Travel Plan: ಪ್ರವಾಸಕ್ಕೆ ಹೋಗ್ತೀರಾ? ಈ ತಪ್ಪುಗಳನ್ನ ಮಾಡ್ಲೇಬೇಡಿ

ಪ್ರವಾಸಕ್ಕೆ ಹೋಗುವಾಗ ಕೆಲವು ತಪ್ಪುಗಳನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಅವುಗಳಿಂದಾಗಿ ಪ್ರವಾಸ ಕೆಟ್ಟ ಕನಸಿನಂತೆ ಅನುಭವವಾಗುತ್ತದೆ. ಆಗುತ್ತದೆ. ಪ್ರವಾಸ ಹೊರೆಯಾಗದೆ ಇರಲು ಅಂತಹ ತಪ್ಪುಗಳನ್ನು ನೀವು ಮಾಡಬೇಡಿ.
 

If you ready for travel do not do these mistakes

ಮಕ್ಕಳಿಗೆ ರಜಾ ದಿನಗಳು ಬರುತ್ತಿವೆ. ಇಷ್ಟು ದಿನಗಳ ಕಾಲ ವೀಕೆಂಡ್‌ ಟ್ರಿಪ್‌ ಪ್ಲಾನ್‌ ಮಾಡುವವರೆಲ್ಲ ಈಗ ನಾಲ್ಕಾರು ದಿನಗಳ ಅವಧಿಯ ಪ್ರವಾಸಗೈಯ್ಯುವ ಯೋಜನೆ ಹಾಕಿಕೊಂಡಿರುತ್ತೀರಿ. ವಿದೇಶಗಳ ಪ್ರವಾಸವಾದರಂತೂ ತಿಂಗಳು ಮೊದಲೇ ಬುಕ್‌ ಮಾಡಿಕೊಂಡಿರುತ್ತೀರಿ. ಆದರೆ, ಹೊರಡುವ ಸಮಯ ಬಂದಾಗ ಕೆಲವು ತಪ್ಪುಗಳು ಅರಿಯದೇ ನಡೆದುಬಿಡುತ್ತವೆ. ಅದರಿಂದಾಗಿ, ಪ್ರವಾಸದ ವೇಳೆ ಅನೇಕ ಸಮಸ್ಯೆಗಳು ಉದ್ಭವವಾಗಿ ಇಡೀ ಪ್ರವಾಸವೇ ಕೆಟ್ಟ ಕನಸಿನಂತಾದ ಅನುಭವ ಕೆಲವೊಮ್ಮೆ ನಿಮಗೆ ಆಗಿರಬಹುದು ಅಥವಾ ನಿಮ್ಮ ವಲಯದಲ್ಲಿ ಯಾರಿಗಾದರೂ ಆಗಿರಬಹುದು. ಏಕೆಂದರೆ, ಕೆಲವು ಬಾರಿ ನಾವು ಮಾಡುವ ತಪ್ಪುಗಳು, ಹವಾಮಾನ ಏರಿಳಿತ, ಸ್ಥಳೀಯ ಸಮಸ್ಯೆಗಳ ಕಾರಣದಿಂದಾಗಿ ಪ್ರವಾಸ ಭಯಾನಕವಾಗಿ ಬಿಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ನಮ್ಮ ಕಡೆಯಿಂದಾಗುವ ಸಾಮಾನ್ಯ ತಪ್ಪುಗಳನ್ನು ಅವಾಯ್ಡ್‌ ಮಾಡಲು ಸಾಧ್ಯವಿದೆ. ಹವಾಮಾನ ಏರಿಳಿತ ಸೇರಿದಂತೆ ಉಳಿದ ಸಮಸ್ಯೆಗಳೆಲ್ಲ ನಮ್ಮ ಕೈ ಮೀರಿದವು. ಸಾಮಾನ್ಯವಾಗಿ, ಪ್ರವಾಸ ಹೋಗುವವರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಪ್ರವಾಸಕ್ಕೆ ಸಾಕಷ್ಟು ಮೊದಲೇ ಪ್ಲಾನ್‌ ಮಾಡಿಕೊಂಡಿದ್ದರೂ ತಪ್ಪುಗಳು ಘಟಿಸಿಬಿಡುತ್ತವೆ. ಕೆಲವೊಮ್ಮೆ ಮೊದಲೇ ಪ್ಲಾನ್‌ ಮಾಡುವಲ್ಲಿಯೂ ಎಡವಬಹುದು. ಎಲ್ಲರೂ ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳನ್ನು ಅರಿತುಕೊಳ್ಳಿ, ಅವುಗಳನ್ನು ನೀವೂ ಮಾಡಬೇಡಿ.

•    ಅತಿಯಾದ ಲಗ್ಗೇಜ್‌ (Over Luggage) 
ಇದು ಪ್ರತಿಯೊಬ್ಬರೂ ಮಾಡುವ ತಪ್ಪು. ವಿಧವಿಧ ಡ್ರೆಸ್‌ (Dress) ಗಳನ್ನು ಹಾಕಿಕೊಂಡು ನಲಿಯಬೇಕೆಂಬ ಆಸೆಯುಳ್ಳವರು, ತಾವು ಹೋದಲ್ಲೆಲ್ಲ ತಮ್ಮ ಎಲ್ಲ ಸಾಮಾನುಗಳೂ ಬೇಕೆಂದು ಇಷ್ಟಪಡುವವರು, ಹೋದಲ್ಲೆಲ್ಲ ತಮ್ಮೊಂದಿಗೆ ಮನೆಯನ್ನೇ ಕೊಂಡೊಯ್ಯುವವರು ಈ ತಪ್ಪನ್ನು ಮಾಡುತ್ತಾರೆ. ಮಹಿಳೆಯರ (Women) ಕಾರಣದಿಂದ ಅತಿಯಾದ ಲಗ್ಗೇಜ್‌ ಸೃಷ್ಟಿಯಾಗುತ್ತದೆ ಎನ್ನುವ ಆರೋಪವಿದೆ. ಬಹುಮಟ್ಟಿಗೆ ಇದು ನಿಜವೂ ಹೌದು. ನಿಮಗೆ ಅಗತ್ಯವಾಗಿ ಯಾವುದು ಬೇಕೋ ಅಷ್ಟನ್ನೇ ಒಯ್ಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ಹೋಗುವ ಸ್ಥಳದ (Travel Destination) ಹವಾಮಾನ (Weather) ಅರಿತುಕೊಳ್ಳಿ. ಅದಕ್ಕೆ ತಕ್ಕಂತೆ ಬಟ್ಟೆಗಳನ್ನು (Cloths) ಒಯ್ಯಿರಿ. ಪಟ್ಟಿ ಮಾಡಿಕೊಂಡಂತೆ ನಡೆದುಕೊಂಡಿದ್ದೇ ಆದಲ್ಲಿ ನಿಮ್ಮ ಬ್ಯಾಗ್‌ (Bag)ನಲ್ಲಿ ಖರೀದಿಸಿದ ವಸ್ತುಗಳಿಗೂ ಜಾಗ ದೊರೆಯುತ್ತದೆ, ಇಲ್ಲವಾದಲ್ಲಿ ಹೊಸ ಲಗ್ಗೇಜ್‌ ಸೃಷ್ಟಿಯಾಗುತ್ತದೆ.

•    ಕಡಿಮೆ ಅವಧಿಯಲ್ಲಿ ವಿಮಾನ ಬುಕ್‌ (Short Layover Fight Booking) ಮಾಡುವುದು
ಒಂದಕ್ಕೊಂದು ಸಂಪರ್ಕಿಸುವ (Connecting) ವಿಮಾನಗಳಲ್ಲಿ ಸಂಚರಿಸುವುದಾದರೆ ತೀರ ಕಡಿಮೆ ಅವಧಿಯಲ್ಲಿರುವ ವಿಮಾನವನ್ನು ಬುಕ್‌ ಮಾಡುವುದು ಸಲ್ಲದು. ನೀವು ಪದೇ ಪದೆ ವಿಮಾನಗಳಲ್ಲಿ ಸಂಚರಿಸುವವರಾಗಿದ್ದರೆ ಒಂದು ವಿಷಯ ತಿಳಿದುಬರುತ್ತದೆ, ಅದೆಂದರೆ, ಅನೇಕ ಜನ ವಿವಿಧ ಕಾರಣಗಳಿಂದಾಗಿ ವಿಮಾನವನ್ನು ಮಿಸ್‌ (Miss) ಮಾಡಿಕೊಳ್ಳುತ್ತಾರೆ. ನಿಮ್ಮ ವಿಮಾನ ಹವಾಮಾನ ಅಥವಾ ದೀರ್ಘ ಕಸ್ಟಮ್ಸ್‌ ಸರತಿ ಅಥವಾ ನೀವು ಒಂದು ಟರ್ಮಿನಲ್‌ ನಿಂದ ಇನ್ನೊಂದು ಟರ್ಮಿನಲ್‌ ಗೆ ಹೋಗಬೇಕಾದ ಸಮಯದಲ್ಲಿ ವಿಳಂಬವಾಗಬಹುದು. ಆಗ ಮತ್ತೊಂದು ವಿಮಾನ ಮಿಸ್‌ ಆಗಿ ಪ್ರವಾಸದ ಯೋಜನೆಗಳೆಲ್ಲ ತಲೆಕೆಳಗಾಗಬಹುದು. ಕನೆಕ್ಟಿಂಗ್‌ ವಿಮಾನ ಮಿಸ್‌ ಆಗದಂತೆ ಸಾಕಷ್ಟು ಸಮಯ ಇಟ್ಟುಕೊಳ್ಳಿ.

ಇದನ್ನೂ ಓದಿ: ಮುಳ್ಳಯನಗಿರಿ ಸೌಂದರ್ಯ ಹೆಚ್ಚಿಸಿದ ನೀಲಿಕುರವಂಜಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಿಕ್ಕಮಗಳೂರು

•    ಅತಿ ಬಿಗಿಯಾದ ಶೆಡ್ಯೂಲ್‌ (Packed Schedule) 
ಒಂದು ಪ್ರವಾಸದಲ್ಲೇ ನೀವು ಎಲ್ಲವನ್ನೂ ಅನುಭವಿಸುವ ವಿಚಾರವನ್ನು ಬಿಡುವುದು ಉತ್ತಮ. ಏಕೆಂದರೆ, ಅದು ಪ್ರಾಯೋಗಿಕವಾಗಿ (Practically) ಸಾಧ್ಯವಿಲ್ಲ. ಒಂದು ಸ್ಥಳದ ಪ್ರಮುಖ ಕೆಲವು ಭಾಗಗಳನ್ನು ಮಾತ್ರ ನೋಡಲು ಸಾಧ್ಯವಾಗಬಹುದೇ ಹೊರತು ಎಲ್ಲವನ್ನೂ ನೋಡುವುದು ಕನಸಿನ ಮಾತಾಗುತ್ತದೆ. ಎಲ್ಲವನ್ನೂ ನೋಡಲು ಪ್ರಯತ್ನಿಸಿದರೆ ಗಡಿಬಿಡಿಯ, ಯಾವುದಕ್ಕೂ ಪುರುಸೊತ್ತಿಲ್ಲದ ಪ್ರವಾಸವಾಗಿ ಕಿರಿಕಿರಿಯಾಗುತ್ತದೆ. ಸಾಕಷ್ಟು ಸಮಯಾವಕಾಶ ಇಟ್ಟುಕೊಂಡು ಹೋಗಿ.

•    ಖ್ಯಾತ ಹೋಟೆಲ್‌ ಗಳಲ್ಲಿ ಆಹಾರ (Food in Famous Hotel)
ಹೋದ ಸ್ಥಳಗಳ ಖ್ಯಾತ ಸ್ಥಳಗಳಲ್ಲಿ ಆಹಾರ ಸವಿಯಬೇಕೆನ್ನುವುದು ಬಹುತೇಕರ ಆಸೆ. ಇದರಿಂದ ಸಮಯ ವ್ಯರ್ಥವಾಗುತ್ತದೆ ಹಾಗೂ ನಿಮಗೆ ಸ್ಥಳೀಯ ಆಹಾರದ (Local Food) ಸೊಗಡು ಲಭ್ಯವಾಗುವುದಿಲ್ಲ. ಅಲ್ಲದೇ ಹಣವೂ (Money) ಹೆಚ್ಚು ವೆಚ್ಚವಾಗುತ್ತದೆ. 

ಇದನ್ನೂ ಓದಿ: Travel Tips in Kannada: ಏಕಾಂಗಿ ಪ್ರಯಾಣ ಇಷ್ಟನಾ? ಕರ್ನಾಟಕದ ಈ ಸ್ಥಳಗಳಿಗೆ ಹೋಗಿ

•    ಅಗತ್ಯ ದಾಖಲೆಗಳನ್ನು ಒಯ್ಯದಿರುವುದು (Required Document)
ನೀವು ವಿದೇಶಕ್ಕೆ ಪ್ರವಾಸ ಮಾಡುತ್ತಿರುವವರಾದರೆ ಅಗತ್ಯ ದಾಖಲೆ ಒಯ್ಯಲು ಮರೆಯಬಾರದು. ಸ್ಥಳೀಯ ಪ್ರವಾಸವಾದರೂ ಕೆಲವು ದಾಖಲೆಗಳು ಬೇಕಾಗುತ್ತವೆ. 

Latest Videos
Follow Us:
Download App:
  • android
  • ios