Google Map Mishap: ದೆಹಲಿಗೆ ಹೊರಟವನ ಕೆರೆ ದಂಡೆಗೆ ತಂದು ನಿಲ್ಲಿಸಿದ ಗೂಗಲ್ ಮ್ಯಾಪ್‌

ಗೂಗಲ್ ಮ್ಯಾಪ್ ಬಳಸಿ ವಾಹನ ಚಾಲನೆ ಮಾಡಿ ಕಾರೊಂದು ನದಿಗೆ ಬಿದ್ದ ಕಾರಿನಲ್ಲಿದ್ದವರು ಪ್ರಾಣ ಕಳೆದುಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಇದೇ ರೀತಿ ಗೂಗಲ್ ಮ್ಯಾಪ್‌ನ ಎಡವಟ್ಟಿನಿಂದಾಗಿ ಅನಾಹುತಗಳಾದ ಹಲವು ಘಟನೆಗಳು ಈಗಾಗಲೇ ವರದಿಯಾಗಿವೆ. ಈ ಗೂಗಲ್‌ ಮ್ಯಾಪ್‌ನ ಎಡವಟ್ಟಿಗೆ ಈಗ ಹೊಸ ಸೇರ್ಪಡೆ ಈ ಹೊಸ ಪ್ರಕರಣ. ಅದೇನು ಅಂತ ಮುಂದೆ ಓದಿ...

Buxar man s delhi journey with google map ends at edge of the lake

ಗೂಗಲ್ ಮ್ಯಾಪ್ ಬಳಸಿ ವಾಹನ ಚಾಲನೆ ಮಾಡಿ ಕಾರೊಂದು ನದಿಗೆ ಬಿದ್ದ ಕಾರಿನಲ್ಲಿದ್ದವರು ಪ್ರಾಣ ಕಳೆದುಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಇದೇ ರೀತಿ ಗೂಗಲ್ ಮ್ಯಾಪ್‌ನ ಎಡವಟ್ಟಿನಿಂದಾಗಿ ಅನಾಹುತಗಳಾದ ಹಲವು ಘಟನೆಗಳು ಈಗಾಗಲೇ ವರದಿಯಾಗಿವೆ. ಈ ಗೂಗಲ್‌ ಮ್ಯಾಪ್‌ನ ಎಡವಟ್ಟಿಗೆ ಈಗ ಹೊಸ ಸೇರ್ಪಡೆ ಈ ಹೊಸ ಪ್ರಕರಣ. ಅದೇನು ಅಂತ ಮುಂದೆ ಓದಿ...

ಸಾಮಾನ್ಯವಾಗಿ ದಾರಿ ತಿಳಿಯದವರು ಒಂದು ಹೊಸ ಪ್ರದೇಶಕ್ಕೆ ಮೊದಲ ಬಾರಿ ಹೋಗುವವರು ಇತ್ತೀಚೆಗೆ ಗೂಗಲ್‌ ಮ್ಯಾಪ್ ಹಾಕಿ ಪ್ರಯಾಣಿಸುವುದು ಈಗ ಹೊಸ ವಿಚಾರ ಏನೆಲ್ಲಾ, ತಿಳಿಯದ ಪ್ರದೇಶಗಳಿಗೆ ಹೋಗುವ ಪ್ರವಾಸಿಗರು ಬಹುತೇಕ ಈ ಗೂಗಲ್ ಮ್ಯಾಪನ್ನು ಅವಲಂಬಿಸಿರುತ್ತಾರೆ. ಆದರೆ ಈ ಗೂಗಲ್ ಮ್ಯಾಪ್ ಎಲ್ಲಾ ಸಮಯದಲ್ಲೂ ಸ್ಪಷ್ಟವಾದ ದಾರಿಯನ್ನೇ  ನಿಮಗೆ ತೋರಿಸುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಅದು ನಿಮ್ಮನ್ನು ಡೆಡ್‌ ಎಂಡ್‌ನಲ್ಲಿ ತಂದು ನಿಲ್ಲಿಸಿದರೆ ಮತ್ತೆ ಕೆಲವೊಮ್ಮ ಕೆರೆ ಬಾವಿ, ನದಿಯನ್ನು ಕೂಡ ತೋರಿಸಬಹುದು. ಅದೇ ರೀತಿ ಇಲ್ಲೊಂದು ಕಡೆ ವ್ಯಕ್ತಿಯೊಬ್ಬರು ಬಕ್ಸರ್‌ನಿಂದ ದೆಹಲಿಗೆ ಹೊರಟವರು ಗೂಗಲ್ ಮ್ಯಾಪ್ ಹಾಕಿ ಪ್ರಯಾಣಿಸಿದ್ದಾರೆ. ಆದರೆ ಈ ಗೂಗಲ್ ಮ್ಯಾಪ್ ಅವರನ್ನು ದೆಹಲಿ ತಲುಪಿಸುವ ಬದಲು ಕೆರೆಯ ದಂಡೆಯೊಂದಕ್ಕೆ ತಂದು ನಿಲ್ಲಿಸಿದೆ. 

ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅನೇಕರು ಗೂಗಲ್ ಮ್ಯಾಪ್‌ ತಮಗೂ ದಾರಿ ತಪ್ಪಿಸಿದ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ಪಂಕಜ್ ಕುಮಾರ್ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಾನು ಬಕ್ಸರ್‌ನಿಂದ ದೆಹಲಿಗೆ ಪಯಣಿಸುತ್ತಿದ್ದ ವೇಳೆ ಗೂಗಲ್ ಮ್ಯಾಪ್‌ನ ಸೂಚನೆಗಳನ್ನು ಫಾಲೋ ಮಾಡುತ್ತಿದ್ದೆ, ಹೈವೇಯಿಂದ ಹೊರಬಂದ ನಂತರ ಅವರಿಗೆ ಈ ಗೂಗಲ್ ಮ್ಯಾಪ್‌ ಡಾಂಬರು ಹಾಕದ ರಸ್ತೆಯನ್ನು ತೋರಿಸಿತ್ತು.  ಗೂಗಲ್ ಮ್ಯಾಪನ್ನು ನಂಬಿ ಆ ಮಾರ್ಗದಲ್ಲಿ ಮುಂದುವರಿದಾಗ ಅವರು ಕೊನೆಯದಾಗಿ ಒಂದು ಕರೆಯ ಅಂಚಿಗೆ ಬಂದು ತಲುಪಿದ್ದಾರೆ. ಬರೀ ಅಷ್ಟೇ ಅಲ್ಲ ನೀರಿನ ಮೂಲಕ ಸಾಗುವಂತೆ ಮ್ಯಾಪ್ ಅವರಿಗೆ ನಿರ್ದೇಶನ ನೀಡಿದೆ.

ಈ ವೀಡಿಯೋ ವೈರಲ್ ಆದ ಬಳಿಕ ಅನೇಕರು ಪ್ರತಿಕ್ರಿಯೆ ನೀಡಿದ್ದು, ಬಹುಶ: ಅವರು ಸರಿಯಾದ ಸೆಟ್ಟಿಂಗ್‌ನ್ನು ಬಳಸಿಲ್ಲ ಇದರಿಂದ ಅವರಿಗೆ ದಾರಿ ತಪ್ಪುವಂತಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಒಬ್ಬರು ತಮಾಷೆಯಾಗಿ ಏನು ನಿಮ್ಮ ಕಾರು ನೀರಿನಲ್ಲಿ ಚಲಿಸುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಬಹುಶಃ ಇವರು ನೊಟಿಫಿಕೇಷನ್ ಸರಿಯಾಗಿ ಗಮನಿಸಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಹೋದರ ನೀವು ಗೂಗಲ್ ಮ್ಯಾಪ್ ಮೇಲೆ ಭರವಸೆ ಇಡಿ ಬಹುಶ ನೀರಿನೊಳಗೆ ರಸ್ತೆ ಇರಬಹುದು. ನೀವು ನೀರಿನ ಒಳಗೆ ಹೋಗಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Pankaj Kumar (@ypankaj225)

 

Latest Videos
Follow Us:
Download App:
  • android
  • ios