ಮುಳ್ಳಯನಗಿರಿ ಸೌಂದರ್ಯ ಹೆಚ್ಚಿಸಿದ ನೀಲಿಕುರವಂಜಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಿಕ್ಕಮಗಳೂರು
ಸೌಂದರ್ಯದಿಂದ ಸದಾ ಕಂಗೊಳಿಸುವ ಚಿಕ್ಕಮಗಳೂರಿನ ಈ ಹಿರಿಮೆಗೆ ಗರಿ ಎಂಬಂತೆ ಈ ಬಾರಿ ಅಲ್ಲಿ ನೀಲಿಕುರುಂಜಿ ಹೂಗಳು ಅರಳಿ ನಿಂತಿದ್ದು, ಕಾಫಿನಾಡಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಚಿಕ್ಕಮಗಳೂರು: ಹೇಳಿ ಕೇಳಿ ಚಿಕ್ಕಮಗಳೂರು ಕಾಫಿನಾಡು ಪ್ರವಾಸಿಗರ ಪಾಲಿನ ಸ್ವರ್ಗ ಎಂದು ಈಗಾಗಲೇ ಖ್ಯಾತಿಗಳಿಸಿದೆ. ಪ್ರಕೃತಿ ಸೌಂದರ್ಯದಿಂದ ಸದಾ ಕಂಗೊಳಿಸುವ ಚಿಕ್ಕಮಗಳೂರಿನ ಈ ಹಿರಿಮೆಗೆ ಗರಿ ಎಂಬಂತೆ ಈ ಬಾರಿ ಅಲ್ಲಿ ನೀಲಿಕುರುಂಜಿ ಹೂಗಳು ಅರಳಿ ನಿಂತಿದ್ದು, ಕಾಫಿನಾಡಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಈ ನೀಲಿಕುರುಂಜಿ ಹೂಗಳು ತುಂಬಾ ಅಪರೂಪವಾಗಿದ್ದು, 12 ವರ್ಷಗಳಿಗೊಮ್ಮೆ ಮಾತ್ರ ಅರಳುತ್ತವೆ. ಇದು ಈಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಚಿಕ್ಕಮಗಳೂರಿನತ್ತ ಜನ ದಾಂಗುಡಿ ಇಡುತ್ತಿದ್ದಾರೆ.
ಪ್ರಕೃತಿ ಸದಾ ನಮ್ಮನ್ನು ಅದರ ಒಂದಲ್ಲ ಒಂದು ಅದ್ಭುತ ಸೌಂದರ್ಯ ವಿಸ್ಮಯದಿಂದ ನಮ್ಮನ್ನು ಅಚ್ಚರಿಗೊಳಿಸುತ್ತಲೇ ಇರುತ್ತದೆ. ಅದೇ ರೀತಿ ಈಗ ಚಿಕ್ಕಮಗಳೂರಿನ (chikkamagaluru) ಈ ಮುಳ್ಳಯನಗಿರಿಯಲ್ಲಿ (Mullainagiri) ಅರಳಿದ ನೀಲಿ ಅಥವಾ ನೇರಳೆ ಬಣ್ಣದ ಈ ಅಪರೂಪದ ನೀಲಿಕುರುಂಜಿ ಹೂಗಳು (Neelakurinji flower) ಇಡೀ ಬೆಟ್ಟವನ್ನೇ ನೇರಳೆ ಬಣ್ಣಕ್ಕೆ ತಿರುಗಿಸಿದ್ದು, ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ನೇರಳೆ ನೀಲಿ ಬಣ್ಣದ 12 ವರ್ಷಕ್ಕೊಮ್ಮೆ ಅರಳುವ ಈ ಹೂವುಗಳಿಂದಾಗಿಯೇ ತಮಿಳುನಾಡಿನ (Tamilnadu) ನೀಲಗಿರಿ ಕಾಡಿಗೆ (Nilgiri Forest) ಈ ಹೆಸರು ಬಂದಿದೆಯಂತೆ.
ಸಾಮಾನ್ಯವಾಗಿ ನೀಲಗಿರಿ ಪರ್ವತಶ್ರೇಣಿ ವ್ಯಾಪ್ತಿಯಲ್ಲಿ, ಶೋಲಾ ಕಾಡುಗಳಲ್ಲಿ ಕಾಣಿಸಿಕೊಳ್ಳುತ್ತವೆ. Strobilanthes kunthiana ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಈ ಹೂವುಗಳು ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಪೊದೆಸಸ್ಯವಾಗಿದೆ. ಹಿಂದೆ ತಮಿಳುನಾಡಿನಲ್ಲಿ ವಾಸಿಸುವ ಪಾಲಿಯನ್ ಬುಡಕಟ್ಟು (Palian tribe) ಜನರು ತಮ್ಮ ವಯಸ್ಸನ್ನು ಲೆಕ್ಕಹಾಕಲು ಈ ಹೂವು ಅರಳುವ ಸಮಯವನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದರು ಎಂಬುದು ದಾಖಲೆಗಳಲ್ಲಿವೆ. ಸೆಪ್ಟೆಂಬರ್‌ರಿಂದ ಅಕ್ಟೋಬರ್ ಅವಧಿಯಲ್ಲಿಯೇ ಈ ನೀಲಿಕುರವಂಜಿ ಹೂಗಳು ಅರಳುತ್ತವೆ.
ಚಿಕ್ಕಮಗಳೂರು ಕಡೆ ಪ್ರವಾಸ ಹೊರಟಿದ್ದೀರಾ.? ಜಿಲ್ಲಾಡಳಿತದಿಂದ ಹೀಗಿದೆ ನಿರ್ಬಂಧ
ಇಂತಹ ಹಿನ್ನೆಲೆ ಇರುವ ಈ ನೀಲಿ ಕುರವಂಜಿ ಹೂಗಳು ಈಗ ನಮ್ಮ ಚಿಕ್ಕಮಗಳೂರಿನ ಮುಳ್ಳಯ್ಯನ್ನಗಿರಿಯಲ್ಲಿ ಅರಳಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದು, ಚಿಕ್ಕಮಗಳೂರಿನ ರಮಣೀಯ ತಾಣದ ಈ ಸುಂದರ ದೃಶ್ಯ ಜಗತ್ತನ್ನು ತಲುಪುತ್ತಿದೆ. ದುರ್ಗಪ್ರಸಾದ್ (Durga prasad) ಎಂಬ ಟ್ವಿಟ್ಟರ್ ಬಳಕೆದಾರರು ಕೂಡ 23 ಸೆಕೆಂಡ್‌ಗಳ ವಿಡಿಯೋವೊಂದನ್ನು ಹರಿ ಬಿಟ್ಟಿದ್ದು ಹೂಗಳಿಂದ ಇಡೀಯ ಮುಳ್ಳಯನ್ನಗಿರಿ ಬೆಟ್ಟವೇ ನೇರಳೆ ಬಣ್ಣಕ್ಕೆ ತಿರುಗಿದೆ.
ಮಳೆಗಾಲದ ಸೊಬಗು: ಮೈದುಂಬಿ ನಿಂತಿದೆ ಮುಳ್ಳಯ್ಯನಗಿರಿ..!
12 ವರ್ಷಗಳ ಬಳಿಕ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ನೀಲಕುರವಂಜಿ ಹೂ ಅರಳಿದೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಪಶ್ಚಿಮಘಟ್ಟದ ತಮಿಳುನಾಡು, ಕೇರಳ (Kerala), ಕರ್ನಾಟಕ ಅದರಲ್ಲೂ ಪ್ರವಾಸಿ ತಾಣವೆನಿಸಿದ ಊಟಿ ಮುನ್ನಾರ್‌ನಲ್ಲಿ (Munnar) ಇವು ಕಾಣಿಸುತ್ತಿವೆ ಎಂದು ಅವರು ವಿಡಿಯೋ ಶೇರ್ ಮಾಡಿ ಮಾಹಿತಿ ನೀಡಿದ್ದಾರೆ.
ಈ ವಿಡಿಯೋವನ್ನು ನೂರಾರು ಜನ ಲೈಕ್ ಮಾಡಿದ್ದು, ಬಹಳ ಸುಂದರವಾಗಿದೆ. ಇದೊಂದು ಸ್ವರ್ಗ, ರಜಾದಿನಗಳನ್ನು ಕಳೆಯಲು ಅಮೆರಿಕಾ ಯುರೋಪ್‌ಗೆ ಹೋಗುವ ಅಗತ್ಯವಿಲ್ಲ. ಪಶ್ಚಿಮ ಘಟ್ಟಗಳು ತುಂಬಾ ಸುಂದರವಾಗಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಮುಳ್ಳಯನಗಿರಿಗೆ ಭೇಟಿ ಮಾಡಬೇಕಾದ ಸಮಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.