Asianet Suvarna News Asianet Suvarna News

ಹೀಗಿದೆ ನೋಡಿ ಜಗತ್ತಿನ ಏಕೈಕ ಶಿಶ್ನ ಮ್ಯೂಸಿಯಂ!

ತಿಮಿಂಗಿಲದ ಶಿಶ್ನ ಹದಿನಾರಡಿ ಉದ್ದವಿರುತ್ತೆ ಎಂಬುದು ನಿಮಗೆ ಗೊತ್ತೆ? ಇಂಥ ವಿಶೇಷ ಸಂಗತಿಗಳ ಕಣಜ ಐಸ್‌ಲ್ಯಾಂಡ್‌ನ ಈ ಫಲಾಲಜಿಕಲ್ ಮ್ಯೂಸಿಯಂ.

Do you know about worlds only penis museum
Author
Bengaluru, First Published Mar 24, 2021, 4:18 PM IST

ಮೊನ್ನೆ ಮೊನ್ನೆ ತಾನೇ ಯೋನಿ ಮ್ಯೂಸಿಯಂ ಬಗ್ಗೆ ತಿಳಿದುಕೊಂಡೆವು. ಹಾಗೇ ಒಂದು, ಒಂದೇ ಒಂದು ಶಿಶ್ನ ಮ್ಯೂಸಿಯಂ ಕೂಡಾ ಈ ಜಗತ್ತಿನಲ್ಲಿದೆ ಎನ್ನೋದು ನಿಮಗೆ ಗೊತ್ತೆ?

ಗೊತ್ತಿಲ್ಲದಿದ್ದರೆ ಇಲ್ಲಿದೆ ನೋಡಿ. ಇದು ಇರುವುದು ಐಸ್‌ಲ್ಯಾಂಡ್‌ನ ರೆಕ್ಯಾವಿಕ್ ಎಂಬಲ್ಲಿ. ಪ್ರತಿವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ಕೊಡುತ್ತಾರೆ. ಇಲ್ಲಿ ಪ್ರದರ್ಶನಕ್ಕೆ ಇಟ್ಟಿರೋ ನೂರಾರು ಬಗೆಯ ಪ್ರಾಣಿಗಳ ಶಿಶ್ನದ ವೈವಿಧ್ಯಗಳನ್ನು ಕಂಡು ನಿಬ್ಬೆರಗಾಗುತ್ತಾರೆ. ಇಲ್ಲಿ ಸಣ್ಣ ಕಪ್ಪೆಯ ಆ ಅಂಗದಿಂದ ಹಿಡಿದು ತಿಮಿಂಗಿಲದ ಮದನಾಯುಧದವರೆಗೆ, ಸಣ್ಣ ಕೀಟದ ಲೈಂಗಿಕ ಅಂಗದಿಂದ ಹಿಡಿದು ಆನೆಯ ಮನ್ಮಥಧ್ವಜದವರೆಗೆ- ವೈವಿಧ್ಯಮಯ ಶಿಶ್ನಗಳನ್ನು ನೋಡುಗರಿಗಾಗಿ, ಅವುಗಳ ಕುರಿತ ಮಾಹಿತಿಗಳ ಸಮೇತ ಕಾಪಿಡಲಾಗಿದೆ. 

ಇಲ್ಲಿ ಪೋಲಾರ್ ಬೇರ್‌ಗಳ ಅಂಗ, ವಾಲ್ರಸ್ ಮುಂತಾದ ಕಡಲ ಪ್ರಾಣಿಗಳದ್ದು, ಇವೆಲ್ಲ ಇವೆ. ಶಿಶ್ನವನ್ನು ಹೋಲುವ ಅಥವಾ ಅದನ್ನೇ ಉದ್ದೇಶಿಸಿ ಕಲಾತ್ಮಕವಾಗಿ ತಯಾರಿಸಲಾದ ಕಲಾತ್ಮಕ ವಸ್ತುಗಳೂ ಇಲ್ಲಿ ಪ್ರದರ್ಶನಕ್ಕೆ ಇವೆ. ಹಾಗೇ ಶಿಶ್ನದ ಇತರ ಭಾಗಗಳೂ ಇವೆ. ಸಾಧ್ಯವಿದ್ದಲ್ಲಿ ನಿಜವಾದ ಶಿಶ್ನವನ್ನೇ ರಾಸಾಯನಿಕಗಳಿಂದ ಸರಿಯಾಗಿ ಕಾಪಿಟ್ಟುಕೊಂಡು ಇಡಲಾಗಿದೆ. ಇಲ್ಲದ ಸಂದರ್ಭದಲ್ಲಿ, ಅದನ್ನೇ ಹೋಲುವ ಕೃತಕ ಫಿಗರ್‌ಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ. 

ಇದು ಯೋನಿ ಮ್ಯೂಸಿಯಂ! ಇಲ್ಲಿ ಏನೆಲ್ಲಾ ಇದೆ ಗೊತ್ತೆ? ...

ಐಸ್‌ಲ್ಯಾಂಡಿಕ್ ಫಲಾಲಿಜಕಲ್ ಮ್ಯೂಸಿಯಂ ಎಂದು ಹೆಸರಾದ ಈ ಸಂಗ್ರಹಾಲಯ 1997ರಲ್ಲಿ ಆರಂಭಗೊಂಡಿತು. ಇಲ್ಲಿನ ಆಕರ್ಷಣೆಗಳಲ್ಲಿ ಒಂದು ತಿಮಿಂಗಿಲದ ಮರ್ಮಾಂಗ. ಅದು ಸುಮಾರು ಐದು ಅಡಿ ಉದ್ದವಿದೆ! ನೋಡಲು ಬಂದವರು ಮುಸಿನಗುತ್ತ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ! ವಾಲ್ರಸ್ ಪ್ರಾಣಿಯ ಮರ್ಮವೂ ಬಹುತೇಕ ಇಷ್ಟೇ ಉದ್ದವಿದೆ. ಇಲ್ಲಿ ಹೋರಿಯ ವೃಷಣದಿಂದ ಮಾಡಲಾದ ಟೇಬಲ್ ಲ್ಯಾಂಪ್ ನೋಡುಗರನ್ನು ಆಕರ್ಷಿಸುತ್ತದೆ. ಕೆಲವು ಶಿಶ್ನಗಳಂತೂ ಚಿತ್ರವಿಚಿತ್ರವಾಗಿ, ಮುಳ್ಳಿನಂತೆ, ಕಲ್ಲಿನಂತೆ, ತಿರುಚಿಕೊಂಡು, ಹೀಗೆಲ್ಲಾ ಕಾಣಸಿಗುತ್ತವೆ. ಮಿಂಕ್ ತಿಮಿಂಗಿಲದ ಆ ಭಾಗವಂತೂ ನೀವು ನೋಡದೆ ಹಿಂದಿರುಗುವಂತೆಯೇ ಇಲ್ಲ. ಅಷ್ಟೊಂದು ವಿಶಿಷ್ಟ, ವಿಚಿತ್ರ, ಉದ್ದ ಹಾಗೂ ಬಾಗು ಬಳುಕುಗಳಿಂದ ಕೂಡಿದೆ.

Do you know about worlds only penis museum



ಇನ್ನು ಐಸ್‌ಲ್ಯಾಂಡ್‌ನ ಹ್ಯಾಂಡ್‌ಬಾಲ್ ಟೀಮ್ 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿತ್ತು. ಅದರ ನೆನಪಿಗಾಗಿ, ಆ ಟೀಮಿನ ಆಟಗಾರರ ಶಿಶ್ನಗಳನ್ನು ಇಲ್ಲಿ ಪ್ರತಿಕೃತಿ ರೂಪಿಸಿ ಇಡಲಾಗಿದೆ! ಹಾಗೇ ಮ್ಯೂಸಿಯಂನ ಹೊರಗೆ ಮೂರು ಕಲ್ಲುಗಳನ್ನು ಜೋಡಿಸಿ ಮಾಡಲಾದ ಅದರ ಪ್ರತಿಕೃತಿಯೂ ಒಮ್ಮೆ ನೋಡುವಂಥದೇ. ಕೆಲವು ಮದನಾಯುಧಗಳಂತೂ ನೇರವಾಗಿ ಕ್ಷಿಪಣಿಗಳಂತೆ ಚಾಚಿಕೊಂಡಿದ್ದು, ಗೋಡೆಯಿಂದ ಅವುಗಳನ್ನು ತೂಗುಬಿಡಲಾಗಿದೆ, ನಿಮಗೆ ಭಯ ಹುಟ್ಟಿಬಹುದು ಹಾಗಿದೆ.

ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಲು ಪುರುಷರಿಗೆ ಬೇಕು ಈ ಸೂಪರ್ ಫುಡ್ಸ್! ...

ಈ ಮ್ಯೂಸಿಯಂ ರಚಿಸಿದವನು ಹಿಜಾರ್ಟ್‌ಸನ್‌ ಎಂಬಾತ. ಇವನು ಕಾಲೇಜಿನಲ್ಲಿದ್ದಾಗ ಒಮ್ಮೆ, ಇವನ ಸಹಪಾಠಿಯೊಬ್ಬ ಇವನಿಗೆ ತಮಾಷೆಗೆಂದು ಹೋರಿಯ ವೃಷಣಗಳನ್ನು ಗಿಫ್ಟ್ ಆಗಿ ಕೊಟ್ಟನಂತೆ. ಅದನ್ನು ಆತ ಹಾಗೇ ಇಟ್ಟುಕೊಂಡಿದ್ದ. ಇದನ್ನು ತಿಳಿದ ಇನ್ನೂ ಅನೇಕರು ಆತನಿಗೆ ಹೋರಿ ವೃಷಣಗಳನ್ನು ತಂದು ಕೊಡತೊಡಗಿದರು. ಇನ್ಯಾರೋ ಬೇರೊಂದು ಐಡಿಯಾ ಕೊಟ್ಟರು- ಮೀನುಗಾರಿಕೆ ಮಾರ್ಕೆಟ್‌ನಲ್ಲಿ ತಿಮಿಂಗಿಲದ ಶಿಶ್ನಗಳು ತ್ಯಾಜ್ಯವಾಗಿ ಇರುತ್ತವೆ. ಅದನ್ನೇಕೆ ಸಂಗ್ರಹಿಸಬಾರದು ಎಂಬ ಐಡಿಯಾ. ಹೀಗೆ ಸಂಗ್ರಹಿಸುತ್ತ ಹೋದ ಹಿಜಾರ್ಟ್‌ಸನ್‌ಗೆ ಅದನ್ನೆಲ್ಲ ಸೇರಿಸಿ ಒಂದು ಮ್ಯೂಸಿಯಂ ಮಾಡುವ ಐಡಿಯಾ ಬಂತು. ಈಗ ಅದು ನನಸಾಗಿದೆ. 

ತಿಮಿಂಗಿಲದ ಶಿಶ್ನದ ಬಗ್ಗೆ ನೀವು ತಿಳಿಯೋದು ಇನ್ನೂ ಇದೆ. ಅದು ಸುಮಾರು 16 ಅಡಿ ಉದ್ದವಿತ್ತಂತೆ. ಸಾಮಾನ್ಯವಾಗಿ ತಿಮಿಂಗಿಲದ ಶಿಶ್ನದ ಉದ್ದ ಅದಕ್ಕಿಂತಲೂ ಹೆಚ್ಚು. ಆದರೆ ಅದನ್ನು ಅಲ್ಲಿಗೆ ಸಾಗಿಸಲು ಸಾಧ್ಯವಾಗಲಿಲ್ಲವಂತೆ. ಅಷ್ಟುದ್ದದ ಶಿಶ್ನವನ್ನು ಫಾರ್ಮಾಲ್ಡಿಹೈಡ್‌ನಲ್ಲಿ ಅದ್ದಿ ಇಡಲು ಬೇಕಾದ ಕಂಟೈನರ್ ಕೂಡ ಇಲ್ಲ. ಹೀಗಾಗಿ ಅದರ ತುದಿಯ ಆರು ಅಡಿಯನ್ನು ಮಾತ್ರ ತಂದು ಇಲ್ಲಿ ಇಡಲಾಗಿದೆ. 

ಐಸ್‌ಲ್ಯಾಂಡ್‌ ಒಂದು ಲಿಬರಲ್ ದೇಶ. ಹೀಗಾಗಿ ಅಲ್ಲಿ ಇಂಥ ಐಡಿಯಾಗಳಿಗೆ ಪ್ರತಿರೋಧ ಇರಲಿಲ್ಲ. ಶೇ.99 ಮಂದಿ ಇವನ ಐಡಿಯಾವನ್ನು ಬೆಂಬಲಿಸಿದರು. ಆರಂಭದಲ್ಲಿ ಇವನ ಫ್ರೆಂಡ್ಸ್ ಈ ಬಗ್ಗೆ ಜೋಕ್ ಮಾಡುತ್ತಿದ್ದರಂತೆ, ನಂತರ ಅವರೂ ಆತನ ಈ ಸಾಹಸದಲ್ಲಿ ಸಹಕರಿಸಿದ್ದಾರೆ.

ನೀವೂ ಹೋಗಬಹುದು. ಆದರೆ ಸಣ್ಣ ಮಕ್ಕಳು ಜೊತೆಗಿದ್ದರೆ ಹುಷಾರು. ಅವರ ಪ್ರಶ್ನೆಗಳನ್ನು ಉತ್ತರಿಸೋಕೆ ಸಾಕಷ್ಟು ತಯಾರು ಮಾಡಿಕೊಂಡು ಹೋಗಿ. 

ದಿನಕ್ಕೆರಡು ಖರ್ಜೂರ ತಿಂದರೆ ಲೈಂಗಿಕ ಆರೋಗ್ಯಕ್ಕೂ ಆಗುತ್ತೆ ಮದ್ದು! ...

 

Follow Us:
Download App:
  • android
  • ios