ರೈಲಿನಲ್ಲೆ ಇಡೀ ಪ್ರಪಂಚ ಸುತ್ತುವ ಅವಕಾಶ, ಕೈನಲ್ಲಿ ಕಾಸಿದ್ರೆ ಇಂದೇ ಬುಕ್ ಮಾಡಿ
ರೈಲಿನಲ್ಲಿ ದೇಶ ಸುತ್ತಬೇಕು ಎನ್ನುವವರಿಗೆ ಅವಕಾಶವೊಂದು ತೆರೆದುಕೊಂಡಿದೆ. ರೈಲಿನ ಜೊತೆ ಹಡಗಿನಲ್ಲೂ ನೀವು ಪ್ರಯಾಣ ಬೆಳೆಸಬಹುದು. ಎಲ್ಲಿಗೆ ಹೋಗ್ಬೇಕು, ಎಷ್ಟು ಖರ್ಚಾಗುತ್ತೆ ಎಂಬ ಮಾಹಿತಿ ಇಲ್ಲಿದೆ.

ವಿಮಾನ (Airplane) ಹತ್ತದೆ ಜಗತ್ತನ್ನು ಸುತ್ತುವ ಆಸೆ ಅನೇಕರಿಗೆ ಇರುತ್ತದೆ. ಅಂಥವರಿಗೆ ಇಲ್ಲೊಂದು ಸುವರ್ಣಾವಕಾಶ ಇದೆ. ನೀವು ವಿಮಾನ ಹತ್ತದೆ, ರೈಲಿ (train)ನಲ್ಲಿಯೇ ಅನೇಕ ದೇಶಗಳನ್ನು ಸುತ್ತಿ ಬರಬಹುದು. ಆದ್ರೆ ಕೈನಲ್ಲಿ ಕಾಸಿರ್ಬೇಕು ಅಷ್ಟೆ. ನೀವು ನೂರು ದಿನ ಫ್ರೀ ಇದ್ದೀರಿ, 112,900 ಯುರೋ ನಿಮ್ಮ ಕೈನಲ್ಲಿ ಇದೆ ಎಂದಾದ್ರೆ ನಿಮಗೆ ಇದು ಸೂಕ್ತ ಆಯ್ಕೆ.
ಹೊಸ ಪ್ರವಾಸ ನಿರ್ವಾಹಕ, ಅಡ್ವೆಂಚರ್ಸ್ ಬೈ ಟ್ರೈನ್, ನಿಮಗೆ ಹೊಸ ಅನುಭವ ನೀಡಲು ಸಿದ್ಧವಾಗಿದೆ. 100 ದಿನಗಳಲ್ಲಿ ಪ್ರಪಂಚದ ಪ್ರಮುಖ ದೇಶವನ್ನು ಸುತ್ತಿಸುವ ಪ್ರವಾಸದ ಘೋಷಣೆ ಮಾಡಿದೆ. ಮೊದಲ ಪ್ರಯಾಣ ಮಾರ್ಚ್ 17, 2026 ರಂದು ನಿಗದಿಪಡಿಸಲಾಗಿದೆ. ಈ ಪ್ರವಾಸದ ಟಿಕೆಟ್ ಬೆಲೆ 112,900 ಯುರೋ ಅಂದ್ರೆ ಸುಮಾರು ಒಂದು ಕೋಟಿ 12 ಸಾವಿರ.
ಕಾಲು ಮುರಿದ್ರೂ ವೀಲ್ ಚೇರ್ ನೀಡದ ಏರ್ ಇಂಡಿಯಾ, ಸಿಬ್ಬಂದಿ ವಿರುದ್ಧ ನಟನ ಆಕ್ರೋಶ
ಆರಂಭದಲ್ಲಿ ಕೇವಲ ಹನ್ನೆರಡು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾಹಸ ಪ್ರಿಯರು ಶೀಘ್ರದಲ್ಲೇ ಟಿಕೆಟ್ ಬುಕ್ ಮಾಡಿದ್ರೆ ಟ್ರೈನ್ ಪ್ರವಾಸದ ಅನುಭವವನ್ನು ನೀವು ಪಡೆಯಬಹುದು. ಜೋಡಿಯಾಗಿ ಬುಕ್ ಮಾಡುವವರಿಗೆ ಗಮನಾರ್ಹವಾಗಿ ಅಗ್ಗದ ಟಿಕೆಟ್ಗಳು ಸಿಗಲಿದ್ದು, ಪ್ರತಿ ಟಿಕೆಟ್ಗೆ 89,950 ಯುರೋ ವೆಚ್ಚವಾಗಲಿದೆ.
ಈ ಪ್ರವಾಸ ವಿಮಾನ ಮುಕ್ತವಾಗಿದೆ. ಇಲ್ಲಿ ರೈಲುಗಳು ಮತ್ತು ಕ್ರೂಸ್ಗಳನ್ನು ಮಾತ್ರ ಬಳಸಿಕೊಳ್ಳಲಾಗ್ತಿದೆ. ಇದ್ರಲ್ಲಿ ಪ್ರಯಾಣಿಕರು ಮೂರು ಖಂಡಗಳಾದ್ಯಂತ ಡಜನ್ಗಟ್ಟಲೆ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಈ ವಿಶ್ವ ಪ್ರವಾಸವು ಲಂಡನ್ನ ಸೇಂಟ್ ಪ್ಯಾನ್ಕ್ರಾಸ್ ರೈಲು ನಿಲ್ದಾಣದಿಂದ ಪ್ರಾರಂಭವಾಗಲಿದೆ. ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ಹಂಗೇರಿ, ರೊಮೇನಿಯಾ, ಬಲ್ಗೇರಿಯಾ, ಟರ್ಕಿ, ಜಾರ್ಜಿಯಾ, ಅಜೆರ್ಬೈಜಾನ್, ಕಝಾಕಿಸ್ತಾನ್, ಚೀನಾ, ಜಪಾನ್, ಕೆನಡಾ ಮತ್ತು ಯುಎಸ್ಎ ಸೇರಿದಂತೆ 14 ದೇಶಗಳ ಮೂಲಕ ಹಾದುಹೋಗಲಿದೆ.
ಸ್ವಿಸ್ ಮತ್ತು ಆಸ್ಟ್ರಿಯನ್ ಆಲ್ಪ್ಸ್ ಮೂಲಕ ಯುರೋಪಿಯನ್ ಸ್ಲೀಪರ್ ರೈಲುಗಳು, ಕ್ಸಿಯಾನ್ ನಗರಕ್ಕೆ ಚೀನಾದ ಹೈ-ಸ್ಪೀಡ್ ರೈಲು ಮತ್ತು ರಾಕಿ ಪರ್ವತಗಳ ಸುತ್ತಲಿನ ಪ್ರಸಿದ್ಧ ಕ್ಯಾಲಿಫೋರ್ನಿಯಾ ಜೆಫಿರ್ ಆಮ್ಟ್ರಾಕ್ ಮಾರ್ಗ ಸೇರಿದಂತೆ ಪ್ರತಿಷ್ಠಿತ ರೈಲು ಮಾರ್ಗಗಳಲ್ಲಿ ಪ್ರಯಾಣಿಕರು ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಬಹುದು.
100 ದಿನಗಳ ಈ ಪ್ರವಾಸದಲ್ಲಿ ಪ್ರಯಾಣಿಕರು ವಿಶಿಷ್ಟವಾದ, ಕ್ಯುರೇಟೆಡ್ ಸಾಂಸ್ಕೃತಿಕ ಅನುಭವಗಳಲ್ಲಿ ಭಾಗವಹಿಸುತ್ತಾರೆ. ಪ್ರಸಿದ್ಧ ರೆಸ್ಟೋರೆಂಟ್ಗಳಲ್ಲಿ ಭೋಜನದ ಆನಂದ ಪಡೆಯಲಿದ್ದಾರೆ. ಜಾರ್ಜಿಯಾದಲ್ಲಿ ವೈನ್ ರುಚಿ ನೋಡುವುದರಿಂದ ಹಿಡಿದು ಟೋಕಿಯೊದಲ್ಲಿ ಸಾಂಪ್ರದಾಯಿಕ ಚಹಾ ಸಮಾರಂಭಗಳವರೆಗೆ ಮತ್ತು ಯುನೆಸ್ಕೋ-ಸಂರಕ್ಷಿತ ಉಜ್ಬೇಕಿಸ್ತಾನ್ನ ಖಿವಾ ನಗರದ ನಡಿಗೆ ಪ್ರವಾಸಗಳವರೆಗೆ ಎಲ್ಲವೂ ಆಕರ್ಷಕ, ರೋಮಾಂಚಕವಾಗಿರಲಿದೆ.
ಆದ್ರೆ ಈ ಪ್ರವಾಸ ಕೇವಲ ರೈಲು ಮಾರ್ಗಗಳಿಗೆ ಸೀಮಿತವಾಗಿಲ್ಲ. ಟೋಕಿಯೊದಿಂದ ವ್ಯಾಂಕೋವರ್ಗೆ 23 ದಿನಗಳ ಪ್ರಯಾಣ ಹಡಗಿನಲ್ಲಾಗಲಿದೆ. ಉತ್ತರ ಪೆಸಿಫಿಕ್ ಮಹಾಸಾಗರದಾದ್ಯಂತ ಪ್ರಯಾಣಿಕರು ಪ್ರಯಾಣ ಬೆಳೆಸಬೇಕು. ಜೊತೆಗೆ ಕ್ವೀನ್ ಮೇರಿ 2 ಹಡಗಿನಲ್ಲಿ ನ್ಯೂಯಾರ್ಕ್ನಿಂದ ಸೌತಾಂಪ್ಟನ್ಗೆ ಏಳು ರಾತ್ರಿಗಳ ಅಟ್ಲಾಂಟಿಕ್ ಸಮುದ್ರಯಾನವನ್ನು ಸಹ ಆನಂದಿಸಲಿದ್ದಾರೆ. ಹೆಚ್ಚುವರಿಯಾಗಿ, ಪ್ರಯಾಣಿಕರು ಅಜೆರ್ಬೈಜಾನ್ನಿಂದ ಕಝಾಕಿಸ್ತಾನ್ಗೆ 24 ರಿಂದ 30 ಗಂಟೆಗಳ ಪ್ರಯಾಣ ಮತ್ತು ಶಾಂಘೈನಿಂದ ಒಸಾಕಾಗೆ ರಾತ್ರಿಯ ಪ್ರಯಾಣವನ್ನು ಮಾಡ್ಬೇಕು.
ಈ ದೇಶದಲ್ಲಿ ಡಿವೋರ್ಸ್ ಗೆ ನಿರ್ಭಂಧ! ಸಾಯೋವಾಗ್ಲೆ ಬೇರೆಯಾಗೋದು
ಪ್ರಯಾಣದಿಂದ ಸುಸ್ತಾಗುವ ಪ್ರವಾಸಿಗರಿಗೆ ಇಸ್ತಾನ್ಬುಲ್ನ ಪೆರಾ ಪ್ಯಾಲೇಸ್, ನ್ಯೂಯಾರ್ಕ್ನ ದಿ ಲ್ಯಾಂಗ್ಹ್ಯಾಮ್ ಮತ್ತು ವ್ಯಾಂಕೋವರ್ನ ಶಾಂಗ್ರಿ-ಲಾ ಸೇರಿದಂತೆ ಹಲವಾರು ಐತಿಹಾಸಿಕ ಮತ್ತು ಪಂಚತಾರಾ ಹೋಟೆಲ್ಗಳಲ್ಲಿ ನಿದ್ರಿಸಲು ಅವಕಾಶ ಸಿಗ್ತಿದೆ. ಕಂಪನಿ ಟಿಕೆಟ್ ದರದ ಜೊತೆ ಲಾಂಡ್ರಿಗೆ ಹೆಚ್ಚುವರಿ ಹಣವನ್ನು ವಸೂಲಿ ಮಾಡ್ತಿದೆ.