Asianet Suvarna News Asianet Suvarna News

Travel Tip: ಗೋವಾದಲ್ಲಿದೆ ನೀವು ನೋಡದ ಅದ್ಭುತ ಬೀಚ್ ಇಲ್ಲಿದೆ..

ಗೋವಾ ಅಂದ್ರೆ ಗಿಜಿಗಿಜಿ ಅಂದ್ಕೊಂಡಿದ್ದೇವೆ ನಾವು. ಗೋವಾದಲ್ಲೂ ಶಾಂತ ಸ್ಥಳಗಳಿವೆ. ಸಂಗಾತಿ ಜೊತೆ ಸುಂದರ ಸ್ಥಳಗಳನ್ನು ಕಳೆಯಬೇಕು ಅಂದ್ಕೊಂಡಿದ್ರೆ ನೀವು ಆ ಬೀಚ್ ಗೆ ಭೇಟಿ ನೀಡಿ. ಜೀವನದಲ್ಲಿ ಮರೆಯಲಾಗದ ಅನುಭವವನ್ನು ನೀವು ಪಡೆಯಬಹುದು. 
 

How Much You Know About The Secrets Beaches Of Goa
Author
First Published Nov 11, 2022, 3:23 PM IST

ಪ್ರವಾಸಿಗರ ಸ್ವರ್ಗ ಗೋವಾ. ಅದ್ಭುತ ಕಡಲತೀರಗಳಿಗೆ ಹೆಸರುವಾಸಿಯಾಗಿರುವ ಗೋವಾ ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಹರಿದು ಬರ್ತಾರೆ. ರಜೆ ಶುರುವಾದ್ರೆ ಸಾಕು ಅನೇಕರು ಗೋವಾಕ್ಕೆ ಓಡ್ತಾರೆ. ಗೋವಾದಲ್ಲಿ ಸಾಕಷ್ಟು ಸುಂದರ ಬೀಚ್ ಗಳಿವೆ. ಕೆಲವು ಜನ ಜಂಗುಳಿಯಿಂದ ತುಂಬಿರುವ ಬೀಚ್ ಗಳಾದ್ರೆ ಮತ್ತೆ ಕೆಲವು ಶಾಂತವಾಗಿರುವ ಬೀಚ್ ಗಳು. ಬೆಳಿಗ್ಗೆ ಕಡಲ ತೀರದಲ್ಲಿ ಪ್ರವಾಸಿಗರ ದಂಡಿದ್ರೆ ರಾತ್ರಿಯಲ್ಲಿ ಗೋವಾ ಚಿತ್ರಣ ಸಂಪೂರ್ಣ ಬದಲಾಗಿರುತ್ತದೆ. ಬೀಚ್ ನ ಮರಳಿನಲ್ಲಿ ಆಟವಾಡ್ತಾ ಇದ್ರೆ ಸಮಯ ಕಳೆಯೋದು ತಿಳಿಯೋದಿಲ್ಲ. ವರ್ಷದಲ್ಲಿ ಒಮ್ಮೆ ಗೋವಾಕ್ಕೆ ಹೋಗೋರು, ಗೋವಾದ ಹೊಸ ಹೊಸ ಸ್ಥಳಗಳನ್ನು ನೋಡಲು ಇಷ್ಟಪಡ್ತಾರೆ. ಕುಟುಂಬದ ಜೊತೆ ಆರಾಮವಾಗಿ ಗೋವಾ ಸೌಂದರ್ಯ ಸವಿಯಬೇಕು ಎಂದಾದ್ರೆ ಪ್ಲಾನ್ ಮಾಡಿ ಹೋಗಿ. ಕಡಲತೀರ ಸುಂದರ ಸ್ವರ್ಗ ಗೋವಾದಲ್ಲಿ ಅನೇಕ ಆಫ್‌ಬೀಟ್ ಸ್ಥಳಗಳು ಅಡಗಿವೆ. ನಾವಿಂದು ನೀವು ನೋಡದ ಗೋವಾ ಬಗ್ಗೆ ನಿಮಗೆ ಪರಿಚಯ ಮಾಡಿದ್ತೇವೆ. 

ಗೋವಾ (Goa) ಕ್ಕೆ ಹೋದ್ರೆ ಇವನ್ನೂ ನೋಡಿ ಬನ್ನಿ :  
ಬಟರ್ಫ್ಲೈ ಬೀಚ್ (Butterfly Beach)  :
ಬಟರ್‌ಫ್ಲೈ ಬೀಚ್‌ ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಗೋವಾದ ಬಟರ್‌ಫ್ಲೈ ಬೀಚ್ ಪ್ರವಾಸಿಗರ ಹೃದಯ. ಸೀಕ್ರೆಟ್ ಬೀಚ್ ಎಂದೂ ಇದನ್ನು ಕರೆಯುತ್ತಾರೆ. ಬಟರ್‌ಫ್ಲೈ ಬೀಚ್ ಹನಿಮೂನ್‌ಗೆ ಉತ್ತಮ ಸ್ಥಳವಾಗಿದೆ. ಇಲ್ಲಿ ನೀವು ಬೋಟಿಂಗ್ ಮೂಲಕ ಅಥವಾ ಟ್ರೆಕ್ಕಿಂಗ್ ಮೂಲಕ ಹೋಗಬೇಕಾಗುತ್ತದೆ. ಗೋವಾದಲ್ಲಿ ಅನೇಕ ಡಾಲ್ಫಿನ್ ಸ್ಪಾಟ್ ಗಳಿವೆ. ಆದ್ರೆ  ಬಟರ್‌ಫ್ಲೈ ಬೀಚ್ ನಲ್ಲಿ ಡಾಲ್ಫಿನ್ ನೋಡಲು ನಿಮಗೆ ಹೆಚ್ಚಿನ ಅವಕಾಶ ಸಿಗುತ್ತೆ. ಯಾಕೆಂದ್ರೆ ಇಲ್ಲಿ ಪ್ರವಾಸಿಗರು ಬರೋದು ಕಡಿಮೆ. ನಿಶ್ಯಬ್ದ ಮತ್ತು ಗೌಪ್ಯತೆಗೆ ಇದು ಹೆಸರುವಾಸಿ.

ಕಲಾಚಾ ಬೀಚ್ (Kalacha Beach)  : ಕಲಾಚಾ ಬೀಚ್ ಉತ್ತರ ಗೋವಾದ ಅತ್ಯುತ್ತಮ ಮತ್ತು ಆಸಕ್ತಿದಾಯಕ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳದ ವಿಶೇಷವೆಂದ್ರೆ ಅಲ್ಲಿ  ಜನಸಂದಣಿ ಇರೋದಿಲ್ಲ. ಶಾಂತಿಯಿಂದ ಸಮಯ ಕಳೆಯಲು ಬಯಸುವವರಿಗೆ ಇದು ಉತ್ತಮ ಬೀಚ್. ಸಮುದ್ರದ ಅಲೆಗಳ ಅಬ್ಬರವನ್ನು ನೀವಿಲ್ಲಿ ತಣ್ಣಗೆ ಕುಳಿತು ಸವಿಯಬಹುದು.

ನವೆಂಬರ್ ನಲ್ಲಿ snow fall ನೋಡೋ ಆಸೆನಾ? ಹಾಗಿದ್ರೆ ಈಗಲೇ ಬ್ಯಾಗ್ ಪ್ಯಾಕ್ ಮಾಡ್ಕೊಳಿ… 

ಬೇತಾಲ್ಬಾತಿಮ್ ಬೀಚ್ (Betalbatim Beach) : ಪ್ರೇಮಿಗಳಿಗೆ ಹೇಳಿ ಮಾಡಿಸಿದ ಬೀಚ್ ಇದು. ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಇದು ಉತ್ತಮ ಸ್ಥಳವಾಗಿದೆ. ಸೂರ್ಯಾಸ್ತಕ್ಕೆ ಹೆಸರುವಾಸಿಯಾದ ಬೀಚ್ ಇದು. ಸಮುದ್ರ ಮತ್ತು ಸೂರ್ಯಾಸ್ತದ ಅತ್ಯಂತ ಅದ್ಭುತವಾದ ನೋಟವನ್ನು ನೀವಿಲ್ಲಿ ವೀಕ್ಷಿಸಬಹುದು. ಈ ಸ್ಥಳ ತಾಳೆ ಎಲೆಗಳಿಂದ ಆವೃತವಾಗಿದೆ.

ಹಾಲಂಟ್ ಬೀಚ್ (Hollant Beach) : ಗೋವಾದಲ್ಲಿ ಬೆಳಿಗ್ಗೆ ಬೇಗ ಏಳಿ ಅಂದ್ರೆ ನೀವು ನಗ್ಬಹುದು. ಅದು ಸ್ವಲ್ಪ ಕಷ್ಟ ಎನ್ನಬಹುದು. ಆದ್ರೆ ಬೇಗ ಏಳ್ತೇನೆ ಅನ್ನೋರು ನೀವಾಗಿದ್ದರೆ, ನೀವು ಅದ್ಭುತ ಅನುಭವ ಪಡೆಯಬಹುದು. ಮುಂಜಾನೆ ಬೇಗ ಎದ್ದು ನೀವು ಈ ಹಾಲಂಟ್ ಬೀಚ್ ಗೆ ಹೋದ್ರೆ ಸಿಗುವ ಅನುಭವವನ್ನು ನೀವು ಜೀವಿತಾವಧಿಯಲ್ಲಿ ಖಂಡಿತವಾಗಿಯೂ ಮರೆಯೋದಿಲ್ಲ. ಗೋವಾದ ಹಾಲಂಟ್ ಬೀಚ್, ನೀವು ಉಳಿದಿರುವ ಹೊಟೇಲ್ ನಿಂದ ಹತ್ತಿರವಿದೆ ಅಂದ್ರೆ ಮಿಸ್ ಮಾಡ್ದೆ ಅಲ್ಲಿಗೆ ಹೋಗಿ ಬನ್ನಿ.

ಗಲ್ಗಿಬಾಗ (Galgibaga) : ಗೋವಾದ ಸುಂದರ ಬೀಚ್ ಗಳಲ್ಲಿ ಇದೂ ಒಂದು. ಪ್ರಶಾಂತ ವಾತಾವರಣವನ್ನು ಈ ಗಲ್ಗಿಬಾಗ ಬೀಚ್ ನಲ್ಲಿ ನೀವು ಕಾಣಬಹುದು. ಗಲ್ಗಿಬಾಗ ಬೀಚ್, ಆಲಿವ್ ರಿಡ್ಲೆ ಆಮೆ ಗೂಡುಗಳನ್ನು ತಯಾರಿಸುವುದಕ್ಕೂ  ಹೆಸರುವಾಸಿಯಾಗಿದೆ. 

ದಕ್ಷಿಣ ಭಾರತದ ಭಯಾನಕ ಸ್ಥಳಗಳಿವು, ಹಾರರ್ ಪ್ಲೇಸಿಗೆ ಹೋಗೋ ಪ್ಲ್ಯಾನ್ ಇದ್ರೆ ಟ್ರೈ ಮಾಡಿ

ಕಾಕೋಲೆಮ್ ಬೀಚ್ (Kakolem Beach)  : ಕಾಕೋಲೆಮ್ ಬೀಚ್ ಅನ್ನು ಟೈಗರ್ ಬೀಚ್ ಎಂದೂ ಕರೆಯುತ್ತಾರೆ. ರೋಮ್ಯಾಂಟಿಕ್ ಸ್ಥಳಗಳನ್ನು ಹುಡುಕುತ್ತಿರುವವರಿಗೆ ಕಾಕೋಲೆಮ್ ಬೀಚ್ ಸೂಕ್ತ ಸ್ಥಳವಾಗಿದೆ. ನೀವಿಲ್ಲ ಆರಾಮವಾಗಿ ದಿನ ಕಳೆಯಬಹುದು.  
 

Latest Videos
Follow Us:
Download App:
  • android
  • ios