ಚೀನಾದಲ್ಲಿ ಯಾವುದೂ ಅಸಾಧ್ಯ ಅಲ್ಲ ಬಿಡಿ: ಮನುಷ್ಯನಂತೆ ಕಾಣುವ ಕರಡಿ ವೀಡಿಯೋ ವೈರಲ್
ಸದಾ ಜೈವಿಕ ಪ್ರಯೋಗದಲ್ಲೇ ತೊಡಗಿ ಈಗಾಗಲೇ ಹಲವು ಅವಾಂತರಗಳಿಗೂ ಕಾರಣವಾಗಿರುವ ಚೀನಾದಲ್ಲಿ ಈಗ ಮನುಷ್ಯನಂತೆ ನೇರವಾಗಿ ನಿಲ್ಲುವ ಕರಡಿಯ ವೀಡಿಯೋವೊಂದು ಸೆರೆ ಆಗಿದೆ
ಚೀನಾ: ಸದಾ ಜೈವಿಕ ಪ್ರಯೋಗದಲ್ಲೇ ತೊಡಗಿ ಈಗಾಗಲೇ ಹಲವು ಅವಾಂತರಗಳಿಗೂ ಕಾರಣವಾಗಿರುವ ಚೀನಾದಲ್ಲಿ ಈಗ ಮನುಷ್ಯನಂತೆ ನೇರವಾಗಿ ನಿಲ್ಲುವ ಕರಡಿಯ ವೀಡಿಯೋವೊಂದು ಸೆರೆ ಆಗಿದೆ, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ವೀಡಿಯೋದಲ್ಲೇನಿದೆ?
Brian Krassenstein ಎಂಬುವವರು ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಈ ಕರಡಿ ಝೂನಲ್ಲಿ ಇದ್ದು, ಮೃಗಾಲಯಕ್ಕೆ ಆಗಮಿಸುವ ಜನರು ಈ ಕರಡಿಗೆ ಆಹಾರ ಎಸೆಯುವುದನ್ನು ಕಾಣಬಹುದು. ಈ ವೇಳೆ ತನ್ನತ್ತ ಎಸೆದ ಆಹಾರವನ್ನು ಕರಡಿ ಹಿಡಿಯಲು ಯತ್ನಿಸುತ್ತದೆ. ಅಲ್ಲದೇ ವೆಲ್ಮೇಟ್ ರೀತಿಯ ಪ್ಯಾಂಟ್ ತೊಟ್ಟಂತೆ ಕಾಣುವ ಈ ಕರಡಿ ನಿಜವಾಗಿಯೂ ಏನು ಎಂಬುದು ತಿಳಿದಿಲ್ಲ.
ಟ್ವಿಟ್ಟರ್‌ನಲ್ಲಿ ವೀಡಿಯೋ ನೋಡಿದ ನಮಗೆ ಹೇಗೆ ಇದು ಕರಡಿ ವೇಷಧಾರಿ ಮನುಷ್ಯ ಇರಬೇಕು ಎಂಬ ಅನುಮಾನ ಬಂದಿದೆಯೋ ಹಾಗೆ ಅಲ್ಲಿನ ಜನಕ್ಕೂ ಇದೇ ಅನುಮಾನ ಬಂದಿದ್ದು ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದಾರೆ. ಈ ವೀಡಿಯೋ ಶೇರ್ ಮಾಡಿರುವ Brian Krassenstein ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವಂತೆ, ಚೀನಾದ ಝೆಜಿಯಾಂಗ್‌ನಲ್ಲಿರುವ ಹ್ಯಾಂಗ್‌ಝೌನಲ್ಲಿರುವ ಹ್ಯಾಂಗ್‌ಝೌ ಮೃಗಾಲಯದಲ್ಲಿ ಈ ವಿಚಿತ್ರ ಕರಡಿ ಕಾಣಿಸಿಕೊಂಡಿದೆ. ಇದರ ವೀಡಿಯೋ ನೋಡಿದ ಜನರು ಇವುಗಳು ನಿಜವಾಗಿಯೂ ಸನ್ ಕರಡಿಗಳೇ ಅಥವಾ ಕರಡಿ ವೇಷದಲ್ಲಿರುವ ಮನುಷ್ಯರೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವೀಡಿಯೋ ವೈರಲ್ ಆದ ಬಳಿಕ ಹ್ಯಾಂಗ್‌ಝೌನ ಮೃಗಾಲಯವೂ ಹೇಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಹಾವೇರಿ: ಕರಡಿಯೊಂದಿಗೆ ಸೆಣಸಾಡಿ ಗಂಡ, ಸಹೋದರನ ಪ್ರಾಣ ರಕ್ಷಿಸಿ ವೀರವನಿತೆಯಾದ ಸಬೀನಾ..!
ಮೃಗಾಲಯದ ಸ್ಪಷ್ಟನೆ ಹೀಗಿದೆ.
ಬಹುಶಃ ಚೀನಾದಲ್ಲಿ ಈಗ ಬೇಸಿಗೆ ಇರಬೇಕು. ಈ ಉರಿ ಬೇಸಿಗೆಯಲ್ಲಿ ಇಷ್ಟೊಂದು ದಪ್ಪನೆಯ ಬಟ್ಟೆ ತೊಟ್ಟ ಯಾರಾನ್ನಾದರೂ ನೀವು ನೋಡಿದರೆ ಅವರು ನೀವು ನೋಡಿದ ಕೆಲವೇ ಕ್ಷಣದಲ್ಲಿ ನೆಲಕ್ಕೆ ಬೀಳಲಿದ್ದಾರೆ. ನಮ್ಮದು ಸರ್ಕಾರ ನಡೆಸುವ ಮೃಗಾಲಯವಾಗಿದ್ದು, ಇಲ್ಲಿ ಆ ರೀತಿಯ ವೇಷ ಭೂಷಣ ಧರಿಸಿ ರಂಜಿಸುವ ಯಾವುದೇ ವ್ಯವಸ್ಥೆ ಇಲ್ಲ, ಈ ಸನ್ ಕರಡಿಗಳು ಅಥವಾ ಸೂರ್ಯ ಕರಡಿಗಳು ಮಾನವರಂತೆಯೇ ನಡೆದಾಡುತ್ತವೆ ಎಂದು ಹೇಳಿದೆ. ಈ ಮೂಲಕ ಇವುಗಳು ವೇಷಧರಿಸಿದ ಮನುಷ್ಯರಲ್ಲ, ಇವುಗಳು ನಿಜವಾದ ಕರಡಿಗಳು ಎಂಬುದನ್ನು ತಿಳಿಸಿ ಜನರ ಗೊಂದಲ ದೂರ ಮಾಡಿದೆ.
ಈ ವೀಡಿಯೋವನ್ನು 5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವೀಡಿಯೋಗೆ ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯಿಸಿದ್ದು, ಹಾಗಾದರೆ ಕರಡಿಗಳು ನಿಜವಾದುವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದರೆ ಕರಡಿ ವೇಷದಲ್ಲಿರುವ ಮನುಷ್ಯರಂತೆ ಕಾಣಿಸುತ್ತಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇವುಗಳು ಸನ್ ಬಿಯರ್ ಅಥವಾ ಸೂರ್ಯ ಕರಡಿಗಳೇ ಆಗಿದ್ದು ನಾನು ಆ ಝೂಗೆ ಭೇಟಿ ನೀಡಿದ್ದೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಯುವಕನ ಜೊತೆ ಜೊತೆ ಮರವೇರಿದ ಕರಡಿ: ಜೀವ ಬಾಯಿಗೆ ಬರೋದೊಂದೇ ಬಾಕಿ