Goa Trip ಹೊರಟಿದ್ದರೆ ಈ Tips ಮರೀಬೇಡಿ
ಅನೇಕರು ಪ್ರವಾಸಕ್ಕೆ ಹೋಗುವ ಮೊದಲು ಆ ಸ್ಥಳದ ಬಗ್ಗೆ ಏನೂ ತಿಳಿದಿರುವುದಿಲ್ಲ. ಇದ್ರಿಂದಾಗಿ ಪ್ರವಾಸ ಅಪೂರ್ಣವೆನ್ನಿಸುತ್ತದೆ. ನೋಡಬೇಕಾದ ಜಾಗವನ್ನು ನೋಡಲಾಗುವುದಿಲ್ಲ. ನೀವೂ ಗೋವಾ ಪ್ಲಾನ್ ಮಾಡ್ತಿದ್ದರೆ ಮೊದಲು ಅದ್ರ ಬಗ್ಗೆ ಸ್ವಲ್ಪ ತಿಳಿದ್ಕೊಂಡಿರಿ.
ಗೋವಾ (Goa) ಅಂದ್ರೆ ಸ್ವರ್ಗ ಎನ್ನುವವರಿದ್ದಾರೆ. ಅಲ್ಲಿನ ಬೀಚ್ (Beach) , ಅಲ್ಲಿನ ವಾತಾವರಣ, ಲೇಟ್ ನೈಟ್ ಪಾರ್ಟಿ (Late Night Party) ಗಳು ಪ್ರವಾಸಿಗರನ್ನು ಸೆಳೆಯುತ್ತವೆ. ವೀಕೆಂಡ್ (Weekend) ಗೆ ಗೋವಾ ಹೋಗುವವರು ಅನೇಕರಿದ್ದಾರೆ. ಮತ್ತೆ ಕೆಲವರು ಇನ್ನೂ ಗೋವಾ ನೋಡಿಲ್ಲ. ಗೋವಾಕ್ಕೆ ನಾಲ್ಕೈದು ಬಾರಿ ಹೋದವರಿಗೂ ಅಲ್ಲಿನ ಕೆಲ ಪ್ರದೇಶಗಳ ಪರಿಚಯ ಇರುವುದಿಲ್ಲ. ನೀವು ಈ ಮೊದಲೇ ಹೋಗಿರಿ ಇಲ್ಲ ಈಗ ಹೋಗುವ ಪ್ಲಾನ್ ಮಾಡ್ತಿರಿ, ನಿಮಗೆ ನಾವೊಂದಿಷ್ಟು ಸಲಹೆ ನೀಡ್ತೇವೆ. ಅದನ್ನು ಫಾಲೋ ಮಾಡಿದ್ರೆ ಗೋವಾ ಟ್ರಿಪ್ ಮಜವನ್ನು ದುಪ್ಪಟ್ಟು ಮಾಡ್ಬಹುದು. ಪ್ರವಾಸಕ್ಕೆ ಹೋದಾಗ ಎಲ್ಲಿ ಉಳಿಯಬೇಕು? ಎಲ್ಲಿ ಖರೀದಿ ಮಾಡ್ಬೇಕು? ಎಲ್ಲಿ ಪಾರ್ಟಿ ಮಾಡ್ಬೇಕು ಎಂಬುದು ಸರಿಯಾಗಿ ತಿಳಿದಿರೋದಿಲ್ಲ. ಗೋವಾ ಪಾರ್ಟಿಯಿಂದ ಹಿಡಿದು ಶಾಪಿಂಗ್ ವರೆಗೆ ಎಲ್ಲದಕ್ಕೂ ಪ್ರಸಿದ್ಧಿ ಪಡೆದಿದೆ ನಿಜ. ಗೋವಾ ಗಲ್ಲಿ ಗಲ್ಲಿಯಲ್ಲಿ ಪಾರ್ಟಿ ಹಾಲ್, ರೆಸ್ಟೋರೆಂಟ್ ಇದೆ. ಹಾಗೆಯೇ ಅನೇಕ ಬೀಚ್ ಗಳನ್ನು ಗೋವಾ ಹೊಂದಿದೆ. ಹಾಗಾಗಿ ಯಾವ ಬೀಚ್ ನಲ್ಲಿ ಹೆಚ್ಚು ಎಂಜಾಯ್ ಮಾಡ್ಬಹುದು, ಹಾಗೆ ಯಾವ ಸ್ಥಳದಲ್ಲಿ ಉಳಿದ್ರೆ ಬೆಸ್ಟ್ ಎಂಬುದು ಪ್ರವಾಸಕ್ಕಿಂತ ಮೊದಲೇ ನಿಮಗೆ ತಿಳಿದಿದ್ದರೆ ಪ್ರವಾಸ ಮತ್ತಷ್ಟು ಸರಳವಾಗುತ್ತದೆ. ಇಂದು ನಾವು ಗೋವಾ ಪ್ರವಾಸದ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ.
ಗೋವಾದ ಯಾವ ಬೀಚ್ ಬೆಸ್ಟ್ : ಆರಂಭದಲ್ಲಿಯೇ ಬೀಚ್ ಬಗ್ಗೆ ಹೇಳಿ ಬಿಡ್ತೇವೆ. ಗೋವಾದಲ್ಲಿ ಬಗೆ ಬಗೆ ಬೀಚ್ ಇದೆ. ಕೆಲ ಬೀಚ್ ಗಳು ಪ್ರಶಾಂತವಾಗಿರುತ್ತವೆ. ಅಲ್ಲಿ ಇಲ್ಲಿ ಜನರು ಕಾಣ್ತಾರೆ. ನೀವು ಸಮುದ್ರ ತೀರದಲ್ಲಿ ಆರಾಮವಾಗಿ, ಶಾಂತಿಯಿಂದ ಕುಳಿತುಕೊಳ್ಳಲು ಬಯಸಿದ್ದರೆ ಉತ್ತರ ಗೋವಾದ ಅಶ್ವೆಮ್ ಬೀಚ್ ಮತ್ತು ದಕ್ಷಿಣದ ಪಲೋಲೆಮ್ ಬೀಚ್ ಉತ್ತಮ ಆಯ್ಕೆಯಾಗಿದೆ. ಇತರ ಬೀಚ್ ಗಿಂತ ಇಲ್ಲಿ ಹೆಚ್ಚು ವಿಶ್ರಾಂತಿ ಮತ್ತು ಶಾಂತಿ ಸಿಗೋದ್ರಲ್ಲಿ ಅನುಮಾನವಿಲ್ಲ. ಜನದಟ್ಟಣೆಯಿರುವ ಬೀಚ್ ನೋಡ್ಬೇಕೆಂದ್ರೆ ಬಾಗಾ ಬೀಚ್ ಬೆಸ್ಟ್.
11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ
ನೈಟ್ ಪಾರ್ಟಿ : ಗೋವಾದ ಇನ್ನೊಂದು ವಿಶೇಷವೇ ನೈಟ್ ಪಾರ್ಟಿಗಳು. ಸೂರ್ಯಾಸ್ತದ ನಂತ್ರ ಗೋವಾದ ರಂಗು ಬದಲಾಗುತ್ತದೆ. ಗೋವಾದ ನೈಜ ಚಿತ್ರಣ ನೋಡ್ಬೇಕೆಂದ್ರೆ ನೀವು ವಾಗೇಟರ್ ಮತ್ತು ಮೊರ್ಜಿಮ್‌ಗೆ ಹೋಗಬಹುದು. ಅಲ್ಲಿನ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಗೋವಾದಲ್ಲಿ ನಾಲ್ಕೈದು ದಿನ ಉಳಿಯುವ ಪ್ಲಾನ್ ಮಾಡಿದ್ದರೆ ವಾಗೇಟರ್ ಅಥವಾ ಮೊರ್ಜಿಮ್‌ನಲ್ಲಿ ಹೊಟೇಲ್ ಬುಕ್ ಮಾಡುವುದು ಬೆಸ್ಟ್. ಅಲ್ಲಿ ಜನಸಂದಣಿ ಹೆಚ್ಚಿರುವ ಕಾರಣ ಹೊಟೇಲ್ ಸಿಗದೆ ಹೋಗ್ಬಹುದು.
ಜಲ ಕ್ರೀಡೆ : ಗೋವಾದಲ್ಲಿ ಸಾಹಸ ಮಾಡ್ಬೇಕೆಂದ್ರೆ ನೀವು ವಾಟರ್ ಗೇಮ್ ಆಯ್ಕೆ ಮಾಡಬಹುದು. ವಾಟರ್ ಬೋಟ್ ಗಳ ಮೂಲಕ ನೀವು ಸಮುದ್ರದ ಸೌಂದರ್ಯವನ್ನು ಸವಿಯಬಹುದು. ಅಲ್ಲಿ ಅನೇಕ ಆಟಗಳಿರುತ್ತವೆ. ಇದಕ್ಕೆ ನೀವು ಪ್ಯಾಕೇಜ್ ಖರೀದಿ ಮಾಡಿದ್ರೆ ಒಳ್ಳೆಯದು.
ಗೋವಾದ ಆಹಾರ : ಗೋವಾ ಪ್ರವಾಸಕ್ಕೆ ಹೋದ್ಮೇಲೆ ಅಲ್ಲಿನ ಸ್ಥಳೀಯ ಆಹಾರ ಬಿಡಲು ಸಾಧ್ಯವಿಲ್ಲ. ಗೋವಾದಲ್ಲಿ ಸಮುದ್ರಾಹಾರಗಳು ಪ್ರಸಿದ್ಧಿ ಪಡೆದಿವೆ. ನೀವು 150 ರೂಪಾಯಿಗೆ ಮೀನಿನ ಥಾಲಿ ರುಚಿ ಸವಿಯಬಹುದು. ಗೋವಾದ ಸ್ಥಳೀಯ ಭಕ್ಷ್ಯಗಳನ್ನು ಸೇವಿಸಿ.
ಭುವನೇಶ್ವರಿ ದೇವಾಲಯದಲ್ಲಿ ಹರ್ಷ ಭುವಿ, ಇಲ್ಲೇ ನಡಿಯುತ್ತಾ ಕನ್ನಡದ ಮದುವೆ?
ಗೋವಾದಲ್ಲಿ ಶಾಪಿಂಗ್ : ಗೋವಾದಿಂದ ತೆಂಗಿನ ಎಣ್ಣೆ, ಕೋಕಂ, ಬೆಳ್ಳಿ ಆಭರಣಗಳು, ಡ್ರೀಮ್ ಕ್ಯಾಚರ್ ಮತ್ತು ಗೋಡಂಬಿಯಂತಹ ವಸ್ತುಗಳನ್ನು ಖರೀದಿಸಬಹುದು. ಗೋವಾದ ಟಿಬೆಟಿಯನ್ ಮಾರುಕಟ್ಟೆ ಈಗಾಗಲೇ ಜನಪ್ರಿಯವಾಗಿದೆ. ಇದಲ್ಲದೆ, ಕುಶಲಕರ್ಮಿಗಳ ಮಾರುಕಟ್ಟೆಯಲ್ಲಿ ಸುತ್ತಾಡಿ, ಒಂದಿಷ್ಟು ಖರೀದಿ ಮಾಡ್ಬಹುದು. ಕಲಾಂಗುಟ್ (Calangute) ಮಾರುಕಟ್ಟೆ ಬಾಗಾಕ್ಕಿಂತ ಅಗ್ಗವಾಗಿದೆ.
ವಾಸ್ತವ್ಯ ಎಲ್ಲಿ ? : ಗೋವಾದಲ್ಲಿ ಉಳಿಯಲು ಸಾಕಷ್ಟು ವ್ಯವಸ್ಥೆಯಿದೆ. ಹೊಟೇಲ್ ನಲ್ಲಿ ಮಾತ್ರ ತಂಗಬೇಕಾಗಿಲ್ಲ. ವಿಲ್ಲಾಗಳು ಅಥವಾ ಜೋಪಡಿಗಳು ಸಿಗುತ್ತವೆ. ಉಳಿಯುವ ಸ್ಥಳವನ್ನು ನಿಮ್ಮ ಬಜೆಟ್ ಪ್ರಕಾರ ನಿರ್ಧರಿಸಿ.