Udupi: ಕಡಲ ಅಬ್ಬರದ ನಡುವೆಯೂ ಪ್ರವಾಸಿಗರಿಂದ ಮೋಜು-ಮಸ್ತಿ!

ಒಂದೇ ಒಂದು ಮಳೆಗೆ ಉಡುಪಿ ಜಿಲ್ಲೆಯಲ್ಲಿ ಬೇಸಿಗೆಯ ವಾತಾವರಣ ಹೋಗಿ ಮಳೆಗಾಲ ಆರಂಭವಾಗಿದೆ . ಸತತ 12 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಮಳೆ ಸುರಿದಿದೆ. ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.

Udupi Malpe Beach Attracting Tourists gvd

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ 

ಉಡುಪಿ (ಮೇ.12): ಒಂದೇ ಒಂದು ಮಳೆಗೆ ಉಡುಪಿ (Udupi) ಜಿಲ್ಲೆಯಲ್ಲಿ ಬೇಸಿಗೆಯ (Summer) ವಾತಾವರಣ ಹೋಗಿ ಮಳೆಗಾಲ (Rainy Season) ಆರಂಭವಾಗಿದೆ . ಸತತ 12 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಮಳೆ ಸುರಿದಿದೆ. ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಅಸಾನಿ (Asani Cyclone) ಚಂಡಮಾರುತದಿಂದಾಗಿ ಸುರಿದ ನಿರಂತರ ಮಳೆಗೆ ಉಡುಪಿ ತತ್ತರಗೊಂಡಿದೆ. ಮೇ ತಿಂಗಳಲ್ಲಿ ಪ್ರವಾಸಿಗರು ರಾಜ್ಯದ (Karnataka) ಕರಾವಳಿಗೆ ಟ್ರಿಪ್ ಬರೋದು ಕಾಮನ್, ಅದರಲ್ಲೂ ಸೇಫ್ ಬೀಚ್ ಅಂತ ಪ್ರಖ್ಯಾತಿ ಪಡೆದ ಮಲ್ಪೆ ಬೀಚ್ (Malpe Beach) ಪ್ರವಾಸಿಗರಿಂದ (Tourists) ತುಂಬಿರುತ್ತೆ. 

ಆದ್ರೆ ಈ ಬಾರಿ ಚಂಡಮಾರುತದ ಪರಿಣಾಮ, ಕಡಲು ಪ್ರಕ್ಷುಬ್ಧವಾದ ಕಾರಣ ವಾಟರ್ ಸ್ಪೋರ್ಟ್ಸ್, ಸೈಂಟ್ ಮೇರಿಸ್ ಪ್ರವೇಶ ನಿಷೇಧವಿದೆ. ರಜೆ ಹಾಕಿ ಉಡುಪಿಗೆ ಬರೋ ಪ್ರವಾಸಿಗರು ಬೀಚ್‌ನಲ್ಲಿ ಎಂಜಾಯ್ ಮಾಡೋಕೆ ಸಾಧ್ಯವಾಗದೇ ಹಿಂದಿರುತ್ತಿದ್ದಾರೆ. ಕೆಲಸದ ಒತ್ತಡ, ಜೀವನದ ಜಂಜಾಟದಿಂದ ಸ್ವಲ್ಪ ರಿಲ್ಯಾಕ್ಸ್ ಮಾಡೋಕೆ ಅಂತ ಪ್ರವಾಸಿಗರು ಉಡುಪಿಯ ಮಲ್ಪೆ ಬೀಚ್‌ಗೆ ಭೇಟಿ ನೀಡ್ತಾರೆ. ಸಮುದ್ರದ ಅಲೆಗಳ ಜೊತೆಗೆ ಆಟವಾಡಿ, ವಾಟರ್ ಸ್ಪೋರ್ಟ್ಸ್, ಸೈಂಟ್ ಮೇರಿಸ್ ಐಲ್ಯಾಂಡ್ ಅಂತ ಎಂಜಾಯ್ ಮಾಡ್ತಾರೆ. ಆದ್ರೆ ಇನ್ನು ಮುಂದೆ ಕಡಲತಡಿಗೆ ರಜೆ ಹಾಕಿ ಬಂದ್ರೆ ನಿಮ್ಗೆ ನಿರಾಸೆ ಆಗೋದು ಅಂತು ಪಕ್ಕಾ.

Pramod Madhwaraj ಕುಟುಂಬದಿಂದ ಉಡುಪಿ ಕಾಂಗ್ರೆಸ್ ಎರಡು ತಲೆಮಾರು ಬಲಿ!

ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿಯಲ್ಲಿ ಜಿಟಿ ಜಿಟಿ ಮಳೆ ಆರಂಭವಾಗಿದೆ. ಗಾಳಿಯೂ ವೇಗವಾಗಿ ಬೀಸುತ್ತಿದೆ ಪರಿಣಾಮ ಅಲೆಗಳ ಅಬ್ಬರ ಜೋರಾಗಿದ್ದು, ವಾಟರ್ ಸ್ಟೋರ್ಸ್, ಸೈಂಟ್ ಮೇರಿಸ್ ಐಲ್ಯಾಂಡ್ ಹೋಗುವುದು ನಿಷೇಧ ಇದೆ. ಇನ್ನು ಸಮುದ್ರದ ದೂರಕ್ಕೆ ಹೋಗಿ ಸ್ನಾನ ಮಾಡುದಕ್ಕೂ ನಿಷೇಧ ಇದ್ದು, ದಡದ ಭಾಗದಲ್ಲಷ್ಟೇ ಸ್ನಾ‌ನ ಮಾಡೋಕೆ ಅವಕಾಶ ಇದೆ. ನಿಷೇಧ ಮಾಹಿತಿ ಇಲ್ಲದೇ ದೂರದ ಊರುಗಳಿಂದ ಪ್ರವಾಸಕ್ಕೆ ಅಂತ ರಜೆ ಹಾಕಿ ಮಲ್ಪೆ ಸಮುದ್ರ ತೀರಕ್ಕೆ ಬಂದವರು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಹೋಟೆಲ್ ಬುಕ್ಕಿಂಗ್ ಕೂಡ ಕ್ಯಾನ್ಸಲ್ ಮಾಡುತ್ತಿದ್ದಾರೆ. ಹೆಚ್ಚು ದಿನ ಇದ್ದು ಎಂಜಾಯ್ ಮಾಡಬೇಕು ಅಂದುಕೊಂಡ ಪ್ರವಾಸಿಗರು, ತಮ್ಮ ಪ್ಲಾನ್ ಡ್ರಾಫ್ ಮಾಡಿ ತಮ್ಮ ಊರಿಗೆ ಹಿಂದಿಗುರುತ್ತಿದ್ದಾರೆ. 

Udupi: ಇವನೆಂಥಾ ಕಳ್ಳ ಮಾರಾಯ್ರೇ: ಎಂಟು ಲಕ್ಷ ಕದ್ದವ ಒಂದು ಲಕ್ಷ ಯಾಕೆ ಬಿಟ್ಟು ಹೋದ?

ಇನ್ನು ಸಾಕಷ್ಟು ಜನ ಮಳೆ ಗಾಳಿಯನ್ನು ಲೆಕ್ಕಿಸದೆ ಸಮುದ್ರದಲ್ಲಿ ಈಜಾಡುತ್ತಿದ್ದಾರೆ. ಈ ಬಗ್ಗೆ ಲೈಫ್ ಗಾರ್ಡ್‌ಗಳು ಅನೇಕ ಬಾರಿ ಎಚ್ಚರಿಕೆ ನೀಡಿದರೂ ಪ್ರವಾಸಿಗರು ನಿರ್ಲಕ್ಷ ಮಾಡುತ್ತಿದ್ದಾರೆ. ಕಡಲಿಗೆ ಇಳಿಯದಂತೆ ಬುದ್ಧಿವಾದ ಹೇಳಲು ಬಂದ ಲೈಫ್ ಗಾರ್ಡ್‌ಗಳ ಮೇಲೆ ಹಲ್ಲೆ ನಡೆಸಿದ್ದು, ಮಲ್ಪೆ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಸದ್ಯದಲ್ಲೇ ನೀವೇನಾದ್ರೂ ಕರಾವಳಿ ಪ್ರವಾಸ ಬರ್ಬೆಕು ಅಂದುಕೊಂಡಿದ್ರೆ, ನಿಮ್ಮ ಟೂರ್ ಪ್ಲಾನ್ ಕೈ ಬಿಡೋದೆ ಒಳ್ಳೆಯದು. ಮಳೆ ಹೆಚ್ಚಾದ್ರೆ ಮತ್ತೆ ಸಮುದ್ರಕ್ಕೆ ಇಳಿಯೋದಕ್ಕೂ ನಿಷೇಧ ಇರುತ್ತೆ. ಹೀಗಾಗಿ ಮಳೆ ಅಬ್ಬರ ಕಡಿಮೆ ಆದ ಬಳಿಕ, ಅಂದ್ರೆ ಎರಡು ತಿಂಗಳ ನಂತ್ರ ಮಲ್ಪೆ ಟೂರ್ ಬಂದ್ರೆ ಉತ್ತಮ.

Latest Videos
Follow Us:
Download App:
  • android
  • ios