೆಚ್ಚದಲ್ಲಿ 100 ಕೊಠಡಿಗಳ ಸುಸಜ್ಜಿತ ತ್ರೀಸ್ಟಾರ್ ಹೋಟೆಲ್ ನಿರ್ಮಾಣ ನಿರ್ಮಾಣ ಮಾಡಲಾಗುತ್ತಿದೆ..

ಈಗಾಗಲೇ ಬಾದಾಮಿ, ಬೇಲೂರು ಮತ್ತು ವಿಜಯಪುರ ಪ್ರವಾಸಿ ತಾಣದಲ್ಲಿ 03 ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದೀಗ ಹಂಪಿಯಲ್ಲಿ ಹೋಟೆಲ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದು, ಇನ್ಮೂಂದೆ ಹಂಪಿಗೆ ಬರೋ ಪ್ರವಾಸಿಗರು ( ಸರ್ಕಾರದ ನಿಗದಿತ ವೆಚ್ಚದಲ್ಲಿ)  ತ್ರೀಸ್ಟಾರ್ ಹೋಟೆಲ್ ನಲ್ಲಿ ಎಂಜಾಯ್ ಮಾಡಬಹುದಾಗಿದೆ.

Latest Videos
Follow Us:
Download App:
  • android
  • ios