Travel Tips : ಚಾರಣ ಪ್ರಿಯರಿಗೆ ಸ್ವರ್ಗ ಈ ಕಲಾವಂತಿ ಕೋಟೆ .. ಕಾಲು ಜಾರಿದ್ರೆ ನರಕ
ನಮ್ಮ ದೇಶದಲ್ಲಿ ಚಾರಣಕ್ಕೆ ಸೂಕ್ತವಾದ ಅನೇಕ ಪ್ರದೇಶಗಳಿವೆ. ಕೆಲವು ಸುಂದರವಾಗಿದ್ರೆ ಮತ್ತೆ ಕೆಲವು ಅಪಾಯಕಾರಿಯಾಗಿರುತ್ವೆ. ಎಷ್ಟೇ ಕಠಿಣ ದಾರಿಯಿದ್ರೂ ನಾನು ಜಯಿಸಬಲ್ಲೆ ಎನ್ನುವವರಿಗೆ ಚಾರಣ ಸ್ಥಳವೊಂದರ ಮಾಹಿತಿ ಇಲ್ಲಿದೆ.
ಟ್ರೆಕಿಂಗ್ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಹದಿಹರೆಯದ ಯುವಕ ಯುವತಿಯರು ತಮ್ಮ ರಜೆಯ ದಿನಗಳನ್ನು ಟ್ರೆಕಿಂಗ್ ಗಾಗಿಯೇ ಮೀಸಲಿಡುತ್ತಾರೆ. ಸುಂದರವಾದ ಗುಡ್ಡ, ಬೆಟ್ಟಗಳನ್ನು ಏರುವುದು ಹೆಚ್ಚಿನ ಖುಷಿಯನ್ನು ನೀಡುತ್ತೆ. ಇಂತಹ ಸ್ಥಳಗಳಲ್ಲಿ ಚಾರಣ ಮಾಡಲು ಶಕ್ತಿ, ಧೈರ್ಯ ಎರಡೂ ಬೇಕು.
ಮಹಾರಾಷ್ಟ್ರ (Maharashtra) ದ ಪ್ರಭಲಗಢದಲ್ಲಿರುವ ಕಲಾವಂತಿ (Kalawanti ) ಕೋಟೆ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಈ ಕೋಟೆ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಭಯಾನಕ ಹಾಗೂ ದುರ್ಗಮ ಹಾದಿಗಳನ್ನು ಹೊಂದಿದೆ. ಇದು ದೇಶದ ಅತ್ಯಂತ ಭಯಾನಕ ಕೋಟೆ (Fort) ಗಳ ಪಟ್ಟಿಗೆ ಸೇರಿದೆ. ಈ ಕೋಟೆಯನ್ನು ಹತ್ತಲು ಚಿಕ್ಕದಾದ ಮೆಟ್ಟಿಲುಗಳಿದ್ದು, ಎರಡೂ ಬದಿಯಲ್ಲಿ ಬೃಹದಾಕಾರದ ಕಂದಕಗಳಿವೆ. ಕೋಟೆಯನ್ನು ಹತ್ತುವಾಗ ಚಾರಣಿಗರು ಕಾಲು ಜಾರಿ ಬೀಳುವ ಸಾಧ್ಯತೆಯೂ ಹೆಚ್ಚಿದೆ.
OOTY TO MYSORE: ಬೆಂಗಳೂರಿನಿಂದ ವೀಕೆಂಡ್ ಟ್ರಿಪ್ ಹೋಗೋಕೆ ಬೆಸ್ಟ್ ಜಾಗಗಳಿವು
2300 ಅಡಿ ಎತ್ತರದಲ್ಲಿರುವ ಅದ್ಭುತ ಕೋಟೆ : ಕಲಾವಂತಿ ಕೋಟೆ 2300 ಅಡಿ ಎತ್ತರದವಿದೆ. ಬಹುಮನಿ ಸುಲ್ತಾನರ ಕಾಲದಲ್ಲಿ ಈ ಕೋಟೆಯನ್ನು ಕಟ್ಟಲಾಗಿತ್ತು. ಪನ್ವೇಲ್ ಮತ್ತು ಕಲ್ಯಾಣ ಕೋಟೆಗಳ ಮೇಲೆ ನಿಗಾ ಇಡಲು ಈ ಕೋಟೆಯ ನಿರ್ಮಾಣವಾಗಿತ್ತು. 1458ರಲ್ಲಿ ಅಹಮದ್ ನಗರದ ಸುಲ್ತಾನನ ಸೋಲಿನ ನಂತರ ಈ ಕೋಟೆಯನ್ನು ಕಬಳಿಸಲಾಯ್ತು. ಮೊದಲು ಈ ಕೋಟೆಯ ಹೆಸರು ಮುರಂಜನ್ ಕೋಟೆ ಎಂದಾಗಿತ್ತು. ನಂತರ ಛತ್ರಪತಿ ಶಿವಾಜಿಯು ಈ ಕೋಟೆಗೆ ಕಲಾವಂತಿ ಎಂದು ಮರುನಾಮಕರಣ ಮಾಡಿದ. ಈ ಕೋಟೆಯನ್ನು ಏರಲು ಜಗತ್ತಿನೆಲ್ಲೆಡೆಯಿಂದ ಜನರು ಬರುತ್ತಾರೆ. ಅನೇಕ ಮಂದಿ ಕೋಟೆಯನ್ನು ಏರಲು ಹೋಗಿ ತಮ್ಮ ಪ್ರಾಣವನ್ನೂ ತೆತ್ತಿದ್ದಾರೆ.
ಅಪಾಯಕಾರಿಯೂ ಹೌದು ಆಕರ್ಷಕವೂ ಹೌದು : ಈ ಕೋಟೆಯ ರಚನೆ ಹಾಗೂ ಇಲ್ಲಿನ ಸುತ್ತಲ ಪರಿಸರವೇ ಜನರನ್ನು ಕೈಬೀಸಿ ಕರೆಯುತ್ತದೆ. ಸಾಹಸಿಗರಂತೂ ಈ ಕೋಟೆಯನ್ನು ಹತ್ತಲು ತುದಿಗಾಲಲ್ಲಿ ನಿಲ್ಲುತ್ತಾರೆ. ಮಾಥೆರಾನ್ ಮತ್ತು ಪನ್ವೇಲ್ ಕಣಿವೆಯ ಮಧ್ಯೆ ಇರುವ ಕಲಾವಂತಿ ಕೋಟೆ ತನ್ನ ಎತ್ತರದಿಂದಲೇ ಬಹಳ ಆಕರ್ಷಣೀಯವಾಗಿ ಕಾಣಿಸುತ್ತದೆ. ಈ ಕೋಟೆಯನ್ನು ಏರಿದರೆ ಸುತ್ತ ಮುತ್ತಲ ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳಬಹುದು.
Temple Around Bangalore: ಇದು ಪವರ್ಫುಲ್ ಗಣೇಶ..ಕೇತು ದೋಷಕ್ಕೂ ಇಲ್ಲಿದೆ ಪರಿಹಾರ
ಈ ಕೋಟೆಯನ್ನು ಹತ್ತಲು ಕಿರಿದಾದ ಮೆಟ್ಟಿಲುಗಳಿವೆ. ಮೆಟ್ಟಿಲುಗಳನ್ನು ಏರಲು ರೇಲಿಂಗ್ಸ್ ಗಳಾಗಲೀ ಅಥವಾ ಹಗ್ಗವಾಗಲೀ ಯಾವುದೂ ಇಲ್ಲ. ಚಾರಣಿಗರೇ ಒಂದು ಒಂದು ಹೆಜ್ಜೆಯಿಟ್ಟು ನಿಧಾನವಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಕೋಟೆಯನ್ನು ಹತ್ತಬೇಕು. ನಿಮ್ಮ ಕಾಲು ಸ್ವಲ್ಪ ಜಾರಿತೆಂದರೂ ಕೋಟೆಯ ಎರಡೂ ಕಡೆಯಲ್ಲೂ ಇರುವ ಪಾತಾಳಕ್ಕೆ ಬೀಳೋದು ಗ್ಯಾರಂಟಿ. ಕೋಟೆಯನ್ನು ಏರುವುದಕ್ಕಿಂತಲೂ ಇಳಿಯುವುದು ಇನ್ನೂ ದೊಡ್ಡ ಸವಾಲಾಗಿದೆ. ಇನ್ನು ಮಳೆಗಾಲದಲ್ಲಂತೂ ಕೋಟೆಗೆ ಹೋಗುವುದು ಅಸಾಧ್ಯದ ಮಾತು.
ಸೂರ್ಯಾಸ್ತಕ್ಕೂ ಮುನ್ನವೇ ಮರಳಬೇಕು : ಕಲಾವಂತಿ ಕೋಟೆಯ ದಾರಿ ಬಹಳ ದುರ್ಗಮವಾದ್ದರಿಂದ ಪ್ರವಾಸಿಗರು ಸೂರ್ಯಾಸ್ತವಾಗುವುದಕ್ಕೂ ಮೊದಲೇ ಅಲ್ಲಿಂದ ವಾಪಸ್ಸಾಗುತ್ತಾರೆ. ಏಕೆಂದರೆ ಸೂರ್ಯಾಸ್ತವಾಗುತ್ತಿದ್ದಂತೆ ಅಲ್ಲಿಂದ ಹಿಂತಿರುಗುವುದು ಬಹಳ ಕಠಿಣ. ಸಂಜೆಯಾದಂತೆ ಅಲ್ಲಿ ಹೆಚ್ಚು ಗಾಳಿ ಬೀಸುತ್ತದೆ. ಕುಡಿಯಲು ನೀರಿನ ವ್ಯಸ್ಥೆಯೂ ಇಲ್ಲ. ಬೆಳಕು ಕೂಡ ಇರುವುದಿಲ್ಲ. ಹಾಗಾಗಿ ಇಲ್ಲಿ ಟ್ರೆಕಿಂಗ್ ಮಾಡುವವರು ಸಂಜೆಯಾಗುವ ಮೊದಲೇ ಮನೆಗೆ ಮರಳುತ್ತಾರೆ.
ಕಲಾವಂತಿಗೆ ಹೋಗೋದು ಹೇಗೆ? : ಪ್ರಭಲಗಢದ ಬಳಿ ಮುಂಬೈ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅಲ್ಲಿಂ ಕಲಾವಂತಿ ಕೋಟೆ 50 ಕಿ. ಮೀ ದೂರದಲ್ಲಿದೆ. ಅಲ್ಲಿಗೆ ತಲುಪಲು ನೀವು ಟ್ಯಾಕ್ಸಿ ಸಹಾಯ ಪಡೆಯಬಹುದು ಅಥವಾ ಪನ್ವೇಲ್ ನ ರೈಲ್ವೆ ನಿಲ್ದಾಣ ಪ್ರಭಲಗಢದ ಹತ್ತಿರದಲ್ಲಿದೆ. ಇಲ್ಲಿ ನೀವು ಲೋಕನ್ ಟ್ರೇನ್ ನಲ್ಲಿ ಕೂಡ ಪ್ರಯಾಣಿಸಬಹುದು. ಪ್ರಭಲಗಢದಿಂದ ಬಸ್ ನಲ್ಲಿಯೂ ಕೋಟೆಯನ್ನು ತಲುಪಬಹುದು. ಟ್ಯಾಕ್ಸಿ ಅಥವಾ ಸ್ವಂತ ವಾಹನಗಳಲ್ಲಿಯೂ ಕೋಟೆಗೆ ತೆರಳಬಹುದು.