Asianet Suvarna News Asianet Suvarna News

ಇತರರು ಆಕ್ರಮಿಸಿಕೊಂಡಿದ್ದ ಬುಕ್ಕಿಂಗ್ ಸೀಟನ್ನು ದೂರು ನೀಡಿದ 20 ನಿಮಿಷದಲ್ಲಿ ಮರಳಿ ನೀಡಿದ ಭಾರತೀಯ ರೈಲ್ವೆ

ರೈಲ್ವೇಯಲ್ಲಿ ಬುಕ್ ಆದ ಸೀಟುಗಳನ್ನು ಕೂಡ ಕೆಲವೊಮ್ಮೆ ಇನ್ಯಾರೋ ಕಸಿದುಕೊಳ್ಳುವುದು ಆಗಾಗ ನಡೆಯುತ್ತಿರುತ್ತದೆ. ಇದರಿಂದ ಸೀಟು ಬುಕ್ ಮಾಡಿದವರು ಸಂಕಷ್ಟಕ್ಕೀಡಾಗುತ್ತಾರೆ. ಆದರೆ ಹೀಗೆ ಯಾರದೋ ಸೀಟನ್ನು ವಶಪಡಿಸಿಕೊಂಡು ಜಂಡಾ ಊರಿದ್ದ ಜನರನ್ನು ಕೇವಲ 20 ನಿಮಿಷದಲ್ಲಿ ರೈಲ್ವೆ  ಸಿಬ್ಬಂದಿ ಎಳಿಸಿ ಯಾರಿಗೆ ಆ ಸೀಟು ಸೇರಿತ್ತೋ ಅವರಿಗೆ ನೀಡಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

Indian Railways returned the booking seat occupied by others within 20 minutes of complaint akb
Author
First Published Feb 20, 2024, 1:05 PM IST

ರೈಲ್ವೇಯಲ್ಲಿ ಬುಕ್ ಆದ ಸೀಟುಗಳನ್ನು ಕೂಡ ಕೆಲವೊಮ್ಮೆ ಇನ್ಯಾರೋ ಕಸಿದುಕೊಳ್ಳುವುದು ಆಗಾಗ ನಡೆಯುತ್ತಿರುತ್ತದೆ. ಇದರಿಂದ ಸೀಟು ಬುಕ್ ಮಾಡಿದವರು ಸಂಕಷ್ಟಕ್ಕೀಡಾಗುತ್ತಾರೆ. ಆದರೆ ಹೀಗೆ ಯಾರದೋ ಸೀಟನ್ನು ವಶಪಡಿಸಿಕೊಂಡು ಜಂಡಾ ಊರಿದ್ದ ಜನರನ್ನು ಕೇವಲ 20 ನಿಮಿಷದಲ್ಲಿ ರೈಲ್ವೆ  ಸಿಬ್ಬಂದಿ ಎಳಿಸಿ ಯಾರಿಗೆ ಆ ಸೀಟು ಸೇರಿತ್ತೋ ಅವರಿಗೆ ನೀಡಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಭಾರತದಲ್ಲಿ ಪ್ರತಿದಿನವೂ ಲಕ್ಷಾಂತರ ಜನ ರೈಲಿನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಕೆಲವರು ಮೊದಲೇ ಸೀಟು ಬುಕ್ ಮಾಡಿ ಪ್ರಯಾಣಿಸಿದರೆ ಮತ್ತೆ ಕೆಲವರು ಆಗಷ್ಟೇ ಟಿಕೆಟ್ ಪಡೆದು ಜನರಲ್ ಬೋಗಿ ಹತ್ತುತ್ತಾರೆ. ಕೆಲವೊಮ್ಮೆ ಬುಕ್ ಆದ ಸೀಟುಗಳಲ್ಲೂ ಕೂರುತ್ತಾರೆ. ಇದರಿಂದ ಸೀಟು ಬುಕ್ ಮಾಡಿದವರು ಸೀಟು ಸಿಗದೇ ಸಂಕಷ್ಟಕ್ಕೆ ಸಿಲುಕುತ್ತಾರೆ. 'ಕೆಲವೊಮ್ಮೆ ಸೀಟು ಬಿಟ್ಟು ಕೊಡಿ ಇದು ನಮ್ಮ ಸೀಟು' ಎಂದರೂ ಕೆಲವರು ಬಿಟ್ಟು ಕೊಡಲು ಸಿದ್ಧರಿರುವುದಿಲ್ಲ, ಇದರಿಂದ ಸೀಟಿಗಾಗಿ ದೊಡ್ಡ ಜಗಳವೇ ನಡೆಯುತ್ತದೆ. ಪುರುಷರು ತಾವು ಬುಕ್ ಮಾಡಿದ ಸೀಟನ್ನು ಹೇಗಾದರೂ ಜಗಳ ಮಾಡಿ ಪಡೆದರೆ ಎಲ್ಲಾ ಮಹಿಳೆಯರಿಗೆ ತಮ್ಮ ಸೀಟಿನಲ್ಲಿ ಕುಳಿತ ಪುರುಷರನ್ನೋ ಅಥವಾ ಇನ್ನಾರನ್ನೋ ಏಳಿಸುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಹೀಗೆ ಸೀಟು ಬುಕ್ ಮಾಡಿಯೋ ಸೀಟು ಸಿಗದೇ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯ ನೆರವಿಗೆ ರೈಲ್ವೆ ಧಾವಿಸಿದ್ದು, ಕೇವಲ 20 ನಿಮಿಷದಲ್ಲಿ ಮಹಿಳೆಗೆ ಅವರು ಬುಕ್ ಮಾಡಿದ ಸೀಟು ಮರಳಿ ಸಿಕ್ಕಿದೆ. 

ಸಿಗ್ನಲ್ ಸರಿಪಡಿಸುತ್ತಿದ್ದವರ ಮೇಲೆಯೇ ಹರಿದ ರೈಲು: ಮೂವರು ರೈಲ್ವೆ ಉದ್ಯೋಗಿಗಳು ಸಾವು

@Avoid_potato ಎಂಬ ಟ್ವಿಟ್ಟರ್ ಪೇಜ್‌ನಿಂದ ಒಬ್ಬರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ನ ಸಾರಾಂಶ ಇಲ್ಲಿದೆ. 'ಇದೇ ಮೊದಲ ಬಾರಿಗೆ ನನ್ನ ಕಿರಿಯ ಸೋದರಿ ರೈಲಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಳು. ಆಕೆಯ ಸೀಟು ಬುಕ್ಕಿಂಗ್ ಆಗಿ ಕೊನೆ ಕ್ಷಣದಲ್ಲಿ ಖಚಿತವೂ (Ticket Confirm) ಆಗಿತ್ತು.  ಆದರೆ ಮೂರು ಗಂಟೆ ವಿಳಂಬವಾಗಿ ರೈಲು ಬಂದಿತ್ತು.  ಕಡೆಗೂ ರೈಲು ಏರಿ ಆಕೆ ತನಗೆ ಬುಕ್ ಆಗಿದ್ದ ಸೀಟಿನ ಬಳಿ ಹೋದರೆ ಸೀಟು ಖಾಲಿ ಇರಲಿಲ್ಲ,  ಒಬ್ಬರು ಅಂಕಲ್ ಹಾಗೂ ಅವರ ಇಡೀ ಕುಟುಂಬ ಆ ಸೀಟಿನಲ್ಲಿ ಕುಳಿತಿದ್ದರು. ಆಕೆ ಅವರನ್ನು ಸೀಟು ಬಿಟ್ಟುಕೊಡಿ ಎಂದು ಕೇಳಿದರೆ, ಆ ಅಂಕಲ್ ಆಕೆಗೆ ಬುದ್ದಿ ಹೇಳುತ್ತಾ  ವಾದ ಮಾಡಲು ಶುರು ಮಾಡಿದ್ದರು.  ಆಕೆ ನಾಳೆ ಪರೀಕ್ಷೆ ಬರೆಯಬೇಕಿದೆ. ಹೀಗಾಗಿ ಆಕೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಾಳೆ. ಆಕೆಗೆ ಬುಕ್ ಆಗಿರುವ ಸೀಟು ಬಹಳ ಅಗತ್ಯವಾಗಿದೆ. ಜೊತೆಗೆ ಆಕೆಗೆ ಆರೋಗ್ಯವೂ ಸರಿ ಇಲ್ಲ,  ಅಂಕಲ್ ಆಕೆಯನ್ನು ಅಪ್ಪರ್ ಬರ್ತ್(upper birth) ನಲ್ಲಿ  ಇನ್ನೂ ಮೂವರು ಪ್ರಯಾಣಿಕರ ಜೊತೆ ಕೂರುವಂತೆ ಮಾಡಿದ್ದಾರೆ. ಆದರೆ ಈ ಪರಿಸ್ಥಿತಿಯಲ್ಲಿ ಇಲ್ಲಿ ಕುಳಿತ ನನಗೆ ಏನು ಮಾಡಲಾಗುತ್ತಿಲ್ಲ ಎಂದು ಬೇಜಾರಾಗುತ್ತಿದೆ. ನನಗೆ ಆಕೆಯ ಬಗ್ಗೆ ಚಿಂತೆ ಆಗಿದೆ. ನಾನು ಆಕೆಗಾಗಿ ಏನಾದರು ಮಾಡಲು ಸಾಧ್ಯವೇ?' ಇದಕ್ಕಾಗಿ ಏನಾದರೂ ಸರ್ವಿಸ್ ಇದೆಯೇ ಎಂದು ಅವರು ಸರಣಿ ಟ್ವಿಟ್‌ ಮೂಲಕ  ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದರು. 

ಬಿಸಿನೀರಿಗಾಗಿ ರೈಲಿನ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ಗೆ Kettle ಪ್ಲಗ್‌ ಮಾಡಿದ ವ್ಯಕ್ತಿ, ಮುಂದಾಗಿದ್ದೇನು?

ಜೊತೆಗೆ ರೈಲಿನ ಪಿಎನ್ಆರ್ ನಂಬರ್ ಜೊತೆ  @RailwaySeva @IndianRailUsersಗೆ ಟ್ಯಾಗ್ ಮಾಡಿದರು. ಇದಾದ ನಂತರ ರೈಲ್ ಮದದ್ (139) ಅವರನ್ನು ಸಂಪರ್ಕಿಸಿದ್ದು,  ಕೇವಲ 20 ನಿಮಿಷದಲ್ಲಿ ಆಕೆಗೆ ಆಕೆಯ ಸೀಟನ್ನು ತೆರವುಗೊಳಿಸಿ ನೀಡಿದ್ದಾರೆ. ಆಕೆ ಈಗ ಸುರಕ್ಷಿತವಾಗಿದ್ದಾಳೆ ಎಂದು ಬರೆದು ಭಾರತೀಯ ರೈಲ್ವೆಗೆ ಥ್ಯಾಂಕ್ಸ್ ಹೇಳಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 
 

 

Follow Us:
Download App:
  • android
  • ios