Photography Tips : ಪ್ರವಾಸದಲ್ಲಿ ಫೋಟೋ ಚೆನ್ನಾಗಿ ಬರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಪ್ರವಾಸಕ್ಕೆ (Travel) ಹೋದಾಗ ನಾವು ಅಲ್ಲಿನ ಸಣ್ಣ ಸಣ್ಣ ವಸ್ತುಗಳನ್ನು ಫೋಟೋ (Photo)ದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸ್ತೇವೆ. ಅನೇಕ ಬಾರಿ ಫೋಟೋ ಚೆನ್ನಾಗಿ ಬರೋದಿಲ್ಲ. ಕ್ಯಾಮರಾ (Camera) ಬೈತಾ ಮನೆಗೆ ಬರ್ತೇವೆ. ಆದ್ರೆ ಫೋಟೋ ಚೆನ್ನಾಗಿ ಬರ್ಬೇಕೆಂದ್ರೆ ಫೋಟೋ ಹೇಗೆ ತೆಗೆಯಬೇಕು ಎನ್ನೋದು ಗೊತ್ತಿರಬೇಕು.
ಪ್ರವಾಸ (Tour) ಕ್ಕೆ ಹೊರಟಾಗ ಅಗತ್ಯ ವಸ್ತುಗಳ ಜೊತೆ ನಾವು ಕ್ಯಾಮರಾ (Camera) ಮರೆಯೋದಿಲ್ಲ. ಇತ್ತೀಚಿನ ದಿನಗಳಲ್ಲಿ ಫೋನ್ (Phone) ಕೈನಲ್ಲಿರುವ ಕಾರಣ ಕ್ಯಾಮರಾ ಅಗತ್ಯತೆ ಕಡಿಮೆಯಾಗಿದೆ. ಅದೇನೇ ಇರಲಿ, ಹೊಸ ಸ್ಥಳಕ್ಕೆ ಹೋದಾಗ ಹೊಸ ಸ್ಥಳ ವೀಕ್ಷಿಸಲು ಜನರು ಎಷ್ಟು ಉತ್ಸುಕರಾಗುತ್ತಾರೆಯೋ ಅಷ್ಟೇ ಕ್ಯಾಮೆರಾಗಳಲ್ಲಿ ಫೋಟೋ (Photo) ಗಳನ್ನು ಸೆರೆ ಹಿಡಿಯಲು ತುದಿಕಾಲಿನಲ್ಲಿ ನಿಂತಿರುತ್ತಾರೆ. ಸುಂದರ ಸ್ಥಳ (Lovely place) ಹಾಗೂ ಅಲ್ಲಿ ಕಳೆದ ನೆನಪುಗಳು ಸದಾ ಹಸಿರಾಗಿರಲು ಫೋಟೋಗಳು ನೆರವಾಗುತ್ತವೆ. ಪ್ರಯಾಣದ ಆರಂಭದಿಂದ ಹಿಡಿದು ಹೋಟೆಲ್ (Hotel) ಕೊಠಡಿಗಳು, ಮಾರುಕಟ್ಟೆ (Market) ಗಳು, ರೆಸ್ಟೊರೆಂಟ್ (Restaurant)ಗಳು ಇತ್ಯಾದಿ ಎಲ್ಲೇ ಹೋದರೂ ತಮ್ಮ ಕ್ಯಾಮೆರಾಗಳಲ್ಲಿ ಅಲ್ಲಿನ ಪರಿಸರವನ್ನು ಸೆರೆಹಿಡಿಯಲು ಜನರು ಇಷ್ಟಪಡುತ್ತಾರೆ. ಗಮ್ಯಸ್ಥಾನ ಸುಂದರವಾಗಿದ್ದರೆ ಮಜಾ ದುಪ್ಪಟ್ಟಾಗುತ್ತದೆ. ಎತ್ತರದ ಪರ್ವತ, ಹಿಮಭರಿತ ಸ್ಥಳ, ಮರಳುಗಾಡು, ಸಮುದ್ರ (sea) ತೀರ ಹೀಗೆ ಪ್ರಕೃತಿಯ ಸುಂದರ ಪ್ರದೇಶಗಳಲ್ಲಿ ಜನರು ಫೋಟೋ ಕ್ಲಿಕ್ಕಿಸುತ್ತಾರೆ.
ನೀವೂ ಪ್ರಯಾಣದ ವೇಳೆ ಫೋಟೋಗ್ರಾಫಿ (Photography) ಇಷ್ಟಪಡುವವರಾಗಿದ್ದರೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಫೋಟೋಗಳು ಸುಂದರವಾಗಿ ಬರಬೇಕು ಹಾಗೆ ಎಲ್ಲರ ಗಮನ ಸೆಳೆಯಬೇಕೆಂದ್ರೆ ನೀವು ಫೋಟೋ ಕ್ಲಿಕ್ಕಿಸುವಾಗ ಕೆಲವು ಸೂಕ್ಷ್ಮ ವಿಷ್ಯಗಳನ್ನು ಗಮನಿಸಬೇಕು. ಯಾವುದೇ ಕ್ಯಾಮರಾದಲ್ಲಿ ತೆಗೆದ್ರೂ ಆಗ ಫೋಟೋ ಅಧ್ಬುತವಾಗಿ ಬರುತ್ತದೆ.
ರಾಜಸ್ಥಾನದಲ್ಲೊಂದು ನಿಗೂಢ ತಾಣ; ರಾತ್ರೋರಾತ್ರಿ ಊರಿಗೂರೇ ಖಾಲಿ!
ಫೋಟೋ ತೆಗೆಯುವಾಗ ಇದು ನೆನಪಿನಲ್ಲಿರಲಿ :
ಬೆಳಕಿನ ಮೇಲೆ ಕೇಂದ್ರೀಕರಿಸಿ : ಫೋಟೋ ಹೊಡೆಯುವ ಮುನ್ನ ಬೆಳಕಿನ ಬಗ್ಗೆ ಗಮನವಿರಲಿ. ಕ್ಯಾಮೆರಾವನ್ನು ನೇರ ಸೂರ್ಯನ ಬೆಳಕಿನ ಕಡೆಗೆ ಬರುವಂತಿಟ್ಟು ಫೋಟೋವನ್ನು ಕ್ಲಿಕ್ ಮಾಡಬೇಡಿ. ಇದರಿಂದಾಗಿ ಫೋಟೋ ಸರಿಯಾಗಿ ಬರುವುದಿಲ್ಲ. ಕ್ಯಾಮರಾವನ್ನು ಸರಿಯಾದ ಬೆಳಕಿಗೆ ಹೊಂದಿಸಿ ಫೋಟೋ ಕ್ಲಿಕ್ಕಿಸಿ. ಫೋಟೋ ಹೊಡೆಯುವ ಮುನ್ನ ಎಲ್ಲಿ ಫೋಟೋ ಹೊಡೆದ್ರೆ ಸೂಕ್ತವೆಂಬುದನ್ನು ಗಮನಿಸಿ.
ಕ್ಲೋಸ್ ಅಪ್ ಫೋಟೋ : ಕ್ಲೋಸ್ಅಪ್ ಫೋಟೋವನ್ನು ಕ್ಲಿಕ್ಕಿಸುವವರಿದ್ದರೆ ಯಾವ ವಸ್ತು ಕ್ಲೋಸ್ ಅಪ್ ಬೇಕೋ ಅದನ್ನು ಕ್ಯಾಮರಾದಲ್ಲಿ ಕೇಂದ್ರೀಕರಿಸಿ. ಕ್ಲೋಸ್ ಅಪ್ ಫೋಟೋಗಳಿಗಾಗಿ ಆ ವಸ್ತುವಿನಿಂದ ಕ್ಯಾಮರಾವನ್ನು ಹೆಚ್ಚು ಅಂತರದಲ್ಲಿ ಇಟ್ಟುಕೊಳ್ಳಬೇಡಿ. ಹಾಗೆ ಮಾಡಿದಾಗ ಕ್ಲೋಸ್ ಅಪ್ ಗಾಗಿ ಜೂಮ್ ಮಾಡ್ಬೇಕು. ಜೂಮ್ ಮಾಡಿದಾಗ ಫೋಟೋ ಸುಂದರವಾಗಿ ಬರುವುದಿಲ್ಲ.
ಮೋಡ್ ಬದಲಿಸಿ : ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನ ಕ್ಯಾಮೆರಾದಲ್ಲಿ ಹಲವು ರೀತಿಯ ಫೀಚರ್‌ಗಳು ಬಂದಿವೆ. ಅದರ ಮೂಲಕ ನೀವು ಹೆಚ್ಚು ಸುಂದರವಾದ ಎಂಗಲ್ ನಲ್ಲಿ ಫೋಟೋವನ್ನು ಕ್ಲಿಕ್ ಮಾಡಬಹುದು. ಮೊಬೈಲ್ ಡೀಫಾಲ್ಟ್ ಮೋಡ್ ಸೆಟ್ಟಿಂಗ್ ಇರುತ್ತದೆ. ಫೋಟೋವನ್ನು ಕ್ಲಿಕ್ ಮಾಡುವಾಗ, ಮೋಡ್ ಅನ್ನು ಬದಲಾಯಿಸಿ ಮತ್ತು ಯಾವ ಮೋಡ್‌ನಲ್ಲಿ ಫೋಟೋ ಉತ್ತಮವಾಗಿ ಬರುತ್ತದೆ ಎಂಬುದನ್ನು ಪರಿಶೀಲಿಸಿ.
ಅಪ್ಲಿಕೇಶನ್ ಬಳಸುವುದನ್ನು ತಪ್ಪಿಸಿ : ಮೊಬೈಲ್‌ನಿಂದ ಫೋಟೋಗಳನ್ನು ಕ್ಲಿಕ್ ಮಾಡುವಾಗ, ಜನರು ಸಾಮಾನ್ಯವಾಗಿ ಫಿಲ್ಟರ್‌ಗಳಿಗಾಗಿ ವಿವಿಧ ರೀತಿಯ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದರೆ ಫೋಟೋ ಕ್ಲಿಕ್ಕಿಸುವಾಗ ಸಾಮಾನ್ಯ ಕ್ಯಾಮೆರಾವನ್ನೇ ಬಳಸಿ. ಅಪ್ಲಿಕೇಶನ್‌ನಿಂದ ಫೋಟೋ ಸ್ವಾಭಾವಿಕವಾಗಿ ಬರುವುದಿಲ್ಲ. ಫಿಲ್ಟರ್‌ನೊಂದಿಗೆ ಫೋಟೋದಲ್ಲಿ ಬದಲಾವಣೆಗಳನ್ನು ಮಾಡುವುದು ಕಷ್ಟ. ಆದರೆ ನಂತರ ನೀವು ನೈಸರ್ಗಿಕ ಫೋಟೋವನ್ನು ಹಲವು ರೀತಿಯಲ್ಲಿ ಫಿಲ್ಟರ್ ಮಾಡಬಹುದು.
ಹಂಪಿ ಬಳಿ ತಲೆ ಎತ್ತಲಿದೆ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟೆಲ್!
ಟ್ರೈಪಾಡ್ ತೆಗೆದುಕೊಳ್ಳಿ : ನೀವು ಪ್ರವಾಸಕ್ಕೆ ಹೋಗುತ್ತಿದ್ದರೆ, ನಿಮ್ಮೊಂದಿಗೆ ಟ್ರೈಪಾಡ್ ಸಹ ತೆಗೆದುಕೊಂಡು ಹೋಗಬಹುದು. ಫೋಟೋ ಕ್ಲಿಕ್ಕಿಸುವಾಗ ಅನೇಕರ ಕೈಗಳು ನಡುಗುತ್ತವೆ. ಕೈ ನಡುಗಿದಾಗ ಫೋಟೋ ಅಸ್ಪಷ್ಟವಾಗಿ ಬರುತ್ತದೆ. ಆದರೆ ಟ್ರೈಪಾಡ್ ಬಳಕೆಯಿಂದ ನೀವು ಸರಿಯಾದ ಎಂಗಲ್ ನಲ್ಲಿ ಫೋಟೋವನ್ನು ನಿಖರವಾಗಿ ಕ್ಲಿಕ್ ಮಾಡಬಹುದು.