ಇವನೆಂಥಾ ಆಸಾಮಿ ! ಮನೇಲಿ ಸ್ಮೋಕ್ ಮಾಡೋಕೆ, ಎಣ್ಣೆ ಹಾಕೋಕೆ ಬಿಡಲ್ಲ ಅಂತ 14 ವರ್ಷ ಏರ್‌ಪೋರ್ಟ್‌ಲ್ಲೇ ಕಳೆದ !
ಮನೆ (Home) ಬಿಟ್ಟು ಬೇರೆ ಊರಲ್ಲಿ ಎಜುಕೇಷನ್, ಜಾಬ್ (Job) ಮಾಡ್ತಿದ್ದೀರಿ ಅಂತಿಟ್ಕೊಳ್ಳಿ. ಮನೆ ಬಿಟ್ಟು ಹೆಚ್ಚಂದ್ರೆ ಎಷ್ಟು ದಿನ ಇರ್ಬೋದು. ಮೂರು ತಿಂಗಳು ಅಥವಾ ಆರು ತಿಂಗಳು ಅಲ್ವಾ ? ಅಬ್ಬಬ್ಬಾ ಅಂದ್ರೆ 1 ವರ್ಷ. ಆದ್ರೆ ಈ ಆಸಾಮಿ ಭರ್ತಿ 14 ವರ್ಷ ಮನೆ ಬಿಟ್ಟು ಹೊರಗಿದ್ದಾನೆ. ಮನೇಲಿ ಸ್ಮೋಕ್ (Smoke0 ಮಾಡೋಕೆ, ಎಣ್ಣೆ ಹಾಕೋಕೆ ಬಿಡಲ್ಲ ಅಂತ ವಾಪಾಸ್ ಹೋಗ್ತಿಲ್ವಂತೆ..
ಮನುಷ್ಯ ಅಂದ್ರೆ ಹಲವಾರು ವ್ಯಸನಗಳು ಸಹ ಇರುತ್ತವೆ. ಮದ್ಯಪಾನ (Drinking), ಧೂಮಪಾನಕ್ಕೆ (Smoking) ಅಡಿಕ್ಟ್ ಆದವರಂತೂ ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ. ಕಂಡ ಕಂಡವರಲ್ಲಿ ಬೇಡಿಯಾದರೂ, ಸುಳ್ಳು ಹೇಳಿಯಾದರೂ, ಅಮ್ಮನಿಗೆ ಹುಷಾರಿಲ್ಲ, ಅಪ್ಪನಿಗೆ ಆಕ್ಸಿಡೆಂಟ್ ಆಯ್ತು ಅಂತ ಕಥೆ ಕಟ್ಟಿಯಾದರೂ ದುಡ್ಡು ಪಡೆದು ಬಾರ್‌ಗೆ ಹೋಗುತ್ತಾರೆ. ಕುಡಿಯೋದಕ್ಕೆ ಅಂತಾಲೇ ಹೆಂಡ್ತಿ, ಮಕ್ಕಳನ್ನೇ ಬಿಟ್ಟವರಿದ್ದಾರೆ. ಅಪ್ಪ-ಅಮ್ಮನನ್ನು ಬಿಟ್ಟು ಬೇರೆ ಮನೆ ಮಾಡಿದವರಿದ್ದಾರೆ. ಕೆಲವೊಮ್ಮೆ ತಪ್ಪಿನ ಅರಿವಾದಾಗ ವಾಪಾಸ್ ಮನೆಗೆ ಮರಳುತ್ತಾರೆ. ಆದ್ರೆ ಇಲ್ಲೊಬ್ಬ ಭೂಪ ನೋಡಿ ಸ್ಮೋಕ್ ಮಾಡೋಕೆ, ಕುಡಿಯೋಕೆ ಬಿಡ್ತಿಲ್ಲಾಂತ 14 ವರ್ಷದಿಂದ ಮನೆಗೆ (Home) ವಾಪಾಸ್ ಹೋಗೇ ಇಲ್ಲ.
ಹೌದು, ನಂಬಲು ಕಷ್ಟವೆನಿಸಿದರೂ ಇದು ನಿಜಾನೇ. ಚೀನಾದ ವ್ಯಕ್ತಿಯೊಬ್ಬ ತನ್ನ ಮನೇಲಿದ್ದ ಸಿಗರೇಟ್ ಸೇದೋದು, ದಿನಪೂರ್ತಿ ಕುಡಿಯೋದು ಮಾಡ್ತಿದ್ದ. 60ರ ಹರೆಯದ ಆರಂಭಿಕ ವೈ ಜಿಯಾಂಗುವೋ ಈ ರೀತಿ ಮಾಡುತ್ತಿದ್ದು ಮನೆಯವರು ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೇ ಕೋಪಿಸಿಕೊಂಡ ವೈ ಜಿಯಾಂಗುವೋ ಮನೆಯಿಂದ ಹೊರಬಂದಿದ್ದಾನೆ. ಏರ್‌ಪೋರ್ಟ್ (Airport)ನಲ್ಲಿ ವಾಸ ಮಾಡಲು ಆರಂಭಿಸಿದ್ದಾನೆ. ಭರ್ತಿ 14 ವರ್ಷದಿಂದ ಈತ ವಾಸಿಸ್ತಿರೋದು ಏರ್‌ಪೋರ್ಟ್‌ನಲ್ಲೇ. ಮನೆಗೆ ಹಿಂತಿರುಗಿ ಹೋಗಿಲ್ಲ.
Travel Tips : ಈ ದೇಶಕ್ಕೆ ಹೋಗಲು ವಿಮಾನ ನಿಲ್ದಾಣವೇ ಇಲ್ಲ..!
ಕುಟುಂಬದವರ ತಂಟೆ-ತಕರಾರುಗಳಿಲ್ಲದೆ ಧೂಮಪಾನ ಮತ್ತು ಮದ್ಯಪಾನ ಮಾಡುವ ಬಯಕೆಯಿಂದ ಕಳೆದ 14 ವರ್ಷಗಳಿಂದ ಬೀಜಿಂಗ್ ಕ್ಯಾಪಿಟಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಸಿಸುತ್ತಿರುವುದಾಗಿ ವ್ಯಕ್ತಿ ತಿಳಿಸಿದ್ದಾನೆ. 60ರ ಹರೆಯದ ಆರಂಭಿಕ ವೈ ಜಿಯಾಂಗುವೋ ಅವರು 2008 ರಿಂದ ಟರ್ಮಿನಲ್ 2ರೊಳಗಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಸಿಸುತ್ತಿದ್ದಾರೆ.
ಚೈನಾ ಡೈಲಿಗೆ ನೀಡಿದ ಸಂದರ್ಶನದಲ್ಲಿ, ವೀ ಅವರು ತಮ್ಮ 40ರ ಹರೆಯದಲ್ಲಿದ್ದಾಗ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ತುಂಬಾ ವಯಸ್ಸಾದ ಕಾರಣ ಯಾವುದೇ ರೀತಿಯ ಉದ್ಯೋಗ (Job)ವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೆ. ಇದರಿಂದ ಸ್ಮೋಕ್ ಮಾಡುವ, ಕುಡಿಯುವ ಅಭ್ಯಾಸ (Habit)ವನ್ನು ರೂಢಿಸಿಕೊಂಡೆ ಎಂದು ಹೇಳಿದ್ದಾರೆ.
ಏರ್‌ಪೋರ್ಟ್‌ನಲ್ಲೇ ವಾಸಿಸುವ ವೀ ಜಿಯಾಂಗುವೊ ಅವರು ಬೆಳಗ್ಗೆ ಹತ್ತಿರದ ಮಾರುಕಟ್ಟೆಗೆ ಭೇಟಿ ನೀಡುತ್ತಾರೆ ಮತ್ತು ಬೆಳಗಿನ ಉಪಾಹಾರಕ್ಕಾಗಿ ಆರು ಹಂದಿಮಾಂಸದ ಬನ್‌ಗಳು ಮತ್ತು ಗಂಜಿ ಬೌಲ್‌ಗಳನ್ನು ಖರೀದಿಸುತ್ತಾರೆ, ಮಧ್ಯಾಹ್ನದ ಊಟಕ್ಕೆ ಇನ್ನೂ ಕೆಲವು ಆಹಾರ ಮತ್ತು ಚೈನೀಸ್ ಮದ್ಯವಾದ ಬೈಜು ಬಾಟಲಿಯನ್ನು ಖರೀದಿಸುತ್ತಾರೆ. ಮನೆಯಿಂದ ಹೊರಬಂದು ಏರ್‌ಪೋರ್ಟ್‌ನಲ್ಲಿ ಖುಷಿಯಿಂದ ಸಮಯ ಕಳೆಯುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಮಾತ್ರವಲ್ಲ, ನಾನು ಎಂದಿಗೂ ಮನೆಗೆ ಹಿಂತಿರುಗಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿ ನನಗೆ ಸ್ವಾತಂತ್ರ್ಯವಿಲ್ಲ ಎಂದಿದ್ದಾರೆ.
ವಿಶ್ವದ Happiest ಧೇಶಗಳು ಯಾವುವು ನಿಮಗೆ ಗೊತ್ತಾ
ವೀ ಜಿಯಾಂಗುವೊ ಮಾತನಾಡಿ, ನಾನು ಮನೆಯಲ್ಲಿ ಉಳಿಯಲು ಬಯಸಿದರೆ, ನಾನು ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು ಎಂದು ನನ್ನ ಕುಟುಂಬದವರು ನನಗೆ ಹೇಳಿದರು. ನಾನು ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅವರಿಗೆ ನನ್ನ ಮಾಸಿಕ ಇಂತಿಷ್ಟು ಭತ್ಯೆಯನ್ನು ನೀಡಬೇಕಾಗಿತ್ತು. ಹೀಗಾಗಿ ನಾನು ಮನೆಯಿಂದ ಹೊರಬರಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
2017ರಲ್ಲಿ, ಕ್ರಿಸ್‌ಮಸ್‌ಗೆ ಮುನ್ನ, ವಿಮಾನ ನಿಲ್ದಾಣದ ಅಧಿಕಾರಿಗಳು ವೀ ಅವರನ್ನು ಏರ್‌ಪೋರ್ಟ್‌ನಿಂದ ಹೊರಡುವಂತೆ ಕೇಳಿಕೊಂಡರು. ಮತ್ತು ಪೊಲೀಸರು ಅವರನ್ನು ವಿಮಾನ ನಿಲ್ದಾಣದಿಂದ 20 ಕಿಲೋಮೀಟರ್ ದೂರದಲ್ಲಿರುವ ಅವರ ಮನೆಗೆ ಕರೆದೊಯ್ದರು. ಆದರೂ, ವೀ ಜಿಯಂಗುವೋ ಕೆಲವೇ ದಿನಗಳಲ್ಲಿ ಮತ್ತೆ ಏರ್‌ಪೋರ್ಟ್‌ಗೆ ಹಿಂದಿರುಗಿದರು. ನಾನು ಮನೆಯಿಂದ ಹೊರಹಾಕಲ್ಪಟ್ಟಿದ್ದೇನೆ. ಹಿಂತಿರುಗಿ ಅಲ್ಲಿಗೆ ಹೋಗುವುದಿಲ್ಲ. ಕನಿಷ್ಠ ನನಗೆ ವಿಮಾನ ನಿಲ್ದಾಣದಲ್ಲಿ ನನ್ನ ಸ್ವಾತಂತ್ರ್ಯವಿದೆ, ನೆಮ್ಮದಿಯಿದೆ ಎಂದು ತಿಳಿಸಿದ್ದಾರೆ. ಅದೇನೆ ಜಸ್ಟ್ ಸ್ಮೋಕ್ ಮಾಡ್ಬೇಕು, ಡ್ರಿಂಕ್ಸ್ ಮಾಡ್ಬೇಕು ಅನ್ನೋ ಉದ್ದೇಶದಿಂದ ಮನೆ ಬಿಟ್ಟು ಬಂದಿರೋ ವ್ಯಕ್ತಿಯ ವರ್ತನೆ ವಿಚಿತ್ರವೇ ಸರಿ.