ವಿಶ್ವದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಕರ್ನಾಟಕದ ಈ ಜಿಲ್ಲೆಗೆ ಸಿಕ್ತು ಸ್ಥಾನ
ಹಚ್ಚ ಹಸಿರಿನ ಕಾಡುಗಳು, ಧುಮ್ಮಿಕ್ಕಿ ಹರಿಯುವ ತೊರೆಗಳು, ನಿಸರ್ಗ ಧಾಮಗಳು, ಹಸಿರು ಬೆಟ್ಟಗಳು. ಹೀಗೆ ಭೂಲೋಕದ ಸ್ವರ್ಗದಂತೆ ಕೊಡಗು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಕರ್ನಾಟಕದ ಸ್ಕಾಟ್ಲೆಂಡ್ ಎಂದೇ ಕರೆಯಲ್ಪಡುವ ಈ ಸ್ಥಳವೀಗ ಹೊಸ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೊಡಗು: ಕರ್ನಾಟಕದ ಸ್ಕಾಟ್ಲೆಂಡ್ ಎಂದೇ ಕರೆಯಲ್ಪಡುವ ಸ್ಥಳ ಕೊಡಗು. ಹಚ್ಚ ಹಸಿರಿನ ಭೂಮಿ, ಧುಮ್ಮಿಕ್ಕುವ ಜಲಪಾತಗಳು, ನಿಸರ್ಗಧಾಮಗಳು ಎಂಥವರನ್ನೂ ಸೆಳೆಯುತ್ತದೆ. ಇಲ್ಲಿಯ ಸುಂದರ ಪ್ರವಾಸಿ ತಾಣಗಳು ಕೇವಲ ಇತರ ರಾಜ್ಯದ ಜನರನ್ನು ಮಾತ್ರವಲ್ಲ ವಿದೇಶಿಗರನ್ನೂ ಇಲ್ಲಿಗೆ ಸೂಜಿಗಲ್ಲಿನಂತೆ ಸೆಳೆಯುವಂತೆ ಮಾಡುತ್ತದೆ. ಕರ್ನಾಟಕದ ಈ ಕಾಶ್ಮೀರಕ್ಕೆ ಇನ್ನೊಂದು ಹೆಗ್ಗಳಿಕೆಯ ವಿಷಯವೆಂದರೆ, ವಿಶ್ವದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಕೊಡಗು, 7ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಮನ್ನಣೆಯು ಜಿಲ್ಲೆಯ ಅತ್ಯದ್ಭುತ ನೈಸರ್ಗಿಕ ಸೌಂದರ್ಯ ಮತ್ತು ಜನಪ್ರಿಯ ಆಕರ್ಷಣೆಗಳಿಗೆ ಸಾಕ್ಷಿಯಾಗಿದೆ.
ಜಾಗತಿಕ ಪ್ರವಾಸಿತಾಣಗಳ ಪಟ್ಟಿಯಲ್ಲಿ ಗೋವಾ, ಬಾಲಿ, ಶ್ರೀಲಂಕಾ, ಥೈಲ್ಯಾಂಡ್, ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್, ಇಟಲಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂಥಾ ಪ್ರಸಿದ್ಧ ಸ್ಥಳಗಳ ಹೆಸರಿದೆ. ಈ ಪಟ್ಟಿಯಲ್ಲಿ ಕೊಡಗು ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಮಾತ್ರವಲ್ಲ, 2023ರಲ್ಲಿ, ಜಿಲ್ಲೆಯು ಭಾರತೀಯರಿಂದ ಹೆಚ್ಚು ಹುಡುಕಲ್ಪಟ್ಟ ಪ್ರವಾಸಿ ತಾಣಗಳಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಗೋವಾ 2ನೇ ಸ್ಥಾನದಲ್ಲಿದೆ. ಕಾಶ್ಮೀರ 6ನೇ ಸ್ಥಾನದಲ್ಲಿದೆ.
ಲಾಸ್ಟ್ ಮಿನಿಟ್ ಟ್ರಿಪ್ ಪ್ಲಾನ್ ಮಾಡೋರು ನೀವಾಗಿದ್ರೆ, ಬೆಂಗಳೂರಿಗೆ ಹತ್ತಿರ ಇರೋ ಈ ಲೊಕೇಶನ್ಸ್ ಬೆಸ್ಟ್
ಕೊಡಗಿನ ಆಕರ್ಷಕ ದೃಶ್ಯಾವಳಿಗಳು, ಹಚ್ಚ ಹಸಿರಿನ ಕಾಡುಗಳು ಮತ್ತು ಧುಮ್ಮಿಕ್ಕಿ ಹರಿಯುವ ತೊರೆಗಳು, ಹಸಿರು ಬೆಟ್ಟಗಳು ಮಳೆಗಾಲದಲ್ಲಿ, ಚಳಿಗಾಲದಲ್ಲಿ ಅದ್ಭುತಲೋಕವಾಗಿ ರೂಪಾಂತರಗೊಳ್ಳುತ್ತದೆ. ದೂರ ದೂರದ ಊರಿನಿಂದಲೂ ಪ್ರವಾಸಿಗರನ್ನು ಸೆಳೆಯುತ್ತದೆ. ಹೀಗಾಗಿಯೇ ಕರ್ನಾಟಕದ ಈ ಜಿಲ್ಲೆಯನ್ನು ಜಾಗತಿಕವಾಗಿ ಗುರುತಿಸಿರುವುದು ಎಲ್ಲರಿಗೂ ಹೆಮ್ಮೆಯನ್ನುಂಟು ಮಾಡಿದೆ.
18ಕ್ಕೂ ಹೆಚ್ಚು ಜನಪ್ರಿಯ ಪ್ರವಾಸಿ ತಾಣಗಳಿರುವ ಕೊಡಗು
ಮಡಿಕೇರಿಯ ರಾಜಾಸೀಟ್, ಅಬ್ಬಿಫಾಲ್ಸ್, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಶಿಬಿರ, ಇರ್ಪುಫಾಲ್ಸ್‌ನಂತಹ 18ಕ್ಕೂ ಹೆಚ್ಚು ಪ್ರಮುಖ ಪ್ರವಾಸಿ ತಾಣಗಳು ಕೊಡಗು ಜಿಲ್ಲೆಯಲ್ಲಿದೆ. ಹೀಗಾಗಿಯೇ ಇಲ್ಲಿಗೆ ಹೆಚ್ಚಿನ ಸಂಖೈಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮಂಜಿನ ನಗರಿಗೆ ಭೇಟಿ ನೀಡುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ರಸ್ತೆಯೇ ಇಲ್ಲದ ಊರಿದು, ಓಡಾಡಬೇಕು ಅಂದ್ರೆ ದೋಣಿಯೇ ನಿಮಗಿರೋ ಆಯ್ಕೆ!
ಮಂಜಿನ ನಗರಿಯ ಕುರಿತು ಹೆಚ್ಚಿದ ಗೂಗಲ್ ಹುಡುಕಾಟ
ಜಿಲ್ಲೆಯು 4 ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳು ಮತ್ತು 1000 ರೆಸಾರ್ಟ್‌ಗಳನ್ನು ಹೊಂದಿದೆ., ಇವೆಲ್ಲವೂ ವರ್ಷಾಂತ್ಯದಲ್ಲಿ ಚಟುವಟಿಕೆಯಿಂದ ಕೂಡಿರುತ್ತದೆ. ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ವರ್ಷಾಂತ್ಯದ ಹಬ್ಬದ ಸಮಯದಲ್ಲಿ ಪ್ರವಾಸಿಗರು ಹೆಚ್ಚಾಗುತ್ತಿರುವುದು ಜಿಲ್ಲೆಯ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಒತ್ತಿಹೇಳುತ್ತದೆ ಎಂದು ಹೇಳಿದರು.
ಕೊಡಗಿನ ಪ್ರವಾಸೋದ್ಯಮ ಇಲಾಖೆಯು ಮಡಿಕೇರಿಯಲ್ಲಿನ ರಾಜಾಸೀಟಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ ಎಂದು ತಿಳಿಸಿದೆ. ನಿಸರ್ಗಧಾಮ ಮತ್ತು ದುಬಾರೆ ಪ್ರಮುಖ ಆಕರ್ಷಣೆಯಾಗಿದೆ. ಕೊಡಗಿನ ಪ್ರವಾಸಿ ತಾಣಗಳಿಗಾಗಿ ಗೂಗಲ್ ಹುಡುಕಾಟದ ಹೆಚ್ಚಳವು ಜಿಲ್ಲೆಯ ಕುರಿತಾಗಿ ಜನರಿಗೆ ಇರುವ ಆಕರ್ಷಣೆಯನ್ನು ಪ್ರತಿಬಿಂಬಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಬಳಕೆದಾರ ಸ್ನೇಹಿ ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ನಡೆಯುತ್ತಿವೆ, ಈ ಸೈಟ್‌ಗಳು ಪ್ರವಾಸಿಗರಿಗೆ ಸುಲಭವಾಗಿ ಮಾಹಿತಿ ದೊರಕುವಂತೆ ಮಾಡುತ್ತದೆ.