MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ವಿಶ್ವದ Happiest ದೇಶಗಳು ಯಾವುವು ನಿಮಗೆ ಗೊತ್ತಾ

ವಿಶ್ವದ Happiest ದೇಶಗಳು ಯಾವುವು ನಿಮಗೆ ಗೊತ್ತಾ

ಫಿನ್ ಲ್ಯಾಂಡ್ ಕಳೆದ ಐದು ವರ್ಷಗಳಿಂದ ವಿಶ್ವದ ಅತ್ಯಂತ ಸಂತೋಷದ ದೇಶವಾಗಿ ಆಯ್ಕೆ ಆಗುತ್ತಿದೆ. ಇತ್ತೀಚೆಗೆ, ಅಂತರರಾಷ್ಟ್ರೀಯ ಸಂತೋಷದ ದಿನವನ್ನು (March 20:International happiness day) ಆಚರಿಸಲಾಯಿತು, ಆದ್ದರಿಂದ ಈ ಪಟ್ಟಿಯಲ್ಲಿರುವ ಇತರ 5 ದೇಶಗಳ ಬಗ್ಗೆ, ಅಂದರೆ ಸಂತೋಷವಾಗಿರುವ ದೇಶಗಳ ಬಗ್ಗೆ ತಿಳಿದುಕೊಳ್ಳೋಣ.

2 Min read
Suvarna News | Asianet News
Published : Mar 23 2022, 08:48 PM IST| Updated : Nov 06 2023, 11:51 AM IST
Share this Photo Gallery
  • FB
  • TW
  • Linkdin
  • Whatsapp
18

2022ರಲ್ಲಿ, ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ (world happiness report) 10 ವರ್ಷಗಳನ್ನು ಪೂರೈಸಿತು. ಈ ವರದಿಯಲ್ಲಿ, ವಿಶ್ವದ ಎಲ್ಲಾ ದೇಶಗಳನ್ನು ಅವುಗಳ ಸಂತೋಷದ ಆಧಾರದ ಮೇಲೆ ಪಟ್ಟಿ ಮಾಡಲಾಗಿದೆ. ವರದಿಯು ಮೂರು ಪ್ರಮುಖ ಅಂಶಗಳಾದ ಜೀವನ ಮೌಲ್ಯಮಾಪನಗಳು, ಸಕಾರಾತ್ಮಕ ಭಾವನೆಗಳು ಮತ್ತು ನಕಾರಾತ್ಮಕ ಭಾವನೆಗಳ ಮೇಲೆ ಸಂತೋಷವನ್ನು ಅಳೆಯುತ್ತದೆ.

28

ಫಿನ್ ಲ್ಯಾಂಡ್ ಮತ್ತೊಮ್ಮೆ ವಿಶ್ವದ ಅತ್ಯಂತ ಸಂತೋಷದ ದೇಶವಾಗಿ ಆಯ್ಕೆಯಾಗಿದೆ ಎಂದು ನಿಮಗೆ ತಿಳಿದಿರಬಹುದು. ಈ ಪಟ್ಟಿಯಲ್ಲಿರುವ ಟಾಪ್ -5 ದೇಶಗಳು (top 5 countries) ಯಾವುವು ಎಂದು ಸಹ ತಿಳಿಯಿರಿ. 2022ರ ವರ್ಷದ ಟಾಪ್ -5 ಸಂತೋಷದ ದೇಶಗಳು ಮತ್ತು ಅವುಗಳ ವಿವರಣೆ ಬಗ್ಗೆ ಇಲ್ಲಿದೆ ಮಾಹಿತಿ. 

38

ಫಿನ್ ಲ್ಯಾಂಡ್ 
ಬ್ಯೂಟಿಫುಲ್ ಫಿನ್ ಲ್ಯಾಂಡ್ (Finland) ಸತತ 5ನೇ ವರ್ಷವೂ ಸಂತೋಷದ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಈ ಭವ್ಯ ನಾರ್ಡಿಕ್ ರಾಷ್ಟ್ರವು ಕೋವಿಡ್ -19ರ ಸಮಯದಲ್ಲಿ ಕೆಲವು ಆರ್ಥಿಕ ಹಿಂಜರಿತವನ್ನು ಅನುಭವಿಸಿತು, ಆದರೆ ಈ ಸಾಂಕ್ರಾಮಿಕವು ಜನರ ಸಂತೋಷವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. 

48

ಸುಮಾರು 5.5 ಮಿಲಿಯನ್ ನಿವಾಸಿಗಳು ಮತ್ತು ಫಿನ್ ಲ್ಯಾಂಡ್ ಸರ್ಕಾರದ ಆಶಾವಾದವು ಜಗತ್ತು ಸ್ಫೂರ್ತಿ ಪಡೆಯಬೇಕಾದ ವಿಷಯವಾಗಿದೆ. ಶತಮಾನಗಳಷ್ಟು ಹಳೆಯದಾದ ಸರೋವರಗಳು, ದ್ವೀಪಗಳು ಮತ್ತು ಕಾಡುಗಳಿಂದ ಸುತ್ತುವರೆದಿರುವ ಫಿನ್ ಲ್ಯಾಂಡ್ ಚಳಿಗಾಲದಲ್ಲಿ ಇನ್ನಷ್ಟು ಸುಂದರವಾಗುತ್ತದೆ.

58

ಡೆನ್ಮಾರ್ಕ್
ಈ ಪಟ್ಟಿಯಲ್ಲಿ ಡೆನ್ಮಾರ್ಕ್ (Denmark) ಎರಡನೇ ಸ್ಥಾನದಲ್ಲಿದೆ, ಇದು ದೀರ್ಘಕಾಲದಿಂದ ವಿಶ್ವದ ಅತ್ಯಂತ ಸಂತೋಷದ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜನರ ಸಂತೋಷದ ಹಿಂದಿನ ಕೆಲವು ಪ್ರಮುಖ ಕಾರಣಗಳೆಂದರೆ ಸ್ಥಿರ ಸರ್ಕಾರದ ಉಚಿತ ಶಿಕ್ಷಣ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆ. ದೇಶವು ಕೆಲವು ವಿಶ್ವವಿಖ್ಯಾತ ಕಡಲತೀರಗಳು, ನೀಲಿ ಸರೋವರಗಳು ಮತ್ತು ಸುಂದರವಾದ ದ್ವೀಪಗಳಿಂದ ತುಂಬಿದೆ.

68

ಐಸ್ ಲ್ಯಾಂಡ್
ಐಸ್ ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದ ದೇಶಗಳಲ್ಲಿ (Happiest Country) ಮೂರನೇ ಸ್ಥಾನದಲ್ಲಿದೆ. ಈ ದೇಶವು ಸುಮಾರು 3,66,000 ನಿವಾಸಿಗಳಿಗೆ ನೆಲೆಯಾಗಿದೆ, ಮತ್ತು ಜನಸಂಖ್ಯೆಯ ಹೆಚ್ಚಿನವರು ರಾಜಧಾನಿ ರೆಕ್ಜಾವಿಕ್ ನಲ್ಲಿ ವಾಸಿಸುತ್ತಿದ್ದಾರೆ. ದೇಶವಾಸಿಗಳ ಸಂತೋಷಕ್ಕೆ ಕಾರಣವಾದ ಕಾರಣಗಳಲ್ಲಿ ಉನ್ನತ ಜೀವನ ಮಟ್ಟ, ಉಚಿತ ಶಿಕ್ಷಣ, ಕಡಿಮೆ ನಿರುದ್ಯೋಗ ಮತ್ತು ಕಡಿಮೆ ಅಪರಾಧ ಮಟ್ಟಗಳು ಸೇರಿವೆ.

78

ಸ್ವಿಟ್ಜರ್‌ಲ್ಯಾಂಡ್
ವಿಶ್ವದ ಅತ್ಯಂತ ಸಂತೋಷದ ದೇಶಗಳಲ್ಲಿ ಸ್ವಿಟ್ಜರ್‌ಲ್ಯಾಂಡ್ ಅಗ್ರ ಐದು ದೇಶಗಳಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ದೇಶವು ತಲಾವಾರು ಹೆಚ್ಚಿನ ಜಿಡಿಪಿ ಮತ್ತು ಕಡಿಮೆ ಭ್ರಷ್ಟಾಚಾರದ ದರವನ್ನು ಹೊಂದಿದ್ದು, ಇದು ತನ್ನ ನಾಗರಿಕರ ಸಂತೋಷಕ್ಕೆ ಕಾರಣವಾಗಿದೆ. ಅದು ಬ್ಯಾಂಕುಗಳು, ಡಿಸೈನರ್ ಕೈಗಡಿಯಾರಗಳು ಮತ್ತು ಚಾಕೊಲೇಟ್ ಗಳನ್ನು ಉತ್ಪಾದಿಸುವ ದೇಶವಾಗಿದೆ, ಸ್ವಿಟ್ಜರ್ಲೆಂಡ್ (Switzerland) ಅದ್ಭುತವಾಗಿ ಸಂತೋಷದ ರಾಷ್ಟ್ರವಾಗಿದೆ.

88

ನೆದರ್ ಲ್ಯಾಂಡ್ಸ್ 
7.415 ಅಂಕಗಳೊಂದಿಗೆ ನೆದರ್ಲ್ಯಾಂಡ್ಸ್ (Netherlands)ಅತ್ಯಂತ ಸಂತೋಷದ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ವಾಸಿಸುವ ಜನರ ಜೀವನ ಮತ್ತು ಕಚೇರಿಗಳ ನಡುವೆ ಉತ್ತಮ ಸಮತೋಲನವಿದೆ, ಉತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಿದೆ ಮತ್ತು ಅಪರಾಧದ ಪ್ರಮಾಣವೂ ಸಹ ಸಾಕಷ್ಟು ಕಡಿಮೆ ಇದೆ. ಇದಲ್ಲದೆ, ಈ ದೇಶವು ಆಕರ್ಷಕ ಇತಿಹಾಸವನ್ನು ಸಹ ಹೊಂದಿದೆ.

About the Author

SN
Suvarna News
ಡೆನ್ಮಾರ್ಕ್
ಸಂತೋಷ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved