ಚೀನಾದಲ್ಲಿ ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ನೋಡಲು ಅವಕಾಶ

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚಾಗಿ ಇಂಟರ್ನೆಟ್‌ ವ್ಯಸನಿಗಳಾಗುತ್ತಿರುವುದನ್ನು ತಪ್ಪಿಸಲು ಮುಂದಾಗಿರುವ ಚೀನಾ ಸರ್ಕಾರ ಮಕ್ಕಳ ಮೊಬೈಲ್‌ ಬಳಕೆಯನ್ನು ನಿಯಂತ್ರಿಸಲು ಮುಂದಾಗಿದೆ.

Children allowed 2 hours a day to look at mobile phones in China Internet ban from 10 pm to 6 am akb

ಬೀಜಿಂಗ್‌: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚಾಗಿ ಇಂಟರ್ನೆಟ್‌ ವ್ಯಸನಿಗಳಾಗುತ್ತಿರುವುದನ್ನು ತಪ್ಪಿಸಲು ಮುಂದಾಗಿರುವ ಚೀನಾ ಸರ್ಕಾರ ಮಕ್ಕಳ ಮೊಬೈಲ್‌ ಬಳಕೆಯನ್ನು ನಿಯಂತ್ರಿಸಲು ಮುಂದಾಗಿದೆ. ಮಕ್ಕಳು ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್‌ ಬಳಸಬಹುದಾಗಿದ್ದು, ರಾತ್ರಿಯ ವೇಳೆ ಇಂಟರ್ನೆಟ್‌ ಸಂಪರ್ಕವನ್ನು ಸಹ ಕಡಿತಗೊಳಿಸಲಾಗುತ್ತದೆ.

ಇಂಟರ್ನೆಟ್‌ ದುರ್ಬಳಕೆಯ ಕುರಿತಾಗಿ ಕಳವಳ ವ್ಯಕ್ತಪಡಿಸಿರುವ ಚೀನಾದ ಸೈಬರ್‌ಸ್ಪೇಸ್‌ ಅಡ್ಮಿನಿಸ್ಪ್ರೇಶನ್‌ (ಸಿಎಸಿ) ಈ ಹೊಸ ನಿಯಮಗಳನ್ನುಳ್ಳ ಕರಡು ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಇಂಟರ್ನೆಟ್‌ ಕಡಿತ ಸೆ.2ರಿಂದ ಜಾರಿಯಾಗುವ ಸಾಧ್ಯತೆ ಇದ್ದು, ಮೊಬೈಲ್‌ ಬಳಕೆಗೆ ಸಮಯ ನಿಗದಿ ಮಾಡುವ ಕುರಿತಾಗಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಕ್ಕಳ ಬಳಸುವ ಮೊಬೈಲ್‌ಗಳಿಗೆ ಇಂಟರ್ನೆಟ್‌ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಜೊತೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದಿನಕ್ಕೆ ಗರಿಷ್ಠ 2 ಗಂಟೆ ಮತ್ತು 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 40 ನಿಮಿಷ ಮಾತ್ರ ಮೊಬೈಲ್‌ ಬಳಕೆ ಮಾಡುವಂತೆ ನಿಯಂತ್ರಣ ಹೇರುವತ್ತ ಸರ್ಕಾರ ಚಿಂತಿಸಿದೆ. ಆದರೆ ಈ ನಿಯಮವನ್ನು ಬೇಕಿದ್ದರೆ ಪೋಷಕರು ಮೀರಬಹುದು ಎಂದು ಸಹ ವರದಿಗಳು ತಿಳಿಸಿವೆ.

ಮದ್ವೆ ದಿನವು ಉರಿ ಮೊಗದ ಜೊತೆ ಫೋನಲ್ಲೇ ಮುಳುಗಿದ ವರ: ವಧುವಿನ ಸ್ಥಿತಿಗೆ ಮರುಗಿದ ನೆಟ್ಟಿಗರು

ಇದನ್ನು ಹೇಗೆ ಮಾಡಲಾಗುತ್ತದೆ?:

ಚೀನಾ ಬಹುತೇಕ ಮೊಬೈಲ್‌ಗಳ ತಯಾರಿಕ ಹಬ್‌ ಆಗಿದ್ದು, ಇಲ್ಲಿ ತಯಾರಾಗುವ ಎಲ್ಲಾ ಮೊಬೈಲ್‌ಗಳಲ್ಲಿ ಮೈನರ್‌ ಮೋಡ್‌ ಎಂಬ ಆಯ್ಕೆಯನ್ನು ಒದಗಿಸಲಾಗುತ್ತದೆ. ಇದನ್ನು ಆನ್‌ ಮಾಡುವ ಕೆಲಸವನ್ನು ಪೋಷಕರು ಮಾಡಬೇಕು. ಈ ಮೋಡ್‌ ಆನ್‌ ಆಗಿದ್ದಾಗ 18 ವರ್ಷದ ಕೆಳಗಿನ ಮಕ್ಕಳು ನೋಡಬಹುದಾದ ವಿಡಿಯೋ ಮತ್ತು ಆಡಿಯೋಗಳನ್ನಷ್ಟೇ ದೊರೆಯುವಂತೆ ಇಂಟರ್ನೆಟ್‌ ನೀಡುವ ಕಂಪನಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ಹಲವು ವರದಿಗಳು ತಿಳಿಸಿವೆ. ಕಳೆದ ವರ್ಷ ಆನ್ಲೈನ್‌ ಗೇಮಿಂಗ್‌ ಮೇಲೆ ನಿಷೇಧ ವಿಧಿಸಿದ್ದ ಚೀನಾ ಸರ್ಕಾರ ವಾರಕ್ಕೆ ಗರಿಷ್ಠ 3 ಗಂಟೆಗಳಷ್ಟೇ ಮಕ್ಕಳು ಆನ್ಲೈನ್‌ ಗೇಮ್‌ ಆಡಬಹುದು ಎಂದು ಹೇಳಿತ್ತು.

ಬ್ರೂಸ್ಲಿ ಅಭಿಮಾನಿಯ ಅದ್ಬುತ ಕಥನ: ಚೀನಾ ಪಠ್ಯಪುಸ್ತಕದಲ್ಲಿ ಪಾಠವಾದ ಭಾರತೀಯ

ಬೀಜಿಂಗ್‌ನಲ್ಲಿ 5 ದಿನದಲ್ಲಿ 74 ಸೆಂಮೀನಷ್ಟು ಮಳೆ: 140 ವರ್ಷಗಳ ದಾಖಲೆ

ಬೀಜಿಂಗ್‌: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಕಳೆದ 5 ದಿನದಲ್ಲಿ 74 ಸೆಂ.ಮೀ. ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದು ಕಳೆದ 140 ವರ್ಷಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ಚೀನಾ ಕರಾವಳಿಯಲ್ಲಿ ಬೀಸುತ್ತಿರುವ ಡೊಕ್ಸುರಿ ಚಂಡಮಾರುತದ ಪರಿಣಾಮವಾಗಿ ಈ ಮಹಾ ಮಳೆಯ ಅಬ್ಬರಿಸುತ್ತಿದ್ದು, ಇದರಿಂದಾಗಿ 21 ಜನರು ಮೃತಪಟ್ಟಿದ್ದಾರೆ. ಮಹಾ ಮಳೆಗೆ ಬೀಜಿಂಗ್‌ ಹಾಗೂ ಸುತ್ತಮುತ್ತಲಿನ ಪ್ರದೇಶ ಜಲಾವೃತಗೊಂಡಿದ್ದು, 8.50 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. 26 ಜನರು ಕಣ್ಮರೆಯಾಗಿದ್ದಾರೆ. ಮಳೆಯಿಂದಾಗಿ ಬೀಜಿಂಗ್‌ನ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿ ದ್ದು, ಜನರು ಪರದಾಡುತ್ತಿದ್ದಾರೆ. 1883ರಲ್ಲಿ 60 ಸೆಂ.ಮೀ. ಮಳೆ ಸುರಿದಿತ್ತು.

Latest Videos
Follow Us:
Download App:
  • android
  • ios