ಬಿಸಿನೀರಿಗಾಗಿ ರೈಲಿನ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗೆ Kettle ಪ್ಲಗ್ ಮಾಡಿದ ವ್ಯಕ್ತಿ, ಮುಂದಾಗಿದ್ದೇನು?
ಚಲಿಸುತ್ತಿರುವ ರೈಲಿನ ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್‌ಗೆ ಕೆಟಲ್ ಅನ್ನು ಪ್ಲಗ್ ಮಾಡಿದ ವ್ಯಕ್ತಿಗೆ ರೈಲ್ವೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ನವದೆಹಲಿ (ಜ.15): ಬಿಸಿ ನೀರು ಕುದಿಸುವ ಸಲುವಾಗಿ ಚಲಿಸುತ್ತಿರುವ ರೈಲಿನ ಮೊಬೈಲ್ ಫೋನ್ ಚಾರ್ಜಿಂಗ್ ಔಟ್‌ಲೆಟ್‌ಗೆ ಎಲೆಕ್ಟ್ರಿಕ್ ಕೆಟಲ್ ಅನ್ನು ಪ್ಲಗ್ ಮಾಡಿದ ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ. ಘಟನೆಯ ನಂತರ ವ್ಯಕ್ತಿಯ ವಿರುದ್ಧ ಕೇಸ್ ದಾಖಲು ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ವರದಿಯಾಗಿದೆ. 36 ವರ್ಷದ ವ್ಯಕ್ತಿ ಶನಿವಾರ ಗಯಾದಿಂದ ನವದೆಹಲಿಗೆ ಮಹಾಬೋಧಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲಿನಲ್ಲಿಯೇ ನೀರು ಬಿಸಿ ಮಾಡಿಕೊಳ್ಳುವ ಸಲುವಾಗಿ ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್‌ಗೆ ಎಲೆಕ್ಟ್ರಿಕ್ ಕೆಟಲ್‌ಅನ್ನು ಹಾಕಿದ್ದರು. ಇದನ್ನು ಗಮನಿಸಿದ ಆರ್‌ಪಿಎಫ್ ಈತನನ್ನು ಬಂಧಿಸಿ ಅಲಿಘರ್‌ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಅವರ ಅಪರಾಧಕ್ಕಾಗಿ, ರೈಲ್ವೆ ಕಾಯಿದೆಯಡಿ ಸೆಕ್ಷನ್ 147 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲೇಹ್‌ನಿಂದ ಮೂಲದ ಆರೋಪಿಗೆ ಆತನ ಕೃತ್ಯಕ್ಕಾಗಿ 1,000 ರೂಪಾಯಿ ದಂಡವನ್ನು ಹಾಕಲಾಗಿದೆ. ಆ ಬಳಿಕ ಅಧಿಕಾರಿಗಳು ಹಾಗೂ ನ್ಯಾಯಾಲಯ ಈ ಬಗ್ಗೆ ಎಚ್ಚರಿಕೆ ನೀಡಿ ಆತನನ್ನು ಬಿಡುಗಡೆ ಮಾಡಿದೆ.
ಚಲಿಸುವ ರೈಲಿನೊಳಗೆ ಹೆಚ್ಚಿನ ವೋಲ್ಟೇಜ್‌ನ ಸಾಧನದ ಕೆಟಲ್ ಅನ್ನು ಪ್ಲಗ್ ಮಾಡುವುದು ಅತ್ಯಂತ ಅಪಾಯಕಾರಿ. ಇದರಿಂದ ಶಾರ್ಟ್ ಸರ್ಕ್ಯೂಟ್ ಕೂಡ ಸಂಭವಿಸಬಹುದು. ಇದು ರೈಲಿನ AC III ಕೋಚ್‌ನಲ್ಲಿ ದೊಡ್ಡ ಬೆಂಕಿಗೂ ಕಾರಣವಾಗಬಹುದು. ಚಳಿಯ ಕಾರಣಕ್ಕಾಗಿ ರೈಲಿನಲ್ಲಿಯೇ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುತ್ತಿದ್ದ ಇಬ್ಬರನ್ನು ಆಲಿಗಢ್‌ನಲ್ಲಿ ಬಂದಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆಸಿದೆ. ಬಂಧಿತ ಇಬ್ಬರಿಗೂ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ.
ಆರ್‌ಪಿಎಫ್ ಪೋಸ್ಟ್ ಕಮಾಂಡರ್ ರಾಜೀವ್ ವರ್ಮಾ ಈ ಬಗ್ಗೆ ಮಾತನಾಡಿದ್ದು, ವಿಚಾರಣೆಯ ಸಂದರ್ಭದಲ್ಲಿ, 70 ವರ್ಷದ ವೃದ್ಧಿ ಮಹಿಳೆಯೊಬ್ಬರು ಮಾತ್ರೆ ತೆಗೆದುಕೊಳ್ಳುವ ಸಲುವಾಗಿ ಬಿಸಿ ನೀರಿಗೆ ಹುಡುಕಾಟ ನಡೆಸುತ್ತಿದ್ದರು. ಪ್ಯಾಂಟ್ರಿ ಕಾರ್ ಸಿಬ್ಬಂದಿಗೆ ಬಿಸಿ ನೀರು ಕೊಡುವಂತೆ ಹೇಳಿದ್ದರು. ಆದರೆ, ಅದನ್ನು ಆತ ನಿರಾಕರಿಸಿದ್ದ. ಇದಕ್ಕಾಗಿ ಮಹಿಳೆಗೆ ಬಿಸಿ ನೀರು ಕುದಿಸಿಕೊಡಲು, ಎಲೆಕ್ಟ್ರೆಕಿಕ್ ಕೆಟಲ್ ಪ್ಲಗ್ ಮಾಡಿದ್ದೆ ಎಂದು ವ್ಯಕ್ತಿ ತಿಳಿಸಿದ್ದಾನೆ' ಎಂದಿದ್ದಾರೆ.
ಕೊರೆವ ಚಳಿಗೆ ಉತ್ತರ ಭಾರತ ಗಡಗಡ : 100 ವಿಮಾನಗಳ ಸಂಚಾರ ವ್ಯತ್ಯಯ
ದೆಹಲಿಯಿಂದ ಅಸ್ಸಾಂಗೆ ಚಲಿಸುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಅಲಿಘರ್ ರೈಲು ನಿಲ್ದಾಣದಲ್ಲಿ ಬಂಧಿಸಿ ಹತ್ತು ದಿನಗಳ ನಂತರ ಈ ಘಟನೆ ವರದಿಯಾಗಿದೆ. ಹರಿಯಾಣದ ಹಳ್ಳಿಯಿಂದ ಬಂದಿದ್ದ ಇಬ್ಬರು ಪ್ರಯಾಣಿಕರು, ವಿಪರೀತ ಚಳಿ ಎನ್ನುವ ಕಾರಣಕ್ಕಾಗಿ ಚಲಿಸುವ ರೈಲಿನ ಕೋಚ್‌ನ ಒಳಗೆ ಸಗಣಿ ಭರಣಿಯನ್ನು ಸುಟ್ಟಿದ್ದರು. ಪ್ರಯಾಣಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಿದ್ದ ಇವರನ್ನು ರೈಲ್ವೆ ಪೊಲೀಸರು ಆಲಿಗಢದಲ್ಲಿ ಬಂಧಿಸಿದ್ದರು.
ಮೈಸೂರಿನಿಂದ ಅಯೋಧ್ಯೆಗೆ ವಿಶೇಷ ರೈಲು ಆರಂಭ: ಕಡಿಮೆ ಖರ್ಚಿನಲ್ಲಿ ಶ್ರೀರಾಮ ದರ್ಶನ ಮಾಡಿ