ರಸ್ತೆಯೇ ಇಲ್ಲದ ಊರಿದು, ಓಡಾಡಬೇಕು ಅಂದ್ರೆ ದೋಣಿಯೇ ನಿಮಗಿರೋ ಆಯ್ಕೆ!
ವಾಹನ ಸಂಚಾರ ಹೆಚ್ಚಾದಂತೆ ಪರಿಸರ ಮಾಲಿನ್ಯ ಡಬಲ್ ಆಗುತ್ತೆ. ಮಾಲಿನ್ಯ ನಿಯಂತ್ರಣಕ್ಕೆ ನಮ್ಮಲ್ಲಿ ನಾನಾ ಕಸರತ್ತು ನಡೆಯುತ್ತಿದೆ. ಈ ಮಧ್ಯೆ ಯಾವುದೇ ವಾಹನ ಸದ್ದಿಲ್ಲದೆ, ಮಾಲಿನ್ಯವಿಲ್ಲದೆ ಇರುವ ಸುಂದರ ಗ್ರಾಮವೊಂದು ಎಲ್ಲರ ಗಮನ ಸೆಳೆಯುತ್ತದೆ. ಅಲ್ಲಿ ರಸ್ತೆಗಳೇ ಇಲ್ಲ.
ನಮ್ಮಲ್ಲಿ ಅದೆಷ್ಟೋ ರಸ್ತೆ ಅಪಘಾತಗಳು, ಅಸ್ತವ್ಯಸ್ತ ರಸ್ತೆಯಿಂದ ಆಗುತ್ವೆ. ಯಾವ ರಸ್ತೆ ಸರಿ ಇದೆ ಎಂಬುದನ್ನು ಮೊದಲು ಚೆಕ್ ಮಾಡಿ ನಂತ್ರ ನಾವು ದೂರದ ಪ್ರವಾಸಕ್ಕೆ ಕಾರ್ ಹತ್ತುತ್ತೇವೆ. ಅದರಂತೆ ನೀವು ನಿಮ್ಮ ವಾಹನ ಏರಿದ್ದು, ನಿಮ್ಮ ಮುಂದೆ ಒಂದೇ ಒಂದು ರಸ್ತೆ ಕಾಣ್ತಿಲ್ಲ ಅಂದ್ರೆ ಹೇಗಾಗ್ಬೇಡ? ರಸ್ತೆ ಬದಲು ನದಿ, ಕಾಲುವೆಗಳೇ ಕಾಣಿಸಿಕೊಂಡ್ರೆ ನೀವು ಏನು ಮಾಡ್ತೀರಾ? ನದಿಯಲ್ಲಿ ಕಾರ್ ಹೇಗೆ ಓಡಿಸೋದು ಎನ್ನುವ ಚಿಂತೆಗೆ ಬೀಳ್ತಿರಾ. ನಮ್ಮ ದೇಶದಲ್ಲೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾದ ನದಿ ದಾಟುವ ಅನಿವಾರ್ಯತೆ ಇರುವ ಕೆಲ ಹಳ್ಳಿಗಳಿವೆ. ಆದ್ರೆ ಹಳ್ಳಿ ಒಳಗೆ ರಸ್ತೆಗಳಿರುತ್ತವೆ. ಆದ್ರೆ ಈಗ ನಾವು ಹೇಳ್ತಿರೋ ಜಾಗದಲ್ಲಿ ರಸ್ತೆ ಎಂಬುದೇ ಇಲ್ಲ. ಬರೀ ನೀರು. ಯಸ್. ಅಚ್ಚರಿ ಎನ್ನಿಸಿದ್ರೂ ಇದು ಸತ್ಯ. ಬರೀ ನೀರಿರುವ, ನೀರಿನಲ್ಲೇ ಓಡಾಡಬೇಕಾದ ಅನಿವಾರ್ಯತೆ ಇರುವ, ಪರಿಸರ ಸ್ನೇಹಿ ಆ ಊರಿನ ಬಗ್ಗೆ ಮಾಹಿತಿ ಇಲ್ಲಿದೆ.
ರಸ್ತೆ (Road) ಗಳಿಲ್ಲದ ಊರು ಇದು : ಈಗ ನಾವು ಹೇಳ್ತಿರೋ ಊರು ನೆದರ್ಲ್ಯಾಂಡ್ಸ್‌ನಲ್ಲಿದೆ. ನೆದರ್‌ಲ್ಯಾಂಡ್ (Netherland) ನ ಗಿಥೂರ್ನ್ (Giethoorn) ಎಂಬ ಸಣ್ಣ ಹಳ್ಳಿಯಲ್ಲೇ ನೀವು ರಸ್ತೆ ಕಾಣಲು ಸಾಧ್ಯವಿಲ್ಲ. ಈ ಗ್ರಾಮ ತುಂಬಾ ಸುಂದರವಾಗಿದ್ದು, ಪರಿಸರ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದ್ರೆ ವಾಪಸ್ ಬರುವ ಮನಸ್ಸಾಗೋದಿಲ್ಲ. ಇಲ್ಲಿ ಕಾಲುವೆಗಳು ಮತ್ತು ಕೆರೆಗಳ ನೀರು ತುಂಬಿರುವ ಕಾರಣ, ಜನರು ತಮ್ಮ ಎಲ್ಲಾ ಕೆಲಸವನ್ನು ದೋಣಿಗಳ (Boat) ಮೂಲಕ ಮಾಡುತ್ತಾರೆ. ಅಚ್ಚರಿಯ ವಿಷಯವೆಂದರೆ ಇಲ್ಲಿ ವಾಸಿಸುವ ಜನರಿಗೆ ರಸ್ತೆಗಳ ಆಸೆಯೇ ಇಲ್ಲ. ರಸ್ತೆ ಇಲ್ಲದ ಕಾರಣ ನಿಮಗೆ ಬೈಕ್, ಕಾರು ಸೇರಿದಂತೆ ಯಾವುದೇ ವಾಹನ ಕಾಣಸಿಗೋದಿಲ್ಲ. ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ದೋಣಿಯನ್ನೇ ಆಶ್ರಯಿಸಬೇಕು. ಈ ಸ್ಥಳವನ್ನು ನೆದರ್ಲೆಂಡ್ ವೆನಿಸ್ ಎಂದೂ ಕರೆಯಲಾಗುತ್ತದೆ.
ಲಾಸ್ಟ್ ಮಿನಿಟ್ ಟ್ರಿಪ್ ಪ್ಲಾನ್ ಮಾಡೋರು ನೀವಾಗಿದ್ರೆ, ಬೆಂಗಳೂರಿಗೆ ಹತ್ತಿರ ಇರೋ ಈ ಲೊಕೇಶನ್ಸ್ ಬೆಸ್ಟ್
ಕಾಲುವೆ ನಿರ್ಮಾಣವಾಗಿದ್ದು ಹೇಗೆ? :ಗಿತ್ತೋರ್ನ್ ಗ್ರಾಮ 1230ರಿಂದಲೇ ನೆಲೆಗೊಂಡಿದೆ. ಹಿಂದೆ ಇಂಧನಕ್ಕೆ ಬಳಸುವ ಒಂದು ಹುಲ್ಲನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಲು ಒಂದು ಮೀಟರ್ ಆಳದ ಕಾಲುವೆಗಳನ್ನು ನಿರ್ಮಿಸಿದ್ದರು. ಈ ಕಾಲುವೆ ತೆಗೆಯುವಾಗ ಅನೇಕ ಕೊಳ, ಸರೋವರ ರೂಪುಗೊಂಡಿತು. ಆಗ ಜನರು ದೋಣಿಯನ್ನು ಬಳಸಲು ಶುರು ಮಾಡಿದ್ರು. ಕ್ರಮೇಣ ಇದೇ ಇವರ ವಾಹನವಾಯ್ತು. ಜನರು ಈಗ್ಲೂ ಇದನ್ನೇ ನೆಚ್ಚಿಕೊಂಡಿದ್ದಾರೆ. ಹಾಗಾಗಿಯೇ ವಾಹನ ಮಾಲಿನ್ಯವಿಲ್ಲದೆ ಈ ಊರು ಸುಂದರ ಪ್ರವಾಸಿ ತಾಣವಾಗಿ (Travel Spot) ರೂಪುಗೊಂಡಿದೆ. ಇದನ್ನು ಯುರೋಪಿನ ಶೂನ್ಯ ಮಾಲಿನ್ಯ ಗ್ರಾಮ (Zero Polluted Village) ಎಂದು ಕರೆಯಲಾಗುತ್ತದೆ.
ಪರಿಸರ ಮಾಲಿನ್ಯಕ್ಕೆ (Environment Pollution) ಅವಕಾಶವಿಲ್ಲ : ಜನರ ಸಣ್ಣಪುಟ್ಟ ಸದ್ದಗದ್ದಲ ಬಿಟ್ಟರೆ ಇಲ್ಲಿ ಬೇರೆ ಯಾವುದೇ ಗಲಾಟೆ ಇಲ್ಲ. ಇಲ್ಲಿನ ಕಾಲುವೆಯಲ್ಲಿ ವಿದ್ಯುತ್ ದೋಣಿ ಓಡೋದನ್ನು ನೀವು ನೋಡ್ಬಹುದು. ಈ ಗ್ರಾಮದಲ್ಲಿ ಸುಮಾರು 3000 ಜನರು ವಾಸಿಸುತ್ತಿದ್ದಾರೆ. ತಮ್ಮ ವಾಹನದಲ್ಲಿ ಬರುವ ಪ್ರವಾಸಿಗರು, ಗ್ರಾಮದ ಹೊರಗೆ ವಾಹನವನ್ನು ಬಿಟ್ಟು ಬರಬೇಕು. ನಂತ್ರ ದೋಣಿಯಲ್ಲೇ ಊರು ಸುತ್ತಬೇಕಾಗುತ್ತದೆ. ಇಲ್ಲಿನ ಗ್ರಾಮಸ್ಥರು ಸ್ವಂತ ದೋಣಿಯನ್ನು ಹೊಂದಿದ್ದಾರೆ. ಪ್ರವಾಸಿಗರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವ ಕೆಲಸವನ್ನು ಅವರು ಮಾಡುತ್ತಾರೆ. ಗ್ರಾಮದಲ್ಲಿ 180ಕ್ಕೂ ಹೆಚ್ಚು ಸೇತುವೆಗಳಿವೆ. ಈ ಸೇತುವೆಯನ್ನು ಆರಾಮವಾಗಿ ದಾಟಬಹುದು. ಈ ಸೇತುವೆಗಳು ಈ ಗ್ರಾಮದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಗಿಥಾರ್ನ್ ಗ್ರಾಮವು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ. ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಕಾರಲ್ಲಿ ಹೋಗೋವಾಗ ಅರ್ಧದಾರೀಲಿ ಪೆಟ್ರೋಲ್ ಖಾಲಿಯಾದ್ರೆ ಈ ದೇಶದಲ್ಲಿ ಜೈಲು ಶಿಕ್ಷೆ!