ಕನ್ಯತ್ವ ಉಳಿಸಿಕೊಂಡ ಹುಡುಗಿಯರಿಗೆ ಹೈ ಡಿಮ್ಯಾಂಡ್! ಭಾರತೀಯ ಹುಡುಗರಿಗೆ ಮದ್ವೆ ಚಾನ್ಸ್ ಇಲ್ಲ!
ವಧು ಮಾರುಕಟ್ಟೆ.. ಹೆಸರು ಕೇಳ್ತಿದ್ದಂತೆ ಕೆಲ ಹುಡುಗ್ರು ಎಚ್ಚೆತ್ತುಕೊಳ್ತಾರೆ. ಭಾರತದಲ್ಲಿ ಹುಡುಗಿ ಸಿಗ್ತಲ್ಲ, ಬೇರೆ ದೇಶದ ಹುಡುಗಿಯಾದ್ರೂ ಓಕೆ ಎನ್ನುವವರು ಇದೊಂದು ಪ್ರಯತ್ನ ಮಾಡೋಣ ಅಂದುಕೊಂಡ್ರೆ ಅಲ್ಲಿನ ರೂಲ್ಸ್ ಏನು ಅಂತಾ ತಿಳಿದ್ಕೊಳ್ಳಿ.
ಪ್ರಪಂಚದಲ್ಲಿ ಸಾಕಷ್ಟು ಸಂಪ್ರದಾಯ, ಪದ್ಧತಿಗಳಿವೆ. ಹಿಂದಿನ ಕಾಲದಲ್ಲಿದ್ದ ಕೆಲ ಪದ್ಧತಿಗಳನ್ನು ಈಗ ಪಾಲನೆ ಮಾಡಲಾಗ್ತಿಲ್ಲವಾದ್ರೂ ಕೆಲವೊಂದು ವಿಚಿತ್ರವಾದ, ಹುಬ್ಬೇರಿಸುಂತಹ ಪದ್ಧತಿಗಳನ್ನು ಜನರು ಈಗ್ಲೂ ಅನುಸರಿಸುತ್ತಿದ್ದಾರೆ. ಅದ್ರಲ್ಲಿ ವಧು ಮಾರುಕಟ್ಟೆ ಕೂಡ ಒಂದು.
ನಮ್ಮಲ್ಲಿ ಸಾಕಷ್ಟು ಮಾರುಕಟ್ಟೆ (Market) ಗಳಿವೆ. ತರಕಾರಿ ಮಾರುಕಟ್ಟೆ, ಬಟ್ಟೆ ಮಾರುಕಟ್ಟೆ, ನಾನ್ ವೆಜ್ ಮಾರುಕಟ್ಟೆ ಹೀಗೆ ಅನೇಕ ಮಾರುಕಟ್ಟೆಗಳನ್ನು ನಾವು ನೋಡಿರ್ತೇವೆ, ಹೋಗಿರ್ತೇವೆ. ಆದ್ರೆ ಬಲ್ಗೇರಿಯಾದಲ್ಲಿ ವಧು ಮಾರುಕಟ್ಟೆಯಿದೆ. ಅಚ್ಚರಿ ಎನ್ನಿಸಿದ್ರೂ ನಿಜ. ಬಲ್ಗೇರಿಯಾದ ಬಡ ಕುಟುಂಬದ ಹುಡುಗಿಯರನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಹಣ ನೀಡಿ, ಅದ್ಧೂರಿಯಾಗಿ ಮದುವೆ ಮಾಡಲು ಸಾಧ್ಯವಾಗದ ಪಾಲಕರು, ವಧು (bride) ಮಾರುಕಟ್ಟೆಗೆ ತಮ್ಮ ಮಗಳನ್ನು ಕರೆ ತಂದು ಆಕೆಯನ್ನು ಒಳ್ಳೆ ವರನಿಗೆ ಕೊಟ್ಟು ಮದುವೆ ಮಾಡುವ ಆಲೋಚನೆ ಮಾಡ್ತಾರೆ.
SUN NEVER SETS : ಈ 6 ಸ್ಥಳಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ; ರಾತ್ರಿ 2 ಗಂಟೆಯಾದ್ರೂ ಏನು ಅನ್ಸಲ್ಲ..!
ಎಲ್ಲಿ ಮತ್ತು ಯಾವಾಗ ನಡೆಯುತ್ತೆ ವಧು ಮಾರುಕಟ್ಟೆ : ಬಲ್ಗೇರಿಯಾ (Bulgaria) ದ ಸ್ಟಾರಾ ಜಾಗೋರ್ ಎಂಬಲ್ಲಿ ಈ ಮಾರುಕಟ್ಟೆಯಿದೆ. ವರ್ಷದಲ್ಲಿ ನಾಲ್ಕು ಬಾರಿ ವಧು ಮಾರುಕಟ್ಟೆ ನಡೆಯುತ್ತದೆ. ಸುಂದರವಾದ ಬಟ್ಟೆಯನ್ನು ಧರಿಸಿ ಈ ಮಾರುಕಟ್ಟೆಯಲ್ಲಿ ಹುಡುಗಿಯರು ಅಂದು ಓಡಾಡೋದನ್ನು ನೀವು ನೋಡ್ಬಹುದು. ಒಂದಿಷ್ಟು ಮೇಕಪ್ ಮಾಡಿಕೊಂಡು, ಆಭರಣ ಧರಿಸಿ, ಮಿನಿ ಸ್ಕರ್ಟ್ ನಲ್ಲಿ ಓಡಾಡುವ ಯುವತಿಯರ ಕಣ್ಣು ಸುಂದರ ರಾಜಕುಮಾರನ ಹುಡುಕಾಟ ನಡೆಸುತ್ತದೆ. ಕಲೈಜಿಸ್ ಕಮ್ಯುನಿಟಿಯ ಜನರು ಇಲ್ಲಿಗೆ ಬರ್ತಾರೆ.
ಇದನ್ನೊಂದು ಹಬ್ಬದಂತೆ ಆಚರಿಸ್ತಾರೆ ಜನರು : ಇಲ್ಲಿಗೆ ಬರುವ ಕಲೈಜಿಸ್ ಕಮ್ಯುನಿಟಿಯ ವಧುಗಳಿಗೆ ಯಾವುದೇ ಬೇಸರಿಲ್ಲ. ಅವರು ಇದನ್ನು ಹಬ್ಬದಂತೆ ಆಚರಣೆ ಮಾಡ್ತಾರೆ. ಕುಣಿಯೋದು, ಹಾಡೋದು, ಕುಡಿಯೋದು, ಹೊಟ್ಟೆ ತುಂಬಾ ತಿನ್ನೋದು ಸೇರಿದಂತೆ ಹಬ್ಬದಂತೆ ಈ ದಿನವನ್ನು ಇಲ್ಲಿನ ಜನರು ಎಂಜಾಯ್ ಮಾಡ್ತಾರೆ.
ಪ್ರವಾಸಿಗರ ಸ್ವರ್ಗ ಕಾಶ್ಮೀರಕ್ಕೆ ಮನಸೋತ ಪೋಲೆಂಡ್ ವಿಶ್ವಸುಂದರಿ: Bengaluru ಬಗ್ಗೆ ಕರೋಲಿನಾ ಹೇಳಿದ್ದೀಗೆ..
ಸರ್ಕಾರದಿಂದ ಒಪ್ಪಿಗೆ : ಈ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹೆಣ್ಣುಮಕ್ಕಳ ಬೆಲೆ ವಿಭಿನ್ನವಾಗಿರುತ್ತದೆ. 16 – 20 ವರ್ಷದ ಹುಡುಗಿಯರನ್ನು ನೀವು ಇಲ್ಲಿ ಕಾಣಬಹುದು. ಹುಡುಗಿಯರು 8ನೇ ತರಗತಿಯವರೆಗೆ ಓದಲು ಮಾತ್ರ ಅವಕಾಶವಿದೆ. ನಂತ್ರ ಅವರ ಮದುವೆ ತಯಾರಿ ಶುರುವಾಗುತ್ತದೆ. 7ರಿಂದ 93 ಲಕ್ಷದವರೆಗೂ ಹುಡುಗಿ ಬೆಲೆ ನಿಗದಿಯಾಗುತ್ತದೆ. ಮೆಚ್ಚಿದ ಹುಡುಗನಿಗೆ ಹಾಗೂ ಕುಟುಂಬಸ್ಥರಿಗೆ ಬೆಲೆ ಹೊಂದಿಕೆಯಾದ್ರೆ ಆಗ ಆಕೆಯನ್ನು ಖರೀದಿ ಮಾಡುತ್ತಾರೆ. ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋಗುವ ಮೊದಲೇ ಕೆಲ ನಿಯಮಗಳನ್ನು ಅವರು ಪಾಲಿಸುತ್ತಾರೆ. ವಧು ಹಾಗೂ ಖರೀದಿ ಮಾಡುವ ಹುಡುಗ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿರಬೇಕಾಗಿದ್ದು ಕಡ್ಡಾಯ. ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಸ್ಥರು ತಮ್ಮ ಮಕ್ಕಳನ್ನು ಇಲ್ಲಿ ಮಾರಲು ಅವಕಾಶವಿರೋದಿಲ್ಲ. ಹಾಗೆಯೇ ಖರೀದಿ ಮಾಡಿದ ವಧುವಿಗೆ ಸೊಸೆ ಸ್ಥಾನವನ್ನು ನೀಡಬೇಕಾಗುತ್ತದೆ.
ವರ್ಜಿನಿಟಿಗೆ ಮಹತ್ವ : ಈ ಸಮುದಾಯದ ಜನರು ವರ್ಜಿನಿಟಿಗೆ ಮಹತ್ವ ನೀಡ್ತಾರೆ. ಕನ್ಯತ್ವ ಹೊಂದಿರುವ ಹುಡುಗಿಯರು ಹೆಚ್ಚಿನ ಬೆಲೆಗೆ ಮಾರಾಟವಾದ್ರೆ ಕನ್ಯತ್ವ ಕಳೆದುಕೊಂಡ ಹುಡುಗಿಯರ ಬೆಲೆ ಕಡಿಮೆ ಇರುತ್ತದೆ. ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಇಲ್ಲಿ ಸ್ವಾತಂತ್ರ್ಯವಿಲ್ಲ. ಹುಡುಗಿ ಯಾವುದೇ ವರನನ್ನು ಒಪ್ಪುವಂತಿಲ್ಲ, ಆತನ ಜೊತೆ ಮಾತನಾಡಿ ಮದುವೆ ನಿರ್ಧರಿಸುವಂತಿಲ್ಲ. ಇದೆಲ್ಲದಕ್ಕೂ ಕುಟುಂಬದ ಒಪ್ಪಿಗೆ ಬೇಕು. ಸಾಮಾಜಿಕ ಜಾಲತಾಣ, ಮೊಬೈಲ್ ನಿಂದಾಗಿ ಈಗ ಸ್ವಲ್ಪ ಬದಲಾವಣೆ ಕಾಣಬಹುದಾದ್ರೂ ಈ ಸಮುದಾಯದವರು ಜಾತಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತಿದ್ದಾರೆ. ಬೇರೆ ಜಾತಿಯ ಹುಡುಗನನ್ನು ಮದುವೆಯಾದ್ರೆ ಸಮುದಾಯಕ್ಕೆ ಕೆಟ್ಟ ಹೆಸರು ಎಂದು ಅವರು ಭಾವಿಸ್ತಾರೆ. ವಧು ಮಾರುಕಟ್ಟೆಯಲ್ಲಿ ವಧುವಿನ ಬದಲು ವರ್ಜಿನಿಟಿಯನ್ನು ಖರೀದಿ ಮಾಡ್ತಾರೆ ಎಂದು ಪತ್ರಿಕೆಯೊಂದು ಇದ್ರ ಬಗ್ಗೆ ಬರೆದಿತ್ತು.