ನವೆಂಬರ್ ನಲ್ಲಿ snow fall ನೋಡೋ ಆಸೆನಾ? ಹಾಗಿದ್ರೆ ಈಗಲೇ ಬ್ಯಾಗ್ ಪ್ಯಾಕ್ ಮಾಡ್ಕೊಳಿ…
ಅಂತೂ, ಇಂತೂ ನೀವು ವರ್ಷದ ಕೊನೆಯ ಹಂತಕ್ಕೆ ತಲುಪಿದ್ದೀರಿ…, ಅಷ್ಟೇ ಅಲ್ಲ ಇದು ನವಂಬರ್ ಕೂಡ ಆಗಿದೆ. ಈ ಚಳಿಗಾಲದ ಆರಂಭದಲ್ಲಿ ಯಾವುದಾದರೂ ತಾಣಗಳಿಗೆ ಹೋಗಲು ಕೂಡ ನೀವು ಈಗಾಗಲೇ ತಯಾರಿ ನಡೆಸಿರಬಹುದು. ನೀವು ಸ್ನೋ ಫಾಲ್ ಪ್ರಿಯರಾಗಿದ್ದರೆ, ಈ ನವಂಬರ್ ನಲ್ಲಿ ನೀವು ಭಾರತದಲ್ಲಿ ಅತ್ಯಂತ ಸುಂದರ ಮಂಜಿನ ನಗರಿಗಳನ್ನು ನೋಡಿ ಬರಬಹುದು. ಅಂತಹ ಸುಂದರ ತಾಣಗಳು ಯಾವುವು ಅನ್ನೋದು ನೋಡೋಣ.
ನವೆಂಬರ್ ತಿಂಗಳು ಪ್ರವಾಸೋದ್ಯಮಕ್ಕೆ ತುಂಬಾನೆ ಬೆಸ್ಟ್ ತಿಂಗಳು ಅಲ್ವಾ?. ಈ ಸೀಸನ್ ನಲ್ಲಿ ಗಿರಿಧಾಮಕ್ಕೆ ಭೇಟಿ ನೀಡೋದು ವಿಭಿನ್ನ ಎಂಜಾಯ್ ಮೆಂಟ್ ನೀಡುತ್ತೆ. ನವಂಬರ್ ಅಂದರೆ ಚಳಿಗಾಲ, ಈ ಸಮಯವನ್ನು ಎಂಜಾಯ್ ಮಾಡಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡುತ್ತಾರೆ. ಶಿಮ್ಲಾ, ಮನಾಲಿ, ಶ್ರೀನಗರ ಮುಂತಾದ ಸ್ಥಳಗಳಲ್ಲಿ ಪ್ರವಾಸಿಗರು ಸ್ನೋ ಫಾಲ್ ನ್ನು (snowfall) ಎಂಜಾಯ್ ಮಾಡ್ತಾರೆ. ನೀವು ಕೂಡ ಸ್ನೋ ಫಾಲ್ ಎಂಜಾಯ್ ಮಾಡಲು ಬಯಸಿದರೆ, ಖಂಡಿತವಾಗಿಯೂ ದೇಶದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಿ. ಆ ಸುಂದರ ತಾಣಗಳ ಬಗ್ಗೆ ತಿಳಿಯೋಣ.
ಗುಲ್ಮಾರ್ಗ್
ಕಾಶ್ಮೀರವನ್ನು ಭೂಮಿಯ ಸ್ವರ್ಗ (Heaven on earth) ಎಂದು ಕರೆಯಲಾಗುತ್ತದೆ. ಈ ಭೂಮಿಯು ಹಿಮಾಲಯನ್ ಮತ್ತು ನೈಸರ್ಗಿಕ ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಕಾಶ್ಮೀರದಲ್ಲಿ ಭೇಟಿ ನೀಡಲು ಅನೇಕ ಸ್ಥಳಗಳಿವೆ. ಅವುಗಳಲ್ಲಿ ಗುಲ್ಮಾರ್ಗ್ ಕೂಡ ಒಂದು. ಗುಲ್ಮಾರ್ಗ್ ನ ಸೌಂದರ್ಯವು ಚಳಿಗಾಲದಲ್ಲಿ ನೋಡಲು ಯೋಗ್ಯವಾಗಿದೆ. ನೀವು ನವೆಂಬರ್ ತಿಂಗಳಲ್ಲಿ ಭೇಟಿ ನೀಡಲು ಯೋಜಿಸುತ್ತಿದ್ದರೆ, ನೀವು ಗುಲ್ಮಾರ್ಗ್ ಗೆ ಹೋಗಬಹುದು. ಚಳಿಗಾಲದಲ್ಲಿ ಹಿಮಪಾತವು ಗುಲ್ಮಾರ್ಗ್ ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಿಮಪಾತವನ್ನು ಆನಂದಿಸಲು ನೀವು ಗುಲ್ಮಾರ್ಗ್ ಗೆ ಭೇಟಿ ನೀಡಬಹುದು.
ಚೋಪ್ಟಾ
ಚೋಪ್ಟಾವನ್ನು ಮಿನಿ ಸ್ವಿಟ್ಜರ್ ಲ್ಯಾಂಡ್ ಎಂದೂ ಸಹ ಕರೆಯಲಾಗುತ್ತೆ. ಉತ್ತರಾಖಂಡದ ರುದ್ರಪ್ರಯಾಗ (Rudraprayag in Uttarakhand) ಜಿಲ್ಲೆಯಲ್ಲಿರುವ ಚೋಪ್ಟಾ ತನ್ನ ಸೌಂದರ್ಯಕ್ಕಾಗಿ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಪ್ರಪಂಚದಾದ್ಯಂತದ ಪ್ರವಾಸಿಗರು ಚೋಪ್ಟಾಗೆ ಭೇಟಿ ನೀಡಲು ಬರುತ್ತಾರೆ. ಇದರ ಎತ್ತರ ಸಮುದ್ರ ಮಟ್ಟದಿಂದ 8556 ಅಡಿ ಎತ್ತರದಲ್ಲಿದೆ. ಈ ಸ್ಥಳವು ವಿಶ್ವದ ಅತಿ ಎತ್ತರದ ಶಿವ ದೇವಾಲಯವನ್ನು ಹೊಂದಿದೆ. ಚಳಿಗಾಲದಲ್ಲಿ ಚೋಪ್ಟಾದ ನೋಟ ಎಷ್ಟು ಚೆನ್ನಾಗಿರುತ್ತೆ ಎಂದರೆ ನೋಡಲು ಎರಡು ಕಣ್ಣು ಸಾಕಾಗೋದಿಲ್ಲ. ಸುತ್ತಲೂ ಹಿಮಪಾತದಿಂದ ಕೈಲಾಸದಂತಹ ವಾತಾವರಣ ಸೃಷ್ಟಿಯಾಗುತ್ತೆ. ನೀವು ನವೆಂಬರ್ ತಿಂಗಳಲ್ಲಿ ಹಿಮಪಾತವನ್ನು ಆನಂದಿಸಲು ಬಯಸಿದರೆ, ಖಂಡಿತವಾಗಿಯೂ ಚೋಪ್ಟಾಗೆ ಹೋಗಿ.
ನರಕಾಂಡ
ಶಿಮ್ಲಾದ ಬಗ್ಗೆ ನಿಮಗೆ ತಿಳಿದಿದೆ ಅಲ್ವಾ?. ಹಿಮಪಾತವನ್ನು ಎಂಜಾಯ್ ಮಾಡಲು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಶಿಮ್ಲಾಗೆ ಭೇಟಿ ನೀಡುತ್ತಾರೆ. ಇಲ್ಲಿ ನೀವು ಹಿಮಪಾತದೊಂದಿಗೆ ಸ್ಕೀಯಿಂಗ್ ಸಹ ಆನಂದಿಸಬಹುದು. ಇದಲ್ಲದೆ, ಈ ತಾಣವು ಶಿಮ್ಲಾದಿಂದ ಕೇವಲ 65 ಕಿಲೋಮೀಟರ್ ದೂರದಲ್ಲಿದೆ. ಈ ಸ್ಥಳವು ಸ್ನೋ ಫಾಲ್ ಗೆ ಹೆಸರುವಾಸಿಯಾಗಿದೆ. ನೀವು ನವೆಂಬರ್ ತಿಂಗಳಲ್ಲಿ ಭೇಟಿ ನೀಡಲು ಯೋಜಿಸುತ್ತಿದ್ದರೆ ಮತ್ತು ಜನಸಂದಣಿಯನ್ನು ತಪ್ಪಿಸಲು ಬಯಸಿದರೆ, ಖಂಡಿತವಾಗಿಯೂ ನರ್ಕಂಡಕ್ಕೆ ಹೋಗಿ. ಇದು ನಿಮ್ಮ ಕಣ್ಣುಗಳಿಗೆ ಹಬ್ಬ ನೀಡುತ್ತೆ.
ಲಡಾಖ್
ಚಳಿಗಾಲದಲ್ಲಿ ಲಡಾಖ್ ನಲ್ಲಿ ಬಿಳಿ ಮಂಜಿನಿಂದ ಆವೃತವಾದ ಸುಂದರ ಲೋಕವೇ ಸೃಷ್ಟಿಯಾಗಿರುತ್ತೆ, ಅದು ಚಿತ್ರಗಳನ್ನು ಕ್ಲಿಕ್ ಮಾಡಲು ಮತ್ತು ನೆನಪುಗಳನ್ನು ಜೋಪಾನ ಮಾಡಲು ಅತ್ಯುತ್ತಮ ತಾಣವಾಗಿದೆ. ಇಲ್ಲಿ ನೀವು ಪ್ರತಿ ಕ್ಷಣಗಳನ್ನೂ ಸಹ ಎಂಜಾಯ್ ಮಾಡಬಹುದು. ಈ ಸಮಯದಲ್ಲಿ ಇಲ್ಲಿ ಸರೋವರವು ಹೆಪ್ಪುಗಟ್ಟಲು ಪ್ರಾರಂಭಿಸುತ್ತದೆ, ಮತ್ತು ತಾಪಮಾನವು 0 °C ಗಿಂತ ಕೆಳಗೆ ಇಳಿಯಲು ಪ್ರಾರಂಭಿಸುತ್ತದೆ.
ಚಳಿಯನ್ನು ಇಷ್ಟಪಡದ ಜನರು ಏಪ್ರಿಲ್ ನಿಂದ ಜುಲೈ ನಡುವೆ ಲಡಾಖ್ ಗೆ (Ladakh) ಭೇಟಿ ನೀಡಬೇಕು. ಆದಾಗ್ಯೂ, ಸಾಹಸ ಉತ್ಸಾಹಿಗಳು ಹೆಚ್ಚಾಗಿ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಟ್ರೆಕ್ಕಿಂಗ್ ಮತ್ತು ಸ್ಕೀಯಿಂಗ್ ಲಡಾಖ್ ನ ಕೆಲವು ಪ್ರದೇಶಗಳಲ್ಲಿ ಅತ್ಯಂತ ಆದ್ಯತೆಯ ಚಟುವಟಿಕೆಗಳಾಗಿವೆ.
ಜಮ್ಮು ಕಾಶ್ಮೀರ
ಸೋನ್ಮಾರ್ಗ್, ಗುಲ್ಮಾರ್ಗ್ ಮತ್ತು ಪಹಲ್ಗಾಮ್ ಕಾಶ್ಮೀರದ ಕೆಲವು ಪ್ರಸಿದ್ಧ ತಾಣಗಳಾಗಿವೆ, ಅಲ್ಲಿ ನವೆಂಬರ್ ನಲ್ಲಿ ಸ್ನೋ ಫಾಲ್ ಆಗೋದನ್ನು ನೀವು ನೋಡಬಹುದು. ಈ ಸಮಯದಲ್ಲಿ ಇಲ್ಲಿ ತಾಪಮಾನವು 0°C ಗಿಂತ ಕೆಳಕ್ಕೆ ಇಳಿಯುತ್ತದೆ ಮತ್ತು ತಾಜಾ ಮತ್ತು ಮೃದುವಾದ ಹಿಮದಿಂದ ಆವೃತವಾದ ದಾರಿಗಳು ನಿಮಗೆ ಎಲ್ಲೋ ಕಥೆಯಲ್ಲಿ ಕೇಳಿದ ಅನುಭವ ನೀಡುತ್ತೆ. ಸ್ಕೀಯಿಂಗ್ ಮತ್ತು ಸ್ನೋಬೋರ್ಡಿಂಗ್ (snow boarding) ಜನಪ್ರಿಯ ಚಟುವಟಿಕೆಗಳಾಗಿವೆ, ಇದರಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ನವೆಂಬರ್ ನಲ್ಲಿ ಅತ್ಯಂತ ತಂಪಾದ ಭಾರತದ ಕೆಲವೇ ಕೆಲವು ತಾಣಗಳಲ್ಲಿ ಕಾಶ್ಮೀರವೂ ಒಂದಾಗಿದೆ.
ಸಿಕ್ಕಿಂ
ಸಿಕ್ಕಿಂನ ಲಚುಂಗ್ ಬಳಿ ಝೀರೋ ಪಾಯಿಂಟ್ (zero point) ಇದೆ. ಇದು ಯಾವಾಗಲೂ ಹಿಮದಿಂದ ಆವೃತವಾಗಿರುತ್ತೆ, ಈ ಸುಂದರ ತಾಣ ಸಮುದ್ರ ಮಟ್ಟದಿಂದ 9,600 ಅಡಿ ಎತ್ತರದಲ್ಲಿದೆ, ಇದು ರಜಾದಿನವನ್ನು ಯೋಜಿಸಲು ಪರ್ಫೆಕ್ಟ್ ಸ್ಥಳವಾಗಿದೆ. ಇದು ಪ್ರಸಿದ್ಧ ಪ್ರವಾಸಿ ತಾಣವಲ್ಲದ ಕಾರಣ, ಯಾವುದೇ ಸಾಹಸ ಚಟುವಟಿಕೆಗಳಿಲ್ಲ ಆದರೆ ಸಾಕಷ್ಟು ಸುಂದರ ತಾಣಗಳನ್ನು ನೀವಿಲ್ಲಿ ಎಂಜಾಯ್ ಮಾಡಬಹುದು.
ಔಲಿ, ಉತ್ತರಾಖಂಡ್
ಔಲಿ ಯಲ್ಲಿ ನವೆಂಬರ್ ನಲ್ಲಿ ನೀವು ಹಿಮಪಾತವನ್ನು ಎಂಜಾಯ್ ಮಾಡಬಹುದು. ಇದರ ಸಮೃದ್ಧ ಭೂದೃಶ್ಯವು ಹಲವಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ಸಮುದ್ರ ಮಟ್ಟದಿಂದ ಸುಮಾರು 9,200 ಅಡಿ ಎತ್ತರದಲ್ಲಿದೆ. ಇದು ಭಾರತದ ಜನಪ್ರಿಯ ಹೈಕಿಂಗ್ ಮತ್ತು ಸ್ಕೀಯಿಂಗ್ ತಾಣವಾಗಿದೆ. ಓಕ್ ಮರಗಳು, ಸಸ್ಯಗಳಿಂದ ಸುತ್ತುವರೆದಿರುವ ಈ ಪ್ರವಾಸಿ ತಾಣವು ಹಿಮಾಲಯ ಪರ್ವತಶ್ರೇಣಿಗಳ ವಿಹಂಗಮ ನೋಟವನ್ನು ನೀಡುತ್ತದೆ.