ದಕ್ಷಿಣ ಭಾರತದ ಭಯಾನಕ ಸ್ಥಳಗಳಿವು, ಹಾರರ್ ಪ್ಲೇಸಿಗೆ ಹೋಗೋ ಪ್ಲ್ಯಾನ್ ಇದ್ರೆ ಟ್ರೈ ಮಾಡಿ

ದಕ್ಷಿಣ ಭಾರತದಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ದೇಶ, ವಿದೇಶಗಳಿಂದ ಜನರು ಇಲ್ಲಿಗೆ ಬರ್ತಾರೆ. ಆದ್ರೆ ನಮ್ಮಲ್ಲೂ ಅನೇಕ ಭಯಾನಕ ಜಾಗಗಳಿವೆ. ಅಲ್ಲಿಗೆ ಹೋಗೋದಿರಲಿ, ಹೆಸರು ಕೇಳಿದ್ರೂ ಜನರು ಹೆದರುತ್ತಾರೆ.
 

Most Haunted Places In South India

ಭೂತವಿಲ್ಲ, ಪಿಶಾಚಿಯಿಲ್ಲ ಇದ್ದರೂ ಇಲ್ಲಿಲ್ಲ.. ಅಂತ ಹಗಲಿನಲ್ಲಿ ಹಾಡು ಹೇಳಬಹುದಷ್ಟೆ. ಕತ್ತಲಾಗ್ತಿದ್ದಂತೆ ನಿಗೂಢ ಪ್ರದೇಶಗಳಿಗೆ ಹೋದ್ರೆ ಗೊತ್ತಿಲ್ಲದೆ ಮೈ ಬೆವರಲು ಶುರುವಾಗುತ್ತದೆ. ಸಣ್ಣ ಶಬ್ಧ ಕೂಡ ಬೆಚ್ಚಿ ಬೀಳಿಸುತ್ತದೆ. ಭೂತದ ಹೆಸರು ಕೇಳಿದ್ರೆ ಹೆದರುವವರಿದ್ದಾರೆ. ಭೂತದ ಸಿನಿಮಾಗಳನ್ನು ಕೂಡ ಅನೇಕರು ನೋಡೋದಿಲ್ಲ. ಮನೆಯಲ್ಲಿ ಒಂಟಿಯಾಗಿ ವಾಸ ಮಾಡೋದಿಲ್ಲ. ರಾತ್ರಿಯಾದ್ರೆ ಸಾಕು ಮನೆ ತುಂಬ ಲೈಟ್ ಹಾಕಿ ಓಡಾಡ್ತಾರೆ. ಆದ್ರೆ ಕೆಲವರು ಭೂತಕ್ಕೆ ಹೆದರೋದಿಲ್ಲ ಅಂತ ಸ್ಮಶಾನಕ್ಕೆ ಹೋಗಿ ಬರೋರೂ ಇದ್ದಾರೆ. ದೇವರು, ಭೂತ ಎಲ್ಲವು ಅವರವರ ಕಲ್ಪನೆ ಹಾಗೂ ನಂಬಿಕೆಗೆ ಬಿಟ್ಟಿದ್ದು.

ದಕ್ಷಿಣ ಭಾರತ (South India) ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರದೇಶ. ಇಲ್ಲಿ ಕಣ್ಮನ ಸೆಳೆಯುವ ಸಾಕಷ್ಟು ಪ್ರವಾಸಿ (Tourist) ತಾಣಗಳಿವೆ. ಅದ್ರ ಜೊತೆಗೆ ಭಯ ಹುಟ್ಟಿಸುವ ಸ್ಥಳಗಳು ಕೂಡ ಸಾಕಷ್ಟಿದೆ. ದಕ್ಷಿಣ ಭಾರತದಲ್ಲಿ ಆ ಸ್ಥಳ ನೋಡಿ, ಈ ಸ್ಥಳ ನೋಡಿ ಅಂತಾ ನಾವು ಸ್ನೇಹಿತರಿಗೆ, ಸಂಬಂಧಿಕರಿಗೆ ಸಲಹೆ ನೀಡ್ತೇವೆ. ಆದ್ರೆ ಕೆಲ ಪ್ರದೇಶಕ್ಕೆ ಎಂದೂ ಹೋಗ್ಬೇಡಿ ಅಂತಾನೂ ಹೇಳ್ತೇವೆ. ದಕ್ಷಿಣ ಭಾರತದಲ್ಲಿರುವ ಭಯಾನಕ ಪ್ರದೇಶಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ ನೋಡಿ.

ದಕ್ಷಿಣ ಭಾರತದಲ್ಲಿದೆ ಭಯ (Fear) ಹುಟ್ಟಿಸುವ ಪ್ರದೇಶ : 

ಕಲ್ಪಲ್ಲಿ ಸ್ಮಶಾನ (Kalpalli Cemetery) :  ಅರೇ ಈ ಹೆಸರನ್ನು ಎಲ್ಲೋ ಕೇಳಿದ್ದೇವಲ್ಲ ಅಂದ್ಕೊಳಬೇಡಿ. ಇದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿದೆ. ಕಲ್ಪಲ್ಲಿ ಸ್ಮಶಾನವನ್ನು ಸೇಂಟ್ಸ್ ಜಾನ್ಸ್ ಸ್ಮಶಾನ ಅಂತಾನೂ ಕರೀತಾರೆ. ಹೃದಯ ಗಟ್ಟಿ ಇಲ್ಲ ಎನ್ನೋರು ಅಪ್ಪಿತಪ್ಪಿಯೂ ಈ ಪ್ರದೇಶಕ್ಕೆ ಹೋಗ್ಬೇಡಿ. ಕಲ್ಪಲ್ಲಿ ಸ್ಮಶಾನದ ರಸ್ತೆಯಲ್ಲಿ ಜನರು ಓಡಾಡೋಕೆ ಹೆದರುತ್ತಾರೆ. ಅಲ್ಲಿ ಭೂತಗಳು ಓಡಾಡೋದನ್ನು ನೋಡಿದ್ದೇವೆ ಎನ್ನುವವರಿದ್ದಾರೆ. ರಾತ್ರಿ ಹತ್ತಾಗ್ತಿದ್ದಂತೆ ಸ್ಮಶಾನದಿಂದ ಚಿತ್ರವಿಚಿತ್ರ ಶಬ್ಧಗಳು ಬರುತ್ತವೆಯಂತೆ. ಮಕ್ಕಳು, ಮಹಿಳೆಯರು, ವೃದ್ಧರ ಕಿರುಚಾಟ ಕೇಳಿಸುತ್ತದೆಯಂತೆ. ಕಲ್ಪಲ್ಲಿ ಸ್ಮಶಾನ ನಿಗೂಢ ಪ್ರದೇಶಗಳಲ್ಲಿ ಒಂದು. ರಾತ್ರಿ ಅಲ್ಲಿ ಸರಿಯಾದ ಬೆಳಕಿರೋದಿಲ್ಲ. ರಸ್ತೆಗಳಲ್ಲಿ ಜನರ ಸಂಚಾರವಿರೋದಿಲ್ಲ. ರಾತ್ರಿಯಾಗ್ತಿದ್ದಂತೆ ಜನರು ಆ ಪ್ರದೇಶದಲ್ಲಿ ಓಡಾಡೋದನ್ನು ನಿಲ್ಲಿಸ್ತಾರೆ. ಬರೀ ರಾತ್ರಿ ಮಾತ್ರವಲ್ಲ ಬೆಳಿಗ್ಗೆ ಕೂಡ ಒಬ್ಬಂಟಿಯಾಗಿ ಹೋಗಲು ಯಾರೂ ಧೈರ್ಯ ಮಾಡುವುದಿಲ್ಲ. ಭೂತಕ್ಕೆ ಹೆದರೋದಿಲ್ಲ ಎನ್ನುವವರು ಅಲ್ಲಿಗೆ ಹೋಗ್ಬಹುದು. ಇತ್ತೀಚಿಗೆ ಯುಟ್ಯೂಬರ್ ಒಬ್ಬರು ಕಲ್ಪಲ್ಲಿ ಸ್ಮಶಾನಕ್ಕೆ ಹೋದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

ಡಿ ಮಾಂಟೆ ಕಾಲೋನಿ : ದಿ ಮಾಂಟೆ ಕಾಲೋನಿ ಇರೋದು ಚೆನ್ನೈನಲ್ಲಿ. ಇದು ಕೂಡ ಭಯಾನಕ ಪ್ರದೇಶವಾಗಿದೆ. ದೆವ್ವ, ಭೂತಕ್ಕೆ ಹೆದರೋದಿಲ್ಲ ಎನ್ನುವವರು ಧೈರ್ಯವಾಗಿ ಇಲ್ಲಿಗೆ ಹೋಗಿದ್ದಿದೆ. ಆದ್ರೆ ಹೋದ ಸ್ಥಿತಿಯಲ್ಲೇ ವಾಪಸ್ ಬರಲಿಲ್ಲ. ಮನೆಗೆ ಬಂದ್ಮೇಲೆ ಅನೇಕ ದಿನ ಜ್ವರ ಹಿಡಿದು ಮಲಗಿದ್ದರಂತೆ. ಎಂಥ ಧೈರ್ಯವಂತರನ್ನೂ ಹೆದರಿಸುವ ಸ್ಥಳ ಇದು ಎನ್ನಲಾಗುತ್ತದೆ.

Travel Tips: ಕಡಿಮೆ ಬಜೆಟ್ ನಲ್ಲಿ ಫುಕೆಟ್ ಸುತ್ತಿ ಬನ್ನಿ

ಟೆರ್ರಾ ವೆರಾ ಕಟ್ಟಡ, ಸೇಂಟ್ ಮಾರ್ಕ್ಸ್ ರಸ್ತೆ : ಇದು ಕೂಡ ನಮ್ಮ  ಬೆಂಗಳೂರಿನಲ್ಲೇ ಇದೆ. ಇಲ್ಲಿ  ಆಂಗ್ಲೋ ಇಂಡಿಯನ್ ಸಹೋದರಿಯರಾದ ವೆರಾ ವಾಜ್ ಮತ್ತು ಡೋಲ್ಸ್ ವಾಜ್ ವಾಸವಾಗಿದ್ದರು. ಡೋಲ್ಸ್ ವಾಜ್ ಗಳನ್ನು ಅಪರಿಚಿತರು ಕೊಲೆ ಮಾಡಿದ್ದರು. ಇದಾದ್ಮೇಲೆ ವೆರಾ ವಾಜ್ ಮನೆಯಿಂದ ಹೊರ ನಡೆದಿದ್ದಾಳೆ. ಆದ್ರೆ ಈ ಮನೆ ಈಗ್ಲೂ ಪಾಳು ಬಿದ್ದಿದೆ. ಅಲ್ಲಿಗೆ ಯಾರೂ ಹೋಗೋದಿಲ್ಲ. ಅಲ್ಲಿಗೆ ಹೋದವರೊಬ್ಬರು ಸುಟ್ಟು ಹೋಗಿದ್ದರಂತೆ. ಅಲ್ಲಿಂದ ಈಗ್ಲೂ ಭಯಾನಕ ಶಬ್ಧ ಕೇಳಿ ಬರುತ್ತದೆ ಎನ್ನಲಾಗಿದೆ.  

ಮನಸ್ಸಿಗೆ ಮುದ ನೀಡುವ 58 ಅಡಿಯ ಗಂಗಾಧರೇಶ್ವರ

ರಾಮೋಜಿ ರಾವ್ ಫಿಲ್ಮ್ ಸಿಟಿ ಹೈದ್ರಾಬಾದ್ : ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿ ಎಂದು ಕರೆಸಿಕೊಂಡಿರುವ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲೂ ಭೂತವಿದೆ ಎಂದ್ರೆ ನೀವು ನಂಬ್ತೀರಾ? ಪ್ರವೇಶ ದ್ವಾರದಲ್ಲಿರುವ ಹೋಟೆಲ್ ರೂಮಿನಲ್ಲಿ ದೆವ್ವವಿದೆ ಎನ್ನಲಾಗುತ್ತದೆ. ಬಾತ್ ರೂಮ್ ಬಾಗಿಲು ಬಡಿಯುವುದು, ಕೋಣೆಯಲ್ಲಿ ಊಳಿಡುವ ಶಬ್ಧ ಕೇಳಿ ಬರುತ್ತದೆ. ಇದಲ್ಲದೆ ಕನ್ನಡಿಗಳ ಮೇಲೆ ಸಾಕಷ್ಟು ಭಯಾನಕ ಬರಹಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ. 
 

Latest Videos
Follow Us:
Download App:
  • android
  • ios