Asianet Suvarna News Asianet Suvarna News

Dharmasthala Laksha Deepotsava: ಹೋಗೋದು ಹೇಗೆ?

ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರ ಧರ್ಮಸ್ಥಳ. ಹೀಗಾಗಿಯೇ ಇಲ್ಲಿನ ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಾಧಿಗಳು ಕಾತುರರಾಗಿರುತ್ತಾರೆ. 5 ದಿನಗಳ ಲಕ್ಷದೀಪೋತ್ಸವ ಸಂಭ್ರಮದಲ್ಲಿ ನೀವು ಸಹ ಭಾಗಿಯಾಗಬೇಕೆಂದು ಇದ್ದೀರಾ ? ಹಾಗಿದ್ರೆ ಅಲ್ಲಿಗೆ ಹೋಗೋದು ಹೇಗೆ ನಾವ್ ಹೇಳ್ತೀವಿ.

Dharmasthala Laksha Deepotsava: How To Reach Temple From Bangalore Vin
Author
First Published Nov 18, 2022, 10:27 AM IST

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವದ (Dharmasthala  Laksha Deepotsava 2021) ಕಾರ್ಯಕ್ರಮಗಳು ನಾಳೆಯಿಂದ ಆರಂಭವಾಗಲಿವೆ. ನವೆಂಬರ್ 19ರಿಂದ 23ರ ತನಕ ಐದು ದಿನಗಳ ಕಾಲ ಲಕ್ಷ ದೀಪೋತ್ಸವ ಮತ್ತು 90ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೀಪೋತ್ಸವಕ್ಕೆ ಸಕಲ ತಯಾರಿ (Preparation)ಗಳನ್ನು ಮಾಡಲಾಗಿದೆ. ಮಂಜುನಾಥ ಸ್ವಾಮಿ ದೇಗುಲ, ಹೆಗ್ಗಡೆಯವರ ಬೀಡು, ಮಹಾದ್ವಾರ ಸಹಿತ ಸಂಪೂರ್ಣ ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿದೆ.

ಉತ್ಸವದ ವಿವರ: ನವೆಂಬರ್ 19ರಂದು ಹೊಸಕಟ್ಟೆ ಉತ್ಸವ,  ನವೆಂಬರ್ 20ರಂದು ಕೆರೆಕಟ್ಟೆ ಉತ್ಸವ, ನವೆಂಬರ್ 21ರ ಸೋಮವಾರದಂದು ಲಲಿತೋದ್ಯಾನ ಉತ್ಸವ ನಡೆಯಲಿದೆ. ನವೆಂಬರ್ 22ರಂದು ಕಂಚಿಮಾರುಕಟ್ಟೆ ಉತ್ಸವ, ನವೆಂಬರ್ 23ರಂದು ಗೌರಿ ಮಾರುಕಟ್ಟೆ ಉತ್ಸವ, ನವೆಂಬರ್ 24ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. 
ಪೂಜೆಯ ಸಮಯ: ಬೆಳಗ್ಗೆ ಗಂಟೆ 6.30ರಿಂದ 11 ಮಧ್ಯಾಹ್ನ11 ಗಂಟೆಗೆ ಮಹಾಪೂಜೆ , 12.30ರಿಂದ 2.30ರ ವರೆಗೆ, ಸಂಜೆ 5ರಿಂದ ರಾತ್ರಿ 8.30ರ ತನಿಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಬಹುದು. ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಸಮಯ ವ್ಯತ್ಯಯವಾಗಬಹುದು.

Dharmastala: 19ರಿಂದ ಲಕ್ಷ ದೀಪೋತ್ಸವ ಸಂಭ್ರಮ

ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರ ಧರ್ಮಸ್ಥಳ. ಹೀಗಾಗಿಯೇ ಇಲ್ಲಿನ ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತುರರಾಗಿರುತ್ತಾರೆ. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸದ ಹಿನ್ನಲೆಯಲ್ಲಿ ಕ್ಷೇತ್ರವನ್ನು ಕೋಟಿ ಕೋಟಿ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಎಲ್ಲಿ ನೋಡಿದ್ರೂ ಝಗಮಗಿಸುವ ಬೆಳಕಿನ ಚಿತ್ತಾರ (Lightings) ಕಂಡು ಬರುತ್ತದೆ. ವರ್ಷವೂ ಅಖಿಲಾಂಡ ಕೋಟಿಯ ಒಡೆಯನ ದರ್ಶನ ಪಡೆದು ಕೋಟ್ಯಾಂತರ ಜನ ಕೃತಾರ್ಥರಾಗುತ್ತಾರೆ. 5 ದಿನಗಳ ಲಕ್ಷದೀಪೋತ್ಸವ ಸಂಭ್ರಮದಲ್ಲಿ ನೀವು ಸಹ ಭಾಗಿಯಾಗಬೇಕೆಂದು ಇದ್ದೀರಾ ? ಹಾಗಿದ್ರೆ ಅಲ್ಲಿಗೆ ಹೋಗೋದು ಹೇಗೆ ನಾವ್ ಹೇಳ್ತೀವಿ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ NH75 and NH73 ಮೂಲಕ 309.1 km ದೂರವಿದ್ದು, ಸರಿ ಸುಮಾರು 6 ಗಂಟೆ 27 ನಿಮಿಷ ಪ್ರಯಾಣಿಸಬೇಕಾಗುತ್ತದೆ. ಮೆಜೆಸ್ಟಿಕ್‌ನಿಂದ ರೈಲು (Train) ಅಥವಾ ಬಸ್ಸಿನ ಮೂಲಕ ಮಂಗಳೂರಿಗೆ ತೆರಳಿ, ಧರ್ಮಸ್ಥಳಕ್ಕೆ ಹೋಗಬಹುದು. ರೈಲು, ಹಾಗೂ ಬಸ್ಸಿನ ಸಮಯದ (Bus timings) ವಿವರ ಇಲ್ಲಿದೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕಿರುವ ರೈಲುಗಳು ಮತ್ತು ಸಮಯ

ರೈಲಿನ ಹೆಸರು                          ಹೊರಡುವ ಸಮಯ       ಯಾವೆಲ್ಲಾ ದಿನ ಲಭ್ಯವಿದೆ

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್            ಬೆಳಗ್ಗೆ 7.00                      ಭಾನುವಾರ, ಮಂಗಳವಾರ, ಗುರುವಾರ
ಕಣ್ಣೂರ್ ಎಕ್ಸ್‌ಪ್ರೆಸ್                    ರಾತ್ರಿ  9.30                       ಪ್ರತಿದಿನ ಓಡಾಟ    
ವೈಪಿಆರ್‌ ಕಾರವಾರ ಎಕ್ಸ್‌ಪ್ರೆಸ್‌    ಬೆಳಗ್ಗೆ 5.30                      ಸೋಮವಾರ, ಬುಧವಾರ, ಶುಕ್ರವಾರ
ಮಂಗಳೂರು ಎಕ್ಸ್‌ಪ್ರೆಸ್‌                ಬೆಳಗ್ಗೆ 7.00                    ಶನಿವಾರ ಮಾತ್ರ
ಪಂಚಗಂಗಾ ಎಕ್ಸ್‌ಪ್ರೆಸ್                 ಸಂಜೆ 6.50                      ಪ್ರತಿದಿನ ಓಡಾಟ    

ಧರ್ಮಸ್ಥಳಕ್ಕೆ ನೇರ ರೈಲು ಇದೆಯೇ?
ಮಂಗಳೂರು ರೈಲು ನಿಲ್ದಾಣವು ಧರ್ಮಸ್ಥಳಕ್ಕೆ ಹತ್ತಿರದ ರೈಲ್ವೆ ಜಂಕ್ಷನ್ ಆಗಿದೆ, ಇದು ಸುಮಾರು 74 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಂದ ಧರ್ಮಸ್ಥಳವನ್ನು ತಲುಪಲು ಟ್ಯಾಕ್ಸಿಗಳು ಮತ್ತು ಕ್ಯಾಬ್‌ಗಳನ್ನು ಬಾಡಿಗೆಗೆ (Rental) ಪಡೆಯಬಹುದು ಅಥವಾ ಮಂಗಳೂರು ಬಸ್‌ ನಿಲ್ದಾಣದಿಂದ ಸಾಕಷ್ಟು ಬಸ್ಸುಗಳು ಸಹ ಮಂಗಳೂರಿಗೆ ತೆರಳುತ್ತವೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯೋಚನೆ ರಾಷ್ಟ್ರಮಟ್ಟಕ್ಕೂ ವಿಸ್ತರಣೆ: ಡಾ.ಹೆಗ್ಗಡೆ

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನ ದರ
ಬಸ್ಸಿನ ವಿಧ                ಬಸ್ಸಿನ ದರ

ಕರ್ನಾಟಕ ಸಾರಿಗೆ                       351 ರೂ.
ರಾಜಹಂಸ    ಎಕ್ಸಿಕ್ಯೂಟಿವ್        522 ರೂ.
ನಾನ್‌ ಎಸಿ ಸ್ಲೀಪರ್                     653 ರೂ. 
ಐರಾವತ                                    703 ರೂ.
ಐರಾವತ ಕ್ಲಬ್‌ ಕ್ಲಾಸ್                  805 ರೂ.

ಬೆಳಗ್ಗೆ 6.40ರಿಂದ ಆರಂಭಗೊಂಡು ತಡರಾತ್ರಿಯ ವರೆಗೂ ಮೆಜೆಸ್ಟಿಕ್ ಹಾಗೂ ಸ್ಯಾಟ್‌ಲೈಟ್‌ ಬಸ್‌ ಸ್ಟ್ಯಾಂಡ್‌ನಿಂದ ಧರ್ಮಸ್ಥಳಕ್ಕೆ ಬಸ್ಸುಗಳು ಲಭ್ಯವಿರುತ್ತವೆ. 

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾವ ಮಾರ್ಗ ಉತ್ತಮ ?
ಕಾರಿನಲ್ಲಿ ಅಥವಾ ಬೈಕ್‌ನಲ್ಲಿ ಪ್ರಯಾಣಿಸುವವರು ನೆಲಮಂಗಲ, NH-75 ನಲ್ಲಿ ಹಾಸನ, ಸಖಲೇಶಪುರ, ಶಿರಾಡಿ ಘಾಟ್, ಗುಂಡ್ಯ ಮೂಲಕ ನೆಲ್ಯಾಡಿ ಹಾದಿಯ ಮೂಲಕ ಧರ್ಮಸ್ಥಳಕ್ಕೆ ಹೋಗಬಹುದು. ಕೊಕ್ಕಡ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗಲು ಅಲ್ಲಿ ಬಲ ತಿರುವು ತೆಗೆದುಕೊಳ್ಳಬೇಕು. 

ಉಡುಪಿಯಿಂದ ಧರ್ಮಸ್ಥಳಕ್ಕೆ 105.6 km ಇದ್ದು, 2 ಗಂಟೆ 31 ನಿಮಿಷದ ಪ್ರಯಾವಿದೆ. ಬಸ್ಸು, ರೈಲು ಅಥವಾ ಟ್ಯಾಕ್ಸಿಯ ಮೂಲಕ ಪ್ರಯಾಣಿಸಬಹುದು. ಮಂಗಳೂರಿನಿಂದ ಧರ್ಮಸ್ಥಳಕ್ಕೆ 74.2 km ದೂರವಿದ್ದು, 1 ಗಂಟೆ 47 ನಿಮಿಷದ ದಾರಿಯಿದೆ. ಮಂಗಳೂರಿನಿಂದ ಸಾಕಷ್ಟು ಸಾರಿಗೆ, ಖಾಸಗಿ ಬಸ್ಸುಗಳು ಧರ್ಮಸ್ಥಳಕ್ಕೆ ತೆರಳುತ್ತವೆ.

ಧರ್ಮಸ್ಥಳದಲ್ಲಿ ರೂಮ್ ಬುಕ್ ಮಾಡುವುದು ಹೇಗೆ ?
ಆನ್‌ಲೈನ್ ಬುಕಿಂಗ್ ಸಮಯದಲ್ಲಿ ಮಾಡಿದ ಆಯ್ಕೆಯ ಚೆಕ್ ಇನ್ ಸಮಯದಲ್ಲಿ ಮಾತ್ರ ಭಕ್ತರೊಬ್ಬರು ಗರಿಷ್ಠ 24 ಗಂಟೆಗಳ ಅವಧಿಗೆ ಕೊಠಡಿಯನ್ನು ಬುಕ್ ಮಾಡಬಹುದು. ಒಮ್ಮೆ ಬುಕ್ ಮಾಡಿದ ಕೊಠಡಿ (Room)ಗಳನ್ನು ವರ್ಗಾಯಿಸಲಾಗುವುದಿಲ್ಲ. ಅಲ್ಲದೆ ಕಾಯ್ದಿರಿಸಿದ ಕೊಠಡಿಗಳ ದಿನಾಂಕಗಳನ್ನು ಮುಂದೂಡಲು ಅಥವಾ ಮುಂದೂಡಲು ಯಾವುದೇ ಅವಕಾಶವಿಲ್ಲ. ಚೆಕ್-ಇನ್ ಸಮಯವು 7.00 AM ಮತ್ತು 9.00 PM ನಡುವೆ ತೆರೆದಿರುತ್ತದೆ.

Follow Us:
Download App:
  • android
  • ios