Asianet Suvarna News Asianet Suvarna News

Travel Tips : ಹುಡುಗಿಯರಿಗೆ ಸುರಕ್ಷಿತ ಈ ಪ್ರವಾಸಿ ತಾಣ

ಪ್ರವಾಸಕ್ಕೆ ಹೋಗುವ ಮೊದಲು ಸ್ಥಳದ ಬಗ್ಗೆ ಮಾಹಿತಿ ಇರ್ಬೇಕು. ಅದ್ರಲ್ಲೂ ಹುಡುಗಿಯರಷ್ಟೇ ಪ್ರವಾಸದ ಪ್ಲಾನ್ ಮಾಡಿದ್ರೆ ಯಾವುದು ಸುರಕ್ಷಿತ ಎಂಬುದನ್ನು ತಿಳಿದಿರಬೇಕು. ಪೂರ್ವಾಪರ ಆಲೋಚನೆ ಮಾಡದೆ ಪ್ರವಾಸಕ್ಕೆ ಪ್ಲಾನ್ ಮಾಡುವುದು ಸೂಕ್ತವಲ್ಲ.
 

Girls Best Travel Place
Author
Bangalore, First Published May 13, 2022, 6:31 PM IST

ರಜೆ (Vacation) ಯನ್ನು ಸಂಪೂರ್ಣವಾಗಿ ಎಂಜಾಯ್ (Enjoy) ಮಾಡಲು ಎಲ್ಲರೂ ಬಯಸ್ತಾರೆ. ಕೆಲವರು ರಜಾ ದಿನದಲ್ಲಿ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡ್ತಾರೆ. ಆದ್ರೆ ಎಲ್ಲ ಸಂದರ್ಭದಲ್ಲೂ ನಮ್ಮ ಜೊತೆ ಕುಟುಂಬಸ್ಥ (Family) ರು ಬರಲು ಸಾಧ್ಯವಾಗುವುದಿಲ್ಲ. ಒಂಟಿಯಾಗಿ ಪ್ರವಾಸ ಮಾಡೋದ್ರಲ್ಲೂ ವಿಶೇಷವಿದೆ. ಅನೇಕರು ಒಂಟಿ ಪ್ರವಾಸವನ್ನು ಎಂಜಾಯ್ ಮಾಡ್ತಾರೆ. ಮತ್ತೆ ಕೆಲ ಹುಡುಗಿಯರು ತಮ್ಮ ಸ್ನೇಹಿತೆಯರ ಜೊತೆ ಪ್ರವಾಸದ ರುಚಿ ಸವಿಯಲು ಬಯಸ್ತಾರೆ. ಆದ್ರೆ ಹುಡುಗಿಯರು ಒಂಟಿಯಾಗಿ ಪ್ರವಾಸಕ್ಕೆ ಹೋಗೋದು ಅಪರೂಪ. ನಾಲ್ಕೈದು ಹುಡುಗಿಯರು ಒಟ್ಟಿಗೆ ಹೋಗ್ತಾರೆ ಅಂದ್ರೂ ಪಾಲಕರು ಇದಕ್ಕೆ ಅನುಮತಿ ನೀಡೋದು ಕಷ್ಟ. ಹುಡುಗಿಯರಷ್ಟೇ ಪ್ರವಾಸಕ್ಕೆ ಹೋಗುವುದು ಸುರಕ್ಷಿತವಲ್ಲ ಎಂಬ ಕಾರಣ ಹೇಳಿ ಪಾಲಕರು ಪ್ರವಾಸ ನಿರಾಕರಿಸ್ತಾರೆ. ಆದರೆ ಕೆಲ ಸ್ಥಳಗಳಿಗೆ ಹುಡುಗಿಯರು ಏಕಾಂಗಿಯಾಗಿಯೂ ಪ್ರವಾಸಕ್ಕೆ ಹೋಗ್ಬಹುದು. ಹುಡುಗಿಯರಿಗೆ ಸುರಕ್ಷಿತವಾದ ಕೆಲ ಸ್ಥಳಗಳು ಭಾರತದಲ್ಲಿದೆ. ಹುಡುಗಿಯರ ಗ್ಯಾಂಗ್ ಜೊತೆ ಹ್ಯಾಂಗ್ ಔಟ್ ಮಾಡಲು ಬಯಸಿದ್ದರೆ ಇದನ್ನು ಓದಿ. ಆರಾಮವಾಗಿ ಸುತ್ತಾಡಲು ಕೆಲ ಸ್ಥಳಗಳು ಸೂಕ್ತವಾಗಿದ್ದು, ಅದು ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.

ಹುಡುಗಿಯರ ಪ್ರವಾಸಕ್ಕೆ ಸುರಕ್ಷಿತ ಸ್ಥಳ ಇದು : 
ಸಿಲಿಕಾನ್ ಸಿಟಿ ಬೆಂಗಳೂರು :
ಐಟಿ ಸಿಟಿ, ಸಿಲಿಕಾನ್ ಸಿಟಿ, ಉದ್ಯಾನ ನಗರಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧಿಯಾಗಿರುವ ಬೆಂಗಳೂರು ದೇಶ – ವಿದೇಶಿಗರ ಗಮನ ಸೆಳೆಯಲು ಯಶಸ್ವಿಯಾಗಿದೆ. ಲಕ್ಷಾಂತರ ಜನರು ಉದ್ಯೋಗವನ್ನರಸಿ ಇಲ್ಲಿಗೆ ಬರ್ತಾರೆ.  ಆಧುನಿಕ ಕಟ್ಟಡ ಮತ್ತು ಉನ್ನತ ಜೀವನಶೈಲಿ ಜನರನ್ನು ಬೆಂಗಳೂರಿನತ್ತ ಆಕರ್ಷಿಸುತ್ತದೆ. ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್,ಲಾಲ್ ಬಾಗ್ ಸೇರಿದಂತೆ ಅನೇಕ ಸುಂದರ ಪ್ರವಾಸಿ ತಾಣಗಳಿವೆ. ಹುಡುಗಿಯರು ಇಲ್ಲಿ ಆರಾಮವಾಗಿ ಸುತ್ತಾಡಬಹುದು. ಹುಡುಗಿಯರಿಗೆ ಸುರಕ್ಷಿತ ಸ್ಥಳ ಬೆಂಗಳೂರು. ಗ್ಯಾಂಗ್ ಜೊತೆ ಪಾರ್ಟಿ, ಪ್ರವಾಸ ಮಾಡಲು ನೀವು ಇದನ್ನು ಆಯ್ಕೆ ಮಾಡಬಹುದು.   

Udupi: ಕಡಲ ಅಬ್ಬರದ ನಡುವೆಯೂ ಪ್ರವಾಸಿಗರಿಂದ ಮೋಜು-ಮಸ್ತಿ!

ಪುಣೆ : ಮಹಿಳೆಯರಿಗೆ ಸುರಕ್ಷಿತ ಸ್ಥಳಗಳ ಪಟ್ಟಿಯಲ್ಲಿ ಪುಣೆ ಸೇರಿದೆ. ಮಹಾರಾಷ್ಟ್ರದ ಸಾಮಾಜಿಕ ರಾಜಧಾನಿ ಎಂದು ಪುಣೆಯನ್ನು ಕರೆಯುತ್ತಾರೆ. ಇಲ್ಲಿನ ಸಂಸ್ಕೃತಿ ಪ್ರವಾಸಿಗರ ಮನಸ್ಸು ಸೆಳೆಯುತ್ತದೆ. ಹುಡುಗಿಯರು ಸ್ನೇಹಿತರೊಂದಿಗೆ ಇಲ್ಲಿ ಆರಾಮವಾಗಿ ಸುತ್ತಾಡಬಹುದು. ಪುಣೆಗೆ ಹೋದ್ರೆ ಪುಣೆ ಬಳಿಯ ಲವಾಸಾ ನಗರಕ್ಕೆ ಭೇಟಿ ನೀಡಲು ಮರೆಯಬೇಡಿ. 

ವಾಣಿಜ್ಯ ನಗರಿ ಮುಂಬೈ : ಕನಸುಗಳ ನಗರವಾದ ಮುಂಬೈಗೆ ಒಮ್ಮೆ ಭೇಟಿ ನೀಡಲು ಎಲ್ಲರೂ ಬಯಸುತ್ತಾರೆ. ಮುಂಬೈಗೆ ಹೋದ್ರೆ ಹೊಸ ಪ್ರಪಂಚದ ಪರಿಚಯವಾಗುತ್ತದೆ. ಭಾರತದಲ್ಲಿ ಮಹಿಳೆಯರಿಗೆ ಸುರಕ್ಷಿತವಾದ ಸ್ಥಳಗಳಲ್ಲಿ ಮುಂಬೈ ಕೂಡ ಒಂದಾಗಿದೆ.  ಕಡಲ ತೀರದಲ್ಲಿ ನೀವು ಆರಾಮವಾಗಿ ಸುತ್ತಾಡಬಹುದು. ಫ್ರೆಂಡ್ಸ್ ಜೊತೆ ಟ್ರಿಪ್ ಪ್ಲಾನ್ ಮಾಡಿದ್ದು, ಸ್ಥಳದ ಹುಡುಕಾಟ ನಡೆಸುತ್ತಿದ್ದರೆ ಮುಂಬೈ ಆಯ್ಕೆ ಮಾಡ್ಬಹುದು. 

ಕೋಲ್ಕತ್ತಾ : ಕೋಲ್ಕತ್ತಾ  ಭಾರತದಲ್ಲಿ ಮಹಿಳೆಯರಿಗೆ ಸುರಕ್ಷಿತ ನಗರವೆಂದು ಪರಿಗಣಿಸಲಾಗಿದೆ. ಹಾಗೆಯೇ ವಿಶ್ವದ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ನೀವು ಒಂಟಿಯಾಗಿ ಅಥವಾ ಸ್ನೇಹಿತರೊಂದಿಗೆ ಈ ನಗರಕ್ಕೆ ಪ್ರವಾಸ ಹೋಗ್ಬಹುದು. ಕೋಲ್ಕತ್ತಾಗೆ ಹೋದ್ರೆ ಮಿಷ್ಟಿ ದೋಯಿ ಮತ್ತು ರೋಶೋಗುಲ್ಲಾವನ್ನು ಸವಿಯಲು ಮರೆಯದಿರಿ. 

Travel Tips : ಪ್ರವಾಸ ಥ್ರಿಲ್ ಆಗಿರ್ಬೇಕೆಂದ್ರೆ ಈ ಆಹಾರದಿಂದ ದೂರವಿರಿ

ಹೈದರಾಬಾದ್ : ಭಾರತದಲ್ಲಿ ಮಹಿಳೆಯರಿಗೆ ಸುರಕ್ಷಿತ ಸ್ಥಳ ಯಾವುದು ಎಂದು ಹುಡುಕಾಟ ನಡೆಸುತ್ತಿದ್ದರೆ ಹೈದರಾಬಾದ್ ಆಯ್ಕೆ ಮಾಡಬಹುದು. ಈ ಸ್ಥಳವನ್ನು ಐಟಿ ಹಬ್ ಎಂದು ಕರೆಯಲಾಗುತ್ತದೆ. ಹೈದರಾಬಾದ್ ಅನ್ನು ಹ್ಯಾಪಿ ಸಿಟಿ ಎಂದೂ ಕರೆಯುತ್ತಾರೆ. ವೀಕೆಂಡ್ ನಲ್ಲಿ ಅಥವಾ ರಜಾ ದಿನಗಳಲ್ಲಿ ಸ್ನೇಹಿತೆಯರ ಜೊತೆ ಹೈದ್ರಾಬಾದ್ ಪ್ಲಾನ್ ಮಾಡ್ಬಹುದು. ನೀವು ಹೈದ್ರಾಬಾದ್ ಗೆ ಪ್ರವಾಸ ಕೈಗೊಂಡಿದ್ದರೆ ಅವಶ್ಯಕವಾಗಿ ರಾಮೋಜಿ ರಾವ್ ಫಿಲ್ಮಂ ಸಿಟಿಗೆ ಭೇಟಿ ನೀಡಿ. 

Follow Us:
Download App:
  • android
  • ios