ನಿಗದಿತ ನಿಲ್ದಾಣದಲ್ಲಿ ರೈಲು ನಿಲ್ಲಿಸಲು ಮರೆತ ಲೋಕೋ ಪೈಲಟ್‌, ಆಮೇಲೆ ಏನಾಯ್ತು?

ಮರೆವು ಎಲ್ಲರಿಗೂ ಸಾಮಾನ್ಯ ಬಿಡಿ. ಆದ್ರೆ ರೈಲಿನ ಲೋಕೋ ಪೈಲಟ್‌ ಮರೆತುಬಿಟ್ರೆ ಏನಾಗ್ಬೋದು. ನಿಗದಿತ ನಿಲುಗಡೆಯಲ್ಲಿ ನಿಲ್ಲಿಸದೆ ರೈಲೊಂದು ಸುಮಾರು 1 ಕಿಲೋ ಮೀಟರ್‌ಗಳಷ್ಟು ಮುಂದಕ್ಕೆ ಹೋಗಿ ಆ ನಂತರ ಹಿಂದಕ್ಕೆ ಬಂದು ಪ್ರಯಾಣಿಕರುನ್ನು ಕರೆದುಕೊಂಡ ಹೋದ ಘಟನೆ ಕೇರಳದಲ್ಲಿ ನಡೆದಿದೆ.

Kerala Passenger Train Misses Small Station, Reverses Back Over 500 Metres Vin

ತಿರುವನಂತಪುರ: ನಿಗದಿತ ನಿಲುಗಡೆಯಲ್ಲಿ ನಿಲ್ಲಿಸದೆ ರೈಲೊಂದು ಸುಮಾರು 1 ಕಿಲೋ ಮೀಟರ್‌ಗಳಷ್ಟು ಮುಂದಕ್ಕೆ ಹೋಗಿ ಆ ನಂತರ ಹಿಂದಕ್ಕೆ ಬಂದು ಪ್ರಯಾಣಿಕರುನ್ನು ಕರೆದುಕೊಂಡ ಹೋದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದಲ್ಲಿ ಎಕ್ಸ್‌ಪ್ರೆಸ್ ರೈಲು ತನ್ನ ಪ್ರಯಾಣಿಕರನ್ನು ಕರೆದೊಯ್ಯಲು ಸುಮಾರು 700 ಮೀಟರ್ ಹಿಂದಕ್ಕೆ ಚಲಿಸಿದೆ. ಕೇರಳದ ಅಲಪ್ಪುಳ ಜಿಲ್ಲೆಯಿಂದ ಈ ಘಟನೆ ವರದಿಯಾಗಿದೆ ಶೊರ್ನೂರ್ ಗೆ ತೆರಳುತ್ತಿದ್ದ ವೆನಾಡ್ ಎಕ್ಸ್ ಪ್ರೆಸ್ ನ ಲೋಕೋ ಪೈಲಟ್ ಚೆರಿಯನಾಡ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲದೇ ಮುಂದೆ ಹೋದಾಗ ಈ ಘಟನೆ ನಡೆದಿದೆ.

ಸಿಗ್ನಲ್ ಕೊರತೆಯಿಂದ ಸಮಸ್ಯೆ
ಚೆರಿಯನಾಡ್ ರೈಲ್ವೆ ನಿಲ್ದಾಣದಲ್ಲಿ ಸಿಗ್ನಲ್ ಕೊರತೆಯಿಂದ ಈ ಸಮಸ್ಯೆ ಉಂಟಾಯಿತು ಎಂದು ರೈಲ್ವೆ ಅಧಿಕಾರಿಗಳು ((Railway officer) ತಿಳಿಸಿದ್ದಾರೆ. ಚೆರಿಯನಾಡ್  ಹಾಲ್ಟ್ ಸ್ಟೇಷನ್ ಆಗಿರುವುದರಿಂದ ಇಲ್ಲಿ ಸಿಗ್ನಲ್ ಅಳವಡಿಸಿರಲ್ಲಿಲ್ಲ. ನಿಗದಿತ ನಿಲ್ದಾಣದಲ್ಲಿ (Railway station) ನಿಲ್ಲದೇ ಹೋದ ಅರಿತ ಲೋಕೋ ಪೈಲಟ್ ರೈಲನ್ನು ಹತ್ತಲು ಕಾಯುತ್ತಿದ್ದ ಪ್ರಯಾಣಿಕರನ್ನು ಕರೆದೊಯ್ಯಲು ಸುಮಾರು 700 ಮೀಟರ್ ವರೆಗೆ ರೈಲನ್ನು ಹಿಮ್ಮುಖ ಚಲಿಸಿ ತೆಗೆದುಕೊಂಡು ಬಂದರು. ಇದು ಸೋಮವಾರ ಬೆಳಿಗ್ಗೆ 7:45ರ ಸುಮಾರಿಗೆ ನಡೆಯಿತು ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಚೆರಿಯನಾಡ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು (Passengers) ಈ ವಿಷಯದ ಬಗ್ಗೆ ಯಾವುದೇ ದೂರುಗಳನ್ನು ನೀಡಿಲ್ಲ ಎನ್ನಲಾಗಿದೆ. ಚೆರಿಯನಾಡ್ ಮಾವೇಲಿಕರ್ರಾ ಮತ್ತು ಚೆನಗನೂರು ನಿಲ್ದಾಣಗಳ ನಡುವಿನ ಡಿ-ಗ್ರೇಡ್ ನಿಲ್ದಾಣವಾಗಿದೆ.

Foreign Trip ಮಾಡಬೇಕಾ? ರೈಲಲ್ಲೇ ಭೇಟಿ ನೀಡಬಹುದು ಈ ದೇಶಗಳಿಗೆ!

ದಿನವೂ ಲೋಕಲ್ ರೈಲಲ್ಲಿ ಸಂಚರಿಸುವ ಶ್ವಾನ: ವೀಡಿಯೋ ವೈರಲ್
ಮೆಟ್ರೋ ಸಿಟಿಗಳಲ್ಲಿ ವಾಸವಿರುವವರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಮೆಟ್ರೋ ರೈಲುಗಳಲ್ಲಿ, ಲೋಕಲ್‌ ರೈಲುಗಳಲ್ಲಿ ಸಂಚರಿಸುವುದು ಸಾಮಾನ್ಯ. ಲಕ್ಷಾಂತರ ಜನ ತಮ್ಮ ದೈನಂದಿನ ಪ್ರಯಾಣಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ ಬೀದಿ ನಾಯಿಯೊಂದು ದಿನವೂ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದರೆ ನೀವು ನಂಬುವಿರಾ ನಂಬಲೇಬೇಕು. ಇಂಡಿಯನ್ ಕಲ್ಚರ್ ಕ್ಲಬ್ ಎಂಬ ಇನ್ಸ್ಟಾಗ್ರಾಮ್‌ನ ಪೇಜ್‌ನಿಂದ ಈ ವಿಶೇಷ ವೀಡಿಯೋವೊಂದು ಅಪ್‌ಲೋಡ್‌ ಆಗಿದ್ದು, ಶ್ವಾನವೊಂದು ಪ್ರತಿದಿನವೂ ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತದೆಯಂತೆ.

ಮುಂಬೈನ ಲೋಕಲ್ ಟ್ರೈನ್‌ನಲ್ಲಿ (Mumbai Local Train) ದಿನವೂ ಪ್ರಯಾಣಿಸುವ ಪ್ರಯಾಣಿಕನ ಭೇಟಿಯಾಗಿ ಎಂದು ಬರೆದು ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ವೀಡಿಯೋದಲ್ಲಿ ಶ್ವಾನವೂ ರೈಲು ಏರಿ ರೈಲಿನಲ್ಲಿ ಕುಳಿತು ಪ್ರಯಾಣಿಸಿ ಮತ್ತೊಂದೆಡೆ ಇಳಿಯುವ ದೃಶ್ಯವಿದೆ. ಅವರು ,ಮುಂಬೈನ ಬೊರಿವಲಿ (Borivali) ಲೋಕಲ್‌ನಿಂದ ದಿನವೂ ಪ್ರಯಾಣಿಸುವ ಪ್ರಯಾಣಿಕ ಈತನಾಗಿದ್ದು, ಅಂಧೇರಿಯಲ್ಲಿ ರೈಲಿನಿಂದ ಇಳಿಯುತ್ತಾನೆ. ನಂತರ ಸಂಜೆ ಮತ್ತೆ ತನ್ನ ಮೂಲ ಪ್ರದೇಶ ಬೊರಿವಲಿಗೆ ತೆರಳುತ್ತಾನೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಾಯಿಯ ಈ ವರ್ತನೆ ಅಚ್ಚರಿ ಮೂಡಿಸಿದೆ. 

ಬೇಸಿಗೆ ದಟ್ಟಣೆ ತಪ್ಪಿಸಲು ವಿಶೇಷ ರೈಲು ಘೋಷಿಸಿದ ಭಾರತೀಯ ರೈಲ್ವೆ, ಕರ್ನಾಟಕಕ್ಕೆ ಅತೀ ಹೆಚ್ಚು!

ಇನ್ನು ರೈಲೊಳಗೆ ಬರುವ ಪ್ರಯಾಣಿಕರು ಕೂಡ ನಾಯಿ (Dog) ಇದೆ ಎಂದು ಅಂಜದೇ ಸಾಮಾನ್ಯ ಎಂಬಂತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ವೀಡಿಯೋ ನೋಡಿದ ಒಬ್ಬರು ಹೌದು ಇದು ನಿಜ ನಾನು ಈ ಶ್ವಾನವನ್ನು ರೈಲಿನಲ್ಲಿ ಗಮನಿಸಿದ್ದೇನೆ. ಆತ ರಾತ್ರಿ ಮತ್ತೆ ರೈಲಿನಲ್ಲಿ ಮರಳುತ್ತಾನೆ. ಎಂಥಾ ಸ್ಮಾರ್ಟ್ ಹುಡುಗ ಅವನು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆತ ಯಾವ ರೈಲಿನಲ್ಲಿ ಪ್ರಯಾಣಿಸುತ್ತಾನೆ. ಯಾವ ಸಮಯದಲ್ಲಿ ಪ್ರಯಾಣಿಸುತ್ತಾನೆ. ನನಗೂ ಆತನನ್ನು ಭೇಟಿಯಾಗುವ ಆಸೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios