ದಸರಾ ಸಂದರ್ಭದಲ್ಲಿ ಮೈಸೂರು ಸೇರಿ ಭೇಟಿ ನೀಡಲೇಬೇಕಾದ ಅನೇಕ ತಾಣಗಳಿವೆ. ಒಂದೊಂದು ಕಡೆ ವಿಭಿನ್ನ ಆಚರಣೆ ಇದೆ. ರಜೆ ಸಮಯದಲ್ಲಿ ಇವು ಜನರಿಗೆ ರಿಲ್ಯಾಕ್ಸ್‌ ಮೂಡಿಗೆ ಕರೆದುಕೊಂಡು ಹೋಗುತ್ತವೆ. ಅವುಗಳ ವಿವರ ಇಲ್ಲಿದೆ.

ದಸರಾ ಬಂದರೆ ಸಾಕು ಸಾಲು-ಸಾಲು ರಜೆಗಳು, ಎಲ್ಲಿ ನೋಡಿದರೂ ಹಬ್ಬದ ವಾತಾವರಣ. ದೇಶದ ಹಲವು ಕಡೆ ದಸರಾವನ್ನು ವಿಭಿನ್ನ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುವ ಹಬ್ಬವೇ ವಿಜಯದಶಮಿ ಅಥವಾ ದಸರಾ ಹಬ್ಬ. ಇದನ್ನು ಹಲವೆಡೆ ಬೇರೆ ಬೇರೆ ಸಂಕೇತವಾಗಿ ಆಚರಿಸುತ್ತಾರೆ. ಒಟ್ಟು ಒಂಬತ್ತು-ಹತ್ತು ದಿನಗಳು ಭಾರತದ ಬಹುತೇಕ ಕಡೆ ಎಲ್ಲಿ ನೋಡಿದರೂ ಹಬ್ಬದ ವಾತಾವರಣ. ಇಂತಹ ಸಾಂಸ್ಕೃತಿಕ ವಾತಾವರಣವು ಜನರನ್ನು ರಿಲ್ಯಾಕ್ಸ್‌ ಮೂಡಿಗೆ ಕರೆದುಕೊಂಡು ಹೋಗುತ್ತವೆ. ದಸರಾ ಸಂದರ್ಭದಲ್ಲಿ ಭೇಟಿ ನೀಡಲೇಬೇಕಾದ ಅನೇಕ ತಾಣಗಳಿವೆ. ಅವುಗಳ ವಿವರ ಇಲ್ಲಿದೆ.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ದಸರಾ ಉತ್ಸವಕ ವಿಶ್ವವಿಖ್ಯಾತಿ ಗಳಿಸಿದೆ. ಮೈಸೂರು ದಸರಾ (Mysore Dasara) ಸಾಮಾನ್ಯವಾಗಿ ದೇಶದಲ್ಲೆ ಹೆಚ್ಚು ಪ್ರಸಿದ್ಧಿ ಪಡೆದ ಉತ್ಸವವಾಗಿದೆ. ಮೈಸೂರಿನಲ್ಲಿ ದಸರಾವನ್ನು 10 ದಿನ ವಿಜೃಂಭಣೆಯಿಂದ ಆಚರಿಸುತ್ತಾರೆ. ದಸರಾದಲ್ಲಿ ರಾತ್ರಿ ಮೈಸೂರು ಅರಮನೆಯನ್ನು ಸಾವಿರಾರು ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ದಸರೆಯ ಹತ್ತು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆಯಲ್ಲಿ ನಡೆಯುತ್ತವೆ. ಮೈಸೂರು ದಸರಾದ ಇನ್ನೊಂದು ಆಕರ್ಷಣೆ ಎಂದರೆ ಜಂಬೂ ಸವಾರಿ (Jamboo Savari). ಆನೆಯು ಶ್ರೀ ಚಾಮುಂಡಿದೇವಿ (Shri Chamundi Devi) ಇರುವ ಅಂಬಾರಿಯನ್ನು ಹೊತ್ತು ಸಾಗುತ್ತದೆ. ಇದು ನೋಡುಗರ ಕಣ್ಮನ ಸೆಳೆಯುತ್ತದೆ. ಇದು ವಿಶ್ವದಲ್ಲಿ ಪ್ರಖ್ಯಾತಿ ಪಡೆದಿದೆ. ಇನ್ನು ದಸರಾ ಸಮಯದಲ್ಲಿ ಮೈಸೂರಿನಲ್ಲಿ ಕಲಾ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸುತ್ತಾರೆ. ಇದರಲ್ಲಿ ಸ್ಥಳೀಯ ತಿಂಡಿಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಸಿಗುತ್ತವೆ.