ಚಲಿಸುತ್ತಿರುವ ರೈಲಿನ ಬಾಗಿಲಲ್ಲಿ ನಿಂತು ರೀಲ್ಸ್ ಮರಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಯುವತಿ
ಚೀನಾದ ಪ್ರವಾಸಿಗರೊಬ್ಬರು ಚಲಿಸುವ ರೈಲಿನ ಬಾಗಿಲಲ್ಲಿ ವೀಡಿಯೋ ಮಾಡಲು ಯತ್ನಿಸಿ ಮರಕ್ಕೆ ಡಿಕ್ಕಿ ಹೊಡೆದು ಬಿದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೀವ್ಸ್‌ಗಾಗಿ ತಮ್ಮ ಜೀವದ ಹಂಗು ತೊರೆದು ಸಾಹಸ ಮಾಡಲು ಯತ್ನಿಸುತ್ತಿದ್ದಾರೆ. ಹೀಗೆ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡ ಅನೇಕ ಘಟನೆಗಳು ನಡೆದಿವೆ. ಅದೇ ರೀತಿ ಚೀನಾದ ಟ್ರಾವೆಲ್ ಇನ್‌ಫ್ಲುಯೆನ್ಸರ್ ಒಬ್ಬರು ಚಲಿಸುತ್ತಿರುವ ರೈಲಿನ ಬಾಗಿಲಲ್ಲಿ ನಿಂತು ರೀಲ್ಸ್ ಮಾಡಲು ಹೋಗಿ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ಈ ಅನಾಹುತಕಾರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಶ್ರೀಲಂಕಾದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ರೈಲಿನಿಂದ ಕೆಳಗೆ ಬಿದ್ದ ಮಹಿಳೆ ಚೈನೀಸ್ ಮೂಲದವಳಾಗಿದ್ದಾರೆ. ಈ ಮಹಿಳೆ ರೈಲಿನ ಬಾಗಿಲಲ್ಲಿರುವ ಕಬ್ಬಿಣದ ಕಂಬಿಗಳನ್ನು ಹಿಡಿದು ತನ್ನ ದೇಹವನ್ನು ರೈಲಿನಿಂದ ಹೊರಕ್ಕೆ ಚಾಚಿ ಸೆಲ್ಫಿ ವೀಡಿಯೋಗೆ ಫೋಸ್ ನೀಡಿದ್ದಾಳೆ. ಈ ವೇಳೆ ರೈಲು ಸಾಗುತ್ತಿದ್ದ ಮಾರ್ಗದ ಪಕ್ಕದಲ್ಲಿ ಮರವೊಂದು ಇದ್ದು, ಆಕೆ ಮರದ ಗೆಲ್ಲೊಂದಕ್ಕೆ ಡಿಕ್ಕಿ ಹೊಡೆದಿದ್ದಾಳೆ. ಪರಿಣಾಮ ಆಕೆ ಕೆಳಗೆ ಬಿದ್ದಿದ್ದಾಳೆ. ರೈಲು ಮುಂದೆ ಹೋಗಿದೆ. ಟ್ವಿಟ್ಟರ್‌ನಲ್ಲಿ @dailysherlock0 ಹೆಸರಿನ ಬಳಕೆದಾರರೊಬ್ಬರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಚೀನಾದ ಪ್ರವಾಸಿಗರೊಬ್ಬರು ಶ್ರೀಲಂಕಾದ ಕರಾವಳಿ ರೈಲು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯದ ಬಡಿದಾಟ ನಿಲ್ಲಿಸುವಂತಹ ಕ್ಷಣವನ್ನು ಕಂಡಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸುತ್ತಿದ್ದಾಗ ಮರದ ಕೊಂಬೆಗೆ ಡಿಕ್ಕಿ ಹೊಡೆದು ರೈಲಿನಿಂದ ಆಕೆ ಬಿದ್ದಿದ್ದಾಳೆ. ಅದೃಷ್ಟವಶಾತ್, ಅವಳು ಪೊದೆಗೆ ಬಿದ್ದಳು. ಇದರಿಂದ ಆಕೆ ಹೆಚ್ಚಿನ ಹಾನಿಯಾಗದೇ ಪಾರಾದರು. ಆಕೆಗೆ ಯಾವುದೇ ಗಾಯಗಳಾಗಿಲ್ಲಎಂದು ಪೊಲೀಸರು ಖಚಿತಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ದಿ ಸನ್ ವರದಿಯ ಪ್ರಕಾರ, ಘಟನೆಯ ನಂತರ ರೈಲು ಮುಂದಿನ ನಿಲ್ದಾಣದಲ್ಲಿ ನಿಂತಿದ್ದು, ಕೆಲವು ಪ್ರಯಾಣಿಕರು ಘಟನೆ ನಡೆದ ಸ್ಥಳಕ್ಕೆ ಬಂದು ಮಹಿಳೆಗೆ ಸಹಾಯ ಮಾಡಿದ್ದಾರೆ ರೈಲಿನಿಂದ ಬಿದ್ದವಳು ಸೀದಾ ಪೊದೆಯ ಮೇಲೆ ಬಿದ್ದಿದ್ದರಿಂದ ಹೆಚ್ಚಿನ ಅನಾಹುತವಾಗದೇ ಆಕೆ ಪಾರಾಗಿದ್ದಾಳೆ. ಘಟನೆಯ ನಂತರ ರೈಲುಗಳಲ್ಲಿ ಪ್ರಯಾಣಿಸುವಾಗ ಜನ ತಮ್ಮ ಸುತ್ತಮುತ್ತಲಿನ ಪ್ರದೇಶಗಳತ್ತ ಗಮನ ಹರಿಸುವಂತೆ ಸ್ಥಳೀಯ ಪೊಲೀಸರು ನೆನಪಿಸಿದ್ದಾರೆ. ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವಂತೆ ಅವರು ಜನರನ್ನು ಒತ್ತಾಯಿಸಿದ್ದಾರೆ. ಆದರೆ ಈ ವೀಡಿಯೋ ಮಾತ್ರ ಈಗ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜನರು ಮಹಿಳೆಯ ಈ ಬೇಜವಾಬ್ದಾರಿಯುತ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಹಸ ಮಾಡಲು ತಮ್ಮ ಜೀವವನ್ನೇ ಅಪಾಯಕ್ಕಿಟ್ಟಿರುವುದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಕೆ ನಿಜವಾಗಿಯೂ ಅದೃಷ್ಟವಂತೆ ಏಕೆಂದರೆ ಆಕೆ ಕೇವಲ ಪೊದೆಯ ಮೇಲೆ ಬಿದ್ದಿದ್ದಾಳೆ. ಇಲ್ಲದಿದ್ದರೆ ಜೀವಕ್ಕೆ ಭಾರಿ ಅಪಾಯವಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಭಯ ಅನೋದೇ ಇಲ್ವಾ, ಇದೊಂತರ ಕ್ಷುಲ್ಲಕ ವಿಚಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇಂತಹ ರೀಲ್ಸ್‌ಗಾಗಿ ಮೈಮೇಲೆ ಅಪಾಯ ಎಳೆದುಕೊಳ್ಳುತ್ತಿರುವ ಘಟನೆಗಳು ಇದೇ ಮೊದಲಲ್ಲ, ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಬೆಟ್ಟದ ಮೇಲೆ ಕಾರಿನಲ್ಲಿ ಕುಳಿತು ರೀಲ್ಸ್‌ಗಾಗಿ ಕಾರನ್ನು ರಿವರ್ಸ್ ಮಾಡುತ್ತಿದ್ದಾಗ ಕಾರೊಂದು ಪ್ರಪಾತಕ್ಕೆ ಬಿದ್ದು, ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಳು, ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ರಸ್ತೆಯಲ್ಲೇ ರೀಲ್ಸ್ ಮಾಡುವುದರಲ್ಲಿ ಮೈ ಮರೆತಿದ್ದರೆ, ಆಕೆಯ ಪುಟ್ಟ ಮಗು ವಾಹನ ದಟ್ಟಣೆಯಿರುವ ಮತ್ತೊಂದು ರಸ್ತೆ ತಲುಪಿತು. ಈ ವೇಳೆ ಆ ಮಗುವಿನ ಮತ್ತೊಬ್ಬ ಅಣ್ಣ ಕೂಡಲೇ ಬಂದು ತಾಯಿಯನ್ನು ಎಚ್ಚರಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿ ಹೋಗಿತ್ತು.
ಇದನ್ನೂ ಓದಿ: ರೈಲ್ವೆ ಎಸಿ ಕೋಚ್‌ನಲ್ಲೂ ತುಂಬಿ ತುಳುಕಿದ ಜನ: ವೀಡಿಯೋ ವೈರಲ್ ರೈಲ್ವೆ ಮಾಡಿದ್ದೇನು?