ಪುಟ್ಟ ಮಗನ ಕಿತಾಪತಿಗೆ ವಿದೇಶದಲ್ಲಿ ಬಾಕಿಯಾದ ಅಪ್ಪ: ಈ ವೈರಲ್ ಫೋಟೋದ ಹಿನ್ನೆಲೆ ಗೊತ್ತಾ?

ಈ  ಫೋಟೋವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರಾಲ್ ಮಾಡುವವರಾಗಿದ್ದರೆ ಆಗಾಗ ನೋಡಿರುತ್ತೀರಿ,  2014ರ ಫೋಟೋ ಇದಾಗಿದ್ದು, ಇದರ ಹಿನ್ನೆಲೆ ಏನು ಎಂಬುದು ನಿಮಗೆ ಗೊತ್ತಾ? ಗೊತ್ತಿಲ್ಲ ಎಂದಾದರೆ ಇಲ್ಲಿದೆ ಡಿಟೇಲ್ಸ್? 

Father stranded abroad because of his little sons creativity Do you know the background of this viral photo akb

ಬೀಜಿಂಗ್: ಮೇಲೆ ಕಾಣಿಸುವ ಫೋಟೋವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರಾಲ್ ಮಾಡುವವರಾಗಿದ್ದರೆ ಆಗಾಗ ನೋಡಿರುತ್ತೀರಿ ಈ ಫೋಟೋ ಆಗಾಗ ವೈರಲ್ ಆಗುವ ಜೊತೆ ವಿವಿಧ ರೀತಿಯ ಮೀಮ್ಸ್ ಆಗಿ ಮತ್ತೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸುತ್ತು ಹೊಡೆಯುತ್ತಲೇ ಇದ್ದು, ಈಗ ಮತ್ತೆ  ವೈರಲ್ ಆಗಿದೆ. 2014ರ ಫೋಟೋ ಇದಾಗಿದ್ದು, ಇದರ ಹಿನ್ನೆಲೆ ಏನು ಎಂಬುದು ನಿಮಗೆ ಗೊತ್ತಾ? ಗೊತ್ತಿಲ್ಲ ಎಂದಾದರೆ ಇಲ್ಲಿದೆ ಡಿಟೇಲ್ಸ್? 

ಮಗುವಿನ ಗೀಚುವ  ಹಾವಳಿಗೆ ಆಯ್ತು ಪಾಸ್‌ಪೋರ್ಟ್‌ ಸ್ಕ್ರ್ಯಾಚ್‌
 
ಪುಟ್ಟ ಮಕ್ಕಳು ಎಲ್ಲೂ ಕುಳಿತಲ್ಲಿ ಕೂರುವುದಿಲ್ಲ, ಒಂದು ಕ್ಷಣ ತಾಯಿ ಮೈ ಮರೆತರು ಮಕ್ಕಳು ಇನ್ನೇನೋ ಮಾಡಿ ಬಿಡುತ್ತಾರೆ. ನಿಂತಲ್ಲಿ ನಿಲ್ಲದ ಕಾಲು ಹುಟ್ಟಿದ ಮಕ್ಕಳನ್ನು ನಿಭಾಯಿಸುವುದು ಸುಲಭದ ಮಾತಲ್ಲ, ಅವರ ಕೈ ಸುಮ್ಮನಿರುವುದಂತು ಇಲ್ಲವೇ ಇಲ್ಲ, ಕೈಗೆ ಸಿಕ್ಕಿದ ವಸ್ತುಗಳಿಂದ ಅವರು ಗೋಡೆಗಳ ಮೇಲೆಲ್ಲಾ ಚಿತ್ತಾರ ಬಿಡಿಸುತ್ತಿರುತ್ತಾರೆ.  ಪೆನ್ನು ಲಿಪ್‌ಸ್ಟಿಕ್‌, ಸ್ಕೆಚ್‌ಪೆನ್ ಮುಂತಾದವುಗಳು ಪುಟ್ಟ ಮಕ್ಕಳ ಕೈಗೆ ಸಿಕ್ಕಿದರಂತೂ ಕತೆ ಮುಗಿದೇ ಹೋಯ್ತು, ಗೋಡೆಗಳ ಮೇಲೆ ಬಣ್ಣ ಬಣ್ಣಗಳ ಚಿತ್ತಾರ ನಿಮಿಷದಲ್ಲಿ ಸೃಷ್ಟಿಯಾಗಿರುತ್ತದೆ. ಬರೀ ಗೋಡೆ ಮಾತ್ರವಲ್ಲ, ಮನೆಯಲ್ಲಿ ಪುಟ್ಟ ಮಗುವಿಗಿಂತ ಸ್ವಲ್ಪ ದೊಡ್ಡ ಹಾಗೂ ಶಾಲೆಗೆ ಹೋಗುವ ಮಕ್ಕಳಿದ್ದರೆ ಅವರ ಪಠ್ಯ ಪುಸ್ತಕಗಳು, ನೋಟ್ಸ್‌ ಪುಸ್ತಕಗಳು, ನಡೆದಾಡುವ ನೆಲದ ಮೇಲೂ ಮಕ್ಕಳು ಕಲೆ ಪ್ರದರ್ಶನ ಮಾಡುವುದರಿಂದ ಪೋಷಕರಿಗೆ ದೊಡ್ಡ ತಲೆನೋವು ಉಂಟು ಮಾಡುತ್ತಾರೆ. ಕೆಲವೆಡೆ ಪುಟ್ಟ ಮಕ್ಕಳಿರುವವರಿಗೆ ಇದೇ ಕಾರಣಕ್ಕೆ ಕೆಲವರು ಮನೆ ಬಾಡಿಗೆಗೆ ನೀಡುವುದಿಲ್ಲ. ಹೀಗೆ ಮಕ್ಕಳು ಮಾಡಿದ ಕೆಲ ಕಿತಾಪತಿಗಳನ್ನು ಪೋಷಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂತಹವು ಕೆಲವೊಮ್ಮೆ ತಮಾಷೆ ಎನಿಸಿದರೆ ಮತ್ತೆ ಕೆಲವೊಮ್ಮೆ ಸಂಕಟ ಶುರು ಮಾಡುತ್ತವೆ. ಅದೇ ರೀತಿ ಇಲ್ಲೊಬ್ಬ ಪುಟ್ಟ ಬಾಲಕ ಮಾಡಿದ ಕಿತಾಪತಿಯ ಪರಿಣಾಮ ಅಪ್ಪ ವಿದೇಶದಲ್ಲೇ ಬಾಕಿಯಾಗುವಂತಾಗಿದೆ. 

ಚೀನಾದಲ್ಲಿ ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ನೋಡಲು ಅವಕಾಶ

ಈ ಫೋಟೋದ ಹಿನ್ನೆಲೆ ಹೀಗಿದೆ. 

ಯುಕೆ ಮೆಟ್ರೋ ನ್ಯೂಸ್ ವರದಿ ಪ್ರಕಾರ ಚೀನಾದ ತಂದೆಯೊಬ್ಬರು ಪೋಸ್ಟ್ ಮಾಡಿದ ಫೋಟೋ ಇದಾಗಿದೆ. ಇವರು 2014ರಲ್ಲಿ ಫ್ಯಾಮಿಲಿ ಜೊತೆ ದಕ್ಷಿಣ ಕೊರಿಯಾ ಟ್ರಿಪ್ ಹೋಗಿದ್ದಾರೆ. ಹೀಗೆ ಪ್ರಯಾಣದ ಮಧ್ಯೆ ಅದ್ಹೇಗೋ ಬಾಲಕನ ಕೈಗೆ ಅಪ್ಪನ ಪಾಸ್‌ಪೋರ್ಟ್‌ ಸಿಕ್ಕಿದ್ದು, ಮಾಮೂಲಿಯಂತೆ ಬಾಲಕ ಅದರಲ್ಲಿ ಚಿತ್ತಾರ ಬಿಡಿಸಿದ್ದಾನೆ. ಹೀಗಾಗಿ ಮತ್ತೆ ಕೊರಿಯಾದಿಂದ ಚೀನಾಗೆ ಮರಳಲಾಗದೇ ಸಂದಿಗ್ಧ ಸ್ಥಿತಿಗೆ ತಂದೆ ಸಿಲುಕಿದ್ದಾನೆ. ಪರಿಣಾಮ ತಂದೆ ಚೀನಾದ  ಸೋಶಿಯಲ್ ಮೀಡಿಯಾ ವೆಬ್‌ಸೈಟ್‌ ವೈಬೋದಲ್ಲಿ ಈ ವಿಚಾರ ತಿಳಿಸಿ  ಚೀನಾ ಸರ್ಕಾರ ತನಗೆ ನೆರವಾಗುವಂತೆ ಮನವಿ ಮಾಡಿದ್ದರು. ಈ ಫೋಟೋ ಅಂದಿನಿಂದ ಇಂದಿನವರೆಗೂ ಮೀಮ್ಸ್ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದೆ. ವೈರಲ್ ಆದಾಗಲೆಲ್ಲಾ ಈ ಫೋಟೋ ನಗೆಯುಕ್ಕಿಸುವುದರ ಜೊತೆ ಪುಟ್ಟ ಮಕ್ಕಳ ಕೈಗಳಿಗೆ ಸಿಗದಂತೆ ಅಮೂಲ್ಯ ವಸ್ತುಗಳನ್ನು ಯಾವ ಕಾರಣ್ಕಕೆ ಜೋಪಾನವಾಗಿ ಇಡಬೇಕು ಎಂಬುದನ್ನು ನೆನಪು ಮಾಡುತ್ತಿರುತ್ತದೆ. 

ಪುಟ್ಟ ಮಕ್ಕಳಿಗೆ ಯಾವುದೂ ಅಮೂಲ್ಯವಾದುದು ಯಾವುದು ಅಲ್ಲ ಎಂಬುದರ ಅರಿವಿರುವುದಿಲ್ಲ, ಹಾಗೆಯೇ ಇಲ್ಲಿ ತುಂಟಾಟವಾಡುತ್ತಿದ್ದ ಬಾಲಕನಿಗೆ ಅಪ್ಪನ ಪಾಸ್‌ಪೋರ್ಟ್‌ ಕೈಗೆ ಸಿಕ್ಕಿದೆ. ಮಾಮೂಲಿಯಂತೆ ಬಾಲಕ ಅದರದಲ್ಲಿ ಗೀಚಲು ಶುರು ಮಾಡಿದ್ದಾನೆ.  ಪುಟ್ಟ ಮಕ್ಕಳು ಮಾಡುವ ಕೆಲ ತುಂಟಾಟಗಳಿಗೆ ಪೋಷಕರು ಕೆಲವೊಮ್ಮೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಅದೇ ರೀತಿ ಇಲ್ಲಿ ಅಪ್ಪ ಮಗನ ಕಿತಾಪತಿಗೆ ವಿದೇಶದಲ್ಲಿ ಬಾಕಿಯಾಗುವಂತಾಗಿದೆ.

ಚೀನಾದಲ್ಲಿ ಯಾವುದೂ ಅಸಾಧ್ಯ ಅಲ್ಲ ಬಿಡಿ: ಮನುಷ್ಯನಂತೆ ಕಾಣುವ ಕರಡಿ ವೀಡಿಯೋ ವೈರಲ್

ನಿಮ್ಮ ಮಕ್ಕಳಿಗೂ ಹೀಗೆ ಗೋಡೆ ನೆಲ ಸೇರಿದಂತೆ ಸಿಕ್ಕ ಸಿಕ್ಕಲ್ಲಿ ಗೀಚುವ ಅಭ್ಯಾಸವಿದ್ದರೆ ಅವರಿಗೆ ಪುಸ್ತಕದ ಜೊತೆ ಸ್ಕೆಚ್‌ಪೆನ್ ಸ್ಲೇಟ್, ಬಳಪ ತಂದು ಕೊಡಿ, ಅದರ ಹೊರತಾಗಿ ಬೇರೆಲ್ಲೂ ಪ್ರತಿಭೆ ತೋರದಂತೆ ಪ್ರೀತಿಯಿಂದ ಮನವಿ ಮಾಡಿ. ಜೊತೆಗೆ ಅಗತ್ಯವಾದ ದಾಖಲೆಗಳನ್ನು ಮಕ್ಕಳ ಕೈಗೆ ಸಿಗದಿರುವಂತೆ ದೂರ ಇಡಿ ಇಲ್ಲದೇ ಹೋದರೆ  ಆಮೇಲೆ ಪಶ್ಚಾತಾಪ ಪಡಬೇಕಾಗುವುದು. 

 

Latest Videos
Follow Us:
Download App:
  • android
  • ios