ಯೋನಿಯ ಬಗ್ಗೆ ನಮಗೆಲ್ಲಾ ಗೊತ್ತಿರೋದಕ್ಕಿಂತ ಗೊತ್ತಿಲ್ಲದೆ ಇರೋದೇ ಹೆಚ್ಚು ಅಲ್ವಾ? ಬನ್ನಿ ಲಂಡನ್‌ನಲ್ಲಿರುವ ಈ ಅಪೂರ್ವ ಮ್ಯೂಸಿಯಂನಲ್ಲಿ ಏನಿದೆ ತಿಳಿಯೋಣ.

ಲಂಡನ್‌ನಲ್ಲಿ ಒಂದು 'ವಜೈನಾ ಮ್ಯೂಸಿಯಂ' ಅರ್ಥಾತ್ 'ಯೋನಿ ಸಂಗ್ರಹಾಲಯ' ಉದ್ಘಾಟನೆಯಾಗಿದೆ. ಇದು ನಿಮಗೆ ವಿಚಿತ್ರ ಅನ್ನಿಸಬಹುದು. ಅಶ್ಲೀಲ ಅನ್ನಿಸಬಹುದು. ಆದರೆ ನಿಜಕ್ಕೂ ಅಲ್ಲಿ ಏನಿದೆ ತಿಳಿಯೋಣ ಬನ್ನಿ.

ವಜೈನಾ ಅಥವಾ ಯೋನಿಯ ಬಗ್ಗೆ ನಿಮಗೆ ಎಷ್ಟು ಗೊತ್ತು? ಅದು ಹೆಣ್ಣು ಮಕ್ಕಳ ಒಂದು ಅಂಗ, ಮೂತ್ರ ಮಾಡುವ ಅಂಗ, ಮಗು ಹುಟ್ಟುವುದು ಅದರ ಮೂಲಕ, ಸೆಕ್ಸ್ ನಡೆಸುವುದು ಅದರ ಮೂಲಕ- ಇವು ಬಿಟ್ಟರೆ ಇನ್ನೇನಾದರೂ ಗೊತ್ತೇ? ಯೋನಿಯ ಬಗ್ಗೆ ಸರ್ವ ಮಾಹಿತಿ, ಒಳನೋಟ, ವಿಚಾರಗಳನ್ನು ಒಳಗೊಂಡ, ನಮ್ಮ ಕಣ್ತೆರೆಸುವಂಥ ಹಲವಾರು ಸಂಗತಿಗಳನ್ನು ಒಳಗೊಂಡ ಮ್ಯೂಸಿಯಂ ಇದು. ನಮನಿಮಗೆ ಗೊತ್ತಿಲ್ಲದ ಎಷ್ಟೋ ಸಂಗತಿಗಳು ಇಲ್ಲಿ ಗೊತ್ತಾಗುತ್ತವೆ.

ಲಂಡನ್‌ನ ಕ್ಯಾಮ್‌ಡೆನ್ ಮಾರ್ಕೆಟ್‌ನಲ್ಲಿ ಇರುವ ಈ ಮ್ಯೂಸಿಯಂ, ಫ್ಲೋರೆನ್ಸ್ ಶೆಟರ್ ಎಂಬ ಜೀವವಿಜ್ಞಾನಿಯ ಮೆದುಳಿನ ಕೂಸು. ಈಕೆ ವಿಜ್ಞಾನಕ್ಕೆ ಸಂಬಂಧಿಸಿದ ಡಾಕ್ಯುಮೆಂಟರಿಗಳನ್ನು ಮಾಡುತ್ತಾಳೆ. ಯೋನಿಯ ಬಗ್ಗೆ ಸರ್ವಾಂಗ ಮಾಹಿತಿ ನೀಡುವ ಒಂದು ವಿಸ್ತಾರವಾದ ಪ್ರಯತ್ನ ಎಲ್ಲೂ ಆಗಿಲ್ಲ ಎಂಬುದು ಈಕೆಯ ತಲೆಯಲ್ಲಿ ಕೊರೆಯುತ್ತಲೇ ಇತ್ತು. ಆಗ ರೂಪುಗೊಂಡದ್ದೇ ಈ ಯೋನಿ ಸಂಗ್ರಹಾಲಯದ ಯೋಚನೆ.

ದಿನಕ್ಕೆರಡು ಖರ್ಜೂರ ತಿಂದರೆ ಲೈಂಗಿಕ ಆರೋಗ್ಯಕ್ಕೂ ಆಗುತ್ತೆ ಮದ್ದು! ...

ಇಲ್ಲಿ ಏನೇನಿದೆ? ಯೋನಿಯ ವೈವಿಧ್ಯಗಳನ್ನಂತೂ ಚಿತ್ರ ಹಾಗೂ ತ್ರಿಡಿ ಇಮೇಜ್‌ಗಳ ಮೂಲಕ ಪ್ರದರ್ಶನಕ್ಕೆ ಇಡಲಾಗಿದೆ. ನಮಗೆ ನಿಜಜೀವನದಲ್ಲಿ ಒಂದೋ ಎರಡೋ ಯೋನಿಗಳನ್ನಷ್ಟೇ ನೋಡಲು ಸಾಧ್ಯ! ಆದರೆ ಇಲ್ಲಿ ನೂರಾರು ಬಗೆಯ ಯೋನಿ ವೈವಿಧ್ಯಗಳಿವೆ. ಹೆಂಗಸರೆಲ್ಲರೂ ಒಂದೇ ಅಲ್ಲ. ಹಾಗೇ ಯೋನಿಗಳೆಲ್ಲವೂ ಒಂದೇ ಅಲ್ಲ. ಸೆಕ್ಸ್‌ಗೆ, ಜನ್ಮ ನೀಡುವಿಕೆಗೆ, ಮುಟ್ಟಾಗುವಿಕೆಗೆ ಅವು ಸ್ಪಂದಿಸುವ ರೀತಿಯೂ ಬೇರೆ ಬೇರೆ. ಆ ವಿಚಾರಗಳನ್ನು ನೀವಿಲ್ಲಿ ನೋಡಬಹುದು.

ಯೋನಿಯ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಸಿಗುತ್ತವೆ. ಯೋನಿಯ ವಿವರಗಳನ್ನು ನೀಡುವ ಡಾಕ್ಯುಮೆಂಟರಿಗಳೂ ದೊರೆಯುತ್ತವೆ. ಯೋನಿಯ ಸ್ವಚ್ಛತೆ, ವ್ಯಾಯಾಮ, ಮಸಾಜ್- ಇವೆಲ್ಲ ವಿವರವೂ ಲಭ್ಯ.

ವಿಚಿತ್ರ ಎಂದರೆ, ಬ್ರಿಟನ್‌ನಲ್ಲೂ ಬಹು ಮಂದಿಗೆ ಯೋನಿಯ ಹಲವು ಒಳಭಾಗಗಳ ಬಗ್ಗೆ ಮಾಹಿತಿ ಇಲ್ಲ. ಯೋನಿಯ ತುಟಿ, ಕ್ಲಿಟೋರಿಸ್ ಅಥವಾ ಚಂದ್ರನಾಡಿ, ಒಳಭಾಗ, ಯೋನಿನಾಳ, ಮೂತ್ರನಾಳ, ಇವೆಲ್ಲ ಬೇರೆ ಬೇರೆ ಎಂಬುದು ಗೊತ್ತಿಲ್ಲ. ಹೆಚ್ಚಿನ ಹೆಣ್ಣುಮಕ್ಕಳಿಗೇ ಇವು ತಿಳಿದಿಲ್ಲ. ಇವನ್ನು ತಿಳಿದುಕೊಳ್ಳುವುದು ಸರಿಯಾದ ಆರೋಗ್ಯ ಕಾಪಾಡಿಕೊಳ್ಳಲು ಅತ್ಯಗತ್ಯ ಎನ್ನುತ್ತಾರೆ ಈ ಮ್ಯೂಸಿಯಂ ಸೃಷ್ಟಿಸಿದ ತಜ್ಞರು.

#Feelfree: ಒಬ್ಳೇ ಇದ್ದಾಗ ತುಂಬಾ ಮೂಡ್ ಬರುತ್ತೆ, ಗಂಡ ಬಂದರೆ ಇರೋಲ್ಲ! ...

ಯೋನಿಯಿಂದ ಸೆಕ್ಸ್‌ನಲ್ಲಿ ದೊರೆಯುವ ಸುಖದ ಬಗ್ಗೆಯೂ ಗಂಡು- ಹೆಣ್ಣುಗಳಿಬ್ಬರಲ್ಲೂ ತಪ್ಪು ಕಲ್ಪನೆಗಳಿವೆ. ಯೋನಿಯ ಒಳಭಾಗದಲ್ಲಿ ಹೊರಗಿನಿಂದ ಮೂರನೇ ಒಂದು ಭಾಗದಷ್ಟು ಮಾತ್ರ ಸ್ಪರ್ಶ ಸಂವೇದನೆಯನ್ನು ಹೊಂದಿದೆ. ಹಾಗೂ ಸಂವೇದನೆಯನ್ನು ಹೆಚ್ಚಿನದಾಗಿ ದೊರಕಿಸಿಕೊಡುವ ಚಂದ್ರನಾಡಿ ಇರುವುದು ಯೋನಿಯ ಮೇಲ್ಪದರದ ಸ್ವಲ್ಪ ಒಳಭಾಗದಲ್ಲಿ, ಮೇಲುತುಟಿಯಲ್ಲಿ. ಇದರಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಇರಬಹುದು. ಅಂದರೆ ಹೆಣ್ಣನ್ನು ಸುಖಪಡಿಸಲು ದೀರ್ಘ ಶಿಶ್ನ ಇರಬೇಕಿಲ್ಲ. ಕನಿಷ್ಠ ಮೂರಿಂಚು ಅಥವಾ ನಾಲ್ಕಿಂಚು ಶಿಶ್ನ ಇದ್ದರೆ ಸಾಕು. ಇದು ಕೂಡ ಹೆಚ್ಚಿನವರಿಗೆ ತಿಳಿಯದು. ಇಂಥ ವಿವರಗಳು ಇಲ್ಲಿ ಲಭ್ಯ.

ಮುಟ್ಟಿನ ಸಮಯದಲ್ಲಿ ಯುವತಿಯ ಕಣ್ಣಿನಿಂದ ಹರಿದ ರಕ್ತ..! ...

ಹಾಗೇ ನಿಮಗೆ ಕಾಂಡೋಮ್ ಗೊತ್ತು. ಫೀಮೇಲ್ ಕಾಂಡೋಮ್ ಬಗ್ಗೆ ಎಷ್ಟು ಗೊತ್ತು? ಯೋನಿಯನ್ನು ಕಾಡುವ ವಿಧವಿಧದ ಸಮಸ್ಯೆಗಳ ಬಗ್ಗೆ ಗೊತ್ತೇ? ವಜೈನಲ್ ಡಿಸ್‌ಚಾರ್ಜ್ ಅಥವಾ ಸ್ರಾವಗಳ ಬಗ್ಗೆ ಗೊತ್ತೆ? ಇದನ್ನೆಲ್ಲ ತಿಳಿಯಬಹುದು. ಹಾಗೇ ಸೆಕ್ಸ್ ಟಾಯ್ಸ್ ಅರ್ಥಾತ್ ಸೆಕ್ಸ್ ಆಟಿಕೆಗಳು ಇಲ್ಲಿ ಪ್ರದರ್ಶನಕ್ಕಿವೆ. ಹಾಗೇ ಗರ್ಭಧಾರಣೆ ತಡೆಯುವ ವಿಧಾನಗಳ ಬಗ್ಗೆ ವಿವರಣೆ ಕೂಡ ಇದೆ. ಅಮೆರಿಕದಲ್ಲಿ ಕೆಲವ ವರ್ಷಗಳ ಹಿಂದೆ ಒಂದು ಮಿಥ್ ಪ್ರಚಲಿತದಲ್ಲಿತ್ತು. ಅದೆಂದರೆ, ಸೆಕ್ಸ್‌ನ ಬಳಿಕ ಯೋನಿಗೆ ಕೋಕಾಕೋಲಾ ಸುರಿದುಕೊಂಡರೆ, ಅದರಲ್ಲಿರುವ ಆಸಿಡಿಟಿಯಿಂದಾಗಿ, ಗರ್ಭಧಾರಣೆ ತಡೆಯುತ್ತದೆ ಅಂತ. ಇಂಥ ಮಿಥ್‌ಗಳನ್ನು ಇಲ್ಲಿ ಬ್ರೇಕ್ ಮಾಡಲಾಗಿದೆ.

ಅಂತೂ ಇದು ಯೋನಿಯ ಬಗ್ಗೆ ಆರೋಗ್ಯಕರ ಮಾಹಿತಿಗಳನ್ನು ನೀಡುವ ಮ್ಯೂಸಿಯಂ. ನೀವು ಲಂಡನ್‌ಗೆ ಹೋದರೆ ಆ ಕಡೆಗೊಮ್ಮೆ ಭೇಟಿ ಕೊಡಿ.