ಮಕ್ಕಳಿಗೆ ದಸರಾ ರಜೆ ಬಂತಾ? Travel ಪ್ಲ್ಯಾನ್ ಇದ್ದರೆ ಇಲ್ಲಿವೆ ಟಿಪ್ಸ್
ಅಕ್ಟೋಬರ್ ತಿಂಗಳು ಹತ್ತಿರ ಬರ್ತಿದೆ. ಮಕ್ಕಳಿಗೆ ರಜೆ ಶುರುವಾಗ್ತಿದೆ. ಕುಟುಂಬದ ಜೊತೆ ಪ್ರವಾಸದ ಪ್ಲಾನ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಅಕ್ಟೋಬರ್ ನಲ್ಲಿ ನೀವು ಎಲ್ಲಿ ಹೋದ್ರೆ ಬೆಸ್ಟ್ ಅನ್ನೋದನ್ನು ಹೇಳ್ತೇವೆ.
ಅಕ್ಟೋಬರ್ ಬರ್ತಿದ್ದಂತೆ ಮಕ್ಕಳಿಗೆ ಒಂದು ವಾರ ರಜೆ ಇರುತ್ತೆ. ಕಚೇರಿ ಕೆಲಸಕ್ಕೆ ರಜೆ ಹಾಕಿ ಮಕ್ಕಳ ಜೊತೆ ಸುತ್ತಾಡಲು ಅನೇಕರು ಪ್ಲಾನ್ ಮಾಡ್ತಿರುತ್ತಾರೆ. ಪ್ರವಾಸಕ್ಕೆ ಹೋಗುವ ನಿರ್ಧಾರ ಮಾಡಿಯಾಗಿದೆ ಆದ್ರೆ ಎಲ್ಲಿಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎನ್ನುವವರಿದ್ದಾರೆ. ಭಾರತದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಆದ್ರೆ ಆಯಾ ಪ್ರವಾಸಿ ತಾಣಕ್ಕೆ ಸೂಕ್ತ ಋತುವಿನಲ್ಲಿ ಹೋದ್ರೆ ಅದರ ಮಜಾ ಬೇರೆ. ಕೆಲ ಪ್ರದೇಶಗಳಿಗೆ ಬೇಸಿಗೆಯಲ್ಲಿ ಹೋಗ್ಬೇಕು. ಮತ್ತೆ ಕೆಲ ಪ್ರವಾಸಿ ತಾಣಗಳಿಗೆ ಚಳಿಗಾಲದಲ್ಲಿ ಹೋಗ್ಬೇಕು. ಇನ್ನು ಕೆಲ ಪ್ರದೇಶದ ನೈಸರ್ಗಿಕ ಸೌಂದರ್ಯ ಕಣ್ತುಂಬಿಕೊಳ್ಬೇಕೆಂದ್ರೆ ನೀವು ಮಳೆಗಾಲದಲ್ಲಿ ಹೋಗ್ಬೇಕು. ಈಗ ಮಳೆಗಾಲ ಮುಗಿದು ಚಳಿಗಾಲ ಬರ್ತಿದೆ. ಇಂಥ ಸಂದರ್ಭದಲ್ಲಿ ಪ್ರವಾಸಿ ತಾಣಕ್ಕೆ ಹೋಗಲು ಕೆಲ ಸೂಕ್ತ ಸ್ಥಳಗಳಿವೆ. ಕುಟುಂಬದ ಜೊತೆ ಪ್ರವಾಸದ ಮೋಜು ಅನುಭವಿಸಬೇಕು ಎನ್ನುವವರು ಪ್ರವಾಸಕ್ಕೆ ಪ್ಲಾನ್ ಮಾಡುವ ಮುನ್ನ ಇದನ್ನು ಓದಿ. ಅಕ್ಟೋಬರ್ ನಲ್ಲಿ ಎಲ್ಲೆಲ್ಲಿ ಹೋಗ್ಬಹುದು ಅಂತಾ ನಾವು ಹೇಳ್ತೇವೆ.
ಅಕ್ಟೋಬರ್ (October) ನಲ್ಲಿ ಪ್ರವಾಸ (Travel) ಕ್ಕೆ ಇದು ಸೂಕ್ತ ಜಾಗ :
ಪಚ್ಮರ್ಹಿ (Pachmarhi) : ಅಕ್ಟೋಬರ್ ನಲ್ಲಿ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗುವ ಸಿದ್ಧತೆ ನಡೆಸಿದ್ದರೆ ಪಚ್ಮರ್ಹಿ ಬೆಸ್ಟ್ ಪ್ಲೇಸ್. ಮಧ್ಯಪ್ರದೇಶದಲ್ಲಿರುವ ಪಚ್ಮರ್ಹಿಯನ್ನು ಭಾರತದ ಹಾರ್ಟ್ ಎಂದು ಕರೆಯಲಾಗುತ್ತದೆ. ಪಚ್ಮರ್ಹಿಯು ಹೊಶಂಗಾಬಾದ್ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಸುಂದರವಾದ ಕಣಿವೆಗಳಿಂದ ಆವೃತವಾಗಿದೆ. ಪಚ್ಮರಿ ಗುಹೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಬಿ ಫಾಲ್, ಅಪ್ಸರಾ ವಿಹಾರ್,ಪಾಂಡವರ ಗುಹೆ, ಮಹಾದೇವನ ಮಂದಿರ, ಸಾತ್ಪುರ ರಾಷ್ಟ್ರೀಯ ಉದ್ಯಾನವನವನ್ನು ನೀವು ಇಲ್ಲಿ ನೋಡ್ಬಹುದು.
ಜೈಪುರ (Jaipur) : ಬೇಸಿಗೆಯಲ್ಲಿ ಧಗ ಧಗಿಸುವ ಬಿಸಿಲು ರಾಜಸ್ಥಾನದಲ್ಲಿರುತ್ತದೆ. ಹಾಗಾಗಿ ನೀವು ರಾಜಸ್ತಾನಕ್ಕೆ ಹೋಗಲು ಬಯಸಿದ್ರೆ ಅಕ್ಟೋಬರ್ ಹೇಳಿ ಮಾಡಿಸಿದ ಸಮಯ. ಅಕ್ಟೋಬರ್‌ನಲ್ಲಿ ಕುಟುಂಬದೊಂದಿಗೆ ಭೇಟಿ ನೀಡಲು ನೀವು ಜೈಪುರವನ್ನು ಆಯ್ಕೆ ಮಾಡಿಕೊಳ್ಳಬಹುದು. ದೇಶ -ವಿದೇಶಗಳಿಂದ ಪ್ರವಾಸಿಗರು ಅಕ್ಟೋಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಮಕ್ಕಳಿಗೆ ಜೈಪುರ ಇಷ್ಟವಾಗುತ್ತದೆ. ಎತ್ತರದ ಕಟ್ಟಡಗಳು ಅವರನ್ನು ಆಕರ್ಷಿಸುತ್ತದೆ. ಜೈಪುರದಲ್ಲಿ ಕಣ್ತುಂಬಿಕೊಳ್ಳಲು ಅನೇಕ ಸ್ಥಳಗಳಿವೆ. ಅದ್ರಲ್ಲಿ ಹವಾ ಮಹಲ್,ಅಮೇರ್ ಕೋಟೆ, ಸಿಟಿ ಪ್ಯಾಲೇಸ್,ಜಂತರ್ ಮಂತರ್ ಹಾಗೂ ಜಲ್ ಮಹಲ್ ಸೇರಿದೆ.
ದಸರಾ ಟ್ರಿಪ್ ಹೋಗುವ ಪ್ಲಾನ್ ಇದೆಯಾ? ಮೈಸೂರು ಜತೆ ಈ ಸ್ಥಳಗಳಿಗೂ ಭೇಟಿ ಕೊಡಿ.
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ (Jim Corbett National Park) : ಮಕ್ಕಳು ಪಾರ್ಕ್, ಪ್ರಾಣಿ, ಪಕ್ಷಿಗಳನ್ನು ಹೆಚ್ಚು ಇಷ್ಟಪಡ್ತಾರೆ. ಅಕ್ಟೋಬರ್ ನಲ್ಲಿ ನೀವು ಮಕ್ಕಳ ಜೊತೆ ಪ್ರವಾಸಕ್ಕೆ ಹೊರಟಿದ್ದರೆ ನೀವು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಇದು ನಿಮಗೆ ವಿಭಿನ್ನ ಮನರಂಜನೆ ನೀಡುತ್ತದೆ. ಈ ಉದ್ಯಾನವನದಲ್ಲಿ ಇರುವ ಹುಲಿ, ಆನೆ ಇತ್ಯಾದಿ ಪ್ರಾಣಿಗಳು ಮಕ್ಕಳನ್ನು ಆಕರ್ಷಿಸುತ್ತವೆ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಉತ್ತರಾಖಂಡದ ನೈನಿತಾಲ್‌ನಲ್ಲಿದೆ. ನೈನಿತಾಲ್ ನಲ್ಲಿ ನೀವು, ನೈನಿ ಕೆರೆ,ಟಿಫಿನ್ ಟಾಪ್,ನೈನಾ ಪಿಕ್, ನೈನಾ ದೇವಿ ದೇವಸ್ಥಾನವನ್ನು ನೋಡಿಕೊಂಡು ಬರಬಹುದು.
Travel Plan: ಪ್ರವಾಸಕ್ಕೆ ಹೋಗ್ತೀರಾ? ಈ ತಪ್ಪುಗಳನ್ನ ಮಾಡ್ಲೇಬೇಡಿ
ಲೋನಾವಲಾ (Lonavala): ಲೋನಾವಾಲಾ ಮಹಾರಾಷ್ಟ್ರದ ಪುಣೆಯಲ್ಲಿದೆ. ಇದು ಭಾರತದ ಜನಪ್ರಿಯ ತಾಣಗಳಲ್ಲಿ ಒಂದಾಗಿ. ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಜಾಗಗಳಲ್ಲಿ ಲೋನಾವಲಾ ಒಂದು. ವಿದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಇಲ್ಲಿನ ಹವಾಮಾನ ತುಂಬಾ ಆಹ್ಲಾದಕರವಾಗಿರುತ್ತದೆ. ಕುಟುಂಬ ಸಮೇತ ಭೇಟಿ ನೀಡಲು ಇದು ಅತ್ಯುತ್ತಮ ಪ್ರವಾಸಿ ತಾಣ. ನೀವಿಲ್ಲಿ ರಾಜ್ಮಾಚಿ ಕೋಟೆ,ಪಾವನ ಅಣೆಕಟ್ಟು, ಟೈಗರ್ ಪಾಯಿಂಟ್, ಲೋನಾವಾಲಾ ಸರೋವರವನ್ನು ನೋಡಲು ಅವಕಾಶವಿದೆ.