ಬೇಸಿಗೆ ಪ್ರವಾಸಕ್ಕೆ ಹೋಗಬಹುದಾದ ಸೊಬಗಿನ ತಾಣಗಳ ಪರಿಚಯ

ಒಂದೊಂದು ಊರಲ್ಲೂ ಒಂದೊಂದು ಸೊಬಗು. ಆಯಾಯ ಊರಿಗೆ ಒಂದೊಂದು ಗುರುತು. ಪ್ರತೀ ಊರಿನಲ್ಲೂ ಒಮ್ಮೆ ಭೇಟಿ ನೀಡಬೇಕಾದ ಹಲವು ತಾಣಗಳಿರುತ್ತವೆ. ಅಲ್ಲೂಂಚೂರು ಹೊತ್ತು ಕುಳಿತು ಬಂದರೆ ಆ ಊರಿಗೆ ಸಮಾಧಾನ. ಹೋದವರಿಗೆ ತೃಪ್ತಿ. ಅಂಥಾ ಕೆಲವು ಊರುಗಳ ಹಲವು ವಿಶೇಷತೆಗಳ ಪರಿಚಯ.

Best place to visit, Kalaburagi district of Karnataka Vin

- ಶೇಷಮೂರ್ತಿ ಅವಧಾನಿ

ಕಲಬುರಗಿ ಮಹಾನಗರದಲ್ಲಿರುವ ಬಹಮನಿ ಅರಸರ ಕೋಟೆಯೊಳಗಿನ ರಣ ಮಂಡಲದ ಮೇಲಿದೆ ವಿಶ್ವದ ಅತ್ಯಂತ ಉದ್ದನೆಯ ಫಿರಂಗಿ ಅಥವಾ ತೋಪು (ಕ್ಯಾನನ್‌). ಬಾರಾ ಗಜ್‌ ತೋಪು ಎಂದೇ ಪ್ರಸಿದ್ಧಿಯಾಗಿರುವ ಇದು 7 ಇಂಚು ದಪ್ಪ, 7. 6 ಅಡಿ ಪರಿಧಿ, 29 ಅಡಿ ಉದ್ದವಿದೆ. ಈ ಪಂಚಲೋಹ ತೋಪು ಕಲಬುರಗಿ ಬಹಮನಿ ಕೋಟೆಯ ರಣಮಂಡಲದ ಆಕರ್ಷಣೆ. ದೈತ್ಯಗಾತ್ರದ ಈ ತೋಪು ಪ್ರಪಂಚದಲ್ಲಿಯೇ ಅತ್ಯಂತ ಉದ್ದನೆಯ ಪಂಚಲೋಹದ ತೋಪು ಎಂದು ಹವ್ಯಾಸಿ ಇತಿಹಾಸಕಾರರು ಹೇಳುತ್ತಿದ್ದಾರೆ. ಈಚೆಗಷ್ಟೇ ಈ ತೋಪಿನ ಉದ್ದಳತೆ ಕರಾರುವಕ್ಕಾಗಿ ಅಳೆದು ದಾಖಲೆ ಮಾಡಲಾಗಿದೆ. 

ಆದರೆ ಇದಕ್ಕಿನ್ನೂ ವಿಶ್ವದ ಉದ್ದನೆಯ ತೋಪು ಎಂಬ ಪಟ್ಟಅಧಿಕೃತವಾಗಿ ಘೋಷಣೆಯಾಗಿಲ್ಲ. ತಕ್ಷಣ ಈ ಫಿರಂಗಿ ವಿಶೇಷತೆಗಳನ್ನು ಪಟ್ಟಿಮಾಡಿ ವಿಶ್ವದ ಇತರೆಡೆ ಇರುವ ಫಿರಂಗಿಗಳೊಂದಿಗೆ ಹೋಲಿಸಿ ಕಲಬುರಗಿ ಫಿರಂಗಿಯನ್ನು ಅತೀ ಉದ್ದದ ಫಿರಂಗಿ ಎಂದು ಅಧಿಕೃತವಾಗಿ ಘೋಷಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೂ ಹವ್ಯಾಸಿ ಇತಿಹಾಸಕಾರರು ಆಗ್ರಹಿಸುತ್ತಿದ್ದಾರೆ. ಇದೇ ಕೊಟೆಯಲ್ಲಿ ವಿವಿಧ ಆಕಾರದ 25ಕ್ಕೂ ಹೆಚ್ಚು ತೋಪುಗಳಿದ್ದು ಕೋಟೆಯೊಳಗಿನ ಫಿರಂಗಿ ನೋಡಲು ಕಲಬುರಗಿಗೆ ಬಂದವರು ಇಲ್ಲಿಗೆ ಬರಲೇಬೇಕು. ನಗರದಲ್ಲೇ ಕೋಟೆ ಇದ್ದು ರಣ ಮಂಡಲ, ಫಿರಂಗಿಗಳಿರೋದರಿಂದ ಈ ಕೋಟೆಗೆ ಹೋಗಿ ಬರಲು ಸಾಕಷ್ಟುವಾಹನ ಸವಲತ್ತು ಇದೆ.

ಪ್ರಕೃತಿ ಪ್ರಿಯರ ಸ್ವರ್ಗ ಭೀಮೇಶ್ವರ ದೇವಾಲಯ ಮತ್ತು ಜಲಪಾತ

ಕನಗನಳ್ಳಿ ಮಹಾಚೈತ್ಯ ಸ್ತೂಪ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕನಗನಳ್ಳಿಯಲ್ಲಿ ಕ್ರಿ.ಪೂ. 3 ಶತಮಾನದ ಸಾಮ್ರಾಟ ಅಶೋಕನ ಕಾಲದಿಂದ ಕ್ರಿ.ಶ. 3ನೇ ಶತಮಾನದವರೆಗೆ ನಿರ್ಮಾಣಗೊಂಡ ಮಹಾಚೈತ್ಯ ಇದಾಗಿದೆ. ಇದನ್ನು ಅಧೋಲೋಕದ ಮಹಾಚೈತ್ರ ಎನ್ನಲಾಗಿದೆ. 1954 ರಲ್ಲಿ ಸಂಶೋಧಕ ಕಪಟರಾಳ ಕೃಷ್ಣರಾಯರು ಇದನ್ನು ಬೆಳಕಿಗೆ ತಂದರು. ಬುದ್ಧನ 10 ಶಾಸನಯುಕ್ತ ಪ್ರತಿಮೆಗಳು, ಬೋಧಿವೃಕ್ಷದ ಕೆತ್ತನೆ, ಚೈತ್ಯ ಗ್ರಹ, ವಿಹಾರ ಸಮುಚ್ಛಯ ಸೇರಿದಂತೆ ನೂರಾರು ಐತಿಹಾಸಿಕ ಕುರುಹುಗಳು ಇಲ್ಲಿವೆ. ಸಾಮ್ರಾಟ ಅಶೋಕದ ಅಪರೂಪದ ಚಿತ್ರ ಇಲ್ಲಿದೆ. ಪ್ರಾಚ್ಯ ವಸ್ತು ಇಲಾಖೆ ಸುಪರ್ದಿಯಲ್ಲಿದ್ದು, ಐತಿಹಾಸಿಕ ಸ್ಥಳವಾಗಿದೆ.

ಕನಗನಹಳ್ಳಿ ಬೌದ್ಧ ಸ್ಮಾರಕಗಳ ಉತ್ಖನನ ಪ್ರದೇಶವಾಗಿದೆ. ಇಲ್ಲಿ ಅಶೋಕನ ಕಾಲದ ಬುದ್ಧನ ಸ್ಮಾರಕಗಳು, ಬುದ್ಧನ ಪುತ್ಥಳಿ, ಸ್ತೂಪಗಳು, ಆ ಕಾಲದ ನಾಣ್ಯಗಳು ದೊರಕಿವೆ. ಬೌದ್ಧ ಧರ್ಮ ಹಾಗೂ ಅಶೋಕನ ಆಳ್ವಿಕೆಯಲ್ಲಿನ ಬುದ್ಧ ಧರ್ಮದ ಉನ್ನತಿ ಸಾರುವ ಪಳೆಯುಳಿಕೆ ದೊರಕಿರುವ ತಾಣ ಇದಾಗಿದ್ದರಿಂದ ಪ್ರವಾಸಿ ಆಕರ್ಷಣೆಯಾಗಿದೆ. ಕಲಬುರಗಿಯಿಂದ 45 ಕಿ.ಮೀ. ದೂರ. ಸನ್ನತಿ ಪಕ್ಕದಲ್ಲೇ ಈ ತಾಣ ಇದೆ.

ಕಾಡಿನ ಮಧ್ಯೆ ಹೊಳೆ​ಯುವ ಡೈಮಂಡ್‌ ಫಾಲ್ಸ್‌

ಕಲಬುರಗಿ ಕೋಟೆಯೊಳಗಿನ ಜಾಮಾ ಮಸೀದಿ
ಕಲಬುರಗಿ ಮಹಾನಗರದಲ್ಲಿರುವ ಬಹಮನಿ ಕೋಟೆಯಲ್ಲಿರುವ ಜಾಮಾ ಮಸೀದಿ ತನ್ನ ಮುಸ್ಲಿಂ ವಾಸ್ತುಶಿಲ್ಪದಿಂದಾಗಿ ಹೆಸರುವಾಸಿ. ಸ್ಪೇನ್‌ ದೇಶದ ಕಾರ್ಡೋವಾ ಎಂಬಲ್ಲಿರುವ ಜಾಮಾ ಮಸೀದಿ ನಂತರ ಜಗತ್ತಿನಲ್ಲೇ ಸುಂದರ ಕಮಾನುಗಳಿರುವ, ಅದ್ಭುತ ನೆರಳು- ಬೆಳಕಿನ ನೋಟಗಳಿಂದಾಗಿ ಆಕರ್ಷಕವಾಗಿರುವ ಮಸೀದಿ ಇದು. ಈ ಮಸೀದಿಯ ವಾಸ್ತುಶಿಲ್ಪ ಅತ್ಯಪರೂಪವಾಗಿದೆ. ಇಂಡೋ- ಪರ್ಶಿಯನ್‌ ಶೈಲಿಯ ಈ ಮಸೀದಿಯಲ್ಲಿ ಯಾವುದೇ ಮೂಲೆಯಲ್ಲಿ ನಿಂತರೂ ಇನ್ನೊಂದು ಮೂಲೆಗೆ ಧ್ವನಿ ಸ್ಪಷ್ಟವಾಗಿ ಕೇಳುವಂತಹ ಧ್ವನಿ- ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲೇ ಬಹಮನಿ ಕೋಟೆ ಇದ್ದು, ಅದರೊಳಗೇ ಈ ಜಾಮಾ ಮಸೀದಿ ಇರೋದರಿಂದ ಸಾಕಷ್ಟುವಾಹನ ಸವಲತ್ತಿದೆ.

ಮಾಮು ಮಾಲ್‌ಪುರಿ ಸವಿಯಲೇಬೇಕು
ಮಾಮು ಮಾಲ್‌ಪುರಿ ಕಲಬುರಗಿಯ ಅತ್ಯದ್ಭುತ ಪ್ರಾದೇಶಿಕ ತಿನಿಸು. ಕಲಬುರಗಿಗೆ ಬಂದವರು ಇದನ್ನು ಮಾಮು ಅಂಗಡಿಗೇ ಹೋಗಿ ಸವಿಯಬೇಕಷ್ಟೆ. ಸೂಪರ್‌ ಮಾರ್ಕೆಟ್‌ನ ಮಳಿಗೆ ಸಾಲುಗಳಲ್ಲಿರುವ ಈ ಸಿಹಿ ತಿನಿಸಿನ ಮಳಿಗೆ ಮಾಲ್‌ಪುರಿಯಿಂದಾಗಿ ಹೆಸರುವಾಸಿ. ಮಾಲ್‌ ಪುರಿ ಇದು ಪಕ್ಕಾ ಕಲಬುರಗಿ ಸಿಹಿ ತಿನಿಸು. ಖೋವಾ- ಸಕ್ಕರೆ ಬೆರೆಸಿ ಸಿದ್ಧವಾಗುವ ಈ ತಿನಿಸು ಸವಿದರೆ ಆಗ್ರಾ ಸಿಹಿ ತಿನಿಸು ಸವಿದಂತಹ ಅನುಭವವಾಗುತ್ತದೆ. ಇದು ಕಲಬುರಗಿ ಹೊರತುಪಡಿಸಿದಲ್ಲಿ ಇನ್ನೆಲ್ಲಿಯೂ ದೊರಕದು. ಅದೂ ಕಲಬುರಗಿಯಲ್ಲಿರುವ ಏಕೈಕ ಕುಟುಂಬ ಈ ತಿನಿಸು ಸಿದ್ಧಪಡಿಸುತ್ತದೆ.

Latest Videos
Follow Us:
Download App:
  • android
  • ios