Travel Tips : ಈ ದೇಶಕ್ಕೆ ಹೋಗಲು ವಿಮಾನ ನಿಲ್ದಾಣವೇ ಇಲ್ಲ..!
ವಿದೇಶಕ್ಕೆ ಹೋಗ್ಬೇಕೆಂದ್ರೆ ನಾವು ವಿಮಾನ (Flight) ಟಿಕೆಟ್ ಬುಕ್ (Ticket Book) ಮಾಡ್ತೇವೆ. ಅಲ್ಲಿ ಯಾವ ಜಾಗದಲ್ಲಿ ವಿಮಾನ ನಿಲ್ದಾಣವಿದೆ ಎಂದು ಚೆಕ್ ಮಾಡ್ತೇವೆ. ಆದ್ರೆ ಕೆಲ ದೇಶಕ್ಕೆ ಹೋಗಲು ನೀವು ವಿಮಾನ ಟಿಕೆಟ್ ಬುಕ್ ಮಾಡೋದು ಕಷ್ಟ. ಯಾಕೆಂದ್ರೆ ಆ ದೇಶಕ್ಕೆ ಹೋಗ್ಬೇಕೆಂದ್ರೆ ಬೇರೆ ದೇಶ (Country)ದ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು.
ಆರಾಮದಾಯಕ ಪ್ರಯಾಣ (Travel) ಕ್ಕೆ ವಿಮಾನ (Flight) ಬೆಸ್ಟ್. ಇತ್ತೀಚಿನ ದಿನಗಳಲ್ಲಿ ದೂರದ ಪ್ರಯಾಣಕ್ಕೆ ಮಾತ್ರವಲ್ಲ ಸಮಯ ಉಳಿಸಲು ಹಾಗೂ ಆರಾಮವಾಗಿ ಪ್ರಯಾಣ ಬೆಳೆಸಲು ಖರ್ಚು ಹೆಚ್ಚಿದ್ದರೂ ವಿಮಾನ ಪ್ರಯಾಣವನ್ನು ಜನರು ಇಷ್ಟಪಡ್ತಾರೆ. ವಿದೇಶಗಳಿಗಂತೂ ವಿಮಾನ ಪ್ರಯಾಣ ಅನಿವಾರ್ಯ ಎಂಬುದು ನಮಗೆ ಗೊತ್ತು. ಕೆಲ ದೇಶಗಳಿಗೆ ರಸ್ತೆ ಮಾರ್ಗದ ಮೂಲಕವೂ ಪ್ರಯಾಣ ಬೆಳೆಸಬಹುದು. ಆದ್ರೆ ಅದು ಅನೇಕ ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಜನರು ಅತ್ಯಂತ ವೇಗವಾದ ಮತ್ತು ಆರಾಮದಾಯಕ ಸಾರಿಗೆ ವಿಧಾನವಾದ ವಿಮಾನವನ್ನು ಆಶ್ರಯಿಸುತ್ತಾರೆ. ಬಹುತೇಕ ಎಲ್ಲ ದೇಶಗಳೂ ವಿಮಾನ ನಿಲ್ದಾಣಗಳನ್ನು ಹೊಂದಿವೆ. ಭಾರತದ ಅನೇಕ ಕಡೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಆದರೆ ಪ್ರಪಂಚದ 5 ದೇಶಗಳು ತಮ್ಮದೇ ಆದ ವಿಮಾನ ನಿಲ್ದಾಣವನ್ನು ಹೊಂದಿಲ್ಲ ಎಂಬುದು ನಿಮಗೆ ಗೊತ್ತಾ? ವಿಮಾನ ನಿಲ್ದಾಣವಿಲ್ಲದ ಆ ದೇಶಗಳು ಯಾವುವು ಹಾಗೂ ಆ ದೇಶಕ್ಕೆ ಹೇಗೆ ಹೋಗ್ಬಹುದು ಎಂಬುದನ್ನು ನಾವು ಹೇಳ್ತೇವೆ.
ವಿಮಾನ ನಿಲ್ದಾಣ (Airport) ವಿಲ್ಲದ ದೇಶಗಳು :
ಸ್ಯಾನ್ ಮರಿನೋ : ವಿಶ್ವದ 5 ನೇ ಚಿಕ್ಕ ದೇಶವಾದ ಸ್ಯಾನ್ ಮರಿನೋ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಮೊದಲು ಇಟಲಿಯ ಫೆಡೆರಿಕೊ ಫೆಲಿನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕು. ನಂತರ ಸ್ಯಾನ್ ಮರಿನೋಕ್ಕೆ ತಲುಪಲು ಕ್ಯಾಬ್ ಅಥವಾ ಟ್ಯಾಕ್ಸಿ ತೆಗೆದುಕೊಳ್ಳಬೇಕು. ಇಟಲಿ ಮತ್ತು ಸ್ಯಾನ್ ಮರಿನೋ ನಡುವಿನ ಅಂತರವು ಕೇವಲ 21 ಕಿಲೋಮೀಟರ್ ದೂರವಾಗಿದೆ. ಇದನ್ನು ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಬಹುದು. ಸ್ಯಾನ್ ಮರಿನೋದಲ್ಲಿ ನೋಡಲು ಅನೇಕ ಜಾಗಗಳಿವೆ. ಜೀವನದಲ್ಲಿ ಒಮ್ಮೆ ಈ ದೇಶವನ್ನು ನೋಡ್ಬೇಕು ಎನ್ನುತ್ತಾರೆ ಪ್ರವಾಸಿಗರು.
ಆಂಧ್ರದ ತಿರುಪತಿಗೆ ಪ್ರತಿಸ್ಪರ್ಧಿಯಾಗಿ ನಿಂತ ತೆಲಂಗಾಣದ ಯದಾದ್ರಿ
ವ್ಯಾಟಿಕನ್ ನಗರ : ವ್ಯಾಟಿಕನ್ ಸಿಟಿ ವಿಶ್ವದ ಅತ್ಯಂತ ಚಿಕ್ಕ ದೇಶ. ಈ ಸುಂದರವಾದ ದೇಶವು ತನ್ನದೇ ಆದ ಯಾವುದೇ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇದು ರೋಮ್ ಒಳಗಿರುವ ಸ್ವತಂತ್ರ ರಾಜ್ಯವಾಗಿದೆ. ಇದು 109 ಎಕರೆಗಳಷ್ಟು ಸಣ್ಣ ಪ್ರದೇಶದಲ್ಲಿ ಹರಡಿದೆ. ವ್ಯಾಟಿಕನ್ ನಗರಕ್ಕೆ ಹೋಗುವ ಪ್ರವಾಸಿಗರು ಮೊದಲು ರೋಮ್‌ನಲ್ಲಿರುವ ಲಿಯೊನಾರ್ಡೊ ಡಾ ವಿನ್ಸಿ-ಫಿಯುಮಿಸಿನೊ ವಿಮಾನ ನಿಲ್ದಾಣಕ್ಕೆ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು ಮತ್ತು ನಂತರ ವ್ಯಾಟಿಕನ್ ನಗರವನ್ನು ತಲುಪಲು ಕ್ಯಾಬ್ ಅಥವಾ ಟ್ಯಾಕ್ಸಿ ತೆಗೆದುಕೊಳ್ಳಬೇಕು. ವ್ಯಾಟಿಕನ್ ನಗರವು ರೋಮ್ನ ವಿಮಾನ ನಿಲ್ದಾಣದಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿದೆ.
ಮೊನಾಕೊ : ವ್ಯಾಟಿಕನ್ ಸಿಟಿಯ ನಂತರ ಮೊನಾಕೊ ವಿಶ್ವದ ಎರಡನೇ ಚಿಕ್ಕ ದೇಶವಾಗಿದೆ. ಈ ದೇಶವು ಮೂರು ಕಡೆಗಳಲ್ಲಿ ಫ್ರಾನ್ಸ್ ನಿಂದ ಸುತ್ತುವರಿದಿದೆ. ಇದು ತನ್ನದೇ ಆದ ಯಾವುದೇ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಮೊನಾಕೊಗೆ ಭೇಟಿ ನೀಡುವ ಪ್ರವಾಸಿಗರು ಫ್ರಾನ್ಸ್ ನ ವಿಮಾನ ನಿಲ್ದಾಣದಿಂದ ದೋಣಿ ಅಥವಾ ಕ್ಯಾಬ್ ಮೂಲಕ ಹೋಗಬೇಕು. ನೈಸ್ ಕೋಟ್ ಡಿಅಜುರ್ ವಿಮಾನ ನಿಲ್ದಾಣದಿಂದ ಫ್ರಾನ್ಸ್ ನ ಮೊನಾಕೊಗೆ ಕೇವಲ ಅರ್ಧ ಗಂಟೆಯಲ್ಲಿ ಹೋಗ್ಬಹುದು.
ಹೊಸಪೇಟೆ Railway Stationಗೆ ಹಂಪಿಯ ಸ್ಪರ್ಶ
ಅಂಡೋರಾ : ಅಂಡೋರಾ ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿಯಲ್ಲಿದೆ. ಈ ಸುಂದರವಾದ ಯುರೋಪಿಯನ್ ದೇಶವು ಸಾಹಸ ಮತ್ತು ಪ್ರಕೃತಿ ಪ್ರೇಮಿಗಳನ್ನು ಸೆಳೆಯುತ್ತದೆ. ಅಂಡೋರಾ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿಲ್ಲ.ಸ್ಪೇನ್ ಮತ್ತು ಫ್ರಾನ್ಸ್ ನಲ್ಲಿರುವ 5 ವಿಮಾನ ನಿಲ್ದಾಣಗಳಿಂದ ಅಂಡೋರಾವನ್ನು 3 ಗಂಟೆಗಳ ಒಳಗೆ ತಲುಪಬಹುದು.
ಲಿಸ್ಟೆನ್‌ಸ್ಟೈನ್ : ಲಿಚ್ಟೆನ್‌ಸ್ಟೈನ್ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಪ್ರವಾಸಿಗರು ಸ್ವಿಟ್ಜರ್ಲೆಂಡ್‌ನ ಸೇಂಟ್ ಗ್ಯಾಲೆನ್-ಅಲ್ಟೆನರ್ಹೈನ್ ವಿಮಾನ ನಿಲ್ದಾಣದಿಂದ ಲಿಚ್ಟೆನ್‌ಸ್ಟೈನ್ ತಲುಪಬಹುದು. ಲಿಚ್ಟೆನ್‌ಸ್ಟೈನ್ ತಲುಪಲು ನೀವು ಟ್ಯಾಕ್ಸಿ, ರೈಲು ಅಥವಾ ದೋಣಿ ಬಳಸಬಹುದು.