Temple Around Bangalore: ಇದು ಪವರ್ಫುಲ್ ಗಣೇಶ..ಕೇತು ದೋಷಕ್ಕೂ ಇಲ್ಲಿದೆ ಪರಿಹಾರ
ಬೆಂಗಳೂರಿನ ಸುತ್ತಮುತ್ತ ಸಾಕಷ್ಟು ಪ್ರವಾಸಿ ತಾಣಗಳಿವೆ. ಹಾಗೆಯೇ ದೇವಸ್ಥಾನಗಳೂ ಇವೆ. ಕೆಲವೊಂದು ಪುರಾತನ ದೇವಸ್ಥಾನಗಳು ಬೆಂಗಳೂರು ಸಮೀಪದಲ್ಲೇ ಇದ್ದು ಶಕ್ತಿಶಾಲಿಯಾಗಿವೆ. ಅನೇಕ ವಿಶೇಷತೆಗಳಿಂದ ಕೂಡಿದೆ ದೇವಸ್ಥಾನವೊಂದರ ವಿವರ ಇಲ್ಲಿದೆ.
ಕಷ್ಟ ಬಂದ್ರೆ ಜನರು ಓಡೋದು ದೇವಸ್ಥಾನಕ್ಕೆ. ವಿಘ್ನಗಳನ್ನು ಪರಿಹರಿಸುವ ವಿನಾಯಕ ಅಂತಾ ಭಕ್ತರು ಗಣೇಶನ ಪಾದಗಳನ್ನು ಮುಟ್ಟಿ ಬೇಡಿಕೊಳ್ತಾರೆ. ಆದಿಯಲ್ಲಿ ಮೊದಲು ಪೂಜೆ ಮಾಡಲ್ಪಡುವ ಗಣೇಶನಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಯಾವುದೇ ಕೆಲಸ ಮಾಡುವ ಮೊದಲು ಗಣಪತಿ ಪೂಜೆ ನಡೆಯುತ್ತದೆ.
ಕರ್ನಾಟಕ (Karnataka) ದಲ್ಲಿ ಲಕ್ಷಾಂತರ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನ (Temple) ವೂ ಅದರದೇ ಆತ ಮಹತ್ವವನ್ನು ಪಡೆದಿದೆ. ಹಳೆಯ ದೇವಸ್ಥಾನಗಳನ್ನು ನೋಡಲು ಆಸಕ್ತಿಯಿರುವ ಹಾಗೂ ಗಣೇಶನ ಮೇಲೆ ವಿಶೇಷ ಪ್ರೀತಿ ಇರುವ ಭಕ್ತರು ಬೆಂಗಳೂರು ಸಮೀಪದ ತುಂಬಾ ಹಳೆ ದೇವಸ್ಥಾನಕ್ಕೆ ಭೇಟಿ ನೀಡ್ಬಹುದು. ನಾವಿಂದು ಅತ್ಯಂತ ಪುರಾತನವಾದ ಸಾಲಿಗ್ರಾಮ ಗಣೇಶ ದೇವಸ್ಥಾನದ ಪರಿಚಯ ಮಾಡಿಸ್ತೇವೆ.
ಕೇದಾರನಾಥ ದೇಗುಲದ ಮುಂದೆ ತಬ್ಬಿ ಪ್ರೊಪೋಸ್ ಮಾಡಿದ ಯುವತಿ: ಇನ್ಮುಂದೆ ಮೊಬೈಲ್ ಫೋನ್ ಬ್ಯಾನ್?
5 ಸಾವಿರ ವರ್ಷ ಹಳೆಯ ಸಾಲಿಗ್ರಾಮ (Saligram) ಗಣೇಶ ದೇವಸ್ಥಾನ ಎಲ್ಲಿದೆ? : ಸಾಲಿಗ್ರಾಮ ಗಣೇಶ (Ganesha) ದೇವಸ್ಥಾನವಿರೋದು ಕುರುಡುಮಲೆಯಲ್ಲಿ. ಇದು ಕೋಲಾರ ಜಿಲ್ಲೆಯ ಮುಳಬಾಗಲಿನಲ್ಲಿರುವ ಪವಿತ್ರ ಕ್ಷೇತ್ರವಾಗಿದೆ. ಈ ದೇವಾಲಯವು ಮುಳಬಾಗಲು ಪಟ್ಟಣದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ 110 ಕಿಲೋಮೀಟರ್ ದೂರದಲ್ಲಿದೆ.
ಕುರುಡುಮಲೆ ಗಣೇಶ ದೇವಸ್ಥಾನದ ಇತಿಹಾಸ : ಕೂಡಮಲೆ ಗಣೇಶ ದೇವಸ್ಥಾನ 5 ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಹಿಂದುಗಳು ನಂಬುವ ನಾಲ್ಕು ಯುಗಗಳ ಪೈಕಿ ಮೊದಲನೇಯದಾದ ಸತ್ಯಯುಗದಲ್ಲಿ ಇದು ನಿರ್ಮಾಣವಾಗಿದೆ ಎಂಬ ಉಲ್ಲೇಖವಿದೆ. ಶಿವ ವಿಷ್ಣು ಮತ್ತು ಬ್ರಹ್ಮರಿಂದ ಈ ಮೂರ್ತಿ ಸ್ಥಾಪನೆಯಾಗಿದೆ ಎಂದು ನಂಬಲಾಗಿದೆ. ತ್ರೇತಾಯುಗದಲ್ಲಿ ಶ್ರೀರಾಮನು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದನಂತೆ. ಪಾಂಡವರು, ಕೌರವರ ಜೊತೆ ಯುದ್ಧ ಮಾಡುವ ಮುನ್ನ ಈ ದೇವಸ್ಥಾನಕ್ಕೆ ಬಂದು, ಗಣೇಶನ ದರ್ಶನ ಪಡೆದಿದ್ದರಂತೆ. ಈ ದೇವಸ್ಥಾನವನ್ನು ರಾಜ ಕೃಷ್ಣದೇವರಾಯ ನಿರ್ಮಿಸಿದರು. ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಂಡಿರುವ ಈ ದೇವಸ್ಥಾನ ಸಾಕಷ್ಟು ವಿಶೇಷತೆಯನ್ನು ಹೊಂದಿದೆ.
Bengaluru ಹತ್ತಿರದಲ್ಲಿರೋ ಈ ಫಾಲ್ಸ್ ನೋಡಿದ್ದೀರಾ? ವೀಕೆಂಡ್‌ನಲ್ಲಿ ಪ್ಲ್ಯಾನ್ ಮಾಡ್ಬಹುದು!
ಇದು ವಿಶ್ವದ ಅತಿ ದೊಡ್ಡ ಸಾಲಿಗ್ರಾಮ ಗಣೇಶ ಮೂರ್ತಿಯಾಗಿದೆ. ಇಲ್ಲಿನ ಗಣೇಶ ಮೂರ್ತಿ 13 ಅಡಿ ಉದ್ದವಿದೆ. ಈತ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಕೇತುದೋಷ ಇರುವವರು ಈ ದೇವಸ್ಥಾನಕ್ಕೆ ಭೇಟಿ ನೀಡಿ, ಗಣೇಶನ ದರ್ಶನ ಪಡೆದ್ರೆ ಕೇತು ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಅನೇಕ ಭಕ್ತರು ಕುರುಡುಮಲೆ ಗಣೇಶನ ಆಶೀರ್ವಾದವನ್ನು ಪಡೆದ ನಂತರವೇ ಹೊಸ ಉದ್ಯೋಗ ಅಥವಾ ಹೊಸ ಕೆಲಸವನ್ನು ಪ್ರಾರಂಭಿಸುತ್ತಾರೆ. ವಿಶೇಷವಾಗಿ ರಾಜಕಾರಣಿಗಳು, ಚುನಾವಣಾ ಅಭ್ಯರ್ಥಿಗಳು ಚುನಾವಣೆ ಮುನ್ನ ಈ ದೇವಸ್ಥಾನಕ್ಕೆ ಬಂದು ಗಣೇಶನ ಆಶೀರ್ವಾದ ಪಡೆಯುತ್ತಾರೆ.
ಈ ದೇವಸ್ಥಾನಕ್ಕೆ ತಲುಪೋದು ಹೇಗೆ? : ಬೆಂಗಳೂರಿನಿಂದ ಮುಳಬಾಗಲಿಗೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಲಭ್ಯವಿವೆ. ಮುಳಬಾಗಲು ಜಂಕ್ಷನ್‌ನಲ್ಲಿ ಇಳಿದು ನೀವು ಆಟೋ ಅಥವಾ ಖಾಸಗಿ ಬಸ್ ಮೂಲಕ ದೇವಸ್ಥಾನವನ್ನು ತಲುಪಬಹುದು.
ಬೆಂಗಳೂರು – ಸರ್ಜಾಪುರ-ಕೋಲಾರ-ಮುಳಬಾಗಿಲು – ಕುರುಡುಮಲೆ ಒಂದು ಮಾರ್ಗವಾದ್ರೆ ಬೆಂಗಳೂರು – ಹೊಸಕೋಟೆ-ಕೋಲಾರ- ಮುಳಬಾಗಿಲು – ಕುರುಡುಮಲೆ ಇನ್ನೊಂದು ಮಾರ್ಗವಾಗಿದೆ. ನೀವು ಸ್ವಂತ ವಾಹನದಲ್ಲಿ ಹೋಗುವವರಾಗಿದ್ದಲ್ಲಿ ಎರಡನೇ ಮಾರ್ಗ ಬೆಸ್ಟ್.
ರೈಲಿನ ಮೂಲಕವೂ ನೀವು ಕುರುಡುಮಲೆಗೆ ಹೋಗಬಹುದು. ಕುರುಡುಮಲೆ ದೇವಸ್ಥಾನ ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಹಾಗೂ ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ 8.30ರವರೆಗೆ ತೆರೆದಿರುತ್ತದೆ. ಕುರುಡುಮಲೆ ಗಣೇಶ ದೇವಸ್ಥಾನದ ಜೊತೆ ನೀವು ಅದ್ರ ಸಮೀಪವಿರುವ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಅದು ಶಿವನ ದೇವಸ್ಥಾನವಾಗಿದೆ. ಕುರುಡುಮಲೆಯಲ್ಲಿ ನೀವು ಈ ಎರಡು ದೇವಸ್ಥಾನಗಳಿಗೆ ಭೇಟಿ ನೀಡಬಹುದಾಗಿದೆ.