Asianet Suvarna News Asianet Suvarna News

'ಸಿಂಗಾಪುರ ತುಂಬಾ ಪರ್ಫೆಕ್ಟ್, ಭಾರತೀಯ ಅವ್ಯವಸ್ಥೆ ಹೇಗಿರುತ್ತೆ ಎಂದು ಮರೆತಿದ್ದೇವೆ' ಚರ್ಚೆಗೆ ಒಡ್ಡಿದ ಭಾರತೀಯ ಉದ್ಯಮಿಯ ಮಾತು

ಸಿಂಗಾಪುರದಲ್ಲಿ ನೆಲೆಸಿರುವ ಭಾರತದ ಪ್ರಮುಖ ಉದ್ಯಮಿ ಆಕಾಶ್ ಧರ್ಮಾಧಿಕಾರಿ ಅವರು ಬೆಂಗಳೂರಿಗೆ ಮರಳಿ ಸ್ಥಳಾಂತರಗೊಳ್ಳುವ ನಿರ್ಧಾರಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ. 

Indian Man Living In Singapore Reveals Why He's Moving Back To Bengaluru skr
Author
First Published Jun 22, 2024, 11:59 AM IST | Last Updated Jun 22, 2024, 11:59 AM IST

ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ವ್ಯಕ್ತಿಯೊಬ್ಬರು ಮತ್ತೆ ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ನಿರ್ಧಾರವನ್ನು ಬಹಿರಂಗಪಡಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. 

'ಸಿಂಗಾಪುರ ತುಂಬಾ ಪರ್ಫೆಕ್ಟ್ ಆಗಿದೆ. ಇಲ್ಲಿ ಮಗಳು ಸಿಕ್ಕಾಪಟ್ಟೆ ಸಾಫ್ಟ್ ಆಗಿ ಬೆಳೆಯುತ್ತಿದ್ದಾಳೆ, ಅವಳು ಜೀವನದ ಅನಿಶ್ಚಿತತೆಗೆ ಒಗ್ಗಿಕೊಳ್ಳಲು ಕಲಿಯಲಿ ಎಂದು ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದೇವೆ' ಎಂದು ಸಿಂಗಾಪುರದಲ್ಲಿ ನೆಲೆಸಿರುವ ಭಾರತದ ಪ್ರಮುಖ ಉದ್ಯಮಿ ಆಕಾಶ್ ಧರ್ಮಾಧಿಕಾರಿ ಹೇಳಿದ್ದಾರೆ.

ಮಾತೃಭೂಮಿಗೆ ಮರಳುವ ತಮ್ಮ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಆಕಾಶ್, 'ನನ್ನ ಮಗಳನ್ನು ಜೀವನದ ಅನಿಶ್ಚಿತತೆಗೆ ಒಗ್ಗಿಕೊಳ್ಳಲು ನಾವು ಭಾಗಶಃ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದೇವೆ. ಸಿಂಗಾಪುರವು ತುಂಬಾ ಪರಿಪೂರ್ಣವಾಗಿದೆ ಮತ್ತು ಅದು ಅವಳನ್ನು ಮೃದುಗೊಳಿಸುತ್ತದೆ ಎಂದು ನಾವು ಭಾವಿಸಿದ್ದೇವೆ,' ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. 

'ಯಾರು ಕಂಗನಾ' ಎಂದ ನಟ ಅಣ್ಣು ಕಪೂರ್‌ಗೆ ನಟಿಯ 'ಪವರ್‌ಫುಲ್' ಪ್ರತಿಕ್ರಿಯೆ
 

AI ಪ್ಲಾಟ್‌ಫಾರ್ಮ್ ರಿಯಲ್‌ಫಾಸ್ಟ್‌ನ ಸಹ-ಸಂಸ್ಥಾಪಕ, ಧರ್ಮಾಧಿಕಾರಿ ಅವರು ತಮ್ಮ ಮಗಳು ಜೀವನದ ಅನಿಶ್ಚಿತತೆಯನ್ನು ಅನುಭವಿಸುವ ಬಯಕೆಯನ್ನು ಈ ಕ್ರಮಕ್ಕೆ ಪ್ರಾಥಮಿಕ ಕಾರಣವೆಂದು ಉಲ್ಲೇಖಿಸಿದ್ದಾರೆ.

ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ತಮ್ಮ ನಿರ್ಧಾರಕ್ಕೆ ಮತ್ತೊಂದು ಕಾರಣ ಕೊಟ್ಟಿರುವ ಅವರು, 'ದುರದೃಷ್ಟವಶಾತ್ ನಾವು ಸಹ ಭಾರತೀಯ ಅವ್ಯವಸ್ಥೆಯ ಭಾವನೆಯನ್ನು ಮರೆತಿದ್ದೇವೆ. ಮೃದುವಾಗಿದ್ದೇವೆ' ಎನ್ನುವ ಮೂಲಕ ಸಿಂಗಾಪುರದ ಜೀವನ ಸುಖದ ಸುಪ್ಪತ್ತಿಗೆಯಾಗಿತ್ತು ಎಂದಿದ್ದಾರೆ. 

ಅವರ ಪೋಸ್ಟ್ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗುತ್ತಿದ್ದಂತೆ, ಧರ್ಮಾಧಿಕಾರಿ ಸ್ಪಷ್ಟನೆ ನೀಡಿದ್ದು, 'ಬೆಂಗಳೂರಿನಲ್ಲಿ ನಾನು ವಾಡಿಕೆಯಂತೆ ಮಾಡುವ ವಿಲಕ್ಷಣ ಮತ್ತು ಭಾವೋದ್ರಿಕ್ತ ಸಂಭಾಷಣೆಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಕಳೆದ ದಶಕದಲ್ಲಿ ನಾನು ಬೆಂಗಳೂರಲ್ಲಿ ಕೆಲಸ ಮಾಡಿದ ಜನರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ, ನಾನು ಸಿಂಗಾಪುರದಲ್ಲಿ ಅದನ್ನು ಮಿಸ್ ಮಾಡಿಕೊಂಡೆ' ಎಂದಿದ್ದಾರೆ. 

39 ಲಕ್ಷ ಕೋಟಿ ಆಸ್ತಿಯಿದ್ದರೂ ಕೆಲಸದೋರಿಗೆ ಸಂಬಳ ಕೊಡೋಲ್ಲ; ಬ್ರಿಟನ್‌ನ ಶ್ರೀಮಂತ ಕುಟುಂಬ ಹಿಂದುಜಾ ಸದಸ್ಯರಿಗೆ 4 ವರ್ಷ ಜೈಲು
 

ಅವರ ಪೋಸ್ಟ್ ಎಕ್ಸ್ ಬಳಕೆದಾರರಲ್ಲಿ ಉತ್ಸಾಹಭರಿತ ಚರ್ಚೆಯನ್ನು ಹುಟ್ಟುಹಾಕಿತು. ಕೆಲವರು ವಿದೇಶದಲ್ಲಿ ವಾಸಿಸುವ ಸವಾಲುಗಳ ಬಗ್ಗೆ ಸಹಾನುಭೂತಿ ಹೊಂದಿದ್ದರು ಮತ್ತು ಇತರರು ಅವರ ನಡೆಯನ್ನು ಎಚ್ಚರಿಕೆಯಿಂದ ಪರಿಗಣಿಸುವಂತೆ ಹೇಳಿದರು.

'ಬೆಂಗಳೂರಿನಲ್ಲಿ ಜೀವನವು ಭಾರತದ ಇತರ ನಗರಗಳಿಗಿಂತ ಕಠಿಣವಾಗಿದೆ. ಹೆಚ್ಚಿನ ದಟ್ಟಣೆ- ಕಡಿಮೆ ಚಲನಶೀಲತೆ ಇದಕ್ಕೆ ಪ್ರಮುಖ ಕಾರಣ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧರ್ಮಾಧಿಕಾರಿ, ತಾನು ಈ ವಿಷಯವನ್ನು ಹೇಳಲಿಲ್ಲ ಆದರೆ ಬೆಂಗಳೂರಿನಲ್ಲಿ ಸ್ನೇಹಿತರಿರುವುದರಿಂದ ಹಿಂತಿರುಗಲು ಬಯಸುತ್ತೇನೆ ಎಂದು ಹೇಳಿದರು.

'ನಾನೂ ಕೂಡ ಕೆನಡಾದಿಂದ ವಾಪಸ್ಸಾದೆ . ಇದೀಗ 2 ವರ್ಷವಾಯಿತು. ಈಗಾಗಲೇ ಇಲ್ಲಿನ ಅವ್ಯವಸ್ಥೆಯಿಂದ ಹತಾಶನಾಗಿದ್ದೇನೆ. ಆದರೆ ಖಚಿತವಾಗಿ ಕೆನಡಾವನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ...ಆ ದೈನಂದಿನ ಅವ್ಯವಸ್ಥೆಗಳ ಹೊರತಾಗಿಯೂ ಭಾರತೀಯ ಜೀವನದಲ್ಲಿ ಕೆನಡಾವನ್ನು ತೊರೆಯುವ ನನ್ನ ನಿರ್ಧಾರವು ತಪ್ಪಾಗಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. 

'ಸಿಂಗಪುರವನ್ನು ಯಾವಾಗಲೂ ಕೃತಕವೆಂದು ಕಂಡುಕೊಳ್ಳಲಾಗಿದೆ. ಅಲ್ಲಿನ ಸ್ನೇಹಿತರು - ನನ್ನನ್ನು ಕ್ಷಮಿಸಿ, ಆದರೆ ಇದು ನಿಜ. ಜೀವನವು ಪರಿಪೂರ್ಣವಾಗಿಲ್ಲ, ನಾವು ಅದನ್ನು ಬಯಸುತ್ತೇವೆ, ಆದರೆ ಅದು ಹಾಗಿರೋಲ್ಲ. ಆದಾಗ್ಯೂ, ನೀವು ಸ್ಥಳಾಂತರಗೊಳ್ಳುವ ಮೊದಲು, ನೀವು ಪರಿಗಣಿಸಬೇಕಾದ ವಿಷಯಗಳು ಗಾಳಿ / ಆಹಾರ / ನೀರು + ಕಾನೂನು/ಸುವ್ಯವಸ್ಥೆಯ ಪರಿಸ್ಥಿತಿ, ಮೂಲಭೂತವಾಗಿ ಜೀವನದ ಗುಣಮಟ್ಟ' ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

'ಅವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ವಾದವು ದೋಷಪೂರಿತವಾಗಿದೆ. ನಾವು ಸ್ಥಿರತೆಯನ್ನು ಬಯಸುತ್ತೇವೆ, ಏಕೆಂದರೆ ಅದು ಯೋಗಕ್ಷೇಮ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅವ್ಯವಸ್ಥೆಯ ಅನಿರೀಕ್ಷಿತತೆಯು ಮಾನಸಿಕ ಆರೋಗ್ಯವನ್ನು ದುರ್ಬಲಗೊಳಿಸಬಹುದು ಮತ್ತು ಪ್ರಗತಿಗೆ ಅಡ್ಡಿಯಾಗಬಹುದು. ಸಮತೋಲಿತ ವಾತಾವರಣವು ಅವ್ಯವಸ್ಥೆಯಲ್ಲ, ನಿಜವಾದ ಶಕ್ತಿ ಮತ್ತು ಹೊಂದಾಣಿಕೆಯನ್ನು ಬೆಳೆಸುತ್ತದೆ' ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios