ಸಿಗ್ನಲ್ ಸರಿಪಡಿಸುತ್ತಿದ್ದವರ ಮೇಲೆಯೇ ಹರಿದ ರೈಲು: ಮೂವರು ರೈಲ್ವೆ ಉದ್ಯೋಗಿಗಳು ಸಾವು
ಸಿಗ್ನಲ್ ಸಮಸ್ಯೆ ಸರಿಪಡಿಸುತ್ತಿದ್ದ ಪಶ್ಚಿಮ ರೈಲ್ವೆಯ ಮೂವರು ಉದ್ಯೋಗಿಗಳ ಮೇಲೆಯೇ ಮುಂಬೈ ಲೋಕಲ್ ರೈಲೊಂದು ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದ ದಾರುಣ ಘಟನೆ ಮಹಾರಾಷ್ಟ್ರದ ಮುಂಬೈನ ವಸೈಯಲ್ಲಿ ನಡೆದಿದೆ.
ಮುಂಬೈ: ಸಿಗ್ನಲ್ ಸಮಸ್ಯೆ ಸರಿಪಡಿಸುತ್ತಿದ್ದ ಪಶ್ಚಿಮ ರೈಲ್ವೆಯ ಮೂವರು ಉದ್ಯೋಗಿಗಳ ಮೇಲೆಯೇ ಮುಂಬೈ ಲೋಕಲ್ ರೈಲೊಂದು ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದ ದಾರುಣ ಘಟನೆ ಮಹಾರಾಷ್ಟ್ರದ ಮುಂಬೈನ ವಸೈಯಲ್ಲಿ ನಡೆದಿದೆ. ನಿನ್ನೆ ಸಂಜೆ ಸಿಗ್ನಲಿಂಗ್ ಪಾಯಿಂಟ್ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಮೂವರು ನತದೃಷ್ಟ ಉದ್ಯೋಗಿಗಳು ಅದನ್ನು ಸರಿಪಡಿಸುವುದಕ್ಕಾಗಿ ತೆರಳಿದ್ದರು. ಈ ವೇಳೆ ಮುಂಬೈ ಲೋಕಲ್ ಟ್ರೈನೊಂದು ಇವರ ಮೇಲೆ ಚಲಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ವಸೈ ರೋಡ್ ಹಾಗೂ ನಯಿಗಾಂವ್ ನಡುವಿನ ಯುಪಿ ಸ್ಲೋ ಲೈನ್‌ನಲ್ಲಿ ನಿನ್ನೆ ರಾತ್ರಿ 10.55ರ ಸುಮಾರಿಗೆ ಈ ಅನಾಹುತ ನಡೆದಿದೆ.
ಕರ್ತವ್ಯದಲ್ಲಿದ್ದಾಗಲೇ ಪ್ರಾಣ ತೆತ್ತ ಪಶ್ಚಿಮ ರೈಲ್ವೆಯ ಉದ್ಯೋಗಿಗಳನ್ನು ಭಾಯಂದರ್‌ನ ಮುಖ್ಯ ಸಿಗ್ನಲಿಂಗ್ ಇನ್ಸ್‌ಪೆಕ್ಟರ್ ವಾಸು ಮಿತ್ರ, ವಸೈ ರೋಡ್‌ನ ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ ಸೋಮನಾಥ ಉತ್ತಮ್ ಲಂಬುಟ್ರೆ ಹಾಗೂ ಸಹಾಯಕ ಸಚಿನ್ ವಾಂಖಡೆ ಎಂದು ಗುರುತಿಸಲಾಗಿದೆ. ಈ ಎಲ್ಲಾ ಉದ್ಯೋಗಿಗಳು ವೆಸ್ಟರ್ನ್ ರೈಲ್ವೆಯ ಮುಂಬೈ ಸೆಂಟ್ರಲ್ ವಿಭಾಗದ ಸಿಗ್ನಲಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಂದೇ ಭಾರತ್ ಬಳಿಕ ಇದೀಗ ನಮೋ ಭಾರತ್, ಭಾರತದ ಮೊದಲ ಪ್ರಾದೇಶಿಕ ರೈಲು ಸೇವೆಗೆ ನಾಮಕರಣ!
ದುರಂತದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಡಿವಿಜನಲ್ ರೈಲ್ವೇ ಮ್ಯಾನೇಜರ್ ಮತ್ತು ಇತರ ಹಿರಿಯ ರೈಲ್ವೆ ಅಧಿಕಾರಿಗಳು ತಕ್ಷಣದ ಪರಿಹಾರವಾಗಿ ಕುಟುಂಬ ಸದಸ್ಯರಿಗೆ ತಲಾ 55,000 ರೂಪಾಯಿ ನೀಡಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ 15 ದಿನಗಳಲ್ಲಿ ಸಿಗಬೇಕಾದ ಎಲ್ಲಾ ಹೆಚ್ಚುವರಿ ಪರಿಹಾರ ಹಣವನ್ನು ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಹಾಯಕ ಸಚಿನ್ ವಾಂಖೆಡೆ ಮತ್ತು ಸೋಮನಾಥ್ ಅವರ ಕುಟುಂಬಕ್ಕೆ ಅಂದಾಜು. ಸುಮಾರು ರೂ. 40 ಲಕ್ಷರೂ ಪರಿಹಾರ ಸಿಗಲಿದೆ. ಅದೇ ರೀತಿ ಮುಖ್ಯ ಸಿಗ್ನಲಿಂಗ್ ಇನ್ಸ್‌ಪೆಕ್ಟರ್ ವಾಸು ಮಿತ್ರ ಕುಟುಂಬಕ್ಕೆ ಸುಮಾರು ರೂ. 1.24 ಕೋಟಿ ಮೊತ್ತದ ಪರಿಹಾರ ಸಿಗಲಿದೆ.
ಯಾದಗಿರಿ: ಉದ್ಯಾನ ಎಕ್ಸ್‌ಪ್ರೆಸ್‌ನಲ್ಲಿ ಸೀಟಿಗಾಗಿ ಮಾರಾಮಾರಿ; ಪ್ರಯಾಣಿಸುತ್ತಲೇ ಬಡಿದಾಡಿಕೊಂಡ ಯುವಕರು!
ಈ ಮೊತ್ತಕ್ಕೆ ಹೆಚ್ಚುವರಿಯಾಗಿ ಈ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಇತರ ಬಾಕಿಗಳಾದ ಡಿಸಿಆರ್‌ಜಿ, ಜಿಐಎಸ್, ರಜೆ ಎನ್‌ಕ್ಯಾಶ್‌ಮೆಂಟ್ ಮುಂತಾದವುಗಳ ಹಣವನ್ನು ಪಾವತಿಸಲಾಗುತ್ತದೆ ಅಲ್ಲದೇ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪಶ್ಚಿಮ ರೈಲ್ವೆ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದೆ.