ರಾಜಸ್ಥಾನ ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಿದ್ದೀರಾ? ಉದಯಪುರದ ಲೇಕ್ ಪ್ಯಾಲೇಸ್, ನೀಮ್ರಾನಾ ಕೋಟೆ ಅರಮನೆ ಮತ್ತು ಉದಯ್ ವಿಲಾಸ್ ಸೇರಿದಂತೆ ರಾಜಸ್ಥಾನದ 3 ಸುಂದರ ಅರಮನೆಗಳ ವಿಶೇಷತೆ ತಿಳಿಯಿರಿ.

ರಾಜಸ್ಥಾನ ರಾಜ್ಯವು ನಮ್ಮ ಭಾರತದ ಐತಿಹಾಸಿಕ ಸ್ಥಳಗಳ ಕನ್ನಡಿಯಾಗಿದೆ. ಇಲ್ಲಿ ಅರಮನೆ, ಕೋಟೆಗಳಂತಹ ಅದ್ಭುತವಾದ ಸ್ಥಳಗಳನ್ನು ಪರಿಶೀಲಿಸಬಹುದು. ಜನರು ಹೆಚ್ಚಾಗಿ ರಾಜಸ್ಥಾನಿಯ ಶ್ರೀಮಂತ ಸಂಸ್ಕೃತಿ, ಬಾಯೂರಿಸುವ ಸ್ಥಳೀಯ ಖಾದ್ಯಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸ ಯೋಜಿಸುತ್ತಾರೆ.

ಹೀಗೆ ರಾಜಸ್ಥಾನಕ್ಕೆ ಹೋದಾಗ ಅಲ್ಲಿನ ಅರಮನೆಗಳನ್ನು ನೋಡುವುದೇ ಪ್ರತಿಯೊಬ್ಬ ಪ್ರವಾಸಿಗನ ಕನಸಾಗಿರುತ್ತದೆ. ಏಕೆಂದರೆ ಇಲ್ಲಿನ ಅರಮನೆಗಳು, ಕೋಟೆಗಳು ತನ್ನ ವಿಶಿಷ್ಟವಾದ ವಾಸ್ತುಶಿಲ್ಪಗಳಿಂದ ಕಣ್ಣು ಕುಕ್ಕುವ ಸೌಂದರ್ಯವನ್ನು ಹೊಂದಿವೆ. ಹಾಗಾದರೆ ಆ ಪ್ಯಾಲೇಸ್‌ಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಲೇಕ್ ಪ್ಯಾಲೇಸ್, ಉದಯಪುರ

ಉದಯಪುರದ ಲೇಕ್‌ ಪ್ಯಾಲೇಸ್‌ ಅತ್ಯಂತ ಸುಂದರವಾದ ಅರಮನೆಗಳಲ್ಲಿ ಒಂದಾಗಿದೆ. ಈ ಅದ್ಭುತವನ್ನು ಮಹಾರಾಜ ಜಗತ್ ಸಿಂಗ್ IIರ ಆಳ್ವಿಕೆಯಲ್ಲಿ 1743-1746 ರಲ್ಲಿ ನಿರ್ಮಿಸಲಾಯಿತು. ಈ ಅರಮನೆಯನ್ನು ರಾಜಕುಟುಂಬಿಕರು ತಮ್ಮ ಬೇಸಿಗೆಯ ಅರಮನೆಯಾಗಿ ಬಳಸುತ್ತಿದ್ದರು. ಈ ಭವ್ಯವಾದ ಅರಮನೆಯ ಸಂಕೀರ್ಣವು ಪಿಚೋಲಾ ಸರೋವರದಲ್ಲಿರುವ ಜಗ್ನಿವಾಸ್ ದ್ವೀಪದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಹರಡಿದೆ.

ನೀಮ್ರಾನಾ ಕೋಟೆ ಅರಮನೆ ಅಲ್ವಾರ್

ಅಲ್ವಾರ್‌ನ ಈ ನೀಮ್ರಾನಾ ಕೋಟೆಯು ರಾಜಸ್ಥಾನದ ಮತ್ತೊಂದು ಭವ್ಯವಾದ ಕೋಟೆಯಾಗಿದೆ. ಇದು ಒಂದು ಕಾಲದಲ್ಲಿ ತನ್ನ ವೈಭವದ ಕಾರಣ ಬಹಳ ಪ್ರಸಿದ್ಧವಾಗಿತ್ತು. 1467ರಲ್ಲಿ ರಾಜಾ ದೂಪ್ ರಾಜ್ ಅವರು ಈ ಅರಮನೆಯನ್ನು ನಿರ್ಮಿಸಿದರು. ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿರುವ ಈ ಅರಮನೆಯು ಅಲ್ವಾರ್ ನಗರದ ಭವ್ಯವಾದ ವಿಹಂಗಮ ನೋಟಗಳನ್ನು ನೀಡುತ್ತದೆ. ಪ್ರಸ್ತುತ ಇದು ಪಾರಂಪರಿಕ ಹೋಟೆಲ್‌ ಆಗಿ ಪರಿವರ್ತಿಸಲಾಗಿದೆ.

ಉದಯ್ ವಿಲಾಸ್ ಅರಮನೆ ಉದಯಪುರ

‘ಸರೋವರಗಳ ನಗರ’ ಎಂದೇ ಕರೆಯಲಾಗುವ ಉದಯಪುರದಲ್ಲಿ ಅದ್ಭುತವಾದ ಉದಯ್ ವಿಲಾಸ್ ಅರಮನೆ ಇದೆ. ಉದಯಪುರದಲ್ಲಿ ವಿಧ ರಾಜಸ್ಥಾನದ ಅರಮನೆಗಳು ಮತ್ತು ಕೋಟೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ಉದಯವಿಲ್ಲಸ್ ಅರಮನೆಯು ಪ್ರಸಿದ್ಧವಾಗಿದೆ. ಪಿಚೋಲಾ ಸರೋವರದ ದಡದಲ್ಲಿ ನೆಲೆಗೊಂಡಿರುವ ಈ ಅರಮನೆಯು ಒಂದು ಭವ್ಯವಾದ ಕಟ್ಟಡ, ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ಕಲಾತ್ಮಕ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ.