Asianet Suvarna News Asianet Suvarna News

'ಯಾರು ಕಂಗನಾ' ಎಂದ ನಟ ಅಣ್ಣು ಕಪೂರ್‌ಗೆ ನಟಿಯ 'ಪವರ್‌ಫುಲ್' ಪ್ರತಿಕ್ರಿಯೆ

ಕಂಗನಾ ರನೌತ್ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಣ್ಣು ಕಪೂರ್ ಪ್ರತಿಕ್ರಿಯಿಸಿ 'ಯಾರಾಕೆ, ಚೆನ್ನಾಗಿದ್ದಾಳಾ' ಎಂದು ಪ್ರಶ್ನಿಸಿದ್ದರು. ಇದಕ್ಕೆ ನಟಿ,ಬಿಜೆಪಿ ಸಂಸದೆ ಕಂಗನಾ ಪ್ರತಿಕ್ರಿಯಿಸಿದ್ದಾರೆ. 

Kangana Ranaut reacts to Annu Kapoors comment about her getting slapped by CISF constable skr
Author
First Published Jun 22, 2024, 10:51 AM IST

ಈ ತಿಂಗಳ ಆರಂಭದಲ್ಲಿ ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರನೌತ್ ದೆಹಲಿಗೆ ತೆರಳುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದಾಗ ನಟ, ಗಾಯಕ ಅಣ್ಣು ಕಪೂರ್ 'ಯಾರವಳು? ಸುಂದರವಾಗಿದ್ದಾಳಾ' ಎಂದು ಪ್ರತಿಕ್ರಿಯಿಸಿ ಕಂಗನಾ ಲೆಕ್ಕಕ್ಕೇ ಇಲ್ಲದವಳು ಎಂಬಂತೆ ಹೇಳಿದ್ದರು. 

ಇದೀಗ ಅಣ್ಣು ಕಪೂರ್ ಮಾತಿಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ. ಶುಕ್ರವಾರ ರಾತ್ರಿ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ಗೆ ಕರೆದೊಯ್ದ ಕಂಗನಾ, ಅಣ್ಣು ತನ್ನ ಬಗ್ಗೆ ಮಾತನಾಡುವಾಗಿನ ಪತ್ರಿಕಾಗೋಷ್ಠಿಯ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಮತ್ತು 'ನಾವು ಯಶಸ್ವಿ ಮಹಿಳೆಯನ್ನು ದ್ವೇಷಿಸುತ್ತೇವೆ, ಅವಳು ಸುಂದರವಾಗಿದ್ದರೆ ಅವಳನ್ನು ಹೆಚ್ಚು ದ್ವೇಷಿಸುತ್ತೇವೆ ಮತ್ತು ಶಕ್ತಿಶಾಲಿಯಾಗಿದ್ದರೆ ಅವಳನ್ನು ಇನ್ನೂ ಹೆಚ್ಚು ಉತ್ಸಾಹದಿಂದ ದ್ವೇಷಿಸುತ್ತೇವೆ ಎಂಬ ಅಣ್ಣು ಕಪೂರ್ ಜಿಯ ಮನಸ್ಥಿಯನ್ನು ಒಪ್ಪುತ್ತೀರಾ? ಇದು ನಿಜವೇ?' ಎಂದು ಬರೆದಿದ್ದಾರೆ. 


 

ಕಂಗನಾ ಅವರು ಮಂಡಿ ಕ್ಷೇತ್ರದಿಂದ ಗೆದ್ದ ನಂತರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ ಅವರಿಗೆ ಕಪಾಳಮೋಕ್ಷ ಮಾಡಿ ಸುದ್ದಿ ಹಾಗೂ ವಿಡಿಯೋ ವೈರಲ್ ಆಗಿತ್ತು. 

Kangana Ranaut reacts to Annu Kapoors comment about her getting slapped by CISF constable skr

ಅಣ್ಣು ಕಂಗನಾ ಬಗ್ಗೆ ಹೇಳಿದ್ದೇನು?
ತಮ್ಮ ಹಮಾರೆ ಬಾರಾ ಚಿತ್ರದ ಪ್ರಚಾರ ಚಟುವಟಿಕೆಯಲ್ಲಿ ನಿರತರಾಗಿರುವ ಅಣ್ಣು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಾಗ ಕಂಗನಾ ಬಗ್ಗೆ ಕೇಳಲಾಯಿತು. ಘಟನೆಯ ಬಗ್ಗೆ ನಟನನ್ನು ಪ್ರಶ್ನಿಸಿದಾಗ, 'ಯೇ ಕಂಗನಾ ಜಿ ಯಾರು? ದಯವಿಟ್ಟು ಹೇಳಿ ಯಾರಂತ? ನೀವು ಕೇಳೋದು ನೋಡಿದರೆ ಯಾರೋ ದೊಡ್ಡ ನಾಯಕಿ ಇರಬೇಕು? ಸುಂದರಿಯೇ?'ಎಂದು ಮರುಪ್ರಶ್ನಿಸಿದ್ದರು. 

'50 ಜನ ಬೈಕ್‌ಗಳಲ್ಲಿ ಸೈಫ್ ಕರೀನಾ ಪುತ್ರ ತೈಮೂರ್‌ನನ್ನು ಫಾಲೋ ಮಾಡ್ತಿದ್ರು'

ಕಂಗನಾ ಈಗ ಮಂಡಿಯಿಂದ ಹೊಸದಾಗಿ ಚುನಾಯಿತ ಸಂಸದರಾಗಿದ್ದಾರೆ ಎಂದು ಮಾಧ್ಯಮದ ವ್ಯಕ್ತಿಯೊಬ್ಬರು ಹಂಚಿಕೊಂಡಾಗ, ಅಣ್ಣು ಕಪೂರ್, 'ಓಹೋ ಹಾಗಿದ್ದರೆ ಅವಳು ಈಗ ಶಕ್ತಿಶಾಲಿಯಾಗಿದ್ದಾಳೆ' ಎಂದು ವ್ಯಂಗ್ಯವಾಡಿದ್ದರು.

ಅವರು ಸೇರಿಸಿದರು, 'ಮೊದಲೇ ಅವಳು ಸುಂದರವಾಗಿದ್ದಾಳೆಂದು ಅಸೂಯೆಯಾಗಿದೆ, ಏಕೆಂದರೆ ನಾನು ಚೆನ್ನಾಗಿಲ್ಲ. ಅದರ ಮೇಲೆ ಆಕೆ  ಶಕ್ತಿಶಾಲಿಯೂ ಆಗಿದ್ದಾಳೆ. ಆಕೆಗೆ ಯಾರೋ ಅಧಿಕಾರಿ ಹೊಡೆದಳೆಂದರೆ ಖಂಡಿತಾ ಅವರ ಮೇಲೆ ಕಂಗನಾ ಕಾನೂನು ಕ್ರಮ ತೆಗೆದುಕೊಳ್ಳಬೇಕು' ಎಂದಿದ್ದರು. ಇದರ ವ್ಯಂಗ್ಯವರಿತ ಕಂಗನಾ ಇದೇ ಮಾತುಗಳನ್ನು ಬಳಸಿ ಪ್ರತಿಕ್ರಿಯಿಸಿದ್ದಾರೆ. 
 

Latest Videos
Follow Us:
Download App:
  • android
  • ios